AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Pulses Day 2024: ಪೌಷ್ಟಿಕಾಂಶಯುಕ್ತ ಈ ಬೇಳೆಕಾಳುಗಳು ಆರೋಗ್ಯ ವೃದ್ಧಿಗೆ ಅಗತ್ಯ

ಬಹುತೇಕ ಸಸ್ಯಾಹಾರಿಗಳು ಈ ಬೇಳೆ ಕಾಳುಗಳನ್ನು ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಈ ಬೇಳೆ ಕಾಳುಗಳನ್ನು ನಿಯಮಿತವಾಗಿ ಆಹಾರಗಳನ್ನು ಬಳಸಿ ಪೌಷ್ಟಿಕಾಂಶಯುಕ್ತ ಆಹಾರವನ್ನು ಪಡೆಯುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರವರಿ 10 ರಂದು ವಿಶ್ವ ದ್ವಿದಳ ಧಾನ್ಯಗಳ ದಿನವನ್ನು ಆಚರಿಸಲಾಗುತ್ತದೆ.

World Pulses Day 2024: ಪೌಷ್ಟಿಕಾಂಶಯುಕ್ತ ಈ ಬೇಳೆಕಾಳುಗಳು ಆರೋಗ್ಯ ವೃದ್ಧಿಗೆ ಅಗತ್ಯ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Feb 08, 2024 | 5:19 PM

Share

ದಿನನಿತ್ಯದ ಆಹಾರಗಳಲ್ಲಿ ಬಳಸಲಾಗುವ ಈ ಬೇಳೆ ಕಾಳುಗಳ ಪ್ರಯೋಜನವು ಅಷ್ಟಿಷ್ಟಲ್ಲ. ಹಿಂದಿನಿಂದಲೂ ದ್ವಿದಳ ಧಾನ್ಯಗಳನ್ನು ಬೇರೆ ಬೇರೆ ರೀತಿಯಲ್ಲಿ ಅಡುಗೆಯಲ್ಲಿ ಬಳಸುತ್ತ ಬರಲಾಗುತ್ತಿದೆ. ಆರೋಗ್ಯ ವೃದ್ಧಿಯಲ್ಲಿ ಈ ಬೇಳೆಕಾಳುಗಳನ್ನು ಮೀರಿಸುವ ಮತ್ತೊಂದು ಆಹಾರವಿಲ್ಲ. ಈ ದ್ವಿದಳ ಧಾನ್ಯಗಳಲ್ಲಿ ಪೌಷ್ಠಿಕಾಂಶಗಳು ಹೇರಳವಾಗಿದ್ದು, ಫೈಬರ್, ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಸೂಪರ್ ಫುಡ್ ಎಂದೆನಿಸಿಕೊಂಡಿರುವ ಈ ಬೇಳೆಕಾಳುಗಳಲ್ಲಿ ವಿಶಿಷ್ಟ ಆರೋಗ್ಯ ಪ್ರಯೋಜನಗಳು ಅಡಗಿದೆ. ಬೇಳೆಕಾಳುಗಳನ್ನುಹೆಚ್ಚಾಗಿ ಬಳಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಫೆಬ್ರವರಿ 10 ರಂದು ವಿಶ್ವ ದ್ವಿದಳ ಧಾನ್ಯಗಳ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ದ್ವಿದಳ ಧಾನ್ಯಗಳ ದಿನದ ಇತಿಹಾಸ:

