World Vegan day 2024: ದೇಶದಲ್ಲೇ ಅತೀ ಹೆಚ್ಚು ಸಸ್ಯಾಹಾರವನ್ನು ಯಾವ ನಗರದ ಜನರು ಸೇವಿಸುತ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ

ಬಹುತೇಕರಿಗೆ ಈ ಸಸ್ಯಾಹಾರವೆಂದರೆ ಅಷ್ಟಕಷ್ಟೆ. ಈ ಸಸ್ಯ ಆಧಾರಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಹಾಗೂ ಪರಿಸರವನ್ನು ರಕ್ಷಿಸುವ ಜೊತೆಗೆ ಶುದ್ಧ ಸಸ್ಯಾಹಾರಿ ಆಹಾರಗಳ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಲುವಾಗಿವಾಗಿ ನವೆಂಬರ್ 1 ರಂದು ವಿಶ್ವ ಸಸ್ಯಾಹಾರಿ (ವೇಗನ್) ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆಯೂ ಯಾವಾಗ ಪ್ರಾರಂಭವಾಯಿತು? ಏನಿದರ ಮಹತ್ವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

World Vegan day 2024: ದೇಶದಲ್ಲೇ ಅತೀ ಹೆಚ್ಚು ಸಸ್ಯಾಹಾರವನ್ನು ಯಾವ ನಗರದ ಜನರು ಸೇವಿಸುತ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 01, 2024 | 9:10 AM

ಇತ್ತೀಚೆಗಿನ ದಿನಗಳಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಜನ ಸಾಮಾನ್ಯವರೆಗೂ ಈ ಸಸ್ಯಾಹಾರ ಆಹಾರ ಪದ್ಧತಿಯನ್ನು ಹೆಚ್ಚು ಅಳವಡಿಸಿಕೊಂಡಿದ್ದಾರೆ. ಸಸ್ಯಾಹಾರಗಳು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದ್ದು, ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಹೆಚ್ಚಿನವರು ಹಸಿರು ತರಕಾರಿಗಳು, ಸೊಪ್ಪುಗಳನ್ನು ಹೆಚ್ಚು ಸೇವಿಸುತ್ತಿದ್ದಾರೆ. ಈ ಸಸ್ಯಾಹಾರಿ ಆಹಾರ ಪದ್ಧತಿಯ ಮಹತ್ವದ ಬಗ್ಗೆ ತಿಳಿಸಲು, ಈ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೇರೇಪಿಸಲು ಈ ವಿಶ್ವ ಸಸ್ಯಾಹಾರಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ಸಸ್ಯಾಹಾರಿ ದಿನದ ಇತಿಹಾಸ

1994 ರಲ್ಲಿ ಇಂಗ್ಲೇಂಡಿನಲ್ಲಿರುವ ದಿ ವೇಗನ್ ಸೊಸೈಟಿಯ ಆಗಿನ ಅಧ್ಯಕ್ಷರಾದ ಲೂಯಿಸ್ ವಾಲಿಸ್ ಅವರು ಈ ಸಂಸ್ಥೆಯ ಸ್ಥಾಪನೆಯ 50 ನೇ ವಾರ್ಷಿಕೋತ್ಸವದ ನೆನಪಿಗಾಗಿ ವಿಶ್ವ ಸಸ್ಯಾಹಾರಿ ದಿನದ ಆಚರಣೆಯನ್ನು ಪ್ರಾರಂಭಿಸಿದರು. ಅಂದಿನಿಂದ ಪ್ರತಿವರ್ಷ ನವೆಂಬರ್ 1 ರಂದು ವಿಶ್ವದಾದ್ಯಂತ ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಸಸ್ಯಾಹಾರಿ ದಿನದ ಮಹತ್ವ

ಶುದ್ಧ ಸಸ್ಯಾಹಾರದಲ್ಲಿ ಹೆಚ್ಚು ಫೈಬರ್, ಉತ್ಕರ್ಷಣ ನಿರೋಧಕಗಳು ಮತ್ತು ದೇಹಕ್ಕೆ ಪ್ರಯೋಜನಕಾರಿಯಾದ ಪೊಟ್ಯಾಸಿಯಂ, ಮೆಗ್ನೇಸಿಯಂ, ಫೋಲೇಟ್, ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇದ್ದು, ಈ ಈ ಎಲ್ಲಾ ಖನಿಜಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರ ಸೇವನೆ ಯೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಈ ವೇಗನ್ ಜೀವನಶೈಲಿಯನ್ನು ಅನುಸರಿಸಲು ಜನರನ್ನು ಪ್ರೇರೇಪಿಸುವುದು ಹಾಗೂ ಈ ಆಹಾರ ಪದ್ಧತಿಯ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಈ ದಿನವು ಮಹತ್ವದ್ದಾಗಿದೆ.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಸರಳವಾಗಿ ಪರಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನದಲ್ಲಿ ಯುವತಿಯರು

ಅತೀ ಹೆಚ್ಚು ಸಸ್ಯಾಹಾರವನ್ನು ಸೇವಿಸುವ ನಗರಗಳಿವು

ಇತ್ತೀಚೆಗಷ್ಟೇ ಆನ್​ಲೈನ್​ ಮೂಲಕ ಆಹಾರ ವಿತರಣೆ ಮಾಡುವ ಸ್ವಿಗ್ಗಿ ಕಂಪನಿಯೂ ಯಾವ ನಗರದ ಜನರು ಅತಿಹೆಚ್ಚು ವೆಜ್​ ಆರ್ಡರ್​ಗಳನ್ನು ಮಾಡುತ್ತಾರೆ ಎನ್ನುವ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿದೆ. ದೇಶದಲ್ಲಿಯೇ ಅತಿ ಹೆಚ್ಚು ಸಸ್ಯಾಹಾರವನ್ನು ಸೇವಿಸುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೂ ಕರ್ನಾಟಕದ ಬೆಂಗಳೂರು ನಗರದ ಜನರು ಇದ್ದಾರೆ. ಇಲ್ಲಿನ ಸಸ್ಯಾಹಾರಿಗಳು ಹೆಚ್ಚಾಗಿ ಮಸಾಲಾ ದೋಸೆ, ಪನ್ನೀರ್ ಬಿರಿಯಾನಿ ಮತ್ತು ಪನ್ನೀರ್ ಬಟರ್ ಮಸಾಲಾವನ್ನೇ ಹೆಚ್ಚು ಆರ್ಡರ್ ಮಾಡುತ್ತಾರೆ. ಮಾಯಾನಗರಿ ಬೆಂಗಳೂರಿಗರೇ ದೇಶದಲ್ಲಿಯೇ ಅತಿಹೆಚ್ಚು ಸಸ್ಯಾಹಾರ ಆರ್ಡರ್​ಗಳನ್ನು ಮಾಡುತ್ತಾರೆ. ಇನ್ನೂ ಉಳಿದಂತೆ ಸಸ್ಯಾಹಾರ ಆರ್ಡರ್​ ಮಾಡುವ ನಗರವಾಗಿ ಮಹಾರಾಷ್ಟ್ರದ ಮುಂಬೈಗೆ ಎರಡನೇ ಸ್ಥಾನಕ್ಕೆ ದೊರೆತರೆ, ಮೂರನೇ ಹೈದರಾಬಾದ್ ಸ್ಥಾನಗಳಿಸಿಕೊಂಡಿದೆ ಎನ್ನುವುದು ಅಂಕಿಅಂಶದಿಂದ ತಿಳಿದುಬಂದಿದೆ.

ಕನ್ನಡ ರಾಜ್ಯೋತ್ಸವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶ್ರೀಶೈಲ ದೇವಾಲಯದ ಶಿಖರ ದರ್ಶನದ ಹಿಂದಿನ ರಹಸ್ಯ ಇದುವೇ ನೋಡಿ
ಶ್ರೀಶೈಲ ದೇವಾಲಯದ ಶಿಖರ ದರ್ಶನದ ಹಿಂದಿನ ರಹಸ್ಯ ಇದುವೇ ನೋಡಿ
ಇಂದು ಸರ್ವಸಿದ್ಧಿ ಕಾಲ ಎಷ್ಟೊತ್ತಿಗೆ, ದಿನ ಭವಿಷ್ಯ ಹೇಗಿರಲಿದೆ? ಇಲ್ಲಿದೆ
ಇಂದು ಸರ್ವಸಿದ್ಧಿ ಕಾಲ ಎಷ್ಟೊತ್ತಿಗೆ, ದಿನ ಭವಿಷ್ಯ ಹೇಗಿರಲಿದೆ? ಇಲ್ಲಿದೆ
ಸಿದ್ದರಾಮಯ್ಯ ಸೂಚನೆ ಮೇರೆಗೆ ವಕ್ಫ್​ ಅದಾಲತ್ ಮಾಡಿದ್ದೇನೆ: ಜಮೀರ್ ಸ್ಪಷ್ಟನೆ
ಸಿದ್ದರಾಮಯ್ಯ ಸೂಚನೆ ಮೇರೆಗೆ ವಕ್ಫ್​ ಅದಾಲತ್ ಮಾಡಿದ್ದೇನೆ: ಜಮೀರ್ ಸ್ಪಷ್ಟನೆ
ಬಿಗಿ ಭದ್ರತೆಯಲ್ಲಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ದೀಪಾವಳಿ ಸಂಭ್ರಮಾಚರಣೆ
ಬಿಗಿ ಭದ್ರತೆಯಲ್ಲಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ದೀಪಾವಳಿ ಸಂಭ್ರಮಾಚರಣೆ
ಪೊಲೀಸ್​ಗಾಗಿ ಗಂಡ, ಪ್ರೇಮಿಯ ನಡುವೆ ಕಿತ್ತಾಟ; ರೈಲು ನಿಲ್ದಾಣದಲ್ಲೇ ಹೈಡ್ರಾಮ
ಪೊಲೀಸ್​ಗಾಗಿ ಗಂಡ, ಪ್ರೇಮಿಯ ನಡುವೆ ಕಿತ್ತಾಟ; ರೈಲು ನಿಲ್ದಾಣದಲ್ಲೇ ಹೈಡ್ರಾಮ
ಎಲ್ಲರ ಕ್ರಶ್ ಆಗಿರುವ ನಟಿ ರುಕ್ಮಿಣಿ ವಸಂತ್​ಗೆ ಲವ್ ಬ್ರೇಕಪ್ ಆಗಿದ್ಯಾ?
ಎಲ್ಲರ ಕ್ರಶ್ ಆಗಿರುವ ನಟಿ ರುಕ್ಮಿಣಿ ವಸಂತ್​ಗೆ ಲವ್ ಬ್ರೇಕಪ್ ಆಗಿದ್ಯಾ?
ಬಿಸಿ ಬಿಸಿ ಇಡ್ಲಿಯಲ್ಲಿ ಜಿರಳೆ ಪತ್ತೆ; ಹೋಟೆಲ್ ಗ್ರಾಹಕರ ಆಕ್ರೋಶ
ಬಿಸಿ ಬಿಸಿ ಇಡ್ಲಿಯಲ್ಲಿ ಜಿರಳೆ ಪತ್ತೆ; ಹೋಟೆಲ್ ಗ್ರಾಹಕರ ಆಕ್ರೋಶ
ಗ್ಯಾರಂಟಿ ಯೋಜನೆಗಳ ಬಗ್ಗೆ ಯೋಚನೆ ಮಾಡಿದ್ದೇ ಡಿಕೆ ಶಿವಕುಮಾರ್: ಹೆಬ್ಬಾಳ್ಕರ್
ಗ್ಯಾರಂಟಿ ಯೋಜನೆಗಳ ಬಗ್ಗೆ ಯೋಚನೆ ಮಾಡಿದ್ದೇ ಡಿಕೆ ಶಿವಕುಮಾರ್: ಹೆಬ್ಬಾಳ್ಕರ್
ವೈಟ್​ಹೌಸ್​ನಲ್ಲೂ ದೀಪಾವಳಿ; ಭಕ್ತಿಗೀತೆ ನುಡಿಸಿದ ಮಿಲಿಟರಿ ಬ್ಯಾಂಡ್
ವೈಟ್​ಹೌಸ್​ನಲ್ಲೂ ದೀಪಾವಳಿ; ಭಕ್ತಿಗೀತೆ ನುಡಿಸಿದ ಮಿಲಿಟರಿ ಬ್ಯಾಂಡ್
ದೀಪಾವಳಿಯಂದೇ ಆಂಧ್ರದಲ್ಲಿ ಭಾರೀ ದುರಂತ; ಪಟಾಕಿ ಸ್ಫೋಟವಾಗಿ ಓರ್ವ ಸಾವು
ದೀಪಾವಳಿಯಂದೇ ಆಂಧ್ರದಲ್ಲಿ ಭಾರೀ ದುರಂತ; ಪಟಾಕಿ ಸ್ಫೋಟವಾಗಿ ಓರ್ವ ಸಾವು