Vaidehi‘s Birthday: ವೈದೇಹಿಯವರ ‘ಅಕ್ಕು’ ಚಂಪಾ ಶೆಟ್ಟಿಯವರೊಂದಿಗೆ ರಂಗದ ಮೇಲೆ ಬಂದಿದ್ದು ಹೀಗೆ

Champa Shetty : ‘ಅಂದು ನಾನು ವೈದೇಹಿಯವರಲ್ಲಿ ಕಂಡದ್ದು ಒಬ್ಬ ತಾಯಿಯ ಮಮತೆ ಎಂದರೆ ನಿಜಕ್ಕೂ ಉತ್ಪ್ರೇಕ್ಷೆಯಲ್ಲ. ಅಂದು ನಾಟಕ ಮಾಡಲು ಅನುಮತಿ ನೀಡಿದ್ದರ ಜೊತೆಗೆ ಮಧ್ಯಾಹ್ನ ರೊಟ್ಟಿ ಊಟ ಮತ್ತು ರೈಲಿನ ಪ್ರಯಾಣಕ್ಕಾಗಿ ಪ್ರೀತಿಯ ಮೊಸರನ್ನದ ಬುತ್ತಿ. ತಾಯಿಯಂತೆ ಇನ್ನಾರು ಕೊಡಲು ಸಾಧ್ಯ?’ ಚಂಪಾ ಶೆಟ್ಟಿ

Vaidehi‘s Birthday: ವೈದೇಹಿಯವರ ‘ಅಕ್ಕು’ ಚಂಪಾ ಶೆಟ್ಟಿಯವರೊಂದಿಗೆ ರಂಗದ ಮೇಲೆ ಬಂದಿದ್ದು ಹೀಗೆ
ವೈದೇಹಿಯವರೊಂದಿಗೆ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರದ ನಿರ್ದೇಶಕಿ ಚಂಪಾ ಶೆಟ್ಟಿ
Follow us
ಶ್ರೀದೇವಿ ಕಳಸದ
|

Updated on:Feb 12, 2022 | 5:22 PM

ವೈದೇಹಿ | Vaidehi : ಹಿಂದೆ ಪ್ರಜಾವಾಣಿಯಲ್ಲಿ  ಖ್ಯಾತ ವಿಮರ್ಶಕರಾದ ಡಾ.ಆಶಾದೇವಿಯವರು ಬರೆಯುತ್ತಿದ್ದ ಕಥೆ,ಕಾದಂಬರಿಗಳಲ್ಲಿನ ಪಾತ್ರಗಳನ್ನು ಕುರಿತಾದ ವಿಶೇಷ ಅಂಕಣವನ್ನು ತಪ್ಪದೆ ಓದುತ್ತಿದ್ದೆ. ಅವುಗಳಲ್ಲಿ ಕೆಲವು ನಾನು ಓದಿದ್ದ ಕತೆಗಳಾದರೆ ಕೆಲವು ಓದದೇ ಇದ್ದ ಕತೆಗಳ ಪಾತ್ರಗಳೂ ಇರುತ್ತಿದ್ದವು. ಹಾಗೆ ಓದುವಾಗ ನನಗೆ ಸಿಕ್ಕವರೇ ‘ಅಕ್ಕು’ ಮತ್ತು ವೈದೇಹಿ ಮೇಡಂ. ಓದಿದಾಗ, ವಿಮರ್ಶೆಯಲ್ಲಿಯೇ  ಇಷ್ಟು ಸೆಳೆಯುವ ಅಕ್ಕು ಇನ್ನು ಕತೆಯಲ್ಲಿ ಹೇಗಿರಬಹುದು? ಎಂದು ಕುತೂಹಲದಿಂದ, ಅಂದೇ ಹೋಗಿ ‘ವೈದೇಹಿ ಕತೆಗಳು’ ಪುಸ್ತಕವನ್ನು ಕೊಂಡು ತಂದೆ. ಒಬ್ಬ ರಂಗ ನಿರ್ದೇಶಕಿಯಾಗಿ ನಾನು ಕತೆ ಕಾದಂಬರಿಗಳನ್ನು ಓದುವಾಗ ಅವುಗಳಲ್ಲಿ ರಂಗಸಾಧ್ಯತೆ ಇದೆಯೇ? ಎಂಬ ಸಣ್ಣ ಬಯಕೆ ಸದಾ ಸುಪ್ತವಾಗಿರುತ್ತದೆ. ಅಕ್ಕುವನ್ನು ಓದುತ್ತಿದ್ದಂತೆಯೇ “ಅಕ್ಕು’’ ರಂಗದ ಮೇಲೆ ಬರಬೇಕೆಂಬ ಆಸೆ ಬಲವಾಯಿತು. ಕೂಡಲೇ ನಾನು ಓಡಿದ್ದು ನಮ್ಮ ತಂಡದವರೇ ಆದ, ವೈದೇಹಿಯವರಿಗೆ ಆಪ್ತರಾದ ಗೀತಾ ಸುರತ್ಕಲ್ ಅವರ ಮನೆಗೆ.

