AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Music: ‘ಶ್ರೋತಾ ಹೌಸ್​’ನ ಲಿಟಲ್ ಖಯಾಲ್ ಯೂಟ್ಯೂಬ್ ಸೀರೀಸ್ ನೋಡಿಲ್ಲವಾ?

Shrota House : ವಿಶ್ವದಲ್ಲಿಯೇ ಪ್ರಥಮ ಎನ್ನಬಹುದಾದ ‘ಲಿಟ್ಲ್ ಖಯಾಲ್ ಯೂಟ್ಯೂಬ್ ಸರಣಿ’ಯ ವಿಶೇಷವೆಂದರೆ ಇಲ್ಲಿ ಹಿರಿಯ ಸಂಗೀತಗಾರರನ್ನು ಪುಟ್ಟಮಕ್ಕಳೇ ಸಂದರ್ಶಿಸುವುದು.

Music: ‘ಶ್ರೋತಾ ಹೌಸ್​’ನ ಲಿಟಲ್ ಖಯಾಲ್ ಯೂಟ್ಯೂಬ್ ಸೀರೀಸ್ ನೋಡಿಲ್ಲವಾ?
ಹಿಂದೂಸ್ತಾನಿ ಸಂಗೀತ ಕಲಾವಿದೆ, ಮಧುಮಿತಾ ಭಾಸ್ಕರ್, ಪತಿ, ತಬಲಾವಾದಕ ಡಾ. ಕಾರ್ತಿಕ್ ರಾಮಚಂದ್ರ
TV9 Web
| Edited By: |

Updated on:Mar 01, 2022 | 4:22 PM

Share

Little Khayal YouTube Series : ‘ಲಿಟಲ್ ಖಯಾಲ್ ಯುಟ್ಯೂಬ್ ಸರಣಿ’ ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಸಾಧಕರ ದಿನನಿತ್ಯದ ಜೀವನಶೈಲಿಯ ಬಗ್ಗೆ ಹಾಗೂ ಅವರ ಜೀವನದ ಕೆಲವು ಸ್ವಾರಸ್ಯಕರ ವಿಷಯಗಳ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಹೀಗೆ ಈ ಸರಣಿಯ ಪ್ರತಿಯೊಂದು ಸಂಚಿಕೆಯೂ ಕೂಡ ಮಕ್ಕಳ ಮತ್ತು ಸಾಧಕರ ನಡುವಿನ ಅಭಿಪ್ರಾಯಗಳ ನೇರ ವಿನಿಮಯದ ವೇದಿಕೆಯಾಗಿದೆ. ಪ್ರತೀ ಸಂಚಿಕೆಯ ಸಂದರ್ಶನದ ಜತೆಜತೆಯಲ್ಲಿಯೇ ಮೂಡಿಬಂದಿರುವ ಸುಂದರ ಸಚಿತ್ರ ವಿವರಣೆಗಳು ಸಂವಾದಕ್ಕೆ ಪೂರಕವಾಗಿದ್ದು, ನೋಡುಗರಿಗೆ ಒಂದು ರೀತಿಯ ಮಧುರಾನುಭವವನ್ನು ನೀಡುತ್ತವೆ. ಅಲ್ಲದೆ, ನೋಡುಗರಲ್ಲಿರುವ ಸಂಗೀತದ ಸುಪ್ತ ಜ್ಞಾನಕ್ಕೆ ಪ್ರೇರಣೆಯನ್ನು ನೀಡಿ ಈಗಿನ ಅತಿವೇಗದ ಜೀವನಗತಿಗೆ ಒಂದು ಹೊಸ ಆಯಾಮವನ್ನು ತಂದುಕೊಡುತ್ತವೆ. ಮಧುಮಿತಾ ಭಾಸ್ಕರ್, ‘ಶ್ರೋತಾ ಹೌಸ್’ ಸ್ಥಾಪಕಿ

