Meeting Point : ಹುಡುಗರೇ ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಳ್ಳಬೇಕೇ ಇನ್ನೂ?

Communication : ‘ಹುಡುಗಿಯರು ಮಾತನಾಡಿಸಿದ ಕೂಡಲೇ ಮುಜುಗರಪಡುವುದು ಅಥವಾ ಇಂಪ್ರೆಸ್ ಮಾಡುವುದಕ್ಕೆ ಪೆದ್ದುಪೆದ್ದಾಗಿ ಮಾತಾಡಿ ಪೆಚ್ಚಾಗುವುದು ಬಿಟ್ಟರೆ ಸಹಜವಾಗಿ ಸಂಭಾಷಣೆ ಅಸಾಧ್ಯ ಎಂಬುವಂತೆ ನಡೆದುಕೊಳ್ಳುತ್ತಾರೆ. ಇನ್ನೂ ಕೆಲವರು ಈ ಕುರಿತಂತೆ ಮತ್ತೆ Social influencerಗಳೋ ಅಥವಾ RJ ಗಳ ಅಪ್ರಬುದ್ಧ ಅನಾರೋಗ್ಯಕರ ಮಾತುಗಳನ್ನೇ ನಿಜವೆಂದು ನಂಬುತ್ತಿದ್ದಾರೆ.‘ ಮೇಘಾ ಎಲಿಗಾರ

Meeting Point : ಹುಡುಗರೇ ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಳ್ಳಬೇಕೇ ಇನ್ನೂ?
ಲೇಖಕಿ ಮೇಘನಾ ಎಲಿಗಾರ
Follow us
ಶ್ರೀದೇವಿ ಕಳಸದ
|

Updated on:Sep 13, 2021 | 8:58 PM

Meeting Point : ಮೈಸೂರಿನ ಅತ್ಯಾಚಾರ ದುರ್ಘಟನೆಯ ನಂತರ ಆ ಹುಡುಗರು ಅಲ್ಲಿಗೆ ಹೋಗಬಾರದಿತ್ತು ಅಥವಾ ಆ ಹುಡುಗಿ ಯಾಕೆ ಅಲ್ಲಿಗೆ ಹೋದಳು ಎಂಬ ಪ್ರಶ್ನೆಗಳು ಕೇಳಿಬಂದವು. ಈ ಪ್ರಶ್ನೆಗಳು ಈಗಷ್ಟೇ ಅಲ್ಲ ಇದಕ್ಕೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕವಿದೆ. ಆದರೆ ಹರೆಯಕ್ಕೆ ಬಂದ ಹುಡುಗ-ಹುಡುಗಿಯರಲ್ಲಿ ಸ್ನೇಹವಿರಬಹು, ಪ್ರೇಮವಿರಬಹುದು ಅದು ಅವರವರ ವಯೋಸಹಜ ಮನೋಸಹಜ ಬಯಕೆಗಳು. ಹಾಗೆಯೇ ಲಿಂಗಸಮಾನತೆಯಲ್ಲಿ ನೋಡಿದಾಗ ಇದಕ್ಕೆ ಮತ್ತೊಂದು ಆಯಾಮವಿದೆ. ಒಟ್ಟಾರೆಯಾಗಿ ಇಬ್ಬರು ವ್ಯಕ್ತಿಗಳ ಭೇಟಿಯನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಒಂದೆಡೆಯಾದರೆ, ಆ ಜೋಡಿಗಳ ಮೇಲೆ ಕೈ ಮಾಡುವುದು ಮತ್ತು ಪೈಶಾಚಿಕ ಕೃತ್ಯಕ್ಕಿಳಿಯುವುದು ಇನ್ನೊಂದೆಡೆ ತಾಂಡವವಾಡುತ್ತಲೇ ಇದೆ. ಇಂಥ ಕಾರಣಗಳಿಂದಾಗಿ ಇಬ್ಬರು ವ್ಯಕ್ತಿಗಳ ಸಹಜ, ಆಪ್ತಭೇಟಿಗೆ ಅವಕಾಶವಿರಲಾರದಷ್ಟು ಸಾಮಾಜಿಕ ಸ್ಥಿತಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಮೀಟಿಂಗ್ ಪಾಯಿಂಟ್​’

