World Elephant Day 2024 : ನೆನಪಿನ ಶಕ್ತಿಯಲ್ಲಿ ಮನುಷ್ಯನನ್ನೇ ಮೀರಿಸುವ ಗಜರಾಜನ ಬಗೆಗಿನ ಆಸಕ್ತಿದಾಯಕ ವಿಷಯಗಳಿವು

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 12, 2024 | 10:20 AM

ಪರಿಸರ ವ್ಯವಸ್ಥೆಯಲ್ಲಿ ಗಜರಾಜನ ಮಹತ್ವವನ್ನು ತಿಳಿಸಲು ಹಾಗೂ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 12 ರಂದು ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನವು ಆರಂಭವಾದದ್ದು ಯಾವಾಗ? ಆನೆಗಳ ಸಂತತಿಯನ್ನು ಕಾಪಾಡುವುದು ಹೇಗೆ? ಹಾಗೂ ಆನೆಗಳ ಕುರಿತಾದ ಕುತೂಹಲಕಾರಿ ಮಾಹಿತಿಯು ಇಲ್ಲಿದೆ.

World Elephant Day 2024 : ನೆನಪಿನ ಶಕ್ತಿಯಲ್ಲಿ ಮನುಷ್ಯನನ್ನೇ ಮೀರಿಸುವ ಗಜರಾಜನ ಬಗೆಗಿನ ಆಸಕ್ತಿದಾಯಕ ವಿಷಯಗಳಿವು
ಆನೆಗಳು
Follow us on

ಮಾನವನ ಸ್ವಾರ್ಥ, ಹೆಚ್ಚುತ್ತಿರುವ ನಗರೀಕರಣ, ಆಧುನೀಕರಣದ ಕಾರಣದಿಂದಾಗಿ ಕಾಡುಪ್ರಾಣಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ. ಹುಲಿ, ಸಿಂಹಗಳಂತೆ ಕಾಡಿನ ದೈತ್ಯ ಪ್ರಾಣಿಯಾದ ಗಜರಾಜನ ಸಂತತಿಯೂ ಕಡಿಮೆಯಾಗುತ್ತಿದೆ. 2017 ರಲ್ಲಿ ಆನೆಗಳ ಗಣತಿಯನ್ನು ಮಾಡಿದ ಸಂದರ್ಭದಲ್ಲಿ ಭಾರತದಲ್ಲಿ ಒಟ್ಟು 30 ಸಾವಿರ ಆನೆಗಳಿದ್ದವು. ವರ್ಷಗಳು ಕಳೆದಂತೆ ಆನೆಗಳ ಸಂತತಿಯು ಕ್ಷೀಣಿಸುತ್ತಿದೆ. ಪರಿಸರ ವ್ಯವಸ್ಥೆಯಲ್ಲಿ ಆನೆಗಳ ಮಹತ್ವವನ್ನು ಸಾರುವ ಉದ್ದೇಶದಿಂದ ವಿಶ್ವದಾದ್ಯಂತ ಪ್ರತಿವರ್ಷ ಆಗಸ್ಟ್ 12ರಂದು ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಆನೆ ದಿನದ ಇತಿಹಾಸ ಹಾಗೂ ಮಹತ್ವ

2011ರಲ್ಲಿ ಸಿಮ್ಸ್ ಮತ್ತು ಎಲಿಫೆಂಟ್ ಇಂಟ್ರಡಕ್ಷನ್ ಫೌಂಡೇಶನ್ ವಿಶ್ವ ಆನೆ ದಿನವನ್ನು ಆಚರಿಸಲು ನಿರ್ಧರಿಸಿತು. 2012 ಆಗಸ್ಟ್ 12 ರಂದು ವಿಶ್ವ ಆನೆ ದಿನವನ್ನು ಆಚರಿಸಲು ಅಧಿಕೃತವಾಗಿ ಘೋಷಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಆಗಸ್ಟ್ 12 ರಂದು ಆಚರಿಸಲಾಗುತ್ತದೆ. ಆನೆಗಳನ್ನು ರಕ್ಷಿಸುವುದು ಮತ್ತು ಅವುಗಳ ಆವಾಸಸ್ಥಾನವಾದ ಕಾಡುಗಳನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ.

