ಶೀತ ಅಥವಾ ಕೆಮ್ಮಿನಿಂದ ಅನೇಕ ಬಾರಿ ಗಂಟಲು ನೋವು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ಇದನ್ನು ನಿಭಾಯಿಸುವುದು ತುಂಬಾ ಕಷ್ಟ. ಬದಲಾಗುತ್ತಿರುವ ಹವಾಮಾನಕ್ಕೆ ಅನುಗುಣವಾಗಿ ಜನರು ಹೆಚ್ಚಾಗಿ ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಕೊವಿಡ್‌ನ(Covid 19) ಲಕ್ಷಣಗಳಲ್ಲಿ ನೋಯುತ್ತಿರುವ ಗಂಟಲು(Throat) ಸಹ ಸೇರಿವೆ. ನೋಯುತ್ತಿರುವ ಗಂಟಲು ಮತ್ತು ನೋವಿನಿಂದ ಪರಿಹಾರವನ್ನು ಪಡೆಯಲು ನೀವು ವಿವಿಧ ಮನೆಮದ್ದುಗಳನ್ನು(Home Remedies)ಬಳಸಬಹುದು. ಇದು ನಿಮಗೆ ಶೀಘ್ರದಲ್ಲೇ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ. ಕರಿಮೆಣಸು, ಜೇನುತುಪ್ಪ, ಶುಂಠಿ, ಆಪಲ್ ಸೈಡರ್ ವಿನೆಗರ್, ಅತಿಮಧುರ, ಅರಿಶಿಣ, ನೆಲ್ಲಿಕಾಯಿ ಮತ್ತು ಲವಂಗ ಮುಂತಾದ ಸುಲಭವಾದ ಅಡಿಗೆ ಪದಾರ್ಥಗಳನ್ನು ಒಳಗೊಂಡಿದೆ. ನೀವು ಅವುಗಳನ್ನು ಹೇಗೆ ಬಳಸಬಹುದು ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ
ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ಮತ್ತು ಇನ್ನಿತರ ಶೀತಕ್ಕೆ ಸಂಬಂಧಿಸಿದ ಸಮಸ್ಯೆಗೆ ತ್ವರಿತ ಪರಿಹಾರ ದೊರೆಯುತ್ತದೆ. ಸ್ವಲ್ಪ ನೀರನ್ನು ಬಿಸಿ ಮಾಡಿ ಒಂದು ಲೋಟಕ್ಕೆ ಹಾಕಿ. ಸುಮಾರು 2 ಟೀ ಚಮಚ ಉಪ್ಪು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಒಂದು ಸಿಪ್ ಉಪ್ಪು ನೀರನ್ನು ತೆಗೆದುಕೊಳ್ಳಿ. ಸುಮಾರು 10 ಸೆಕೆಂಡುಗಳ ಕಾಲ ಅದರೊಂದಿಗೆ ಗಾರ್ಗ್ಲ್ ಮಾಡಿ. ನೀವು ದಿನಕ್ಕೆ 2-3 ಬಾರಿ ಈ ರೀತಿ ಮಾಡುವುದರಿಂದ ಪರಿಹಾರ ಸಿಗುತ್ತದೆ.
ಕರಿಮೆಣಸು ಮತ್ತು ಜೇನುತುಪ್ಪ
ಕರಿಮೆಣಸು ಮತ್ತು ಜೇನುತುಪ್ಪದ ಮಿಶ್ರಣವು ನೋಯುತ್ತಿರುವ ಗಂಟಲು, ಶೀತ ಮತ್ತು ಕೆಮ್ಮುವಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತದೆ. ಜೇನುತುಪ್ಪವು ನೈಸರ್ಗಿಕ ಕೆಮ್ಮು ನಿವಾರಕವಾಗಿದೆ ಮತ್ತು ನಿಮಗೆ ತ್ವರಿತ ಪರಿಹಾರವನ್ನು ನೀಡುತ್ತದೆ. ಕರಿಮೆಣಸು ಮತ್ತು ಜೇನುತುಪ್ಪದ ಮಿಶ್ರಣದಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಅನೇಕ ಸೋಂಕುಗಳ ವಿರುದ್ಧ ಹೋರಾಡುತ್ತವೆ.
ಶುಂಠಿ
ಶುಂಠಿಯು ಜಿಂಜರಾಲ್ ಅನ್ನು ಹೊಂದಿರುತ್ತದೆ. ಇದು ಶಕ್ತಿಯುತ ಔಷಧೀಯ ಗುಣಗಳನ್ನು ಹೊಂದಿದೆ. ಇದಕ್ಕೆ 1 ಇಂಚಿನ ಶುಂಠಿಯನ್ನು ತುರಿದು ಬಾಣಲೆಗೆ ಹಾಕಿ. ನಂತರ ಅದಕ್ಕೆ 1 ಲೋಟ ನೀರು ಹಾಕಿ ಕುದಿಸಿ. ಸುಮಾರು 5 ನಿಮಿಷಗಳ ಕಾಲ ಕುದಿಸಿ ನಂತರ ಶುಂಠಿ ನೀರನ್ನು ಸೋಸಿ ಸೇವಿಸಿ.
ಆಪಲ್ ವಿನೆಗರ್
ಆಪಲ್ ಸೈಡರ್ ವಿನೆಗರ್ ಕುಡಿಯುವುದರಿಂದ ಗಂಟಲು ನೋವು ನಿವಾರಣೆಯಾಗುವುದು ಮಾತ್ರವಲ್ಲದೆ ತೂಕ ಇಳಿಸಲು ಸಹಾಯ ಮಾಡುತ್ತದೆ. 1 ಗ್ಲಾಸ್ ಬೆಚ್ಚಗಿನ ನೀರಿನಲ್ಲಿ 1 ಚಮಚ ಆಪಲ್ ಸೈಡರ್ ವಿನೆಗರ್ ಮಿಶ್ರಣ ಮಾಡಿ. ಸ್ವಲ್ಪ ತಣ್ಣಗಾಗಲು ಬಿಡಿ, ಬಳಿಕ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಅತಿಮಧುರ
ಅತಿಮಧುರ ಒಂದು ಗಿಡಮೂಲಿಕೆಯಾಗಿದ್ದು, ಇದು ಆಂಟಿವೈರಲ್, ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಇದು ನೋಯುತ್ತಿರುವ ಗಂಟಲು ಮಾತ್ರವಲ್ಲದೆ ಅಜೀರ್ಣ, ಮಲಬದ್ಧತೆ, ಹೊಟ್ಟೆ ಹುಣ್ಣು ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಅತಿಮಧುರವನ್ನು ಸೇವಿಸಲು ಸುಲಭವಾದ ಮಾರ್ಗವೆಂದರೆ ಚಹಾ ಮಾಡುವುದು. 1 ಗ್ಲಾಸ್ ನೀರಿನೊಂದಿಗೆ ಪ್ಯಾನ್‌ನಲ್ಲಿ 1 ಅತಿಮಧುರ ಬೇರನ್ನು ಹಾಕಿ. ಇದನ್ನು 5 ನಿಮಿಷಗಳ ಕಾಲ ಕುದಿಸಿ ನಂತರ ಫಿಲ್ಟರ್ ಮಾಡಿ ಕುಡಿಯಿರಿ.
ಇದನ್ನೂ ಓದಿ:
ಬರಿಗಾಲಿನಲ್ಲಿ ವಾಕ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ; ಇದರಿಂದಾಗುವ ಆರೋಗ್ಯಯುತ ಬದಲಾವಣೆ ಇಲ್ಲಿದೆ ನೋಡಿ
ಕೀಲು ನೋವು ಸಂಧಿವಾತದ ಆರಂಭವಾಗಿರಬಹುದು; ಪರಿಹಾರಕ್ಕಾಗಿ ಈ ಆಹಾರ ಪದಾರ್ಥ ಸೇವನೆಯಿಂದ ದೂರವಿರಿ