World Theatre Day 2023: ರಂಗ ಭೂಮಿ ಕಲೆ ಮತ್ತು ಪ್ರತಿಭೆಯನ್ನು ಫೋತ್ಸಾಹಿಸುವ ದಿನವಿದು

|

Updated on: Mar 25, 2023 | 7:00 AM

ತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬೆಳೆಯುವುತ್ತಿದ್ದಂತೆ ಪುರಾತನ ಕಲೆ ,ಸಾಹಿತ್ಯ, ಸಂಸ್ಕೃತಿಗಳು ಕಣ್ಮರೆಯಾಗುತ್ತಾ ಹೋಗುವುದನ್ನು ಕಾಣಬಹುದು. ಆದ್ದರಿಂದ ಇಂದಿನ ಯುವ ಪೀಳಿಗೆ ಕಲೆಗೆ ಬೆಲೆ ನೀಡಿ, ಕಲಾವಿದರ ಪ್ರತಿಭೆಯನ್ನು ಫೋತ್ಸಾಹಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು.

World Theatre Day 2023: ರಂಗ ಭೂಮಿ ಕಲೆ ಮತ್ತು ಪ್ರತಿಭೆಯನ್ನು ಫೋತ್ಸಾಹಿಸುವ ದಿನವಿದು
ವಿಶ್ವ ರಂಗಭೂಮಿ ದಿನ
Follow us on

ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಕಲಾ ಪ್ರಕಾರಗಳನ್ನು ಕಾಣಬಹುದು. ಒಂದೊಂದು ಜನಾಂಗ ಹಾಗೂ ಭೂಭಾಗ ಸಂಬಂಧಿಸಿದಂತೆ ವಿವಿಧ ಪ್ರಕಾರಗದ ಕಲೆಗಳನ್ನು ಕಾಣಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬೆಳೆಯುವುತ್ತಿದ್ದಂತೆ ಪುರಾತನ ಕಲೆ ,ಸಾಹಿತ್ಯ, ಸಂಸ್ಕೃತಿಗಳು ಕಣ್ಮರೆಯಾಗುತ್ತಾ ಹೋಗುವುದನ್ನು ಕಾಣಬಹುದು. ಆದ್ದರಿಂದ ಇಂದಿನ ಯುವ ಪೀಳಿಗೆ ಕಲೆಗೆ ಬೆಲೆ ನೀಡಿ, ಕಲಾವಿದರ ಪ್ರತಿಭೆಯನ್ನು ಫೋತ್ಸಾಹಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು.

ರಂಗ ಭೂಮಿ ಕಲೆಗೆ ಸಂಬಂಧಿಸಿದಂತೆ ಎರಡು ಪ್ರಕಾರಗಳನ್ನು ಕಾಣಬಹುದು.ಅವೆಂದರೆ:

  •  ವೃತ್ತಿ ರಂಗಭೂಮಿ ಕಲಾವಿದರು.
  • ಹವ್ಯಾಸಿ ರಂಗಭೂಮಿ ಕಲಾವಿದರು.

ಈ ಎರಡು ಪ್ರಕಾರಗಳಲ್ಲಿ ಇಂದು ವೃತ್ತಿ ರಂಗಭೂಮಿ ಕಲಾವಿದರು ಕಣ್ಮರೆಯಾಗುತ್ತಾ ಹೋಗುವುದನ್ನು ಕಾಣಬಹುದು. ಯಾಕೆಂದರೆ ಹಿಂದಿನ ಕಾಲದಲ್ಲಿ ರಂಗಭೂಮಿ ಕಲಾವಿದರು ಪ್ರತಿಭೆಗಳಿಗೆ ಹಳ್ಳಿ ಹಳ್ಳಿಗಳಲ್ಲಿ ಪ್ರದರ್ಶಿಸಲು ಅವಕಾಶವಿತ್ತು. ಆ ಸಮಯದಲ್ಲಿ ಕೆಲವೊಂದಿಷ್ಟು ಕಲಾವಿದರು ತಮ್ಮ ಹೊಟ್ಟೆ ಪಾಡಿಗಾಗಿ ಕಲೆಯನ್ನೇ ವೃತ್ತಿಯಾಗಿಸಿಕೊಂಡಿದ್ದರು. ಆದರೆ ಇಂದು ವೃತ್ತಿ ರಂಗಭೂಮಿ ಕಲಾವಿದರ ಸಂಖ್ಯೆಯೇ ಕಡಿಮೆಯಾಗುತ್ತಿದೆ.

