‘ವಸುಧೈವ ಕುಟುಂಬಕಂ’ ಎನ್ನುವ ಮಾತಿನಂತೆ ಇಡೀ ವಿಶ್ವವೇ ನಮ್ಮ ಕುಟುಂಬ.ಈ ಕುಟುಂಬದ ಮಹತ್ವವನ್ನು ಸಾರುತ್ತದೆ. ಅದಲ್ಲದೇ, ಮನೆಯೇ ಮೊದಲ ಪಾಠ ಶಾಲೆ ಎನ್ನುವ ಮಾತಿದೆ. ಕುಟುಂಬದಿಂದಲೇ ಒಬ್ಬ ವ್ಯಕ್ತಿಯು ಸಂಸ್ಕಾರ, ಪ್ರೀತಿ, ಹೊಂದಾಣಿಕೆಯನ್ನು ಕಲಿಯುತ್ತಾನೆ. ಶಿಕ್ಷಣಕ್ಕಿಂತ ಈ ಕೆಲವು ಪಾಠಗಳು ವ್ಯಕ್ತಿಯ ಸುತ್ತಮುತ್ತಲಿನ ಸಂಬಂಧಗಳಿಂದ ಆರಂಭವಾಗುತ್ತದೆ. ಈ ಸಂಬಂಧಗಳ ಜೊತೆಯಲ್ಲಿ ಒಂದೇ ಸೂರಿನಲ್ಲಿ ಬಾಳುವ ಖುಷಿಯೇ ಬೇರೆ. ಇಲ್ಲಿ ನೋವಿರಲಿ, ನಲಿವಿರಲಿ ಕುಟುಂಬದ ಸದಸ್ಯರು ಸದಾ ಜೊತೆಗೆ ಇರುತ್ತಾರೆ. ಆದರೆ ಕಳೆದ ಕೆಲವು ವರ್ಷಗಳಿಂದ ಅವಿಭಕ್ತ ಕುಟುಂಬವನ್ನು ಕಾಣುವುದೇ ಅಪರೂಪ ಎನ್ನುವಂತಾಗಿದೆ. ವಿಭಿಕ್ತ ಕುಟುಂಬಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಆದರೆ ಇಡೀ ವಿಶ್ವವೇ ಒಂದು ಕುಟುಂಬ, ಎಲ್ಲರನ್ನು ಒಂದೇ ಭಾವಿಸುತ್ತಾ ಕೂಡಿಕೊಂಡು ಬಾಳಬೇಕು ಎನ್ನುವ ಸದ್ದುದ್ದೇಶವನ್ನು ಈ ದಿನವು ಹೊಂದಿದೆ.
ಪ್ರಪಂಚದಾದಂತ್ಯ ಮೇ 15 ರಂದು ವಿಶ್ವ ಕುಟುಂಬ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆ 1993 ರ ಮೇ 15ರಂದು ಜನರಲ್ ಅಸೆಂಬ್ಲಿಯಲ್ಲಿ ಅಂತರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನು ಆಚರಿಸುವ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿತು. ಅಂದಿನಿಂದ ವಿಶ್ವವಿಡೀ ಪ್ರತಿ ವರ್ಷ ಮೇ 15ನ್ನು ಅಂತರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನಾಗಿ ಆಚರಿಸುತ್ತ ಬರಲಾಗುತ್ತಿದೆ.
ಇದನ್ನೂ ಓದಿ: ಆವಾಸ ಸ್ಥಾನಗಳ ನಾಶ, ಕಣ್ಮರೆಯತ್ತ ವಲಸೆ ಹಕ್ಕಿಗಳು
ಕುಟುಂಬದ ಪ್ರೀತಿಯನ್ನು ಅರಿತು, ಇಡೀ ವಿಶ್ವವೇ ನಮ್ಮ ಕುಟುಂಬ ಎಂದು ಭಾವಿಸಬೇಕು. ಕುಟುಂಬಗಳ ಮೌಲ್ಯ ಹಾಗೂ ಮಹತ್ವವನ್ನು ಸಾರುವ ಉದ್ದೇಶವನ್ನು ಈ ದಿನವು ಹೊಂದಿದೆ. ಈ ದಿನದಂದು ಕಾರ್ಯಾಗಾರಗಳು, ವಿಚಾರಗೋಷ್ಠಿಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