Deepavali 2024: ಬೆಳಕಿನ ಹಬ್ಬದ ದಿನ ಕರ್ನಾಟಕದ ಈ ಹಳ್ಳಿಯಲ್ಲಿ ಯುವತಿಯರು ಅಳಲೇಬೇಕಂತೆ, ಏನಿದು ವಿಚಿತ್ರ ಆಚರಣೆ?

ಹಬ್ಬ ಎಂದರೆ ಸಡಗರ ಸಂಭ್ರಮವು ಮನೆ ಮಾಡಿರುತ್ತದೆ, ಮನೆ ಮಂದಿಯೆಲ್ಲಾ ಜೊತೆ ಸೇರಿ ದೀಪಾವಳಿ ಹಬ್ಬವನ್ನು ಆಚರಿಸಿ, ಹಬ್ಬದಡುಗೆಯನ್ನು ಮಾಡಿ ಸವಿಯುತ್ತಾರೆ. ಆದರೆ ಕರ್ನಾಟಕದ ಹಳ್ಳಿಯೊಂದರಲ್ಲಿ ಈ ಜನಾಂಗದ ಯುವತಿಯರು ಬೆಳಕಿನ ಹಬ್ಬಕ್ಕೆ ಅಳಲೇಬೇಕಂತೆ. ಈ ಆಚರಣೆ ಇರುವುದಾದರೂ ಎಲ್ಲಿ ಹಾಗೂ ಈ ಆಚರಣೆಯ ಹಿಂದಿನ ಅಸಲಿ ವಿಚಾರವೇನು? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Deepavali 2024: ಬೆಳಕಿನ ಹಬ್ಬದ ದಿನ ಕರ್ನಾಟಕದ ಈ ಹಳ್ಳಿಯಲ್ಲಿ ಯುವತಿಯರು ಅಳಲೇಬೇಕಂತೆ, ಏನಿದು ವಿಚಿತ್ರ ಆಚರಣೆ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 31, 2024 | 3:35 PM

ಬೆಳಕಿನ ಹಬ್ಬ ದೀಪಾವಳಿ ದಿನಗಣನೆ ಆರಂಭವಾಗಿದೆ. ದೀಪಾವಳಿ ಎಂದ ಕೂಡಲೇ ನೆನಪಿಗೆ ಬರುವುದೇ ಸಾಲು ಸಾಲು ದೀಪಗಳು. ಈ ಹಬ್ಬವು ಕೆಟ್ಟತನದ ವಿರುದ್ಧ ಒಳ್ಳೆಯತನದ ವಿಜಯವನ್ನು ಸಂಕೇತಿಸುತ್ತದೆ. ದೀಪ ಹಚ್ಚಿ ಕತ್ತಲೆಯ ಅಂಧಕಾರ ಹೊಡೆದೋಡಿಸಿ, ಬೆಳಕಿನ ಜ್ಯೋತಿ ಬೆಳಗುವ ಮೂಲಕ ಬಾಳಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗುತ್ತದೆ. ವರ್ಷಕೊಮ್ಮೆ ಬರುವ ದೀಪಾವಳಿ ಹಬ್ಬವನ್ನು ಮನೆ ಮಂದಿಯೆಲ್ಲಾ ಬಹಳ ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ.