ವಿಶ್ವ ರಂಗಭೂಮಿ ದಿನ:

ರಂಗಭೂಮಿಯು ತಮ್ಮ ಕಲಾತ್ಮಕ ಪ್ರತಿಭೆಯನ್ನು ಸನ್ನೆಗಳು, ಮಾತು, ಹಾಡು, ಸಂಗೀತ ಅಥವಾ ನೃತ್ಯದ ಮೂಲಕ ಪ್ರೇಕ್ಷಕರಿಗೆ ಸಂದೇಶವನ್ನು ಸಂವಹಿಸಲು ನೇರ ಪ್ರದರ್ಶನಗಳನ್ನು ನೀಡುವ ವೇದಿಕೆಯಾಗಿದೆ. ಆದ್ದರಿಂದ, ಚಿತ್ರಮಂದಿರಗಳಲ್ಲಿ ಒಂದು ದಿನವನ್ನು ಮೀಸಲಿಡಲು, ಮಾರ್ಚ್ 27 ರಂದು ಜಗತ್ತಿನಾದ್ಯಂತ ವಿಶ್ವ ರಂಗಭೂಮಿ ದಿನ ಎಂದು ಆಚರಿಸಲಾಗುತ್ತದೆ. ರಂಗಭೂಮಿಯು ಸಂಸ್ಕೃತಿಯನ್ನು ಚಿತ್ರಿಸುವ ಅತ್ಯಂತ ಜನಪ್ರಿಯವಾದ ಕಲೆಯ ಪ್ರಕಾರಗಳಲ್ಲಿ ಒಂದಾಗಿದೆ, ಇದು ಪ್ರಪಂಚದಾದ್ಯಂತ ಅಸ್ತಿತ್ವದಲ್ಲಿರುವ ಸಂಪ್ರದಾಯವಾಗಿದೆ. ಈ ದಿನವು ನಾಟಕಗಳನ್ನು ಮತ್ತು ನಾಟಕೀಯ ಕಲೆಗಳಲ್ಲಿ ಅವುಗಳ ಪ್ರಮುಖ ಪಾತ್ರವನ್ನು ಸಂರಕ್ಷಿಸಲಾಗುತ್ತದೆ.

ಇದನ್ನೂ ಓದಿ: ಮಕ್ಕಳ ಜತೆಗೆ ಈ ಬೇಸಿಗೆ ರಜೆಯಲ್ಲಿ ಕರ್ನಾಟಕದ ಈ ಅದ್ಭುತ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ

ವಿಶ್ವ ರಂಗಭೂಮಿ ದಿನದ ಇತಿಹಾಸ:

ಈ ದಿನವನ್ನು ಪರಿಚಯಿಸಿದ್ದು ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆ ಅಥವಾ ಇಂಟರ್‌ನ್ಯಾಷನಲ್‌ ಥಿಯೇಟರ್‌ ಇನ್ಸ್ಟಿಟ್ಯೂಟ್‌ (ಐಟಿಐ). ಈ ದಿನಾಚರಣೆ ಮೊದಲ ಬಾರಿಗೆ 1961 ರಲ್ಲಿ ಆರಂಭವಾಯಿತು. ಇಂದಿಗೂ ಈ ದಿನವನ್ನು ಐಟಿಐ ಕೇಂದ್ರಗಳು, ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆಗಳು ಮತ್ತು ಸ್ಥಳೀಯ ರಂಗಭೂಮಿ ಸಂಸ್ಥೆಗಳು ಆಚರಿಸುತ್ತವೆ. ವಿಶ್ವ ರಂಗಭೂಮಿ ದಿನದಂದು ಫ್ರೆಂಚ್ ನಾಟಕಕಾರ ಜೀನ್ ಕಾಕ್ಟೋ ಅವರು ಮೊದಲ ಸಂದೇಶವನ್ನು ನೀಡಿದರು.

