ನಮ್ಮ ಪರಿಸರ ಹೇಗಿದೆ ಎನ್ನುವ ಕಟುವಾಸ್ತವದ ಅರಿವು ಎಲ್ಲರಿಗೂ ಇದೆ. ಆದರೆ ಮಾನವನ ಸ್ವಾರ್ಥಭರಿತ ಚಟುವಟಿಕೆಗಳಿಂದ ದಿನೇ ದಿನೇ ಪ್ರಕೃತಿಯೂ ಹಾಳಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯನು ಕುರುಡಾಗಿ ವರ್ತಿಸುತ್ತಿದ್ದಾನೆ. ಅತಿಯಾದ ಕಾಡುಗಳ ನಾಶದಿಂದ ಮುಂಬರುವ ದಿನಗಳಲ್ಲೂ ಉಸಿರಾಡಲು ಆಮ್ಲಜನಕವೇ ಇಲ್ಲವಾದರೆ, ಬದುಕಿಳಿಯುವುದು ಕಷ್ಟವೇ. ಹೀಗಾಗಿ ಪರಿಸರದ ಬಗ್ಗೆ ಹೆಚ್ಚೆಚ್ಚು ಕಾಳಜಿ ವಹಿಸುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ.
1972 ರಲ್ಲಿ ವಿಶ್ವಸಂಸ್ಥೆಯ ಮಾನವ ಪರಿಸರದ ಸ್ಟಾಕ್ ಹೋಮ್ ಸಮ್ಮೇಳನದಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸುವುದಾಗಿ ಘೋಷಿಸಲಾಯಿತು. ಆದ್ದರಿಂದ ಯುಎನ್ಇಪಿ ನೇತೃತ್ವದಲ್ಲಿ ಪ್ರತಿ ವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಮೊದಲ ಬಾರಿಗೆ 1974 ರಲ್ಲಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಈ ದಿನವನ್ನು ಆಚರಿಸಲಾಯಿತು. ಈ ದಿನದ ಗುರಿಯೇನೆಂದರೆ ಪರಿಸರ ಸಂರಕ್ಷಣೆಗಾಗಿ ಜಾಗೃತಿ ಮೂಡಿಸಲು ಮತ್ತು ಪರಿಸರ ರಕ್ಷಣೆಯನ್ನು ಉತ್ತೇಜಿಸುವುದಾಗಿದೆ.
ಇದನ್ನೂ ಓದಿ: ಈ ಸಂದರ್ಭದಲ್ಲಿ ನೀವು ಅಪ್ಪಿತಪ್ಪಿಯೂ ಮಾತನಾಡಲೇಬೇಡಿ, ಇದ್ರಿಂದ ತೊಂದರೆಯೇ ಹೆಚ್ಚು
ವಿಶ್ವ ಪರಿಸರ ದಿನವನ್ನು ಪರಿಸರವನ್ನು ಉಳಿಸುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತದೆ. ಪರಿಸರ ಉಳಿಸಲು ಎಲ್ಲರೂ ಒಗ್ಗೂಡುವುದು. ಗಿಡ, ಮರಗಳನ್ನು ಬೆಳೆಸುವಂತೆ ಜನರನ್ನು ಪ್ರೇರೆಪಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ಈ ದಿನದಂದು ಪರಿಸರ ಉಳಿಸುವ ಜಾಗೃತಿ ಕಾರ್ಯಕ್ರಮಗಳು ಹಾಗೂ ಮರ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಡುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: