Yoga Tips for Beginners: ಯೋಗಾಸನ ಮಾಡಲು ಪ್ರಾರಂಭಿಸಿದ್ದೀರಾ? ಹಾಗಿದ್ದರೆ ಈ ಸಲಹೆ ಪಾಲಿಸಿ

ಯೋಗ ಮಾಡುವಾಗ ನೀವು ಹೇಗೆ ಗಾಯಗೊಳ್ಳುವುದನ್ನು ತಪ್ಪಿಸಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Yoga Tips for Beginners: ಯೋಗಾಸನ ಮಾಡಲು ಪ್ರಾರಂಭಿಸಿದ್ದೀರಾ? ಹಾಗಿದ್ದರೆ ಈ ಸಲಹೆ ಪಾಲಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Jan 15, 2023 | 12:04 PM

ಯೋಗ(Yoga) ಮಾಡುವಾಗ ನೀವು ಹೇಗೆ ಗಾಯಗೊಳ್ಳುವುದನ್ನು ತಪ್ಪಿಸಬಹುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ದೇಹ, ಮನಸ್ಸು ಮತ್ತು ಆತ್ಮದ ಆರೋಗ್ಯ(Health) ದ ದೃಷ್ಟಿಯಿಂದ ಯೋಗವು ಅತ್ಯಂತ ಅಗತ್ಯವಾಗಿದೆ. ನಿಯಮಿತ ಯೋಗಾಭ್ಯಾಸವು ಒಬ್ಬ ವ್ಯಕ್ತಿಯನ್ನು ಉತ್ತಮ, ಆರೋಗ್ಯಕರ ಜೀವನ ನಡೆಸುವಲ್ಲಿ ಸಹಕಾತಿಯಾಗಿದೆ. ಜೊತೆಗೆ ಯೋಗವು ದೈಹಿಕವಾಗಿ ಸವಾಲಾಗಿದ್ದು, ಸರಿಯಾಗಿ ನಿರ್ವಹಿಸದಿದ್ದಲ್ಲಿ ದೇಹದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

ಯೋಗವು ದೇಹದ ಎಲ್ಲಾ ಸ್ನಾಯುಗಳನ್ನು ವಿಸ್ತರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ದೇಹದಲ್ಲಿನ ಒಟ್ಟಾರೆ ನಮ್ಯತೆಯನ್ನು ಸುಧಾರಿಸುತ್ತದೆ. ಸರಿಯಾಗಿ ಯೋಗವನ್ನು ನಿರ್ವಹಿಸದಿದ್ದರೆ, ದೇಹದಲ್ಲಿ ನೋವು, ಸೆಳೆತಗಳು ಕಾಣಿಸಿಕೊಳ್ಳಬಹುದು. ಯೋಗ ಮಾಡುವಾಗ ನೀವು ಹೇಗೆ ಗಾಯಗೊಳ್ಳುವುದನ್ನು ತಪ್ಪಿಸಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಗಾಯಗೊಳ್ಳದೆ ಯೋಗ ಮಾಡಲು ಈ ಸಲಹೆಗಳನ್ನು ಅನುಸರಿಸಿ

ಸರಿಯಾದ ಕ್ರಮದಲ್ಲಿ ಅಭ್ಯಾಸ ಮಾಡಿ:

ಯೋಗ ಮಾಡುವಾಗ ಭಂಗಿಗಳನ್ನು ಅನುಸರಿಸುವಾಗ ಅತ್ಯಂತ ಜಾಗೃತವಾಗಿರುವುದು ಅಗತ್ಯವಾಗಿದೆ. ಕೆಲವೊಮ್ಮೆ ಸರಿಯಾದ ಕ್ರಮದಲ್ಲಿ ಮಾಡದೇ ಇದ್ದಾಗ ಗಾಯಗಳು ಆಗುವ ಸಾಧ್ಯತೆ ಹೆಚ್ಚಿದೆ. ಯೋಗಾಭ್ಯಾಸದ ಮೂಲತತ್ವವೆಂದರೆ ವರ್ತಮಾನದಲ್ಲಿ ಬದುಕುವುದು. ಮನಸ್ಸುಗಳು ದಾರಿ ತಪ್ಪಿ ಬೇರೆ ಬೇರೆ ವಿಷಯಗಳನ್ನು ಪರಿಗಣಿಸುವುದು ಸಾಮಾನ್ಯ. ಅದು ಸಂಭವಿಸಿದಾಗ, ನೀವು ಅದರ ಬಗ್ಗೆ ತಿಳಿದಿರಬೇಕು ಮತ್ತು ಯೋಗಾಸನಕ್ಕೆ ನಿಮ್ಮ ಗಮನವನ್ನು ಹಿಂತಿರುಗಿಸಬೇಕು.

ಇದನ್ನೂ ಓದಿ: ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಈ ರೀತಿ ಬಿಸಿ ನೀರು ಕುಡಿಯಿರಿ, 5 ದಿನಗಳಲ್ಲಿ ವ್ಯತ್ಯಾಸ ಕಾಣುವಿರಿ

ನಿಧಾನವಾಗಿ ಮತ್ತು ಕ್ರಮೇಣ ಪ್ರಾರಂಭಿಸಿ:

