Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಸಮಿತಿ ನೇಮಕ: ಡಾ ಎಂಎನ್ ನಂದೀಶ್ ಹಂಚೆ

ಕನ್ನಡ ಪುಸ್ತಕ ಪ್ರಾಧಿಕಾರ: ಸಭೆಯಲ್ಲಿ ಪುಸ್ತಕ ನೀತಿಯ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಶೀಘ್ರದಲ್ಲೇ ಮತ್ತೊಂದು ಪೂರ್ಣ ಪ್ರಮಾಣದ ಸಮಿತಿ ರಚನೆ ಮಾಡಿ ಕನ್ನಡ ಪುಸ್ತಕ ನೀತಿ ರಚನೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಡಾ. ಎಂ.ಎನ್. ನಂದೀಶ್ ಹಂಚೆ ತಿಳಿಸಿದ್ದಾರೆ.

ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಸಮಿತಿ ನೇಮಕ: ಡಾ ಎಂಎನ್ ನಂದೀಶ್ ಹಂಚೆ
ಕನ್ನಡ ಪುಸ್ತಕ ನೀತಿ ಕರಡು ರಚನೆಗಾಗಿ ರೂಪಿಸಲಾದ ಸಮಿತಿ ಸದಸ್ಯರ ಪ್ರಾಥಮಿಕ ಹಂತದ ಸಭೆ
Follow us
TV9 Web
| Updated By: ganapathi bhat

Updated on: Aug 10, 2021 | 10:15 PM

ಬೆಂಗಳೂರು: ಕನ್ನಡ ಪುಸ್ತಕೋದ್ಯಮದ ಸಮಗ್ರ ಅಭಿವೃದ್ಧಿಗಾಗಿ ಆಧುನಿಕ ಮಾಧ್ಯಮಗಳ ಸವಾಲುಗಳನ್ನು ಒಳಗೊಂಡ ಹೊಸ ಪುಸ್ತಕ ನೀತಿ ರಚನೆಗೆ ನೂತನ ಸಮಿತಿಯೊಂದನ್ನು ರಚನೆ ಮಾಡಲಾಗುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಎಂ.ಎನ್. ನಂದೀಶ್ ಹಂಚೆ ಇಂದು (ಆಗಸ್ಟ್ 10) ಹೇಳಿದ್ದಾರೆ.

ಅವರು ಕನ್ನಡ ಪುಸ್ತಕ ನೀತಿ ಕರಡು ರಚನೆಗಾಗಿ ರೂಪಿಸಲಾದ ಸಮಿತಿ ಸದಸ್ಯರ ಪ್ರಾಥಮಿಕ ಹಂತದ ಸಭೆಯನ್ನು ಉದ್ದೇಶಿಸಿ ಕನ್ನಡ ಪುಸ್ತಕೋದ್ಯಮ ಇಂದು ಸಂಕ್ರಮಣದ ಕಾಲಘಟ್ಟದಲ್ಲಿದೆ. ಇ-ಬುಕ್, ಆಡಿಯೋ ಬುಕ್, ಅಂರ್ತಜಾಲ ಪುಸ್ತಕ ಪ್ರಕಟಣೆ ಮುಂತಾದವು ಕನ್ನಡ ಪುಸ್ತಕೋದ್ಯಮವನ್ನು ಕಾಗದರಹಿತವನ್ನಾಗಿ ಮಾಡಿದೆ. ಅದು ಪುಸ್ತಕೋದ್ಯಮದ ಅನಿವಾರ್ಯ ರೂಪವಾಗಿ ಪರಿವರ್ತನೆಯಾಗುತ್ತಿರುವ ಸಂದರ್ಭದಲ್ಲಿ ಕನ್ನಡ ಪುಸ್ತಕೋದ್ಯಮ ಅದನ್ನೂ ಒಳಗೊಂಡಂತೆ ಬೆಳೆಯಬೇಕಾಗಿರುವ ಅನಿವಾರ್ಯತೆ ಇದೆ. ಹಾಗಾಗಿ ಈ ಹಿಂದೆ ಡಾ. ಸಿದ್ಧಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ರೂಪುಗೊಂಡಿದ್ದ, ಕನ್ನಡ ಪುಸ್ತಕ ನೀತಿಯನ್ನು ಹೊಸ ದೃಷ್ಟಿಕೋನದಿಂದ ನೋಡುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಆಧುನಿಕ ಮಾಧ್ಯಮಗಳ ಸವಾಲುಗಳ ಸಹಿತ ಕನ್ನಡ ಪುಸ್ತಕೋದ್ಯಮದ ಸಮಗ್ರ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ರೂಪದ ಕನ್ನಡ ಪುಸ್ತಕ ನೀತಿ ರಚನೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಮುಂದಾಗಿದೆ. ಇದರ ಮುಖ್ಯ ಸಲಹೆಗಾರರಾಗಿ ಖ್ಯಾತ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಕೆಲಸ ಮಾಡಲಿದ್ದಾರೆ. ಇವರ ಜೊತೆ ಖ್ಯಾತ ಸಾಹಿತಿ ವಸುಧೇಂದ್ರ ಸಹ ಸಮಿತಿಯಲ್ಲಿರುತ್ತಾರೆ.