ಆನೆಗಳ ಬಗೆಗಿನ ಕುತೂಹಲಕಾರಿ ಸಂಗತಿಗಳು

  1. ಆಫ್ರಿಕಾದ ಸವನ್ನಹುಲ್ಲುಗಾವಲಿನಲ್ಲಿರುವ ಆನೆಗಳ ಗಾತ್ರವು ತುಂಬಾ ದೊಡ್ಡಡಿರುತ್ತವೆ. ಇಲ್ಲಿ ಆನೆಗಳು ಸುಮಾರು 6000 ಕೆಜಿ ತೂಕ ಹೊಂದಿರುತ್ತದೆ, ಆನೆಮರಿಗಳು ಹುಟ್ಟುವಾಗಲೇ 120 ಕೆಜಿ ತೂಕ ಇರುತ್ತದೆ.
  2. ಆಫ್ರಿಕನ್‌ ಹುಲ್ಲುಗಾವಲಿನ ಆನೆ (ಬುಷ್‌ ಆನೆ), ಆಫ್ರಿಕನ್ ಕಾಡಾನೆ ಹಾಗೂ ಏಷ್ಯಾನ್‌ ಆನೆ ಹೀಗೆ ಆನೆಗಳಲ್ಲಿ ಮೂರು ವಿಧಗಳನ್ನು ಕಾಣಬಹುದು. ಆಫ್ರಿಕನ್ ಆನೆಗಳಿಗೆ ಅದರ ಸೊಂಡಲಿನಲ್ಲಿ ಎರಡು ಬೆರಳುಗಳಿದ್ದು, ಭಾರತದಲ್ಲಿ ಹೆಚ್ಚಾಗಿ ಕಾಣಸಿಗುವ ಏಷ್ಯಾನ್‌ ಆನೆಗೆ ಒಂದು ಬೆರಳನ್ನು ಹೊಂದಿರುತ್ತದೆ.
  3. ಆನೆ ಮರಿಗಳು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಎದ್ದು ನಿಲ್ಲುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಆನೆ ಮರಿ ಹುಟ್ಟಿ 20 ನಿಮಿಷಕ್ಕೆ ಎದ್ದು ನಿಲ್ಲುತ್ತವೆಯಂತೆ.
  4. ಆನೆಗಳಿಗೆ ನೆನಪಿನ ಶಕ್ತಿಯು ಅಧಿಕವಾಗಿದ್ದು, ಮರೆವು ಎನ್ನುವುದೇ ಇಲ್ಲ. ಹೀಗಾಗಿ ಆಹಾರಕ್ಕಾಗಿ ಸಾವಿರಾರು ಕಿಮೀ ಹೋಗಿದ್ದರೂ ಮತ್ತೇ ತಾನಿದ್ದ ಸ್ಥಳಕ್ಕೆ ಮರಳಿ ಬರುವಷ್ಟು ನೆನಪಿನ ಶಕ್ತಿ ಗಜರಾಜನಿಗೆ ಇದೆ.
  5. ಆನೆಗಳ ಸೊಂಡಿಲಿನಲ್ಲಿ ಸುಮಾರು 150,000 ಸ್ನಾಯುಗಳಿರುತ್ತದೆ. ಆನೆಯ ಅತ್ಯಂತ ಸೂಕ್ಷ್ಮ ಜಾಗವೇ ಈ ಸೊಂಡಿಲುಗಳಾಗಿವೆ. ಇದರಲ್ಲಿ ಸರಿಸುಮಾರು ಎಂಟು ಲೀಟರ್ ಗಳಷ್ಟು ನೀರು ಹಿಡಿಯುತ್ತದೆ.
  6. ಆನೆಗಳ ಚರ್ಮವು 2.5 ಸೆ. ಮೀ ದಪ್ಪವಿದ್ದು, ಮಣ್ಣಿನಲ್ಲಿ ಹೊರಳಾಡಿ ಮಣ್ಣು ಮೆತ್ತಿಕೊಂಡಿರುವುದರಿಂದ, ಸುಡುವಂತೆ ಶಾಖವಿದ್ದರೂ ಎಲ್ಲವನ್ನು ಸಹಿಸಿಕೊಳ್ಳುವ ತಾಕತ್ತು ಆನೆಗಳಿಗಿದೆ.
  7. ದಿನನಿತ್ಯ ಒಂದು ಆನೆಗೆ ಸರಿಸುಮಾರು 150 ಕೆಜಿಯಷ್ಟು ಆಹಾರವು ಬೇಕಾಗುತ್ತದೆ. ದಿನದಲ್ಲಿ ಸರಿಸುಮಾರು 18 ಗಂಟೆಗಳ ಕಾಲ ಆಹಾರವನ್ನು ತಿನ್ನುತ್ತಲೇ ಸಮಯ ಕಳೆಯುತ್ತದೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