ಚಂಪಾ ಶೆಟ್ಟಿ, ರಂಗಕಲಾವಿದೆ, ನಿರ್ದೇಶಕಿ (Champa Shetty)

*

ವೈದೇಹಿಯವರನ್ನು ಕೆಲವು ವೇದಿಕೆಗಳಲ್ಲಿ ಕಂಡಿದ್ದೆನಾದರೂ ಅವರನ್ನು ಎಂದೂ ಮಾತನಾಡಿಸುವ ಅವಕಾಶ ಸಿಕ್ಕಿರಲಿಲ್ಲ. ಆಗ ನನ್ನ ಕಲ್ಪನೆಯಲ್ಲಿದ್ದ ವೈದೇಹಿಯವರಿಗೂ ಮುಂದೆ ನಾನು ಕಂಡ ವೈದೇಹಿಯವರಿಗೂ ಅಜಗಜಾಂತರ ಎಂದು ತಿಳಿದದ್ದು ನಂತರದಲ್ಲಿ. ನನ್ನ ಕಲ್ಪನೆಯ ಪ್ರಕಾರ ವೈದೇಹಿಯವರೆಂದರೆ, ಬಹಳ ಸಿಟ್ಟು, ಯಾರೊಡನೆಯೂ ಹೆಚ್ಚು ಮಾತನಾಡುವುದಿಲ್ಲ. ಹೀಗೆ ನನ್ನದೇ ಕೆಲವು ಊಹೆಗಳಿದ್ದವು. ಆದರೆ ಗೀತಾ ಸುರತ್ಕಲ್ ರವರನ್ನು ಭೇಟಿ ಮಾಡಿ ಹೀಗೆ ಅಕ್ಕು ನಾಟಕ ಮಾಡಬೇಕೆಂದಿದ್ದೇನೆ, ಅದಕ್ಕೆ ವೈದೇಹಿಯವರ ಅನುಮತಿ ಬೇಕೆಂದಾಗ, ಗೀತಾ , ‘ಅದಕ್ಕೇನಂತೆ ಆ ಜವಾಬ್ದಾರಿ ನನ್ನದು ವೈದೇಹಿ ಖಂಡಿತಾ ಇಲ್ಲ ಎನ್ನುವುದಿಲ್ಲ’ ಎಂದಾಗ ನನಗೆ ಒಮ್ಮೆಲೇ ಆಶ್ಚರ್ಯ, ಅನುಮಾನ. ಆದರೆ ಗೀತಾರವರು ಕೊಟ್ಟ ಭರವಸೆಯ ಮೇಲೆ ಅಕ್ಕುವನ್ನು ರಂಗದ ಮೇಲೆ ತರಲು ಮನದಲ್ಲಿಯೇ ತಯಾರಿ ನಡೆಸಿ ನಂತರ ಅವರ ಅನುಮತಿ ಪಡೆಯಲು ನಾನು ಮತ್ತು ಗೀತಾ ಸುರತ್ಕಲ್ ಹೊರಟದ್ದು ನೇರ ಮಣಿಪಾಲ್​ಗೆ. ಗೀತಾ ಎಷ್ಟೇ ಹೇಳಿದ್ದರೂ ನನ್ನೊಳಗೊಂದು ರೀತಿಯ ಭಯ, ಆತಂಕ ಕಾಡುತ್ತಲೇ ಇತ್ತು. ಆದರೆ ವೈದೇಹಿಯವರ ಮನೆಗೆ ಹೋಗಿ ಅವರನ್ನು ಭೇಟಿ ಮಾಡಿದ ಘಳಿಗೆ ನಿಜಕ್ಕೂ ಅವರ ಬಗೆಗಿದ್ದ ನನ್ನ ಅನಿಸಿಕೆಗಳೂ ಪೂರಾ ತಲೆಕೆಳಗಾಗಿದ್ದವು.

