World Vegetarian Day 2024 : ನೀವು ಸಸ್ಯಾಹಾರಿಗಳೇ, ಆಹಾರ ಕ್ರಮ ಹೀಗಿದ್ದರೆ ತೂಕ ಇಳಿಸುವುದು ಸುಲಭ

ಆಹಾರ ಪದ್ಧತಿಯಲ್ಲಿ ಹಲವು ವಿಧಗಳಿವೆ. ಅದರಲ್ಲಿ ಒಂದಾಗಿರುವ ಸಸ್ಯಾಹಾರವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆಯಾಗಿದೆ. ಈ ಸಸ್ಯ ಆಧಾರಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಉತ್ತೇಜಿಸುವುದು ಹಾಗೂ ಶುದ್ಧ ಸಸ್ಯಾಹಾರಿ ಆಹಾರಗಳ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಅಕ್ಟೋಬರ್ 1 ರಂದು ವಿಶ್ವ ಸಸ್ಯಾಹಾರಿ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿ ಇಲ್ಲಿದೆ.

World Vegetarian Day 2024 : ನೀವು ಸಸ್ಯಾಹಾರಿಗಳೇ, ಆಹಾರ ಕ್ರಮ ಹೀಗಿದ್ದರೆ ತೂಕ ಇಳಿಸುವುದು ಸುಲಭ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 01, 2024 | 9:59 AM

ಆಹಾರದಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರ ಹೀಗೆ ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಅವರವರ ಸಂಪ್ರದಾಯ, ಅಭಿರುಚಿ, ಆರೋಗ್ಯ ಕಾಳಜಿ ಹೀಗೆ ಹತ್ತು ಹಲವು ಅಂಶಗಳ ಆಧಾರದ ಮೇಲೆ ಆಹಾರಪದ್ಧತಿಯನ್ನು ರೂಢಿಸಿಕೊಂಡಿದ್ದಾರೆ. ಈ ಎರಡು ಆಹಾರ ಪದ್ಧತಿಯನ್ನು ಅಳವಡಿಸಿಕೊಂಡವರು ಇದ್ದಾರೆ. ಈ ಸಸ್ಯಾಹಾರಿಗಳಿಗಾಗಿ ವಿಶೇಷ ದಿನವನ್ನು ಮೀಸಲಿಡಲಾಗಿದ್ದು, ಸಸ್ಯ ಆಧಾರಿತ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಉತ್ತೇಜಿಸುವುದು ಹಾಗೂ ಸಸ್ಯಾಹಾರಿ ಆಹಾರಗಳ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಅಕ್ಟೋಬರ್ 1 ರಂದು ವಿಶ್ವ ಸಸ್ಯಾಹಾರಿಗಳ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಸಸ್ಯಾಹಾರಿ ದಿನದ ಇತಿಹಾಸ ಹಾಗೂ ಮಹತ್ವ

1944 ರಲ್ಲಿ ಸಸ್ಯಾಹಾರಿ ಸೊಸೈಟಿಯನ್ನು ಸ್ಥಾಪಿಸಲಾಯಿತು. ಅವರ 50 ನೇ ವಾರ್ಷಿಕೋತ್ಸವದಂದು, ‘ವೆಗಾನ್ ಸೊಸೈಟಿ’ ಅಧ್ಯಕ್ಷರು ಪ್ರತಿ ವರ್ಷ ಅಕ್ಟೋಬರ್ ಮೊದಲ ದಿನಾಂಕವನ್ನು ಸ್ಮರಣೀಯವಾಗಿಸುವ ಮತ್ತು ಜನರಲ್ಲಿ ಸಸ್ಯಾಹಾರಿ ಆಹಾರವನ್ನು ಉತ್ತೇಜಿಸುವ ಉದ್ದೇಶದಿಂದ ‘ಸಸ್ಯಾಹಾರಿ ದಿನ’ ಆಚರಿಸಲು ಘೋಷಿಸಿದರು. ಹೀಗಾಗಿ ವಿಶ್ವ ಸಸ್ಯಾಹಾರಿ ದಿನನ್ನು ಮೊದಲ ಬಾರಿಗೆ ಯುಕೆ ಸಸ್ಯಾಹಾರಿ ಸೊಸೈಟಿಯು ಅಕ್ಟೋಬರ್ 1, 1977 ರಂದು ಆಚರಿಸಿತು.