ವಿಶ್ವ ರಂಗಭೂಮಿ ದಿನದ ಮಹತ್ವ:

ರಂಗಭೂಮಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ಪ್ರಪಂಚದಾದ್ಯಂತ ರಂಗಭೂಮಿ ಕಲೆ ಹಾಗೂ ಪ್ರತಿಭೆಯನ್ನು ಫೋತ್ಸಾಹಿಸುವುದು ಈ ದಿನದ ಮಹತ್ವವಾಗಿದೆ.ಪ್ರಾಚೀನ ಗ್ರೀಕರ ಕಾಲದಿಂದಲೂ, ನಾಟಕವು ಅತ್ಯಂತ ವ್ಯಾಪಕವಾಗಿ ಪ್ರದರ್ಶಿಸಲಾಗುತ್ತಿತ್ತು. ಪ್ರೇಕ್ಷಕರ ಮುಂದೆ ಪ್ರದರ್ಶನ ನೀಡುವಾಗ, ಸಂಗೀತಗಾರರು, ಪ್ರದರ್ಶಕರು ಅಥವಾ ಕಲಾವಿದರು ಒಂದು ನಿರ್ದಿಷ್ಟ ಸ್ಥಳದಲ್ಲಿ ಅಥವಾ ವೇದಿಕೆಯಲ್ಲಿ ನೈಜ-ಜೀವನದ ಘಟನೆಯ ಕಥೆಯನ್ನು ಹೇಳುತ್ತಾರೆ, ಇದನ್ನು ವಿವಿಧ ರೀತಿಯ ಲಲಿತಕಲೆಗಳ ಸಂಯೋಜನೆ ಎಂದು ಕರೆಯಲಾಗುತ್ತದೆ. ಈ ದಿನದಂದು ನಾಟಕ ಕಲೆಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವುದು, ಹಾಗೆಯೇ ಅವರು ಮನರಂಜನೆಯ ಕ್ಷೇತ್ರದಲ್ಲಿ ಹೇಗೆ ಅತ್ಯಗತ್ಯ ಭಾಗವಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ರಂಗಭೂಮಿಯು ಜನರ ಜೀವನದಲ್ಲಿ ತಂದ ಸುಧಾರಣೆಗಳನ್ನು ತೋರಿಸುತ್ತದೆ.

ವಿಶ್ವ ರಂಗಭೂಮಿ ದಿನ 2023 ಧ್ಯೇಯ:

ವಿಶ್ವ ರಂಗಭೂಮಿ ದಿನದ 2023 ರ ಧ್ಯೇಯ “ರಂಗಭೂಮಿ ಮತ್ತು ಶಾಂತಿಯ ಸಂಸ್ಕೃತಿ”(Theatre and a Culture of Peace) ಆಗಿದೆ. ಈ ಥೀಮ್ ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆ ಅಥವಾ ಇಂಟರ್‌ನ್ಯಾಷನಲ್‌ ಥಿಯೇಟರ್‌ ಇನ್ಸ್ಟಿಟ್ಯೂಟ್‌ (ಐಟಿಐ)ನಿಂದ ನೀಡಲಾಗಿದ್ದು, ಪ್ರತಿ ವರ್ಷವೂ ಇದೇ ಧ್ಯೇಯವಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ಧಿಗಾಗಿ ಇಲ್ಲಿ ಕ್ಲಿಕ್​ ಮಾಡಿ: