World Meteorological Day 2025: ವಿಶ್ವ ಹವಾಮಾನ ದಿನ ಆಚರಿಸುವುದು ಏಕೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ
ಹವಾಮಾನದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಈ ಸೃಷ್ಟಿಯಲ್ಲಿರುವ ಜೀವಿಗಳ ಮೇಲೆ ಅಡ್ಡಪರಿಣಾಮಗಳು ಬೀರುತ್ತದೆ. ಇದರ ಮಹತ್ವವನ್ನು ಗಮನಿಸಿಯೇ ಇದಕ್ಕೂ ಒಂದು ವಿಶೇಷ ದಿನವನ್ನು ಮೀಸಲಿಡಲಾಗಿದೆ. ಅದುವೇ ಮಾರ್ಚ್ 23. ಪ್ರತಿ ವರ್ಷ ಈ ದಿನವನ್ನು ವಿಶ್ವ ಹವಾಮಾನ ದಿನ ಎಂದು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆ ಯಾವಾಗದಿಂದ ಶುರುವಾಯಿತು? ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಹವಾಮಾನ (Weather) ವು ಮನುಷ್ಯನ ದೈನಂದಿನ ಜೀವನದೊಂದಿಗೆ ಬೆಸೆದುಕೊಂಡಿದೆ. ಆದರೆ ಮನುಷ್ಯನ ಸ್ವಾರ್ಥಭರಿತ ಚಟುವಟಿಕೆಗಳಿಂದಾಗಿ ಹವಾಮಾನ ಬದಲಾವಣೆಗಳು ಆಗುತ್ತಲಿದೆ. ಆದರೆ ಮಾನವನ ಸುರಕ್ಷತೆಗೆ ಮತ್ತು ಯೋಗಕ್ಷೇಮಕ್ಕೆ ಭೌಗೋಳಿಕ ಹವಾಮಾನ (Geographic climate) ಚೆನ್ನಾಗಿರುವುದು ಬಹಳ ಮುಖ್ಯ ಹವಾಮಾನ ನೈಸರ್ಗಿಕ ವಾತಾವರಣದ ಮೇಲೆ ಮಾನವನ ಆರೋಗ್ಯಯುತ ಬದುಕು ಅವಲಂಬಿಸಿದೆ. ಹವಾಮಾನಶಾಸ್ತ್ರಜ್ಞರು (Meteorologists) ತಾಪಮಾನ, ಆರ್ದ್ರತೆ, ಒತ್ತಡ, ಗಾಳಿಯ ವೇಗ, ಮಳೆ ಮತ್ತು ಗಾಳಿಯ ಗುಣಮಟ್ಟವನ್ನು ಅಳೆಯಲು ಮಳೆ ಮಾಪಕ, ಅನಿಮೋಮೀಟರ್, ಥರ್ಮಾಮೀಟರ್ ಸೇರಿದಂತೆ ವಿವಿಧ ಉಪಕರಣಗಳನ್ನು ಬಳಸಿಕೊಂಡು ಹವಾಮಾನವನ್ನು ಮುನ್ಸೂಚನೆ ನೀಡುತ್ತಾರೆ. ಹವಾಮಾನ ಬದಲಾವಣೆಯಿಂದ ಉಂಟಾಗುವ ವೈಫರೀತ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 23ರಂದು ವಿಶ್ವ ಹವಾಮಾನ ದಿನ (World Meteorological Day) ವನ್ನು ಆಚರಿಸಲಾಗುತ್ತಿದೆ.
ವಿಶ್ವ ಹವಾಮಾನ ದಿನದ ಇತಿಹಾಸ
1950ರ ಮಾರ್ಚ್ 23ರಂದು ವಿಶ್ವ ಹವಾಮಾನ ಸಂಸ್ಥೆ ಒಪ್ಪಂದ ಅಸ್ತಿತ್ವಕ್ಕೆ ಬಂದಿತು. 1873ರಲ್ಲಿ ರಚನೆಯಾದ ಅಂತಾರಾಷ್ಟ್ರೀಯ ಹವಾಮಾನ ಸಂಸ್ಥೆಯು 1950ರಲ್ಲಿ ಡಬ್ಲ್ಯುಎಂಒ ಆಗಿ ಬದಲಾಯಿತು. 1950 ಮಾರ್ಚ್ 23ರಂದು ವಿಶ್ವ ಹವಾಮಾನ ಸಂಸ್ಥೆಯು ವಿಶ್ವ ಹವಾಮಾನ ದಿನವನ್ನು ಆಚರಿಸಲು ಆರಂಭಿಸಿತು. ಜನರ ಯೋಗ ಕ್ಷೇಮ, ಸುರಕ್ಷತೆಗೆ ಹವಾಮಾನದ ಕೊಡುಗೆ ಅತ್ಯಂತ ಮಹತ್ವವನ್ನು ತಿಳಿಸಲು ಈ ದಿನವನ್ನು ಆಚರಿಸುತ್ತ ಬರಲಾಗಿದೆ.
ಇದನ್ನೂ ಓದಿ: ಗ್ರೀನ್ ಟೀ ಇಷ್ಟಪಟ್ಟು ಸವಿಯುವ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತೆ ಗೊತ್ತಾ
ವಿಶ್ವ ಹವಾಮಾನ ದಿನದ ಮಹತ್ವ
ಹವಾಮಾನವು ಪ್ರತಿ ಕ್ಷಣ ಕ್ಷಣಕ್ಕೂ ಬದಲಾಗುವುದರಿಂದ ವಿಶ್ವದ ಎಲ್ಲಾ ರಾಷ್ಟ್ರಗಳು ಹವಾಮಾನ ವರದಿಗೆ ಬಹಳಷ್ಟು ಮಹತ್ವ ನೀಡುತ್ತವೆ. ಹವಾಮಾನ ಬದಲಾವಣೆಯಿಂದ ಆಗುವ ವ್ಯತ್ಯಯ್ಯಗಳ ಬಗ್ಗೆ ಅರಿವು ಮೂಡಿಸುವುದು. ಭೂಮಿಯ ಮೇಲಿನ ಹವಾಮಾನ ವೈಪರಿತ್ಯವನ್ನು ತಡೆಯುವುದು ಹಾಗೂ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕೆ ನೀಡುವ ಸಲುವಾಗಿ ವಿಶ್ವ ಹವಾಮಾನ ದಿನವು ಮಹತ್ವದ್ದಾಗಿದೆ. ಈ ಹಿನ್ನಲೆಯಲ್ಲಿ ಈ ವಿಶೇಷ ದಿನದಂದು ವಿವಿಧ ಸಂಘ ಸಂಸ್ಥೆಗಳು ಹವಾಮಾನ ಬದಲಾವಣೆಯಿಂದ ಆಗುವ ವ್ಯತ್ಯಯ್ಯಗಳ ಬಗ್ಗೆ ಅರಿವು ಮೂಡಿಸಲು ಜಾಗೃತಿ ಕಾರ್ಯಾಗಾರ, ಅಭಿಯಾನಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