ಪ್ರಾಥಮಿಕ ಹಂತದಲ್ಲಿ ಕನ್ನಡ ಪ್ರಕಾಶಕರ ಸಂಘದ ಅಧ್ಯಕ್ಷರಾದ ಪ್ರಕಾಶ ಕಂಬತ್ತಳ್ಳಿ, ಕಾರ್ಯದರ್ಶಿಗಳಾದ ನ. ರವಿಕುಮಾರ, ಕರ್ನಾಟಕ ಬರಹಗಾರರು ಮತ್ತು ಲೇಖಕರ ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಅಜಕ್ಕಳ ಗಿರೀಶ್ ಭಟ್, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ. ಸತೀಶಕುಮಾರ ಎಸ್. ಹೊಸಮನಿ, ಮೈಸೂರು ವಿಶ್ವವಿದ್ಯಾಲಯದ ನಿರ್ದೇಶಕರಾದ ವಿಜಯಕುಮಾರಿ ಕರೀಕಲ್ಲು, ಹಂಪಿ ವಿಶ್ವವಿದ್ಯಾಲಯದ ನಿರ್ದೇಶಕರಾದ ಡಾ. ಹೆಚ್.ಡಿ. ಪ್ರಶಾಂತ, ವೈ.ಜಿ. ಮುರಳೀಧರನ್, ಕಾನೂನು ಇಲಾಖೆಯಿಂದ ಕಾರ್ಯರ್ಶಿಗಳ ಪರವಾಗಿ ಎಸ್. ಅರುಣ್, ಇ-ಆಡಳಿತ (ಕೇಂದ್ರ) ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪರವಾಗಿ ಪುಷ್ಪ ಎಂ, ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಕೆ. ರಾಜಕುಮಾರ್ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಮತ್ತು ಸಹಾಯಕ ನಿರ್ದೇಶಕರಾದ ಸೌಭಾಗ್ಯ ಅವರು ಭಾಗಹಿಸಿದ್ದರು.

ಸಭೆಯಲ್ಲಿ ಪುಸ್ತಕ ನೀತಿಯ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಶೀಘ್ರದಲ್ಲೇ ಮತ್ತೊಂದು ಪೂರ್ಣ ಪ್ರಮಾಣದ ಸಮಿತಿ ರಚನೆ ಮಾಡಿ ಕನ್ನಡ ಪುಸ್ತಕ ನೀತಿ ರಚನೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದು ಡಾ. ಎಂ.ಎನ್. ನಂದೀಶ್ ಹಂಚೆ ತಿಳಿಸಿದ್ದಾರೆ.

ಇದನ್ನೂ ಓದಿ: Yakshagana: ಪುರಾಣ ಎಂದರೆ ಬಹಳ ಹಿಂದಿನದು, ಪುರಾತನ ಎನ್ನುವ ಅರ್ಥ ಮಾತ್ರವೇ?

Vinayaka Krishna Gokak: ಗೋಕಾಕರ ಕಾದಂಬರಿ ಲೋಕ, ಪಾತ್ರಗಳ ಅಗಾಧ ಅನುಭವದ ಸಂತೆ

(Dr Nandish Hanche on New Committe for Kannada Book Policy)

ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್