ಅಹಿತವಾಗಿದ್ದೆಲ್ಲ ಕ್ಷಣಮಾತ್ರದಲ್ಲಿ ಜರುಗಿಬಿಡುತ್ತದೆ. ಆದರೆ ಹಿತವಾಗಿದ್ದು? ಜೀವಸಹಜವಾದ ಈ ಹಾದಿಯಲ್ಲಿ ನಿಲ್ದಾಣಗಳನ್ನು ಕಂಡುಕೊಳ್ಳುವುದು ಜಟಿಲವೆ? ಇಂಥ ಸಂದರ್ಭದಲ್ಲಿ ನಿಮ್ಮೂರಿನ ಮೀಟಿಂಗ್ ಪಾಯಿಂಟ್​ಗಳನ್ನೊಮ್ಮೆ ಹಿಂದಿರುಗಿ ನೋಡಬಹುದಾ ಎಂದು ವಿವಿಧ ಹಿನ್ನೆಲೆ, ಆಸಕ್ತಿ, ವೃತ್ತಿ, ಪ್ರವೃತ್ತಿಗಳಲ್ಲಿ ಆಸ್ಥೆಯಿಂದ ತೊಡಗಿಕೊಂಡಿರುವವರಿಗೆ ಕೇಳಲಾಗಿ, ತಮ್ಮ ಅನುಭವ-ವಿಚಾರಗಳನ್ನು ಹಂಚಿಕೊಳ್ಳುತ್ತಲಿದ್ಧಾರೆ. ಒಳಧ್ವನಿಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಲ್ಲವೆ? ಓದುತ್ತಿರುವ ನೀವೂ ಈ ಸಂವಾದದಲ್ಲಿ ಪ್ರತಿಕ್ರಿಯಾತ್ಮಕ ಬರಹಗಳ ಮೂಲಕ ತೊಡಗಿಕೊಳ್ಳಬಹುದು; tv9kannadadigital@gmail.com

ಮೇಘಾ ಎಲಿಗಾರ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದು ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಚಲಿತ ವಿದ್ಯಮಾನಗಳನ್ನುದ್ದೇಶಿಸಿ ಆಗಾಗ ಬರೆಯುತ್ತಿರುತ್ತಾರೆ.

ಅವರ ಬರಹ ನಿಮ್ಮ ಓದಿಗೆ :

ಪ್ರತಿ ಬಾರಿ ಅತ್ಯಾಚಾರದಂತಹ ಘಟನೆಗಳು‌‌ ನಡೆದಾಗ ಮಾತ್ರವೇ ಅಪರಾಧಿಗಳನ್ನು ಗಲ್ಲಿಗೇರಿಸಿ, ಬೀದಿಯಲ್ಲಿ ನಿಂತು ಕಲ್ಲು ತೂರಿ ಸಾಯಿಸಿ ಎಂಬ ಆಕ್ರೋಶದ ಮಾತುಗಳನ್ನಾಡಿ ಸುಮ್ಮನಾಗಿಬಿಡುತ್ತೇವೆ.‌ ಮತ್ತೊಂದು ಅಂತಹದ್ದೆ ಘಟನೆ ನಡೆಯುವವರೆಗೂ ನಾವು ನಮ್ಮ‌ ಸಮಾಜದಲ್ಲಿ ಈ ರೀತಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಅವುಗಳ ಹಿಂದಿರುವ ಕಾರಣಗಳ ಕುರಿತು ಆತ್ಮಾವಲೋಕನ‌ ಮಾಡಿಕೊಳ್ಳಲು ಹೋಗುವುದೇ ಇಲ್ಲ. ಇಂತಹ ಅಪರಾಧಗಳನ್ನು ತಗ್ಗಿಸುವಲ್ಲಿ ನಾವು ಬಹಳ ಹಂತಹಂತವಾಗಿ ಕಾರಣಗಳನ್ನು ಪಟ್ಟಿ ಮಾಡುತ್ತಾ ಅವುಗಳನ್ನು ಬಗೆಹರಿಸುವ ಕುರಿತು ಯೋಚಿಸಬೇಕಾದ ಅನಿವಾರ್ಯತೆ ಇದೆ.‌

ಲೈಂಗಿಕ ವಿಷಯಗಳ ಕುರಿತು ಅನಗತ್ಯ ಮಡಿ, ನಾಚಿಕೆ ಮತ್ತು ಮುಜುಗರವನ್ನು ಹೊಂದಿರುವ ಸಮಾಜ ನಮ್ಮದು.‌ ನಮ್ಮಲ್ಲಿ ಮುಕ್ತವಾಗಿ ಲೈಂಗಿಕತೆಯ ಬಗ್ಗೆ ಮಾತುಗಳೇ ನಡೆಯುವುದಿಲ್ಲ.‌ ಸರಿಯಾದ ಶಿಕ್ಷಣವೂ ದೊರಕುವುದಿಲ್ಲ. Opposite sex ಜೊತೆಗೆ ಮಾತಾಡಬಾರದು, ಬೆರೆಯಬಾರದು, ಪ್ರೇಮಿಸಬಾರದು, ಡೇಟಿಂಗ್ ಮಾಡಬಾರದು ಎಂಬ ನೂರೆಂಟು ಕಟ್ಟಳೆಗಳನ್ನು ಹಾಕಿ ಏಕಾಏಕಿ ಮದುವೆ ಮಾಡಿದ ಕೂಡಲೇ ಮಕ್ಕಳನ್ನು ಹೆತ್ತು‌ ಕೊಡಬೇಕು ಎಂದು ಅಪೇಕ್ಷಿಸುವುದು ನಮ್ಮ ಸಮಾಜದ ದೊಡ್ಡ ಹಿಪಾಕ್ರಸಿ.

ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಹುಡುಗರು ಹುಡುಗಿಯರನ್ನ ಅಕ್ಕ ಅಣ್ಣ ಎಂದು ಸಂಬೋಧಿಸಬೇಕು ಎಂಬ ವಿಚಿತ್ರ ನಿಯಮ ಜಾರಿಯಲ್ಲಿತ್ತು.‌ ಆಕೆ ಆತನನ್ನು ಅಣ್ಣಾ ಅಂದ್ರೆ ಅವಾ ಆಕೆಯನ್ನು ಅಕ್ಕ ಅನಬೇಕಿತ್ತು. ಇದನ್ನೂ‌ ಮೀರಿ ಯಾರಾದ್ರೂ ಒಬ್ಬರ ಮೇಲೆ ಕ್ರಶ್ ಅಂತಹದ್ದೇನಾದರೂ ಹೊಂದಿದ್ದರೆ ಅವರಿಗೆ ಸಕಲ ಚಿತ್ರಹಿಂಸೆಗಳ‌ನ್ನು ನೀಡಿ ರಾಖಿ ಕಟ್ಟಿಸಲಾಗುತ್ತಿತ್ತು! ಇದೆಲ್ಲವೂ ಮಕ್ಕಳೇ ಮಾಡಿಕೊಂಡ ಬಾಲಿಶ ರೂಲ್ಸುಗಳಲ್ಲ.‌ ನಮ್ಮ ಸೀಮೆಯಲ್ಲಿಯೇ ಅತಿ Qualified ಅನಿಸಿಕೊಂಡ ಅತ್ಯುತ್ತಮ ಶಿಕ್ಷಕರು ಮುಂದೆ ನಿಂತು ನಡೆಸಿಕೊಡುತ್ತಿದ್ದ ಅಸಹ್ಯ ಪದ್ದತಿಗಳು. ಈ‌ ಎಲ್ಲಾ ರೂಲ್ಸುಗಳ ನಡುವೆಯೂ ಹದಿಹರಯದ ಪ್ರೇಮ ಸಲ್ಲಾಪಗಳು ನಡೆಯುತ್ತಿದ್ದವಾದರೂ ಈ ರೀತಿಯ Brought up ನಮ್ಮ ಮೇಲೆ ಮಾಡಿದ ಪರಿಣಾಮ‌ ಸಣ್ಣದಿರಲಿಲ್ಲ.

ನಾನು ಗಮನಿಸಿದಂತೆ ಲೈಂಗಿಕತೆಯ ಕುರಿತು ನಮ್ಮಲ್ಲಿನ ಅಜ್ಞಾನಕ್ಕೇನೂ ಕೊರತೆ ಇರಲಿಲ್ಲ.‌ ಸೆಕ್ಸ್ ಕುರಿತು ಇಲ್ಲದ ಪೂರ್ವಗ್ರಹಗಳನ್ನು ತಲೆಗೆ ತುಂಬಿದ್ದರಿಂದ ನಾವುಗಳು ಆ ಪದ ಕೇಳಿದ ಕೂಡಲೇ ನಾಚಿಕೆ ಮತ್ತು ಮುಜುಗರದ ಮುದ್ದೆಯಾಗಿರುತ್ತಿದ್ದೆವು. ಹುಡುಗಿಯರೂ ಕೂಡ ತಮ್ಮಂತೆ ಸಹ ಜೀವಿಗಳು ಎಂಬ ಸಹಜ‌‌ತೆ ಇಲ್ಲದೆ ಹೆಣ್ಮಕ್ಕಳ ಬಗ್ಗೆ ಹುಡುಗರು, ಹುಡುಗಿಯರ ಬಗ್ಗೆ ಹುಡುಗರ ವರ್ಣರಂಜಿತ ಕಲ್ಪನೆಯನ್ನು ಕಟ್ಟಿಕೊಂಡು ಅವರನ್ನು ವಿಶೇಷವಾಗಿ ಪರಿಗಣಿಸುವುದು ಎಲ್ಲವನ್ನೂ ನೆನಪಿಸಿಕೊಂಡರೆ ನಮ್ಮ ಶಿಕ್ಷಣ ಕೇವಲ ಭ್ರಮೆಯಾಗಿತ್ತೇ ಅಂತಲೂ‌ ಅನಿಸುತ್ತದೆ. ಹೈಸ್ಕೂಲಿನ‌ ಮಾತುಬಿಡಿ, ನಮ್ಮ‌‌ ಕ್ಲಾಸಿನ ಹಲವು ಹುಡುಗರು ದೊಡ್ಡ ದೊಡ್ಡ ಕಾಲೇಜುಗಳಿಗೆ ಹೋಗಿ ದೊಡ್ಡ ಪದವಿಗಳನ್ನು ಗಿಟ್ಟಿಸಿ ಈಗ ಅತ್ಯುತ್ತಮ ಹುದ್ದೆಗಳಲ್ಲಿದ್ದರೂ ಹುಡುಗಿಯರೊಂದಿಗೆ ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತು ಸಾಕಷ್ಟು ಅಜ್ಞಾನವನ್ನೇ ಹೊಂದಿದ್ದಾರೆ.‌