ಈ ಬುಡಕಟ್ಟು ಜನಾಂಗದ ಆಚರಣೆಯೇ ವಿಭಿನ್ನ

ಆದರೆ ಕರ್ನಾಟಕದ ಈ ಹಳ್ಳಿಯಲ್ಲಿ ಮಾತ್ರ ಹಬ್ಬದಂದು ಕನ್ಯೆಯರು ಕಣ್ಣೀರು ಸುರಿಸುತ್ತಾರಂತೆ. ಇದು ಈ ಜನಾಂಗದ ಸಂಪ್ರದಾಯ ಎನ್ನಲಾಗಿದೆ. ಹೌದು, ಉತ್ತರ ಕರ್ನಾಟಕದ ಗಜೇಂದ್ರಗಡ ಪಟ್ಟಣದಲ್ಲಿ ದೀಪಾವಳಿ ಸಂಭ್ರಮದಲ್ಲಿ ಯುವತಿಯರು ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ, ದೀಪ ಹಚ್ಚಿ, ಗ್ರಾಮದ ಹಿರಿಯರಿಗೆ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ಮದುವೆಯಾಗದ ಕನ್ಯಾಮಣಿಗಳು, ತಮ್ಮ ಸಾಂಸ್ಕೃತಿಕ ಸೊಗಸನ್ನು ಆಚರಿಸಿ, ಅಪ್ಪಿ ಕೊಳ್ಳುತ್ತ ಕಣ್ಣೀರು ಸುರಿಸುತ್ತಾರೆ.

ಇದನ್ನೂ ಓದಿ: ನರಕ ಚತುರ್ದಶಿಯಂದು ಪ್ರೀತಿ ಪಾತ್ರರಿಗೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು

ಯುವತಿಯರು ಅಳುವುದರ ಹಿಂದಿದೆ ಈ ಕಾರಣ

ಗಜೇಂದ್ರಗಡ ಪಟ್ಟಣದ ಸಾರವು ಲಂಬಾಣಿ ಸಮುದಾಯದ ಮದುವೆಯಾಗದ ಹೆಣ್ಣು ಮಕ್ಕಳು ಹತ್ತಿರದ ಬೆಟ್ಟಕ್ಕೆ ಜೊತೆಯಾಗಿ ಹೋಗಿ, ಲಂಬಾಣಿ ಸಾಹಿತ್ಯದ ಹಾಡುಗಳೊಂದಿಗೆ ಹೂವುಗಳನ್ನು ಸಂಗ್ರಹಿಸುತ್ತಾರೆ. ಅದಲ್ಲದೇ, ಸಗಣಿಯಿಂದ ಹಟ್ಟೆವ್ವನವನ್ನು ತಯಾರಿಸಿ, ಅದನ್ನು ಮನೆ ಬಾಗಿಲಿಗೆ ಇಟ್ಟು ಪೂಜಿಸುತ್ತಾರೆ.

