Solar Eclipse 2024: ಈ ವರ್ಷದ ಮೊದಲ ಸೂರ್ಯಗ್ರಹಣದ ದಿನ, ಸಮಯದ ಮಾಹಿತಿ ಇಲ್ಲಿದೆ

Surya Grahan 2024 Date: ಮುಂಬರುವ ಸಂಪೂರ್ಣ ಸೂರ್ಯಗ್ರಹಣವು ಈ ವರ್ಷದ ಅತಿದೊಡ್ಡ ಖಗೋಳ ಘಟನೆಯಾಗಿದೆ ಎನ್ನಲಾಗಿದೆ. 2024ರ ಮೊದಲ ಸೂರ್ಯಗ್ರಹಣವು ಯಾವಾಗ ಸಂಭವಿಸಲಿದೆ? ಈ ಗ್ರಹಣವನ್ನು ಭಾರತದಲ್ಲೂ ನೋಡಬಹುದಾ? ಈ ಗ್ರಹಣದ ಪರಿಣಾಮ ಯಾರ ಮೇಲೆ ಹೆಚ್ಚು ಇರಲಿದೆ? ಎಂಬಿತ್ಯಾದಿ ವಿಷಯಗಳ ಮಾಹಿತಿ ಇಲ್ಲಿದೆ.

Solar Eclipse 2024: ಈ ವರ್ಷದ ಮೊದಲ ಸೂರ್ಯಗ್ರಹಣದ ದಿನ, ಸಮಯದ ಮಾಹಿತಿ ಇಲ್ಲಿದೆ
ಸೂರ್ಯ ಗ್ರಹಣ
Follow us
ಸುಷ್ಮಾ ಚಕ್ರೆ
|

Updated on: Feb 08, 2024 | 4:43 PM

ಈ ವರ್ಷದ ಅತ್ಯಂತ ಮಹತ್ವದ ಖಗೋಳ ಘಟನೆ ಸಂಪೂರ್ಣ ಸೂರ್ಯಗ್ರಹಣ (Surya Grahan) ಏಪ್ರಿಲ್ 8ರಂದು ಸಂಭವಿಸಲಿದೆ. ಈ ಅಪರೂಪದ ಆಕಾಶ ವಿದ್ಯಮಾನವು ಕೆನಡಾ, ಯುನೈಟೆಡ್ ಸ್ಟೇಟ್ಸ್ ಮತ್ತು ಮೆಕ್ಸಿಕೊದಾದ್ಯಂತ ಗೋಚರಿಸುತ್ತದೆ. ಉತ್ತರ ಅಮೆರಿಕಾದಲ್ಲಿ ಅದು ಮಾರ್ಗ ಹಾದುಹೋಗುತ್ತದೆ. ಈ ಸೂರ್ಯಗ್ರಹಣವನ್ನು (Solar Eclipse) ಭಾರತದಲ್ಲಿ ವೀಕ್ಷಿಸಲು ಸಾಧ್ಯವಾಗುವುದಿಲ್ಲ ಎಂಬುದು ಬಹಳ ಮುಖ್ಯವಾಗಿದೆ. ಗ್ರಹ ಅಥವಾ ಚಂದ್ರನಂತಹ ಆಕಾಶಕಾಯವು ಸೂರ್ಯನ ಬೆಳಕನ್ನು ಅಡ್ಡಿಪಡಿಸಿದಾಗ ಗ್ರಹಣ ಸಂಭವಿಸುತ್ತದೆ.

ಏಪ್ರಿಲ್‌ನಲ್ಲಿ ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸಲು ಜನರು ಸಜ್ಜಾಗುತ್ತಿದ್ದಾರೆ. NASA ಪ್ರಕಾರ, ಏಪ್ರಿಲ್ 8ರಂದು ಸಂಪೂರ್ಣ ಸೂರ್ಯಗ್ರಹಣವು ದಕ್ಷಿಣ ಪೆಸಿಫಿಕ್ ಮೇಲೆ ಪ್ರಾರಂಭವಾಗುತ್ತದೆ. ನಂತರ ಅಮೆರಿಕಾ ಪ್ರವೇಶಿಸುವ ಮೊದಲು ಮೆಕ್ಸಿಕೋದ ಪೆಸಿಫಿಕ್ ಕರಾವಳಿಯನ್ನು ತಲುಪುತ್ತದೆ.

ಸೂರ್ಯ ಗ್ರಹಣ ಎಂದರೇನು?:

ಚಂದ್ರನು ಸೂರ್ಯನ ಬೆಳಕನ್ನು ಅಡ್ಡಿಪಡಿಸಿದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಭೂಮಿಯ ಮೇಲೆ ಸೂರ್ಯನ ನೆರಳು ಬೀಳುತ್ತದೆ. ಇದು ಹಗಲಿನಲ್ಲಿ ಕತ್ತಲೆಯನ್ನು ಉಂಟುಮಾಡುತ್ತದೆ. ಈ ಸಂಪೂರ್ಣ ಗ್ರಹಣವು ಭೂಮಿಯ ಮೇಲಿನ ವಿವಿಧ ಸ್ಥಳಗಳಲ್ಲಿ ಸರಿಸುಮಾರು ಪ್ರತಿ ಒಂದೂವರೆ ವರ್ಷಕ್ಕೆ ಒಮ್ಮೆ ಸಂಭವಿಸುತ್ತದೆ. ಆದರೆ, ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸದ ಭಾಗಶಃ ಗ್ರಹಣವು ಭೂಮಿಯ ಮೇಲೆ ವರ್ಷಕ್ಕೆ ಸುಮಾರು 2 ಬಾರಿ ಸಂಭವಿಸುತ್ತದೆ.

