Mysore Dasara 2024: ದಸರಾ ಆನೆಯನ್ನು ಕಂಟ್ರೋಲ್ ಮಾಡುವ ಶಕ್ತಿ ಈ ಹಗ್ಗಕ್ಕಿದೆ! ಏನಿದರ ವಿಶೇಷತೆ?

ದಸರಾದಲ್ಲಿ ಅಭಿಮನ್ಯು ಈ ಬಾರಿ ಅಂಬಾರಿ ಹೊರುವ ಆನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆ ದಿನಕ್ಕೆ ಸಜ್ಜಾಗುವ ಮೊದಲು ಅನೇಕ ರೀತಿಯ ತಯಾರಿಗಳು ಇರುತ್ತವೆ. ಅದರಲ್ಲಿ ಆನೆಗಳನ್ನು ಕಂಟ್ರೋಲ್ ಮಾಡಲು, ಅಂಬಾರಿ ಕಟ್ಟಲು ವಿಶೇಷವಾದ ಹಗ್ಗದ ತಯಾರಿಯೂ ಕೂಡ ಬಹಳ ಮುಖ್ಯವಾಗುತ್ತದೆ. ದಸರಾ ಆರಂಭವಾಗುವುದಕ್ಕೂ ಮೊದಲು ಸಿಬಂದಿ ವರ್ಗದವರು ತಮ್ಮ ಬಿಡುವಿನ ವೇಳೆಯಲ್ಲಿ ಈ ಹಗ್ಗವನ್ನು ತಯಾರಿಸುತ್ತಾರೆ. ಏನಿದರ ವಿಶೇಷತೆ? ಹೇಗೆ ತಯಾರಾಗುತ್ತದೆ? ಇಲ್ಲಿದೆ ಮಾಹಿತಿ

Mysore Dasara 2024: ದಸರಾ ಆನೆಯನ್ನು ಕಂಟ್ರೋಲ್ ಮಾಡುವ ಶಕ್ತಿ ಈ ಹಗ್ಗಕ್ಕಿದೆ! ಏನಿದರ ವಿಶೇಷತೆ?
ಸಾಂದರ್ಭಿಕ ಚಿತ್ರ (ಮೈಸೂರು ಆನೆ )
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 30, 2024 | 11:36 AM

ಮೈಸೂರು ದಸರಾದಲ್ಲಿ ಅಭಿಮನ್ಯು ಈ ಬಾರಿ ಅಂಬಾರಿ ಹೊರುವ ಆನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆ ದಿನಕ್ಕೆ ಸಜ್ಜಾಗುವ ಮೊದಲು ಅನೇಕ ರೀತಿಯ ತಯಾರಿಗಳು ಇರುತ್ತವೆ. ಅದರಲ್ಲಿ ಆನೆಗಳನ್ನು ಕಂಟ್ರೋಲ್ ಮಾಡಲು, ಅಂಬಾರಿ ಕಟ್ಟಲು ವಿಶೇಷವಾದ ಹಗ್ಗದ ತಯಾರಿಯೂ ಕೂಡ ಬಹಳ ಮುಖ್ಯವಾಗುತ್ತದೆ. ದಸರಾ ಆರಂಭವಾಗುವುದಕ್ಕೂ ಮೊದಲು ಸಿಬಂದಿ ವರ್ಗದವರು ತಮ್ಮ ಬಿಡುವಿನ ವೇಳೆಯಲ್ಲಿ ಈ ಹಗ್ಗವನ್ನು ತಯಾರಿಸುತ್ತಾರೆ. ಏನಿದರ ವಿಶೇಷತೆ? ಹೇಗೆ ತಯಾರಾಗುತ್ತದೆ? ಇಲ್ಲಿದೆ ಮಾಹಿತಿ