ಹಬ್ಬದ ದಿನ ತಾಂಡಾದ ಸೇವಾಲಾಲ್ ದೇವಸ್ಥಾನದ ಮುಂದೆ ರೋಮಾಂಚಕ ನೃತ್ಯಗಳು ಮತ್ತು ಆಚರಣೆಗಳಲ್ಲಿ ಉತ್ಸವಗಳು ನಡೆಯುತ್ತವೆ. ಮದುವೆಯಾದ ಮಹಿಳೆಯರು ಬೆಳಕಿನ ಹಬ್ಬದಂದು ಈ ಆಚರಣೆಯಲ್ಲಿ ಭಾಗವಹಿಸುತ್ತಿಲ್ಲ. ಮುಂದಿನ ವರ್ಷ ಮದುವೆಯಾದರೆ ಈ ಹಬ್ಬ ಸಿಗಲ್ಲ ಎನ್ನುವ ಕಾರಣಕ್ಕೆ ಕನ್ಯಾಮಣಿಗಳು ತಬ್ಬಿಕೊಂಡು ಅಳುತ್ತಾರೆ ಎನ್ನಲಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಂತ್ರಿಗಳು ವರ್ಗಾವಣೆಯನ್ನು ದಂಧೆ ಮಾಡಿಕೊಂಡಿರುವಂತಿದೆ: ಪ್ರಲ್ಹಾದ್ ಜೋಶಿ
ಮಂತ್ರಿಗಳು ವರ್ಗಾವಣೆಯನ್ನು ದಂಧೆ ಮಾಡಿಕೊಂಡಿರುವಂತಿದೆ: ಪ್ರಲ್ಹಾದ್ ಜೋಶಿ
ನಿಖಿಲ್ ವಿರುದ್ಧ ಯಾಕೆ ಎಫ್ಐಆರ್ ಅಂತ ಇನ್ನೂ ಅರ್ಥವಾಗಿಲ್ಲ: ಕುಮಾರಸ್ವಾಮಿ
ನಿಖಿಲ್ ವಿರುದ್ಧ ಯಾಕೆ ಎಫ್ಐಆರ್ ಅಂತ ಇನ್ನೂ ಅರ್ಥವಾಗಿಲ್ಲ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕೋಲಾರದಲ್ಲಿ ಅಭಿಮಾನಿಗಳಿಂದ ಸಂಭ್ರಮ
ವಿರಾಟ್ ಕೊಹ್ಲಿ ಹುಟ್ಟುಹಬ್ಬ, ಕೋಲಾರದಲ್ಲಿ ಅಭಿಮಾನಿಗಳಿಂದ ಸಂಭ್ರಮ
ಅಭಿಮಾನಿ ಮತ್ತು ಕಾರ್ಯಕರ್ತರು ತಂದ ಕೇಕನ್ನು ಕಟ್ ಮಾಡಿದ ಬಿವೈ ವಿಜಯೇಂದ್ರ
ಅಭಿಮಾನಿ ಮತ್ತು ಕಾರ್ಯಕರ್ತರು ತಂದ ಕೇಕನ್ನು ಕಟ್ ಮಾಡಿದ ಬಿವೈ ವಿಜಯೇಂದ್ರ
ಪ್ರಬಲ ಸುದ್ದಿಸಂಸ್ಥೆಯಾಗಿರುವ ಟಿವಿ9 ನೀಡುವ ಪ್ರಚಾರವೇ ನನಗೆ ಸಾಕು: ದೇವೇಗೌಡ
ಪ್ರಬಲ ಸುದ್ದಿಸಂಸ್ಥೆಯಾಗಿರುವ ಟಿವಿ9 ನೀಡುವ ಪ್ರಚಾರವೇ ನನಗೆ ಸಾಕು: ದೇವೇಗೌಡ
ಎಲ್ಲ ತನಿಖಾ ಸಂಸ್ಥೆಗಳು ಸರ್ಕಾರಗಳ ಅಧೀನದಲ್ಲಿರುತ್ತವೆ: ಸ್ನೇಹಮಯಿ ಕೃಷ್ಣ
ಎಲ್ಲ ತನಿಖಾ ಸಂಸ್ಥೆಗಳು ಸರ್ಕಾರಗಳ ಅಧೀನದಲ್ಲಿರುತ್ತವೆ: ಸ್ನೇಹಮಯಿ ಕೃಷ್ಣ
ಕಾಂಗ್ರೆಸ್​ಗೆ ಮತನೀಡಿ ಅಧಿಕಾರಕ್ಕೆ ತಂದ ಹಿಂದೂಗಳು ಸೈತಾನರೇ? ಕರಂದ್ಲಾಜೆ
ಕಾಂಗ್ರೆಸ್​ಗೆ ಮತನೀಡಿ ಅಧಿಕಾರಕ್ಕೆ ತಂದ ಹಿಂದೂಗಳು ಸೈತಾನರೇ? ಕರಂದ್ಲಾಜೆ
‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
‘ನಿಮ್ಮ ನಿಯತ್ತು ನೋಡಬೇಕಿತ್ತು’; ಹನುಮಂತ ವಿರುದ್ಧ ಸಿಡಿದೆದ್ದ ಚೈತ್ರಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ
ವಿಜಯಪುರ ಅಹೋರಾತ್ರಿ ಧರಣಿ; ಟೆಂಟ್​ನಲ್ಲೇ ರಾತ್ರಿ ಕಳೆದ ಯತ್ನಾಳ್, ಶೋಭಾ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