Teddy Day 2024 Date: ಟೆಡ್ಡಿ ಡೇ ಯಾವಾಗ?; ಇದರ ಇತಿಹಾಸ, ಮಹತ್ವವೇನು?

Valentine’s Week 2024: ವ್ಯಾಲೆಂಟೈನ್ಸ್ ಡೇ ನಿಮ್ಮ ವಿಶೇಷ ವ್ಯಕ್ತಿಗೆ ಪ್ರೀತಿಯನ್ನು ವ್ಯಕ್ತಪಡಿಸುವ ದಿನವಾಗಿದೆ. ಅದಕ್ಕೂ ಮೊದಲೇ ಬರುವ ಟೆಡ್ಡಿ ದಿನದಂದು ಜನರು ತಮ್ಮ ಪ್ರೀತಿಯನ್ನು ಪರಸ್ಪರ ತೋರಿಸಲು ಮೃದುವಾದ ಟಾಯ್ಸ್​ಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಟೆಡ್ಡಿ ಡೇ ಆಚರಣೆಯ ದಿನಾಂಕ, ಅದರ ಮಹತ್ವ ಮತ್ತು ಈ ವರ್ಷ ಏನು ಪ್ಲಾನ್ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Teddy Day 2024 Date: ಟೆಡ್ಡಿ ಡೇ ಯಾವಾಗ?; ಇದರ ಇತಿಹಾಸ, ಮಹತ್ವವೇನು?
ಟೆಡ್ಡಿ ಡೇ
Follow us
ಸುಷ್ಮಾ ಚಕ್ರೆ
|

Updated on:Feb 10, 2024 | 5:44 PM

ಪ್ರೇಮಿಗಳ ವಾರ (Valentine’s Week 2024) ಫೆಬ್ರವರಿ 7ರಂದು ಪ್ರಾರಂಭವಾಯಿತು. ಅಂದಿನಿಂದ ಫೆಬ್ರವರಿ 14ರವರೆಗೂ ಒಂದೊಂದು ದಿನ ಒಂದೊಂದ ವಿಶೇಷ ದಿನವನ್ನಾಗಿ ಆಚರಿಸಲಾಗುತ್ತದೆ. ಫೆಬ್ರವರಿ ಎಂದರೆ ಪ್ರೀತಿಯ ಋತು. ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಎಂದು ಆಚರಿಸಲಾಗುತ್ತದೆ. ಅದಕ್ಕಿಂತ ಹಿಂದಿನ ವಾರವನ್ನು ಪ್ರೇಮಿಗಳ ವಾರ ಎಂದು ಆಚರಿಸಲಾಗುತ್ತದೆ. ಫೆಬ್ರವರಿ 7ರಂದು ಗುಲಾಬಿ ದಿನದಿಂದ ಪ್ರಾರಂಭವಾಗಿ ಫೆಬ್ರವರಿ 13ರಂದು ಕಿಸ್ ಡೇಯೊಂದಿಗೆ ಇದು ಕೊನೆಗೊಳ್ಳುತ್ತದೆ. ಫೆಬ್ರವರಿ 10ರಂದು ಅಂದರೆ ಪ್ರೇಮಿಗಳ ವಾರದ ನಾಲ್ಕನೇ ದಿನವನ್ನು ಟೆಡ್ಡಿ ಡೇ (Teddy Day 2024) ಎಂದು ಆಚರಿಸಲಾಗುತ್ತದೆ.

ಈ ಇಡೀ ವಾರವು ರೋಸ್ ಡೇ (ಫೆಬ್ರವರಿ 7), ಪ್ರಪೋಸ್ ಡೇ (ಫೆಬ್ರವರಿ 8), ಚಾಕೊಲೇಟ್ ಡೇ (ಫೆಬ್ರವರಿ 9) ಒಳಗೊಂಡಿರುತ್ತದೆ. ), ಟೆಡ್ಡಿ ಡೇ (ಫೆಬ್ರವರಿ 10), ಪ್ರಾಮಿಸ್ ಡೇ (ಫೆಬ್ರವರಿ 11), ಹಗ್ ಡೇ (ಫೆಬ್ರವರಿ 12), ಮತ್ತು ಕಿಸ್ ಡೇ (ಫೆಬ್ರವರಿ 13) ಎಂದು ಆಚರಿಸಲಾಗುತ್ತದೆ. ಟೆಡ್ಡಿ ದಿನವನ್ನು ಆಚರಿಸಲು ನಾವು ಸಜ್ಜಾಗುತ್ತಿರುವಾಗ, ಈ ವಿಶೇಷ ದಿನದ ಬಗ್ಗೆ ತಿಳಿದುಕೊಳ್ಳಲು ಕೆಲವು ವಿಷಯಗಳು ಇಲ್ಲಿವೆ.