ಇದನ್ನೂ ಓದಿ: Pregnant Health: ಗರ್ಭಿಣಿಯರು ಸ್ಮೂಥಿ ಸೇವಿಸಬಹುದಾ?

ಈ ಬಾರಿ ಸಂಭವಿಸಲಿರುವ ಸಂಪೂರ್ಣ ಸೂರ್ಯಗ್ರಹಣವನ್ನು ವೀಕ್ಷಿಸುವುದು ಅಪರೂಪದ ಅವಕಾಶವಾಗಿದೆ. ಏಕೆಂದರೆ ಭೂಮಿಯ ಮೇಲಿನ ಚಂದ್ರನ ನೆರಳು ತುಲನಾತ್ಮಕವಾಗಿ ಚಿಕ್ಕದಾಗಿರುತ್ತದೆ. ಇದು ಗ್ರಹಣವನ್ನು ವೀಕ್ಷಿಸುವ ಸ್ಥಳಗಳ ಸಂಖ್ಯೆಯನ್ನು ಸೀಮಿತಗೊಳಿಸುತ್ತದೆ. ಸರಾಸರಿಯಾಗಿ, ಭೂಮಿಯ ಮೇಲಿನ ಒಂದೇ ಜಾಗ ಪ್ರತಿ 375 ವರ್ಷಗಳಿಗೊಮ್ಮೆ ಕೆಲವೇ ನಿಮಿಷಗಳವರೆಗೆ ಸಂಪೂರ್ಣ ಸೂರ್ಯಗ್ರಹಣವನ್ನು ಅನುಭವಿಸುತ್ತದೆ.

ಸೂರ್ಯಗ್ರಹಣವನ್ನು ಯಾವಾಗ ಮತ್ತು ಎಲ್ಲಿ ವೀಕ್ಷಿಸಬಹುದು?:

ಮುಂಬರುವ ಗ್ರಹಣದ ಮಾರ್ಗವು ಮೆಕ್ಸಿಕೋವನ್ನು ಹಾದುಹೋಗುತ್ತದೆ. ಇದು ಟೆಕ್ಸಾಸ್ ಮೂಲಕ ಯುನೈಟೆಡ್ ಸ್ಟೇಟ್ಸ್ ಅನ್ನು ಪ್ರವೇಶಿಸುತ್ತದೆ ಮತ್ತು ಕೆನಡಾವನ್ನು ತಲುಪುವ ಮೊದಲು ಹಲವಾರು ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಸಂಪೂರ್ಣ ಸೂರ್ಯಗ್ರಹಣವು ದಕ್ಷಿಣ ಪೆಸಿಫಿಕ್ ಮಹಾಸಾಗರದ ಮೇಲೆ ಪ್ರಾರಂಭವಾಗುತ್ತದೆ. 2024 ರ ಸಂಪೂರ್ಣ ಸೂರ್ಯಗ್ರಹಣದ ಹಾದಿಯು ಅಮೆರಿಕಾದಾದ್ಯಂತ ಟೆಕ್ಸಾಸ್‌ನಿಂದ ಮೈನೆವರೆಗೆ ವ್ಯಾಪಿಸಿದೆ. ಇದು 48 ರಾಜ್ಯಗಳಲ್ಲಿ ಗೋಚರಿಸುತ್ತದೆ. ಸಂಪೂರ್ಣ ಸೂರ್ಯಗ್ರಹಣದ ಸಮಯದಲ್ಲಿ ಚಂದ್ರನು ಸೂರ್ಯ ಮತ್ತು ಭೂಮಿಯ ನಡುವೆ ಹಾದುಹೋಗುತ್ತಾನೆ. ಆಗ ಸೂರ್ಯನ ಮುಖವನ್ನು ಸಂಪೂರ್ಣವಾಗಿ ಮರೆಮಾಡುತ್ತಾನೆ. ಈ ವೇಳೆ ಹಗಲಿನಲ್ಲಿಯೇ ಮುಸ್ಸಂಜೆಯ ರೀತಿ ಕತ್ತಲು ಆವರಿಸುತ್ತದೆ.

ಇದನ್ನೂ ಓದಿ: Pregnant Health: ಗರ್ಭಿಣಿಯರು ಈ 8 ಹಣ್ಣುಗಳನ್ನು ಯಾಕೆ ತಿನ್ನಬಾರದು?

ಸೂರ್ಯ ಗ್ರಹಣದ ದಿನಾಂಕ ಮತ್ತು ಸಮಯ:

ಸೂರ್ಯ ಗ್ರಹಣದ ಸಮಯ ಏಪ್ರಿಲ್ 8ರಂದು ಮಧ್ಯಾಹ್ನ 02:12ಕ್ಕೆ ಆರಂಭವಾಗಿ ಏಪ್ರಿಲ್ 9ರಂದು ಮಧ್ಯರಾತ್ರಿ 02:22ಕ್ಕೆ ಕೊನೆಗೊಳ್ಳುತ್ತದೆ.

ಸೂರ್ಯಗ್ರಹಣವನ್ನು ಕಣ್ಣಿನ ರಕ್ಷಣೆಯಿಲ್ಲದೆ ನೇರವಾಗಿ ನೋಡುವುದು ತೀವ್ರ ಕಣ್ಣಿನ ಗಾಯಕ್ಕೆ ಕಾರಣವಾಗಬಹುದು. ಚರ್ಮದ ಸುರಕ್ಷತೆಗಾಗಿ ಈ ಸಂದರ್ಭದಲ್ಲಿ ಸನ್‌ಸ್ಕ್ರೀನ್, ಟೋಪಿ ಮತ್ತು ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸುವುವು ಮುಂತಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