ಅದಲ್ಲದೇ ಈ ಸಸ್ಯಾಹಾರಿ ದಿನವನ್ನು ಆಚರಿಸಲು ಪ್ರಮುಖ ಕಾರಣವೇ ಈ ತಾರತಮ್ಯ ಎನ್ನಬಹುದು. ಆ ಸಮಯದಲ್ಲಿ ಸಸ್ಯಾಹಾರಿಗಳಿಗೆ ಡೈರಿ ಉತ್ಪನ್ನಗಳನ್ನು ಸೇವಿಸಲು ಅವಕಾಶವಿರಲಿಲ್ಲ. ಈ ಕಾರಣದಿಂದಾಗಿ ಅದುವೇ 1951 ರಲ್ಲಿ ಅದು ಸಸ್ಯಾಹಾರಿ ಚಳುವಳಿಯಾಗಿ ಮಾರ್ಪಟ್ಟಿತು. ಅಂದಿನಿಂದ ಪ್ರತಿ ವರ್ಷ ಅಕ್ಟೋಬರ್ 1 ರಂದು ವಿಶ್ವ ಸಸ್ಯಾಹಾರಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸಸ್ಯಾಹಾರಿ ಜೀವನ ಶೈಲಿ ಅನುಸರಿಸಲು ಹಾಗೂ ಜನರನ್ನು ಪ್ರೋತ್ಸಾಹಿಸಲು ಉದ್ದೇಶದಿಂದ ಈ ದಿನವೂ ಮಹತ್ವದ್ದಾಗಿದೆ.

ಸಸ್ಯಾಹಾರಿ ಆಹಾರ ಪದ್ಧತಿಯಿಂದ ತೂಕ ಇಳಿಸಿಕೊಳ್ಳಲು ಇಲ್ಲಿದೆ ಸಲಹೆಗಳು

* ತೂಕ ಇಳಿಸಿಕೊಳ್ಳಲು ಬಯಸುವವರು ಹೈ ಫೈಬರ್ ತರಕಾರಿಗಳಾದ ಬ್ರೊಕೋಲಿ, ಕುಂಬಳಕಾಯಿ, ಹೂಕೋಸು, ಸೌತೆಕಾಯಿ, ಸೊಪ್ಪು ಹಾಗೂ ಅಣಬೆಗಳಂತಹ ಆಹಾರವನ್ನು ಸೇವಿಸುವುದು ಪರಿಣಾಮಕಾರಿಯಾಗಿದೆ.

* ಸೇಬು, ಬಾಳೆಹಣ್ಣು, ದ್ರಾಕ್ಷಿ, ಕಿವಿ ಹಣ್ಣು, ಬೆರ್ರಿ ಹಣ್ಣುಗಳ ಸೇವನೆ ಹೆಚ್ಚು ಆದ್ಯತೆಯಿರಲಿ

* ಧಾನ್ಯಗಳಾದ ಬ್ರೋನ್ ರೈಸ್, ರಾಗಿ, ಬಾರ್ಲಿ, ಕೊಬ್ಬುಗಳಾದ ಆವಕಾಡೊ, ಆಲಿವ್ ಎಣ್ಣೆ, ತೆಂಗಿನಕಾಯಿ, ಬೀಜಗಳು ಹಾಗೂ ಪ್ರೋಟೀನ್ ಯುಕ್ತವಾದ ಬೀನ್ಸ್, ದ್ವಿದಳ ಧಾನ್ಯಗಳು, ಬೀಜಗಳು, ಹಾಲು, ಬೆಣ್ಣೆ ಸೇವನೆಯಿರಲಿ.

* ಬೆಳಗ್ಗಿನ ಉಪಹಾರವು ಹೊಟ್ಟೆ ತುಂಬಿಸುವಷ್ಟು ಆಹಾರ ಸೇವನೆಯಿರಲಿ. ಸಸ್ಯಾಹಾರಿಗಳಾದ ಕಾರಣ ನಾರಿನಂಶ ಅಧಿಕಾವಿರುವ ಹಣ್ಣುಗಳು ಹಾಗೂ ಓಟ್ಸ್ ಸೇವನೆ ಹೆಚ್ಚಿಸಿ.

* ದ್ವಿದಳ ಧಾನ್ಯಗಳಲ್ಲಿ ಮಾಡಿದ ಪದಾರ್ಥ ಹಾಗೂ ಅನ್ನವನ್ನು ಸೇವಿಸಬಹುದು. ಮಧ್ಯಾಹ್ನದ ಊಟದಲ್ಲಿ ಸೇಬುಗಳು, ಬೆರ್ರಿ ಹಣ್ಣುಗಳು ಅಥವಾ ಆವಕಾಡೊಗಳ ಹಣ್ಣುಗಳು ಸೇರಿರಲಿ.