ಪ್ರತಿಯೊಬ್ಬ ನಾಗರೀಕರಿಗೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಈ ದ್ವಿದಳ ಧಾನ್ಯಗಳ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶದಿಂದಾಗಿ 68ನೇ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಂತೆ 2016 ರಲ್ಲಿ “ಅಂತರಾಷ್ಟ್ರೀಯ ದ್ವಿದಳ ಧಾನ್ಯಗಳ ವರ್ಷ”ವನ್ನಾಗಿ ಆಚರಿಸಲಾಯಿತು. ವಿಶ್ವಸಂಸ್ಥೆಯ ಸಹ ಸಂಸ್ಥೆಯಾದ ಜಾಗತಿಕ ಆಹಾರ ಮತ್ತು ಕೃಷಿ ಸಂಸ್ಥೆ ಈ ವರ್ಷಾಚರಣೆಯ ಮುಂದಾಳತ್ವ ವಹಿಸಿತು. ಹೀಗಾಗಿ ಪ್ರತಿ ವರ್ಷ ಫೆಬ್ರವರಿ 10ನ್ನು ಅಂತರಾಷ್ಟ್ರೀಯ ದ್ವಿದಳ ಧಾನ್ಯಗಳ ದಿನವಾಗಿ ಆಚರಿಸಲಾಗುತ್ತಿದೆ. ಕಳೆದ 2019ರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲಾಗುತ್ತಿದೆ.

ವಿಶ್ವ ದ್ವಿದಳ ಧಾನ್ಯಗಳ ದಿನದ ಮಹತ್ವ:

ಆರೋಗ್ಯಕ್ಕೆ ಪೌಷ್ಟಿಕಾಂಶಗಳನ್ನು ನೀಡುವ ಈ ದ್ವಿದಳ ಧಾನ್ಯಗಳ ಪ್ರಾಮುಖ್ಯತೆಯನ್ನು ತಿಳಿಸುವುದು, ದ್ವಿದಳ ಧಾನ್ಯಗಳಲ್ಲಿನ ಪೌಷ್ಠಿಕಾಂಶಗಳ ಉಪಯೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ದಿನವನ್ನು ಆಚರಿಸುವ ಮುಖೇನವಾಗಿ ಜನರು ದಿನನಿತ್ಯ ಬಳಸುವ ಆಹಾರದಲ್ಲಿ ದ್ವಿದಳ ಧಾನ್ಯಗಳ ಬಳಕೆ ಹೆಚ್ಚಿಸುವುದಾಗಿದೆ. ಅದಲ್ಲದೇ ಕೃಷಿಯಲ್ಲಿ ದ್ವಿದಳ ಧಾನ್ಯಗಳ ಪ್ರಾಮುಖ್ಯತೆಯನ್ನು ತಿಳಿ ಹೇಳುವ ಮೂಲಕ ದ್ವಿಧಾನ್ಯಗಳನ್ನು ಬೆಳೆಯುವ ಕೃಷಿಕರಿಗೆ ಇನ್ನಷ್ಟು ಬೆಂಬಲವನ್ನು ನೀಡುವುದಾಗಿದೆ.

ಇದನ್ನೂ ಓದಿ: ಆರೋಗ್ಯದ ಹಿತಕ್ಕಾಗಿ ಜಂತಹುಳು ನಿವಾರಣೆಯ ಕುರಿತು ಅರಿವು ಮೂಡಿಸುವುದು ಅಗತ್ಯ

ದಿನನಿತ್ಯ ದ್ವಿದಳ ಸೇವನೆಯಿಂದ ಪ್ರಯೋಜನಗಳಿವು:

ದಿನನಿತ್ಯ ಆಹಾರಗಳಲ್ಲಿ ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ. ದ್ವಿದಳ ಧಾನ್ಯಗಳು ಎಚ್‌ಬಿ ಅಥವಾ ಹಿಮೋಗ್ಲೋಬಿನ್ ಅನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಹೀಗಾಗಿ ಮಧುಮೇಹಿಗಳು ಈ ದ್ವಿದಳ ಧಾನ್ಯಗಳನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿಕೊಳ್ಳಬಹುದು. ಕೂದಲು ಹಾಗೂ ಚರ್ಮದ ಆರೋಗ್ಯವನ್ನು ಕಾಪಾಡುವುದಲ್ಲದೇ ತೂಕನಷ್ಟಕ್ಕೆ ಸಹಕಾರಿಯಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಿದ ಅಪ್ರಾಪ್ತರು ಅರೆಸ್ಟ್!
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್​ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್​ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
ಬೆಂಗಳೂರು ಏರ್​ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್​ರೇಜ್!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?