ಜಗತ್ತನ್ನು ಕಾಡುತ್ತಿರುವ ಅನಿಶ್ಚಯತೆಗಳು ಅಥವಾ ಸಂದಿಗ್ಧತೆಗಳು ಜೀವನದ ಗತಿಯನ್ನೇ ಬದಲಾಯಿಸಿಬಿಡುತ್ತಿವೆ. ಈ ಬದಲಾವಣೆ ಕೆಲವೊಮ್ಮೆ ನಕಾರಾತ್ಮಕವಾದರೆ ಮತ್ತೆ ಕೆಲವು ಬಾರಿ ಸಕಾರಾತ್ಮಕವೂ ಆಗಬಹುದು. ಎಷ್ಟೋ ಬಾರಿ ಅವುಗಳೇ ಹೊಸ ಹೊಸ ಸುಂದರ ಕಲ್ಪನೆಗಳನ್ನು ಹುಟ್ಟುಹಾಕುತ್ತವೆ – ನಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತವೆ. ಅದೇ ರೀತಿ, 2021ರಲ್ಲಿ ಕೋವಿಡ್ ಪ್ರಭಾವ ಉತ್ತುಂಗದಲ್ಲಿದ್ದಾಗ ಆರಂಭಗೊಂಡ ‘ಲಿಟ್ಲ್ ಖಯಾಲ್ ಯುಟ್ಯೂಬ್ ಸರಣಿ’ ಯು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಮನಸ್ಸಿನಲ್ಲಿ ಮೂಡಿದ ಒಂದು ಕಲ್ಪನೆ ಮರುಕ್ಷಣವೇ, ಮಕ್ಕಳ-ಪೋಷಕರ-ಕಲಾವಿದರ ಸಹಕಾರದೊಂದಿಗೆ ಸರಣಿ ರೂಪದಲ್ಲಿ ಸಾಕಾರವಾಗಿದೆ.

‘ಶ್ರೋತಾ ಹೌಸ್’ ವತಿಯಿಂದ ‘ಯುಟ್ಯೂಬ್’ ಮೂಲಕ ಸುಂದರವಾಗಿ ಮೂಡಿಬಂದಿರುವ ಈ ಸರಣಿಯ ವಿಶೇಷವೆಂದರೆ ಪುಟ್ಟಮಕ್ಕಳೇ ಸಂದರ್ಶಕರಾಗಿರುವುದು! ಮಕ್ಕಳೇ ಆಲೋಚನೆ ಮಾಡಿ ಸಿದ್ಧಪಡಿಸಿಕೊಂಡ ಪ್ರಶ್ನೆಗಳ ಮಾಲಿಕೆಗಳಿಗೆ ಶಾಸ್ತ್ರೀಯ ಸಂಗೀತದಲ್ಲಿ ನುರಿತ ಕಲಾವಿದರು ಮುಕ್ತವಾಗಿ ಉತ್ತರಿಸಿರುವುದು ಮತ್ತೂ ವಿಶೇಷ. ಇಂತಹ ಸಂವಾದಗಳು ಯಾವುದೇ ಉತ್ಸಾಹೀ ಪ್ರೇಕ್ಷಕರ ಕಲಿಕೆಗೆ ಸ್ಫೂರ್ತಿ ನೀಡುತ್ತದೆ. ಅತ್ಯಂತ ಸಹಜವಾದ, ಪೂರ್ವಾಗ್ರಹವಿಲ್ಲದ ಮಕ್ಕಳ ನಿಷ್ಕಪಟ, ನೇರ ಸಂಭಾಷಣೆಗಳು ಭಾರತೀಯ ಶಾಸ್ತ್ರೀಯ ಸಂಗೀತದ ಅಸಂಖ್ಯಾತ ವಿಷಯಗಳ ಬಗ್ಗೆ ತಿಳುವಳಿಕೆ ನೀಡುತ್ತವೆ.

ಇದನ್ನೂ ಓದಿ : Gangubai Hangal‘s Death Anniversary : ‘ಗಂಗವ್ವ’ನೆಂಬ ರಾಗದೊಂದಿಗೆ ಮುಂದುವರೆದ ‘ಅವಳ’ ಆಲಾಪ

‘ಲಿಟ್ಲ್ ಖಯಾಲ್ ಯುಟ್ಯೂಬ್ ಸರಣಿ’ ಸಂಗೀತದ ವಿದ್ಯಾರ್ಥಿಗಳಿಗೆ ನುರಿತ ಕಲಾವಿದರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಒಂದು ವೇದಿಕೆಯಾದರೆ, ಅದೇ ವೇಳೆ ಆ ನುರಿತ ಕಲಾವಿದರಿಗೂ ಕೂಡ ಇಂದಿನ ಪೀಳಿಗೆಯ ಮಕ್ಕಳೊಡನೆ ಒಡನಾಡಿ ಸಂಗೀತ ಕ್ಷೇತ್ರದಲ್ಲಿನ ಈಗಿನ ಸಮಸ್ಯೆಗಳು, ಸಾಧಕಬಾಧಕಗಳ ಬಗ್ಗೆ ಅವಲೋಕನ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ.