ಮೊದಲು ಸೆಣಬಿನ ಮರದ ಕಡ್ಡಿಗಳನ್ನು ತೆಗೆದು ಅದನ್ನು ನೀರಿನಲ್ಲಿ ಹಾಕಿ ಇಡಲಾಗುತ್ತದೆ. ಇದು ಸರಿಸುಮಾರು ಒಂದು ವಾರಗಳ ಕಾಲ ನೀರಿನಲ್ಲಿ ಚೆನ್ನಾಗಿ ನೆನೆದಿರುತ್ತದೆ. ಬಳಿಕ ಈ ಸೆಣಬಿನ ಕಡ್ಡಿಗಳು ಕೊಳೆತು ಒಂದು ಹದಕ್ಕೆ ಬಂದಿರುತ್ತದೆ. ನಂತರ ಇದನ್ನು ಚೆನ್ನಾಗಿ ಬಡಿಯಲಾಗುತ್ತದೆ. ಆಗ ಕಡ್ಡಿಯಲ್ಲಿರುವ ಬೇರೆ ಅಂಶಗಳು ಹೋಗಿ ಒಂದು ನಾರಿನ ರೀತಿಯ ಬಳ್ಳಿ ಸಿಗುತ್ತದೆ. ಇದನ್ನು ಒಂದು ಎರಡಲ್ಲ ಇಂತಹ ನೂರಾರು ಬಳ್ಳಿಗಳನ್ನು ಒಂದುಗೂಡಿಸಿ ಒಂದು ಬಿಗಿಯಾದ ಹಗ್ಗವನ್ನು ತಯಾರಿಸಲಾಗುತ್ತದೆ.

ಅಂಬಾರಿ ಕಟ್ಟುವಾಗ ಈ ಹಗ್ಗವನ್ನು ಬಳಸಲಾಗುತ್ತದೆ. ಇದಕ್ಕಾಗಿ ಬೇರೆ ಯಾವ ಹಗ್ಗವನ್ನು ತರುವುದಿಲ್ಲ. ಈ ಸೆಣಬಿನ ದಾರವನ್ನು ಸರಿಯಾಗಿ ಎಲ್ಲಿಯೂ ಗಂಟು ಬರದಿರುವಂತೆ ನೋಡಿಕೊಂಡು ಅದನ್ನು ಹಣೆಯಲಾಗುತ್ತದೆ. ಒಮ್ಮೆ ಹಣೆದ ಹಗ್ಗವನ್ನು, ಇನ್ನೊಂದು ಅದೇ ರೀತಿಯಲ್ಲಿ ನೈಯ್ದ ಹಗ್ಗದ ಜೊತೆಯಲ್ಲಿ ಹಣೆದು ದಪ್ಪ ಮಾಡುತ್ತಾರೆ. ಬಟ್ಟೆಯ ಹಗ್ಗ ಅಥವಾ ನೈಲಾನ್ ಹೀಗೆ ನಾನಾ ರೀತಿಯ ಹಗ್ಗಕ್ಕಿಂತ ಇದು ಗಟ್ಟಿಯಾಗಿರುತ್ತದೆ.

ಆನೆಗಳನ್ನು ಹಿಡಿಯುವ ಕಾರ್ಯಾಚರಣೆಗಳಿಗೆ ಹೋಗುವಾಗ ಆ ಆನೆಗಳನ್ನು ಹಿಡಿದ ಬಳಿಕ ಅವುಗಳನ್ನು ಕಟ್ಟಿ ಹಾಕಲು ಕೂಡ ಇದೇ ಹಗ್ಗವನ್ನು ಬಳಸಲಾಗುತ್ತದೆ. ಇದಕ್ಕೆ ಆನೆಗಳನ್ನು ಹಿಡಿದು ನಿಲ್ಲಿಸುವ ಶಕ್ತಿಯಿದೆ. ಅಲ್ಲದೆ ಈ ಹಗ್ಗವನ್ನು ಬಳಕೆ ಮಾಡುವುದರಿಂದ ಆನೆಗಳ ಚರ್ಮಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಜೊತೆಗೆ ಇದು ಕಟ್ಟುವುದಕ್ಕೆ ಕೂಡ ಒಳ್ಳೆಯ ಗ್ರಿಪ್ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಈ ಬಾರಿ ಅಂಬಾರಿ ಹೊರುವ ಆನೆ ಟ್ರೇನಿಂಗ್​ ಹೇಗಿರುತ್ತೆ ಗೊತ್ತಾ?

