
ವಿಶ್ವದ ಅತ್ಯಂತ ಹಳೆಯ ಸರೀಸೃಪ ಗುಂಪುಗಳಿಗೆ ಸೇರಿದ ಆಮೆಗಳು ಶಾಂತ ಸ್ವಭಾವದ ಜೀವಿಗಳು. ಪ್ರಪಂಚದಲ್ಲಿ ಸುಮಾರು 350ಕ್ಕೂ ಹೆಚ್ಚಿನ ವಿವಿಧ ಆಮೆಯ ಸಂತತಿಗಳಿವೆ. ಈ ಭೂಮಿಯ ಮೇಲಿನ ಜೀವಿಗಳಲ್ಲಿ ಆಮೆಯ ಜೀವಿತಾವಧಿ ದೀರ್ಘವಾಗಿದೆ. 150-200 ವರ್ಷಗಳ ಕಾಲ ಬದುಕುವ ಈ ಸರೀಸೃಪಗಳ ಸಂತತಿಯನ್ನು ಕಾಣುವುದೇ ಅಪರೂಪವಾಗಿದೆ. ಸಮುದ್ರದಲ್ಲಿ ವಾಸಿಸುವ ಜೀವಿಯಾಗಿರುವ ಈ ಆಮೆಗಳ ಕೆಲ ಪ್ರಭೇದಗಳು ಕಣ್ಮರೆಯಾಗುತ್ತಿದೆ. ಇದಕ್ಕೆ ಒಂದು ಮೂಲ ಕಾರಣವೇ ಮಾನವನ ಬೇಟೆಯ ಪ್ರವೃತ್ತಿಯಾಗಿದ್ದು, ಚಿಪ್ಪು ಮತ್ತು ಮಾಂಸಕ್ಕಾಗಿ ಆಮೆಯನ್ನು ಕಳ್ಳಬೇಟೆಯಾಡುತ್ತಾರೆ. ಈ ಸರೀಸೃಪಗಳ ಸಂತತಿಯನ್ನು ಉಳಿಸುವ ಹಾಗೂ ಅವುಗಳ ಆವಾಸಸ್ಥಾನಗಳನ್ನು ರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ.
ಅಮೇರಿಕಾದ ಆಮೆ ರಕ್ಷಣಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ 2000 ಇಸವಿಯಲ್ಲಿ ಈ ದಿನವನ್ನು ಆಚರಣೆಗೆ ತರಲಾಯಿತು. ಅಂದಿನಿಂದ ಪ್ರತೀ ವರ್ಷ ಮೇ 23ರಂದು ವಿಶ್ವ ಆಮೆ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ನೋ ಫೋನ್, ನೋ ಲ್ಯಾಪ್‌ಟಾಪ್, ಡಿಜಿಟಲ್ ಒತ್ತಡದಿಂದ ದೂರವಿರಲು ಡಿಜಿಟಲ್ ಡಿಟಾಕ್ಸ್
ಆಮೆಗಳ ಕೆಲವು ಪ್ರಭೇದಗಳು ಅಳಿವಿನಂಚಿಗೆ ತಲುಪಿದೆ. ಹೀಗಾಗಿ ಈ ಆಮೆಗಳನ್ನು ರಕ್ಷಿಸಲು ಹಾಗೂ ಅವುಗಳ ಕಣ್ಮರೆಯಾಗುತ್ತಿರುವ ಆವಾಸಸ್ಥಾನಗಳನ್ನು ಸಂರಕ್ಷಿಸಲು ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸುವ ಉದ್ದೇಶವನ್ನು ಹೊಂದಿದೆ. ಈ ವಿಶ್ವ ಆಮೆ ದಿನವನ್ನು ಜಗತ್ತಿನಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಆಮೆಗಳಂತೆ ಉಡುಗೆ ತೊಟ್ಟು ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತವೆ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