World Teachers’ Day 2021: ವಿಶ್ವ ಶಿಕ್ಷಕರ ದಿನ; ಭವಿಷ್ಯ ರೂಪಿಸುವಲ್ಲಿ ಮಹತ್ವ ಪಾತ್ರವಹಿಸಿರುವ ಶಿಕ್ಷಕರನ್ನು ಗೌರವಿಸುವ ದಿನವಿದು

TV9 Digital Desk

| Edited By: shruti hegde

Updated on:Oct 05, 2021 | 11:05 AM

ವಿಶ್ವ ಶಿಕ್ಷಕರ ದಿನ: ಜನರ ಭವಿಷ್ಯವನ್ನು ರೂಪಿಸುವ ಶಿಕ್ಷಣವನ್ನು ನೀಡುವ ಮೂಲಕ ದೇಶ ಆರ್ಥಿಕ ಅಭಿವೃದ್ದಿ ಸಾಧಿಸುವಲ್ಲಿ ಮಹತ್ವ ಪಾತ್ರವಹಿಸಿರುವ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನವಿಂದು.

World Teachers’ Day 2021: ವಿಶ್ವ ಶಿಕ್ಷಕರ ದಿನ; ಭವಿಷ್ಯ ರೂಪಿಸುವಲ್ಲಿ ಮಹತ್ವ ಪಾತ್ರವಹಿಸಿರುವ ಶಿಕ್ಷಕರನ್ನು ಗೌರವಿಸುವ ದಿನವಿದು
ವಿಶ್ವ ಶಿಕ್ಷಕರ ದಿನ

ಪ್ರತೀ ವರ್ಷ ಅಕ್ಟೋಬರ್ 5ರಂದು ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಕರ ಜವಾಬ್ದಾರಿಗಳು, ಹಕ್ಕುಗಳು ಮತ್ತು ಮೌಲ್ಯದ ಬಗ್ಗೆ ತಿಳಿಸುವ ಉದ್ದೇಶದೊಂದಿಗೆ ವಿಶ್ವ ಶಿಕ್ಷಕರ ದಿನವನ್ನು ಆಚರಿಸುತ್ತದೆ. ಭಾರತ, ಯುನೈಟೆಡ್ ಸ್ಟೇಟ್, ಕೆನಡಾ, ಅಸ್ಟ್ರೇಲಿಯಾ ಮತ್ತು ಫಿಲಿಫೈನ್ಸ್ ಸೇರಿದಂತೆ 100 ಕ್ಕೂ ಹೆಚ್ಚು ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತವೆ. ಜನರ ಭವಿಷ್ಯವನ್ನು ರೂಪಿಸುವ ಶಿಕ್ಷಣವನ್ನು ನೀಡುವ ಮೂಲಕ ದೇಶ ಆರ್ಥಿಕ ಅಭಿವೃದ್ದಿ ಸಾಧಿಸುವಲ್ಲಿ ಮಹತ್ವ ಪಾತ್ರವಹಿಸಿರುವ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನವಿಂದು.

ಮೊದಲಿಗೆ ಯುನೆಸ್ಕೋ 1994ರಲ್ಲಿ ವಿಶ್ವ ಶಿಕ್ಕರ ದಿನವನ್ನು ಪರಿಚಯಿಸಿತು. ಶಿಕ್ಷಕರ ಕೊಡುಗೆಗಳು ಮತ್ತು ಸಾಧನೆಗಳ ಜೊತೆಗೆ ಶಿಕ್ಷಕರ ಕಾಳಜಿ ಮತ್ತು ಶಿಕ್ಷಣದ ಬಗೆಗೆ ಗಮನ ಸೆಳೆಯಲು ಈ ದಿನವನ್ನು ಆಚರಿಸಲಾಗುತ್ತದೆ. ಅಕ್ಟೋಬರ್ 5ರಂದು ಶಿಕ್ಷಕರನ್ನು ಗೌರವಿಸಲು ಅಂತಾರಾಷ್ಟ್ರೀಯ ದಿನವಾಗಿ ಆಯ್ಕೆ ಮಾಡಲಾಗಿದೆ.

ಈ ದಿನದ ಮಹತ್ವ ಮತ್ತು ಥೀಮ್ ಶಿಕ್ಷಕರ ನೇಮಕಾತಿ, ತರಬೇತಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶವನ್ನು ಈ ದಿನ ಹೊಂದಿದೆ. ಶಿಕ್ಷಕರ ಪ್ರಗತಿಗಾಗಿ ಈ ದಿನವನ್ನು ಮೀಸಲಿಡಲಾಗಿದೆ. ‘ಶಿಕ್ಷಣ ಚೇತರಿಕೆಯಲ್ಲಿ ಹೃದಯಭಾಗದಲ್ಲಿರುವ ಶಿಕ್ಷಕರು’ ಎಂಬ ಥೀಮ್​ನೊಂದಿಗೆ ಈ ವರ್ಷ ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಗುತ್ತಿದೆ. ಕೊವಿಡ್ 19ನಂತರ ಸಾಂಕ್ರಾಮಿಕ ಹರಡುವಿಕೆಯ ಸಮಯದಲ್ಲಿಯೂ ಸಹ ಮಕ್ಕಳ ಭವಿಷ್ಯದ ಬಗೆಗೆ ಚಿಂತಿಸಿ ಶಿಕ್ಷಣ ನೀಡುತ್ತಿದ್ದ ಗುರುಗಳಿಗೆ ಇಂದು ಗೌರವ ಹೇಳುವ ದಿನ.

ಶಿಕ್ಷಕರು ಯಾವಾಗಲೂ ಭವಿಷ್ಯದ ಬಗ್ಗೆ ಶ್ರಮಿಸುತ್ತಾರೆ. ಮಕ್ಕಳ ಮುಂದಿನ ಭವಿಷ್ಯದ ಕಾಳಜಿ ಮಾಡುತ್ತಾರೆ. ನಮ್ಮ ಉತ್ತಮ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತ ಶಿಕ್ಷಕರಿಗೆ ಧನ್ಯವಾದ ಹೇಳುವ ದಿನವಿದು. ವಿಶ್ವ ಮಟ್ಟದಲ್ಲಿ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನ ಇದಾಗಿದೆ.

ಇದನ್ನೂ ಓದಿ:

ಶಿಕ್ಷಕರ ದಿನಾಚರಣೆಯಂದು ಉಪನ್ಯಾಸಕರ ಥಕಥೈ! ವೈರಲ್ ಆಯ್ತು ವಿಡಿಯೋ, ಕೇಳಿಬಂತು ಟೀಕೆ

ದೈಹಿಕ ಶಿಕ್ಷಕರಿಗೆ ಕ್ರೀಡಾ ಇಲಾಖೆಯಿಂದ ತರಬೇತಿ, ವೈಮಾನಿಕ ತರಬೇತಿ ಶಾಲೆ ಪುನಾರಂಭ: ನಾರಾಯಣಗೌಡ ಮಾಹಿತಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada