ಭಾರತೀಯ ಸೇನೆಯಲ್ಲಿ ಶ್ವಾನಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಏನೆಲ್ಲಾ ತರಬೇತಿ ನೀಡಲಾಗುತ್ತದೆ? ಇಲ್ಲಿದೆ ಮಾಹಿತಿ

ಭಾರತೀಯ ಸೇನೆಯಲ್ಲಿ ಸೈನಿಕರಂತೆ ಇದ್ದು, ದೇಶದ ರಕ್ಷಣೆಯಲ್ಲಿ ಈ ಶ್ವಾನಗಳ ಪಾತ್ರ ಅಗಾಧವಾದದ್ದು. ಸೈನಿಕರಂತೆ, ಸೈನ್ಯದಲ್ಲಿ ನೇಮಕಗೊಳ್ಳುವ ನಾಯಿಗಳಿಗೆ ದೈಹಿಕವಾಗಿ ದಷ್ಟಪುಷ್ಟರಾಗಿರುವುದು ಮಾತ್ರವಲ್ಲದೇ, ಚುರುಕುತನವು ಅಷ್ಟೇ ಮುಖ್ಯ. ಹಾಗಾದ್ರೆ ಈ ಭಾರತೀಯ ಸೇನೆಗೆ ಶ್ವಾನಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಯಾವ ತಳಿಯ ನಾಯಿಗಳಿಗೆ ಆದ್ಯತೆ ನೀಡಲಾಗುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತೀಯ ಸೇನೆಯಲ್ಲಿ ಶ್ವಾನಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? ಏನೆಲ್ಲಾ ತರಬೇತಿ ನೀಡಲಾಗುತ್ತದೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 01, 2024 | 2:19 PM

ಭಾರತೀಯ ಸೇನೆಯಲ್ಲಿ ಎಂಟೆದೆಯ ಬಂಟ ಎಂದೇ ಖ್ಯಾತಿಗಳಿಸಿದ್ದ ಶ್ವಾನಗಳಲ್ಲಿ ಬೆಲ್ಜಿಯಂ ಮಾಲಿನೋಯಿಸ್​ ತಳಿಯ ಶ್ವಾನ ಈ ಫ್ಯಾಂಟಮ್. ಆದರೆ ಕಳೆದ ಕೆಲ ದಿನಗಳಷ್ಟೇ ಜಮ್ಮುಕಾಶ್ಮೀರದ ಅಖ್ನೂರ್‌ನ ಸುಂದರ‍್ಬನಿ ಸೆಕ್ಟರ್‌ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಸೇನೆಯ ಹೆಮ್ಮೆಯ ಶ್ವಾನವಾದ ಫ್ಯಾಂಟಮ್ ಪ್ರಾಣ ಕಳೆದುಕೊಂಡಿದೆ. ಎಲ್ಲರಿಗೂ ತಿಳಿದಿರುವಂತೆ ಭಾರತೀಯ ಸೇನೆಯಲ್ಲಿ ವಿವಿಧ ಬ್ರೀಡ್​ಗಳ ಶ್ವಾನಗಳನ್ನು ಬಳಕೆ ಮಾಡಲಾಗುತ್ತದೆ. ಆದರೆ ಈ ಶ್ವಾನಗಳ ಆಯ್ಕೆ ಪ್ರಕ್ರಿಯೆ ಹಾಗೂ ತರಬೇತಿಯ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳಿ.

ಭಾರತೀಯ ಸೇನೆಯಲ್ಲಿ ನಾಯಿಗಳನ್ನು ಹೇಗೆ ನೇಮಕ ಮಾಡಲಾಗುತ್ತದೆ?

