
ದಯೆಯೇ ಧರ್ಮದ ಮೂಲ ಎಂಬ ಮಾತೊಂದಿದೆ. ದಯೆ (Kindness), ಕರುಣೆ, ಅನುಂಕಪ ಇವೆಲ್ಲವೂ ಮನುಷ್ಯನಲ್ಲಿ ಇರಲೇಬೇಕಾದ ಗುಣ. ಈ ಗುಣಗಳೇ ಮನುಷ್ಯ ಸಂಬಂಧಗಳನ್ನು ಪರಸ್ಪರ ಬೆಸೆಯುತ್ತದೆ. ಆದರೆ ಇಂದಿನ ಈ ಆಧುನಿಕ ಜಗತ್ತಿನಲ್ಲಿ ಮನುಷ್ಯನದಲ್ಲಿ ದಯೆ, ಅನುಕಂಪ, ಮಾನವೀಯತೆ ಎಂಬುದು ಮರೆಯಾಗಿ ಹೋಗಿದೆ. ಇದಕ್ಕೆ ಉದಾಹರಣೆಯಂತಿರುವ ಸಾಕಷ್ಟು ಅಮಾನವೀಯ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯುತ್ತಲೇ ಇರುತ್ತವೆ. ಹಾಗಾಗಿ ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಸಹಾಯ ಮಾಡಲು, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಜನರನ್ನು ಪ್ರೇರೇಪಿಸುವ ಸಲುವಾಗಿ ನವೆಂಬರ್ 13 ರಂದು ವಿಶ್ವ ದಯೆ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯಿರಿ.
ವಿಶ್ವ ದಯೆ ದಿನವನ್ನು 1998 ರಲ್ಲಿ ಜಪಾನ್‌ನ ವಿಶ್ವ ದಯೆ ಚಳುವಳಿಯು ಸ್ಥಾಪಿಸಿತು. ದಯೆಯ ಕ್ರಿಯೆಗಳ ಮೂಲಕ ಪ್ರಪಂಚದಾದ್ಯಂತ ಜನರನ್ನು ಸಂಪರ್ಕಿಸುವುದು ಮತ್ತು ಸಮಾಜದಲ್ಲಿ ಸಕಾರಾತ್ಮಕತೆಯನ್ನು ಹರಡುವುದು ಇದರ ಧ್ಯೇಯವಾಗಿತ್ತು. ಇಂದು, 30 ಕ್ಕೂ ಹೆಚ್ಚು ದೇಶಗಳು ಈ ಆಂದೋಲನದ ಭಾಗವಾಗಿದ್ದು, ದಯೆಯೆಂಬ ಸಾಮಾನ್ಯ ದಾರದ ಮೂಲಕ ಮಾನವೀಯತೆಯನ್ನು ಒಂದುಗೂಡಿಸಲು ಕೆಲಸ ಮಾಡುತ್ತಿವೆ.
ಇದನ್ನೂ ಓದಿ: ಶಿಕ್ಷಣವು ಜೀವನವನ್ನು ಬದಲಾಯಿಸುವ ಶಕ್ತಿಶಾಲಿ ಅಸ್ತ್ರ
ನಿಮ್ಮ ಈ ಸಣ್ಣ ಹೆಜ್ಜೆಗಳು ಸಮಾಜದಲ್ಲಿ ದೊಡ್ಡ ಬದಲಾವಣೆಗಳನ್ನು ತರಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