* ರಾತ್ರಿಯ ವೇಳೆ ಕಡಿಮೆ ಮಾಡುವ ಅಭ್ಯಾಸವಿರಲಿ. ಕುಂಬಳಕಾಯಿ ಹಾಗೂ ಸೈಡ್ ಸಲಾಡ್ ಗಳು ಆಹಾರ ಕ್ರಮದಲ್ಲಿರಲಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಮಡಿಕೇರಿಯಂತಾದ ಕೋಲಾರ; ಒಣಗುತ್ತಿರುವ ಬೆಳೆಗೆ ಮಂಜಿನಾಸರೆ, ವಿಡಿಯೋ ನೋಡಿ
ಬಿಗ್ ಬಾಸ್ ಮನೆಗೆ ಕಿಚ್ಚು ಹೊತ್ತಿಸಿದ ನಾಮಿನೇಷನ್ ಪ್ರಕ್ರಿಯೆ
ಬಿಗ್ ಬಾಸ್ ಮನೆಗೆ ಕಿಚ್ಚು ಹೊತ್ತಿಸಿದ ನಾಮಿನೇಷನ್ ಪ್ರಕ್ರಿಯೆ
ನಾಗಮಂಗಲ ಗಲಭೆ ಕೇಸ್; ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಬಿಡುಗಡೆ
ನಾಗಮಂಗಲ ಗಲಭೆ ಕೇಸ್; ನ್ಯಾಯಾಂಗ ಬಂಧನದಲ್ಲಿದ್ದ 55 ಆರೋಪಿಗಳು ಬಿಡುಗಡೆ
Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Daily Devotional: ಮಹಾಲಯ ಅಮಾವಾಸ್ಯೆ ಪಿತೃಪಕ್ಷದ ಮಹತ್ವ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ
Nithya Bhavishya: ಈ ರಾಶಿಯವರಿಗೆ ಪ್ರಭಾವಿ ವ್ಯಕ್ತಿಗಳಿಂದ ಕೆಲಸ ಆಗಲಿದೆ
ರಾಹುಲ್ ಗಾಂಧಿ ಕಾರಿನ ಪಕ್ಕ ಬೈಕ್​ನಲ್ಲಿ ಕೋಲು ಹಿಡಿದು ಬಂದ ವ್ಯಕ್ತಿ
ರಾಹುಲ್ ಗಾಂಧಿ ಕಾರಿನ ಪಕ್ಕ ಬೈಕ್​ನಲ್ಲಿ ಕೋಲು ಹಿಡಿದು ಬಂದ ವ್ಯಕ್ತಿ
ಪೊಲೀಸ್ ಠಾಣೆ ಮುಂದೆ ಯುವಕನ ಹೈಡ್ರಾಮಾ: ಕೊನೆಗೆ ಪೊಲೀಸ್​ ಮಾಡಿದ್ದೇನು?
ಪೊಲೀಸ್ ಠಾಣೆ ಮುಂದೆ ಯುವಕನ ಹೈಡ್ರಾಮಾ: ಕೊನೆಗೆ ಪೊಲೀಸ್​ ಮಾಡಿದ್ದೇನು?
ಆಂಧ್ರಪ್ರದೇಶದ ಎಟಿಎಂನಲ್ಲಿ ಹಾವು ಕಂಡು ಬೆಚ್ಚಿಬಿದ್ದ ಜನ
ಆಂಧ್ರಪ್ರದೇಶದ ಎಟಿಎಂನಲ್ಲಿ ಹಾವು ಕಂಡು ಬೆಚ್ಚಿಬಿದ್ದ ಜನ
‘ದೇವರು ಬಂದ್ರು, ಹುಲಿ ಬಂತು’: ದರ್ಶನ್ ಕಂಡು ಜೈಕಾರ ಹಾಕಿದ ಫ್ಯಾನ್ಸ್
‘ದೇವರು ಬಂದ್ರು, ಹುಲಿ ಬಂತು’: ದರ್ಶನ್ ಕಂಡು ಜೈಕಾರ ಹಾಕಿದ ಫ್ಯಾನ್ಸ್
ರೆಡ್ಮಿ ಲೇಟೆಸ್ಟ್ ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ರೆಡ್ಮಿ ಲೇಟೆಸ್ಟ್ ಸ್ಮಾರ್ಟ್​​ಫೋನ್ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!