Fridge Maintenance Tips : ಫ್ರಿಡ್ಜ್ ದೀರ್ಘಕಾಲದವರೆಗೆ ಬಾಳಿಕೆ ಬರಬೇಕೇ? ಹಾಗಾದ್ರೆ ಈ ತಪ್ಪುಗಳನ್ನು ಮಾಡಲೇಬೇಡಿ
ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ಕೂಡ ಫ್ರಿಡ್ಜ್ ಇದ್ದೇ ಇರುತ್ತದೆ. ಹಾಲು, ತರಕಾರಿ, ಹಣ್ಣು ಆಹಾರ ಪದಾರ್ಥಗಳ ಶೇಖರಣೆ ಇವೆಲ್ಲಕ್ಕೂ ಫ್ರಿಡ್ಜ್ ಇರಲೇಬೇಕು. ಆದರೆ ಕೆಲವೊಮ್ಮೆ ಮಾಡುವ ಈ ಕೆಲವು ತಪ್ಪುಗಳಿಂದ ಫ್ರಿಡ್ಜ್ ಬೇಗನೇ ಹಾಳಾಗುತ್ತದೆ. ಹೀಗಾಗ ಫ್ರಿಡ್ಜ್ ದೀರ್ಘ ಕಾಲದವರೆಗೆ ಬಾಳಿಕೆ ಬರಬೇಕು ಎಂದಾದರೆ ಈ ಕೆಲವು ತಪ್ಪು ನಿಮ್ಮಿಂದ ಆಗದೇ ಇರಲಿ. ಹಾಗಾದ್ರೆ ಯಾವೆಲ್ಲಾ ತಪ್ಪುಗಳನ್ನು ಮಾಡಿದ್ರೆ ಫ್ರಿಡ್ಜ್ ಬೇಗನೆ ಹಾಳಾಗುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಎಲ್ಲರ ಮನೆಯಲ್ಲಿರುವ ಗೃಹೋಪಯೋಗಿ ವಸ್ತುಗಳಲ್ಲಿ ಫ್ರಿಡ್ಜ್ ಕೂಡ ಒಂದು. ರೆಫ್ರಿಜರೇಟರ್ ನೀರನ್ನು ತಂಪಾಗಿಸಲು, ತರಕಾರಿಗಳನ್ನ ಸಂಗ್ರಹಿಸಲು ಅಥವಾ ಹಾಲುಮತ್ತು ತಂಪು ಪಾನೀಯಗಳು ಫ್ರೆಶ್ ಆಗಿರಲು ಹಾಗೂ ಆಹಾರವು ಕೆಡದಂತೆ ಇಡಲು ಸಹಾಯಕವಾಗಿದೆ. ಇದರಲ್ಲಿರುವ ಶೀತಕ ರಾಸಾಯನಿಕ ಅನಿಲವು ಫ್ರಿಡ್ಜ್ ನಲ್ಲಿ ಇಟ್ಟ ಎಲ್ಲಾ ಪದಾರ್ಥಗಳು ಈ ರಾಸಾಯನಿಕದ ಸಂಪರ್ಕಕ್ಕೆ ಬಂದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆಗಿದ್ದರೂ ಈ ಗೃಹೋಪಯೋಗಿ ವಸ್ತುವಿನ ಬಳಕೆಯಂತೂ ಕಡಿಮೆಯಾಗಿಲ್ಲ. ಅದಲ್ಲದೇ ದಿನನಿತ್ಯ ಮಾಡುವ ಈ ಕೆಲವು ತಪ್ಪುಗಳಿಂದ ಫ್ರಿಡ್ಜ್ ಬೇಗನೇ ಹಾಳಾಗುವ ಸಾಧ್ಯತೆಯೇ ಇದೆ.
- ಆಹಾರ ಪದಾರ್ಥಗಳನ್ನು ತುಂಬಿಸಿಡುವುದು : ಕೆಲವರಿಗೆ ಉಳಿದ ಎಲ್ಲಾ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನೊಳಗೆ ಶೇಖರಿಸಿಡುವ ಅಭ್ಯಾಸವಿರುತ್ತದೆ. ಯಾವುದೇ ಯಂತ್ರವು ಸುಗಮವಾಗಿ ಕಾರ್ಯನಿರ್ವಹಿಸಲು ಮತ್ತು ಅಧಿಕ ಬಿಸಿಯಾಗುವುದನ್ನು ತಡೆಯಲು ಯಂತ್ರದಲ್ಲಿ ಸ್ವಲ್ಪ ಸ್ಥಳವಕಾಶವನ್ನು ಇರಿಸುವುದು ತುಂಬಾ ಅವಶ್ಯಕ. ಫ್ರಿಡ್ಜ್ ಓವರ್ ಲೋಡ್ ಮಾಡಿದರೆ ಆ ಯಂತ್ರದ ಕಾರ್ಯಕ್ಷಮತೆಯೂ ಕಡಿಮೆಯಾಗಿ ಹಾಳಾಗುವ ಸಾಧ್ಯತೆಯೇ ಹೆಚ್ಚು.
- ಫ್ರಿಡ್ಜ್ ನಲ್ಲಿರುವ ಕಾಯಿಲ್ ಬಗ್ಗೆ ಗಮನಹರಿಸದೇ ಇರುವುದು : ಫ್ರಿಡ್ಜ್ ನ ಹಿಂಭಾಗ ಅಥವಾ ಕೆಳಭಾಗದಲ್ಲಿರುವ ಕಾಯಿಲ್ ಗಳ ಬಗ್ಗೆ ಗಮನ ಹರಿಸುವುದಿಲ್ಲ. ಫ್ರಿಡ್ಜ್ ತಂಪಾಗಿಸಲು ಈ ಕಾಯಿಲ್ ಇರಲೇಬೇಕು. ಆದರೆ ಈ ಕಾಯಿಲ್ ಸುತ್ತಲೂ ಧೂಳು ತುಂಬಿದ್ದರೆ ಶಾಖವನ್ನು ಬಿಡುಗಡೆ ಮಾಡಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಇದರಿಂದ ಫ್ರಿಡ್ಜ್ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತದೆ. ಹೀಗಾಗಿ ಫ್ರಿಡ್ಜ್ ದೀರ್ಘಕಾಲದವರೆಗೆ ಬಾಳಿಕೆ ಬರುವುದಿಲ್ಲ. ಹೀಗಾಗಿ ರೆಫ್ರಿಜರೇಟರ್ ನ ಕಾಯಿಲ್ ನಲ್ಲಿ ತುಂಬಿರುವ ಕೊಳೆಯನ್ನು ಬ್ರಷ್ ನಿಂದ ಸ್ವಚ್ಛಗೊಳಿಸುವುದು ಸೂಕ್ತ.
- ಫ್ರಿಡ್ಜನ್ನು ಮುಚ್ಚಿದ ಕೋಣೆಯಲ್ಲಿ ಇರಿಸುವುದು : ಫ್ರಿಜ್ ಅನ್ನು ತಂಪಾಗಿರಿಸಲು ಗಾಳಿಯ ಹರಿವು ಅಗತ್ಯ. ಆದರೆ ಕೆಲವರು ಫ್ರಿಡ್ಜನ್ನು ಮುಚ್ಚಿದ ಕೋಣೆಯಲ್ಲಿ ಇರಿಸುತ್ತಾರೆ. ಇದರಿಂದ ಗಾಳಿಯ ಹರಿವಿಗೆ ಅಡಚಣೆಯಾಗಿ ಬಹುಬೇಗನೆ ರೆಫ್ರಿಜರೇಟರ್ ಹಾನಿಗೊಳಗಾಗುತ್ತದೆ.
- ತಾಪಮಾನವನ್ನು ಸರಿಯಾಗಿ ಹೊಂದಿಸದೆ ಇರುವುದು : ಕೆಲವೊಮ್ಮೆ ತಾಪಮಾನವನ್ನು ಇಡುವ ವಸ್ತುಗಳಿಗೆ ಅನುಗುಣವಾಗಿ ಹೆಚ್ಚು ಕಡಿಮೆ ಮಾಡುತ್ತೇವೆ. ಆದರೆ ಫ್ರಿಡ್ಜ್ ಗೆ ಸೂಕ್ತವಾದ ತಾಪಮಾನವು 3-5 ° C ನಡುವೆ ಇರುತ್ತದೆ. ಇದಕ್ಕಿಂತ ಕಡಿಮೆಯಿಟ್ಟರೆ ಫ್ರಿಡ್ಜ್ ಮೇಲೆ ಹೆಚ್ಚು ಒತ್ತಡವನ್ನು ಹಾಕಿದಂತೆ ಆಗುತ್ತದೆ. ಇದರಿಂದ ಫ್ರಿಡ್ಜ್ ಬಹುಬೇಗನೆ ಕೆಟ್ಟು ಹೋಗುತ್ತದೆ.
- ಫ್ರಿಡ್ಜ್‌ನ ಸೀಲ್‌ಗೆ ಗಮನ ಕೊಡದಿರುವುದು : ಫ್ರಿಡ್ಜ್ ಬಾಗಿಲನ್ನು ಸರಿಯಾಗಿ ಮುಚ್ಚಿಲ್ಲದಿರುವುದೇ ಈ ಉಪಕರಣ ಹಾಳಾಗಲು ಕಾರಣವಾಗಿದೆ. ತಂಪಾದ ಗಾಳಿಯನ್ನು ಹಾಗೇ ಇರಿಸಿಕೊಳ್ಳಲು ಬಾಗಿಲಿನ ಸುತ್ತ ರಬ್ಬರ್ ಸೀಲುಗಳಿವೆ. ಆದರೆ ಈ ರಬ್ಬರ್ ಸೀಲಿಂಗ್ ಸವೆದಾಗ ತಂಪಾಗುವಿಕೆಯೂ ಕಡಿಮೆಯಾಗುತ್ತದೆ. ಇದರಿಂದ ಫ್ರಿಡ್ಜ್ ಮೇಲೆ ಹೆಚ್ಚು ಒತ್ತಡ ಬೀಳುವ ಕಾರಣ ಬೇಗನೇ ಕೆಟ್ಟು ಹೋಗಬಹುದು.
- ಫ್ರಿಡ್ಜ್ ಬಾಗಿಲು ತೆರೆದಿಡುವುದು : ಫ್ರಿಡ್ಜ್ ಬಾಗಿಲು ತೆರೆದಾಗ, ಬೆಚ್ಚಗಿನ ಗಾಳಿಯು ಒಳಗೆ ಹೋಗುತ್ತದೆ. ಇದರಿಂದ ಆಹಾರವನ್ನು ತಂಪಾಗಿರಿಸಲು ಫ್ರಿಡ್ಜ್ ಮೇಲೆ ಹೆಚ್ಚು ಒತ್ತಡ ಹಾಕಬೇಕಾಗುವ ಕಾರಣ ಇದರ ಕಾರ್ಯಕ್ಷಮತೆಯು ಕುಂಠಿತವಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