ಭಾರತೀಯ ಸೇನೆಯಲ್ಲಿ ನಾಯಿಗಳ ನೇಮಕಾತಿಯ ವೇಳೆ ಹಲವು ವಿಷಯಗಳನ್ನು ಪರಿಗಣಿಸಲಾಗಿದೆ. ಅವುಗಳ ಬುದ್ಧಿವಂತಿಕೆ, ಚುರುಕುತನ ಮತ್ತು ಹೊಂದಾಣಿಕೆಯ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆಗಳು ನಡೆಯುತ್ತದೆ. ಜರ್ಮನ್ ಶೆಫರ್ಡ್ಸ್, ಲಾಬ್ರಡಾರ್ ಹಾಗೂ ಬೆಲ್ಜಿಯನ್ ಶೆಫರ್ಡ್ಸ್ ಮತ್ತು ಗ್ರೇಟ್ ಸ್ವಿಸ್ ಮೌಂಟೇನ್ ತಳಿಯ ಶ್ವಾನಗಳು ಸೇನೆಯಲ್ಲಿ ಕೆಲಸ ಮಾಡುತ್ತವೆ. ಆದರೆ ಈ ಭಾರತದ ತಳಿಗಳಾದ ಮುಧೋಳ ಬ್ರೀಡ್ ಶ್ವಾನವೂ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗುತ್ತವೆ. ಹಿಂದಿನಿಂದಲೂ ವಿದೇಶಿ ತಳಿಯ ಶ್ವಾನಗಳನ್ನು ಭಾರತೀಯ ಸೇನೆಗೆ ಸೇರಿಸುವ ಸಂಪ್ರದಾಯವಿದ್ದು, 2017ರಲ್ಲಿ ಭಾರತೀಯ ತಳಿಗಳನ್ನು ಸೇರಿಸಲು ಸೇನೆಯೂ ಆರಂಭಿಸಿದೆ.

ಶ್ವಾನಗಳ ತರಬೇತಿ ಪ್ರಕ್ರಿಯೆ ಹೇಗಿರುತ್ತದೆ?

ಶ್ವಾನಗಳಿಗೆ ತರಬೇತಿ ನೀಡುವುದು ಅಷ್ಟು ಸುಲಭವಲ್ಲ. ಹಲವಾರು ಹಂತದ ಕಠಿಣ ತರಬೇತಿಯ ನಂತರವೇ ಅವುಗಳನ್ನು ಸೇನೆಯ ಭಾಗವನ್ನಾಗಿ ಮಾಡಲಾಗುತ್ತದೆ. ಶ್ವಾನಗಳ ತರಬೇತಿಯು ಮೀರತ್‌ನ ರಿಮೌಂಟ್ ಮತ್ತು ವೆಟರ್ನರಿ ಕೋರ್ ಸೆಂಟರ್ ಮತ್ತು ಕಾಲೇಜಿನಲ್ಲಿ ನಡೆಯುತ್ತದೆ. 1960ರಲ್ಲಿ ಆರಂಭವಾದ ಈ ತರಬೇತಿ ಕೇಂದ್ರದಲ್ಲಿ ಹಲವು ತಿಂಗಳುಗಳ ಕಾಲ ತರಬೇತಿ ನೀಡಲಾಗುತ್ತದೆ. ಸಾಮಾನ್ಯವಾಗಿ ಅವುಗಳಿಗೆ ಕನಿಷ್ಠ 10 ತಿಂಗಳ ತರಬೇತಿಯಿರುತ್ತದೆ. ಈ ಶ್ವಾನಗಳ ತರಬೇತಿಗೆ ಅಲ್ಲಿ ತರಬೇತುದಾರರು ಇರುತ್ತಾರೆ. ಆಯಾ ಕೋರ್ಸ್​ಗಳಿಗೆ ಸಂಬಂಧಿಸಿ ತರಬೇತಿ ನೀಡಲಾಗುತ್ತದೆ. ಬೇಸಿಕ್ ಡಾಗ್ ಟ್ರೈನರ್ಸ್ ಕೋರ್ಸ್, ಬೇಸಿಕ್ ಆರ್ಮಿ ಡಾಗ್ ಟ್ರೈನರ್ಸ್ ಕೋರ್ಸ್ ಹೀಗೆ ತರಬೇತಿ ನೀಡಲಾಗುತ್ತದೆ.