ಯೋಗಾಭ್ಯಾಸವು ಪ್ರತಿದಿನ ಹೊಸ ಜ್ಞಾನ ಮತ್ತು ಹೊಸ ಆರಂಭವನ್ನು ಪಡೆಯಲು ಅವಕಾಶವನ್ನು ಒದಗಿಸುತ್ತದೆ. ಸಾಮಾನ್ಯವಾಗಿ, ನೀವು ಕಲಿಯಲು ಸಿದ್ಧರಾಗಿರಬೇಕು, ನೀವು ಯೋಗಾಸನ ಮಾಡಲು ಆರಾಮದಾಯಕವಾಗುವವರೆಗೂ ಮಿತವಾಗಿರುವ ಆಸನಗಳನ್ನು ಅಭ್ಯಾಸ ಮಾಡಬೇಕು. ನೀವು ಈ ಮೊದಲು ಯಾವುದೇ ದೈಹಿಕ ಚಟುವಟಿಕೆಯಲ್ಲಿ ತೊಡಗಿಲ್ಲದಿದ್ದರೆ ಯೋಗ ಮಾಡುವಾಗ ದೇಹದಲ್ಲಿ ಸ್ವಲ್ಪ ನೋವು ಕಾಣಿಸಿಕೊಳ್ಳಬಹುದು. ಆದ್ದರಿಂದ ನಿಧಾನವಾಗಿ ಅಭ್ಯಾಸವನ್ನು ಆರಂಭಿಸಿ.

ವಾರ್ಮ್ಅಪ್ ಮಾಡಿ ಮತ್ತು ಆರಾಮದಾಯಕವಾಗಿರಿ:

ಯೋಗ ಮಾಡುವ ಮೊದಲು ನಿಮ್ಮ ದೇಹವನ್ನು ವಾರ್ಮ್ಅಪ್ ಮಾಡಿಕೊಳ್ಳಿ. ನಿಮ್ಮ ಸ್ನಾಯುಗಳು ಯೋಗ ಅಭ್ಯಾಸಕ್ಕೆ ಸಿದ್ಧವಾಗಿಲ್ಲದಿದ್ದರೆ, ಗಾಯಗಳ ಅಪಾಯವು ಹೆಚ್ಚಾಗಿರುತ್ತದೆ. ಆದ್ದರಿಂದ ದೇಹವನ್ನು ವಾರ್ಮ್ಅಪ್‌ಗೊಳಿಸುವುದು ಮುಖ್ಯವಾಗಿದೆ.

ನಿಯಮಿತವಾಗಿ ಉಸಿರಾಟದ ಮೇಲೆ ಕೇಂದ್ರೀಕರಿಸಿ:

ಉಸಿರಾಟದ ಆವರ್ತನ, ಮಾದರಿಗಳು ಮುಂತಾದವುಗಳಂತಹ ನಿಮ್ಮ ಉಸಿರಾಟದ ಬಗ್ಗೆ ನೀವು ಎಚ್ಚರದಿಂದಿರಬೇಕು. ನಿಮ್ಮ ಉಸಿರಾಟವು ದೀರ್ಘ ಮತ್ತು ಶಾಂತವಾಗಿರಲಿ ಅಥವಾ ಕಡಿಮೆ ಮತ್ತು ಅನಿಯಮಿತವಾಗಿರಲಿ. ಉಸಿರಾಟದ ಮೇಲೆ ಗಮನವನ್ನು ಕೇಂದ್ರೀಕರಿಸಿ.

ಇದನ್ನೂ ಓದಿ: ವ್ಯಾಯಾಮದ ಬಳಿಕ ನೀವು ಈ ತಪ್ಪುಗಳನ್ನು ಮಾಡಲೇಬೇಡಿ, ದೇಹಕ್ಕೆ ಹಾನಿ ಮಾಡುವ ಅಭ್ಯಾಸಗಳ ಬದಲಿಸಿಕೊಳ್ಳಿ

ಯೋಗಾಸನದ ಜೋಡನೆಯನ್ನು ಪರಿಶೀಲಿಸಿ:

ಮನಸ್ಸಿನ ಸರಿಯಾದ ಜೋಡಣೆಯು ದೇಹದ ಸರಿಯದ ಜೋಡಣೆಯೊಂದಿಗೆ ಕೈಜೋಡಿಸುತ್ತದೆ. ಯೋಗಾಸನದ ಜೋಡನೆ ಮತ್ತು ಹೊಂದಾಣಿಕೆಯು ಯೋಗದ ಅಭ್ಯಾಸಕ್ಕೆ ನಿರ್ಣಾಯಕವಾಗಿದೆ. ಆಸನದ ಸರಿಯಾದ ಜೋಡಣೆಯು ಹಾನಿಯ ಅಪಾಯವನ್ನು ಉಂಟುಮಾಡುವುದಿಲ್ಲ.

ತಾಳ್ಮೆಯಿಂದಿರಿ:

ಯೋಗವು ನಿಮ್ಮ ದಕ್ಷತೆ ಮತ್ತು ಪರಿಣಾಮಕತ್ವವನ್ನು ಕ್ರಮೇಣವಾಗಿ ಮತ್ತು ಎಚ್ಚರಿಕೆಯಿಂದ ಹೆಚ್ಚಿಸಲು ಸಹಾಯ ಮಾಡುತ್ತದೆ. ಅಭ್ಯಾಸ ಮಾಡಿದಂತೆಲ್ಲ ಕ್ರಮೇಣವಾಗಿ ನಿಮ್ಮ ಆಸನಗಳ ತೀವ್ರತೆಯನ್ನು ಹೆಚ್ಚಿಸಿ. ನೀವು ಸ್ಥಿರವಾಗಿ ಮತ್ತು ನಿಧಾನವಾಗಿ ತೀವ್ರತೆಯನ್ನು ಹೆಚ್ಚಿಸಿದಾಗ ನಿಮ್ಮ ದೇಹ ಮತ್ತು ಚಲನೆಯ ಗುರಿಯನ್ನು ಸಾಧಿಸಲು ಸಹಾಯವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 12:04 pm, Sun, 15 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