ಇದನ್ನೂ ಓದಿ: Propose Day 2023: ಪ್ರೇಮಿಗಳ ವಾರದ ಎರಡನೇ ದಿನ ಪ್ರಪೋಸ್ ಡೇ, ಇದರ ಮಹತ್ವ, ಇತಿಹಾಸ ಇಲ್ಲಿದೆ

ಪ್ರತಿ ವರ್ಷ ಟೆಡ್ಡಿ ಡೇ ಅನ್ನು ಫೆಬ್ರವರಿ 10ರಂದು ಆಚರಿಸಲಾಗುತ್ತದೆ. ಇದು ಪ್ರೇಮಿಗಳ ವಾರದ ನಾಲ್ಕನೇ ದಿನ. ಈ ವರ್ಷ ಟೆಡ್ಡಿ ಡೇ ಶನಿವಾರ ಬರುತ್ತದೆ.

ಟೆಡ್ಡಿ ಡೇ ಇತಿಹಾಸ:

ಟೆಡ್ಡಿಗಳು ಮೆತ್ತಗಿನ ಮೃದು ಆಟಿಕೆಗಳಾಗಿವೆ. ಇದು ನಿಮ್ಮ ಸಂಗಾತಿಗೆ ನೀಡಬಹುದಾದ ಪರಿಪೂರ್ಣ ಉಡುಗೊರೆಯಾಗಿದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಟೆಡ್ಡಿಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಈ ಟೆಡ್ಡಿ ಎಂಬ ಹೆಸರು ಬಂದಿದ್ದು ಯುನೈಟೆಡ್ ಸ್ಟೇಟ್ಸ್‌ನ 26ನೇ ಅಧ್ಯಕ್ಷರಾದ ಥಿಯೋಡರ್ ಟೆಡ್ಡಿ ರೂಸ್‌ವೆಲ್ಟ್ ಅವರಿಂದ. ಈ ದಿನದಂದು, ಜನರು ತಮ್ಮ ದಿನವನ್ನು ಉತ್ತಮಗೊಳಿಸಲು ಈ ಮೃದುವಾದ ಆಟಿಕೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ.

ಇದನ್ನೂ ಓದಿ: Rose Day 2024: ಪ್ರತಿ ಬಣ್ಣದ ಗುಲಾಬಿಗೂ ಒಂದೊಂದು ಅರ್ಥ; ರೋಸ್ ಡೇ ವಿಶೇಷತೆಯಿದು

ಮಹತ್ವ:

ಟೆಡ್ಡಿ ದಿನದಂದು ನಿಮ್ಮ ಅಚ್ಚುಮೆಚ್ಚಿನ ಬಣ್ಣದ ಟೆಡ್ಡಿಯನ್ನು ನಿಮ್ಮ ಸಂಗಾತಿಗೆ ಉಡುಗೊರೆಯಾಗಿ ನೀಡಿ. ನಿಮಗೆ ಅವರು ಎಷ್ಟು ವಿಶೇಷವೆಂದು ಅವರಿಗೆ ತಿಳಿಸಲು ನೀವೇ ಒಂದು ಸಣ್ಣ ಪತ್ರ ಬರೆದು, ಟೆಡ್ಡಿಯ ಜೊತೆಗಿಟ್ಟು ನೀಡಿ. ಇದರ ಜೊತೆಗೆ ನೀವು ಟೆಡ್ಡಿ ಥೀಮ್‌ನೊಂದಿಗೆ ಡಿನ್ನರ್ ಡೇಟ್ ಕೂಡ ಆಯೋಜಿಸಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:54 pm, Thu, 8 February 24

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