ಈ ವೇಳೆ ಶೋಧ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ಅವುಗಳ ಕೌಶಲ್ಯಗಳನ್ನು ಗುರುತಿಸಲಾಗುತ್ತದೆ. ಸ್ಫೋಟಕಗಳು ಹಾಗೂ ನೆಲಬಾಂಬ್ ಗಳನ್ನು ಪತ್ತೆಹಚ್ಚಲು ಸೈನಿಕರಿಗೆ ಸಹಾಯ ಮಾಡಲು ತರಬೇತಿ ನೀಡಲಾಗುತ್ತದೆ. ಯುದ್ಧದ ಸಂದರ್ಭದಲ್ಲಿ, ಶತ್ರುಗಳಿಗೆ ಅದರ ಬಗ್ಗೆ ಮಾಹಿತಿ ಸಿಗದಂತೆ ಯಾವಾಗ ಬೊಗಳಬೇಕು ಮತ್ತು ಯಾವಾಗ ಬೊಗಳಬಾರದು ಎಂದು ಸಹ ಕಲಿಸಲಾಗುತ್ತದೆ. ಬೆಂಕಿ ಮತ್ತು ಉದ್ವೇಗದ ಸಂದರ್ಭಗಳಲ್ಲಿ ಶಾಂತವಾಗಿರಲು ಈ ತರಬೇತಿಯಲ್ಲಿ ಕಲಿಸಲಾಗುತ್ತದೆ.

ಇದನ್ನೂ ಓದಿ: ಬೆಳಕಿನ ಹಬ್ಬದ ದಿನ ಕರ್ನಾಟಕದ ಈ ಹಳ್ಳಿಯಲ್ಲಿ ಯುವತಿಯರು ಅಳಲೇಬೇಕಂತೆ, ಏನಿದು ವಿಚಿತ್ರ ಆಚರಣೆ?

ಭಾರತೀಯ ಸೇನೆಯಲ್ಲಿರುವ ಶ್ವಾನಗಳೆಷ್ಟು?

ಭಾರತೀಯ ಸೇನೆಯಲ್ಲಿ 30ಕ್ಕೂ ಹೆಚ್ಚು ಶ್ವಾನ ತುಕಡಿಗಳು ಹಾಗೂ ಜಮ್ಮು ಕಾಶ್ಮೀರದಲ್ಲಿ 12 ಸೇನೆಯಲ್ಲಿ 30ಕ್ಕೂ ಹೆಚ್ಚು ಶ್ವಾನದಳಗಳಿವೆ. ಒಂದು ಘಟಕದಲ್ಲಿ ಸರಿಸುಮಾರು 24 ನಾಯಿಗಳಿವೆ. ಜಮ್ಮು ಮತ್ತು ಕಾಶ್ಮೀರ ಒಂದರಲ್ಲೇ 12 ಶ್ವಾನ ಘಟಕಗಳಿವೆ. ಸುಮಾರು 13 ರಿಂದ 15 ತಿಂಗಳ ವಯಸ್ಸಿನಲ್ಲಿ ಅವರನ್ನು ಸೇನೆಯಲ್ಲಿ ನಿಯೋಜಿಸಲಾಗುತ್ತದೆ. 8-10 ವರ್ಷ ವಯಸ್ಸಿನಲ್ಲಿ ನಿವೃತ್ತಿ ಹೊಂದುತ್ತದೆ. ಈ ಶ್ವಾನಗಳ ಹುಟ್ಟಿನಿಂದ ಅವರ ಮಿಲಿಟರಿ ಕರ್ತವ್ಯ ಮತ್ತು ನಿವೃತ್ತಿಯವರೆಗೂ ಸೇನೆಯವರದ್ದೇ ಜವಾಬ್ದಾರಿಯಾಗಿರುತ್ತದೆ. ನಿವೃತ್ತಿಯ ನಂತರವೂ ಸೇನೆಯ ನಾಯಿಗಳನ್ನು ದತ್ತು ಪಡೆಯಬಹುದು. ಆದರೆ ದತ್ತು ಪಡೆಯುವ ವ್ಯಕ್ತಿಯು ಶ್ವಾನಗಳ ಸಂಪೂರ್ಣ ಜವಾಬ್ದಾರಿಯೂ ತನ್ನದೇ ಎಂದು ಬಾಂಡ್‌ ಪೇಪರ್ ಗೆ ಸಹಿ ಹಾಕಬೇಕಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