ಇದನ್ನು ಸಿಬಂದಿ ಒಟ್ಟುಗೂಡಿ ಮಾಡುತ್ತಾರೆ. ಹೆಚ್ಚು ಶ್ರಮ ಬೇಕಾಗಿರುವುದರಿಂದ ಹಂತ ಹಂತವಾಗಿ ಮಾಡುತ್ತಾರೆ. ಇದನ್ನು ಬೇಕಾದ ರೀತಿಯಲ್ಲಿ ಮತ್ತು ಗಾತ್ರದಲ್ಲಿ ಮಾಡಲಾಗುತ್ತದೆ. ಬಿಗಿಯಾಗಿ ಕಟ್ಟಿ ಅದನ್ನು ಮೊದಲೇ ತಯಾರಿಸಿ ಇಟ್ಟುಕೊಳ್ಳಲಾಗುತ್ತದೆ. ಬಳಿಕ ಇದನ್ನು ದಸರಾ ದಿನಗಳಲ್ಲಿ ಬಳಸಲಾಗುತ್ತದೆ.

ದಸರಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ
ಕುಮಾರಸ್ವಾಮಿ ಕೇಂದ್ರ ಸಚಿವರಾದರೂ ಹೆಚ್ಚು ಸಮಯ ಬೆಂಗಳೂರಲ್ಲಿ ಇರುತ್ತಾರೆ
ನವರಾತ್ರಿ ವೇಷದಲ್ಲಿ ಕಾಡಿದ ರೇಣುಕಾಸ್ವಾಮಿ ಪ್ರೇತಾತ್ಮ! ವಿಡಿಯೋ ವೈರಲ್
ನವರಾತ್ರಿ ವೇಷದಲ್ಲಿ ಕಾಡಿದ ರೇಣುಕಾಸ್ವಾಮಿ ಪ್ರೇತಾತ್ಮ! ವಿಡಿಯೋ ವೈರಲ್
ವಿಜಯದಶಮಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ
ವಿಜಯದಶಮಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ
ಮೈಸೂರಿನ ಬಲರಾಮ್ ಮತ್ತು ಬೆಂಗಳೂರಿನ ನಾರಾಯಣ್ ನಡುವೆ ವಜ್ರಮುಷ್ಠಿ ಕಾಳಗ
ಮೈಸೂರಿನ ಬಲರಾಮ್ ಮತ್ತು ಬೆಂಗಳೂರಿನ ನಾರಾಯಣ್ ನಡುವೆ ವಜ್ರಮುಷ್ಠಿ ಕಾಳಗ
ಪಾರ್ವತಿ ಸಿದ್ದರಾಮಯ್ಯ ಕಾರಲ್ಲಿ ಕುಳಿತೇ ಚಾಮುಂಡೇಶ್ವರಿಯ ದರ್ಶನ ಪಡೆದರು
ಪಾರ್ವತಿ ಸಿದ್ದರಾಮಯ್ಯ ಕಾರಲ್ಲಿ ಕುಳಿತೇ ಚಾಮುಂಡೇಶ್ವರಿಯ ದರ್ಶನ ಪಡೆದರು
ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಮೈಸೂರು ದಸರಾ 2024: ಸಿಎಂ, ಡಿಸಿಎಂಗೆ ಪಂಚಲೋಹ ವಿಗ್ರಹ ಉಡುಗೊರೆ
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್
ಹತ್ತನೇ ಚಾಮರಾಜ್ ಒಡೆಯರ್ ಕಾಲದಿಂದ ಅಂಬಾರಿ ಇತಿಹಾಸ ಆರಂಭ: ಡಾ ಅಯ್ಯಂಗಾರ್
ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು
ನಿಶ್ಚಲವಾಗಿ ನಿಂತಿದ್ದ ಗೂಡ್ಸ್ ಟ್ರೈನಿಗೆ ಢಿಕ್ಕಿ, ಹಳಿಬಿಟ್ಟ ಆರು ಬೋಗಿಗಳು
ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಮೈಸೂರು ದಸರಾ 2024: ಜಂಬೂಸವಾರಿಗೆ ಸಿದ್ದತೆಯನ್ನು ಲೈವ್ ಆಗಿ ನೋಡಿ​
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್
ಬಿಗ್ ಬಾಸ್ ಲಾಂಚ್​ಗೆ ಭರ್ಜರಿ ಟಿಆರ್​ಪಿ; ಹೇಗಿತ್ತು ನೋಡಿ ಸೆಲೆಬ್ರೇಷನ್