ಈ ಸಂವಾದವನ್ನು ವೀಕ್ಷಿಸಿದ ಅನೇಕ ಮಕ್ಕಳು ಸ್ಫೂರ್ತಿ ಪಡೆದು, ಸಂಗೀತ ಪಯಣವನ್ನು ಆರಂಭಿಸಿ, ಈ ಕಲಿಕೆ ಅಸಾಧ್ಯವೇನಲ್ಲ ಎಂಬ ಹುರುಪಿನಲ್ಲಿದ್ದಾರೆ. ಮಕ್ಕಳ ಈ ಅನಿಸಿಕೆ, ಶ್ರೋತಾ ಹೌಸ್‌ನ ಮೂಲ ಮೌಲ್ಯಗಳಲ್ಲಿ ಒಂದಾದ ‘ಸಂಗೀತ ಕಲಿಕೆ ಕೇವಲ ವೇದಿಕೆಯ ಮೇಲೆ ಪ್ರದರ್ಶಿಸಲು ಮಾತ್ರವೇ ಅಲ್ಲ’ ಎಂಬುದನ್ನು ಪುಷ್ಟೀಕರಿಸುತ್ತದೆ.

‘ಲಿಟ್ಲ್ ಖಯಾಲ್ ಯುಟ್ಯೂಬ್ ಸರಣಿ’ಯ ಮೊದಲ ಕಂತಿನಲ್ಲಿ ಭಾಗವಹಿಸಿದ ಕಲಾವಿದರು- ಡಾ. ರೇವತಿ ಕಾಮತ್, ಡಾ. ನಿಷದ್ ಮಾತಂಗೆ, ಸುಯೋಗ್ ಕುಂದಲ್ಕರ್, ಋತುಜಾ ಲಾಡ್, ವಿದ್ವಾನ್ ಸಿಕ್ಕಿಲ್ ಗುರುಚರಣ್, ಮೀನಲ್ ಭಾಡೆ, ಧನಂಜಯ ಹೆಗಡೆ, ಡಾ. ಚೈತನ್ಯ ಕುಂಟೆ, ಅನೂಪ್ ಜೋಷಿ, ಡಾ. ರಾಧಿಕಾ ಜೋಷಿರೇ, ಎನ್. ರವಿಕಿರಣ್, ಅನುಪಮ್ ಜೋಷಿ ಮತ್ತು ವಿದ್ವಾನ್ ಪಾಲ್ಘಾಟ್ ರಾಮಪ್ರಸಾದ್ ಮೊದಲಾದವರು.

ಮಧುಮಿತಾರ ಕನಸಿಗೆ ಸಾಥ್ ನೀಡಿರುವುದು ಅವರ ಪತಿ ಡಾ. ಕಾರ್ತಿಕ್ ರಾಮಚಂದ್ರ. ಭಾರತೀಯ ಸಂಗೀತದ ಬಗ್ಗೆ ಹೊಸ ಆಶಯಗಳನ್ನಿಟ್ಟುಕೊಂಡು ಶುರುವಾದ ಈ ‘ಸ್ಟಾರ್ಟ್ ಅಪ್’ನ ಲಿಂಕ್ ಇಲ್ಲಿದೆ  : www.shrotahouse.com

ಇದನ್ನೂ ಓದಿ : ನಾಕುತಂತಿಯ ಮಿಡಿತ: ಕ್ಯಾಸೆಟ್​ ಸುರುಳಿ ಬಿಚ್ಚಿದ ಧಾರವಾಡದ ಅಹೋರಾತ್ರಿ ಸಂಗೀತ ಸಭೆಯ ನೆನಪುಗಳ ಮೆಲುಕು

Published On - 4:18 pm, Tue, 1 March 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?