ಇದನ್ನೂ ಓದಿ : Vaidehi‘s Birthday : ವೈದೇಹಿ ಎಂಬ ‘ಇರುವಂತಿಗೆ’ ಅರಳಿದ ಕಥೆ ಇಲ್ಲಿದೆ, ಓದಿ ಸವಿತಾ ನಾಗಭೂಷಣ ಬರಹ

Kannada writer Vaidehi Birthday Special write up by Director Champa Shetty

ವೈದೇಹಿಯವರೊಂದಿಗೆ ಚಂಪಾ ಶೆಟ್ಟಿ

ಅಂದು ನಾನು ವೈದೇಹಿಯವರಲ್ಲಿ ಕಂಡದ್ದು ಒಬ್ಬ ತಾಯಿಯ ಮಮತೆ ಎಂದರೆ ನಿಜಕ್ಕೂ ಉತ್ಪ್ರೇಕ್ಷೆಯಲ್ಲ. ಅಂದು ನಾಟಕ ಮಾಡಲು ಅನುಮತಿ ನೀಡಿದ್ದರ ಜೊತೆಗೆ ಮಧ್ಯಾಹ್ನ ರೊಟ್ಟಿ ಊಟ ಮತ್ತು ರೈಲಿನ ಪ್ರಯಾಣಕ್ಕಾಗಿ ಪ್ರೀತಿಯ ಮೊಸರನ್ನದ ಬುತ್ತಿ. ತಾಯಿಯಂತೆ ಇನ್ನಾರು ಕೊಡಲು ಸಾಧ್ಯ? ನಾನು ಯಾರು, ನನ್ನ ಹಿನ್ನೆಲೆ ಏನು? ನಾಟಕ ಹೇಗೆ ಮಾಡಬಹುದು? ಎಂಬ ಯಾವ ಚಿಂತೆಯೂ ಮಾಡದೆ “ಒಬ್ಬ ಹೆಣ್ಣುಮಗಳು ಪ್ರಯತ್ನ ಮಾಡುತ್ತಿದ್ದೀಯಾ ಎಂದರೆ ನನ್ನ ಬೆಂಬಲ ಇದ್ದೇ ಇರುತ್ತದೆ’’ ಎಂದು ಒಂದೇ ಮಾತಿನಲ್ಲಿ ಅನುಮತಿ ನೀಡಿದ್ದರು. ಆದರೆ ಎರಡು ಷರತ್ತುಗಳೊಂದಿಗೆ!

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಇದನ್ನೂ ಓದಿ : Vaidehi‘s Birthday: ‘ಈ ಗೌರವ ಗೀರವ ಎಲ್ಲ ಪುರುಷಲೋಕದ್ದು, ನಂಗ್ಯಾಕೆ? ಬೇಕಾ ಇದೆಲ್ಲಾ, ಯೋಚಿಸು’ ಎಂದರು ವೈದೇಹಿ

Published On - 4:23 pm, Sat, 12 February 22

Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