ಹುಡುಗಿಯರು ಮಾತನಾಡಿಸಿದ ಕೂಡಲೇ ಮುಜುಗರಪಡುವುದು ಅಥವಾ ಇಂಪ್ರೆಸ್ ಮಾಡುವುದಕ್ಕೆ ಪೆದ್ದುಪೆದ್ದಾಗಿ ಮಾತಾಡಿ ಪೆಚ್ಚಾಗುವುದು ಬಿಟ್ಟರೆ ಸಹಜವಾಗಿ ಸಂಭಾಷಣೆ ಅಸಾಧ್ಯ ಎಂಬುವಂತೆ ನಡೆದುಕೊಳ್ಳುತ್ತಾರೆ. ಇನ್ನೂ ಕೆಲವರು ಈ ಕುರಿತಂತೆ ಮತ್ತೆ Social influencerಗಳೋ ಅಥವಾ RJ ಗಳ ಅಪ್ರಬುದ್ಧ ಅನಾರೋಗ್ಯಕರ ಮಾತುಗಳನ್ನೇ ನಿಜವೆಂದು ನಂಬುತ್ತಿದ್ದಾರೆ. ಸಕ್ತ್ ಲೌಂಡಾ ಎಂಬ ಪರಿಕಲ್ಪನೆ ಹುಡುಗರಲ್ಲಿ ಕೂಲ್ ಎನಿಸಿಕೊಂಡಿದ್ದು ತಾವು Hard to get ಎಂಬಂತೆ ಬಿಂಬಿಸಿಕೊಳ್ಳುತ್ತಾ ಮನಸಿನ ಮಾತು ಹೇಳದೆ ಒದ್ದಾಡುತ್ತಿದ್ದಾರೆ.‌ ಭಾವನೆಗಳನ್ನು Express ಮಾಡುವುದು ತಪ್ಪು ಅಥವಾ ಅದು ತಮ್ಮ ಘನತೆಗೆ ಕುಂದು ತರುತ್ತದೆ ಎಂಬೆಲ್ಲಾ ಹುಚ್ಚು ಭ್ರಮೆಗಳನ್ನು ಕಟ್ಟಿಕೊಂಡು ಅನಾವಶ್ಯಕವಾಗಿ ಒದ್ದಾಡುತ್ತಿದ್ದಾರೆ.

ಈ ಟ್ರೆಂಡ್ ಹುಡುಗರಲ್ಲಷ್ಟೇ ಅಲ್ಲ, ಹುಡುಗಿಯರಲ್ಲೂ ಬೇರೆ ರೀತಿಯಾಗಿಯೇ ಬೇರೂರಿದೆ. ತಾವೆಲ್ಲರೂ ರಾಜಕುಮಾರಿಯರು, ಹುಡುಗಿಯರು ಮೊದಲಿಗೆ ಪ್ರೇಮನಿವೇದನೆ ಮಾಡಬಾರದು. ಹುಡುಗರೇ ಅವರ ಹಿಂದೆ ಸುತ್ತಬೇಕು, ಮಂಡಿಯೂರಿ ಪ್ರಪೋಸ್ ಮಾಡಬೇಕು ಎಂಬ ಫೇರಿಟೇಲ್ ಕಲ್ಪನೆಗಳನ್ನು ಕಟ್ಟಿಕೊಂಡಿದ್ದಾರೆ. ಇದು ಚೆನ್ನಾಗಿ ಓದಿಕೊಂಡ ಮಧ್ಯಮ ವರ್ಗದ ಹುಡುಗರ ಪಾಡೇ ಹೀಗಾದರೆ ಅನಕ್ಷರಸ್ಥ ಹಳ್ಳಿಗಾಡಿನ ಹುಡುಗರ ಮನಸ್ಥಿತಿಯ ಬಗ್ಗೆ ಮತ್ತಷ್ಟು ಆತಂಕವಾಗುತ್ತದೆ.

ಪ್ರೇಮ, ಸಲ್ಲಾಪ, ಪ್ರಣಯವನ್ನು ಯಾವುದೇ ಕ್ಲಾಸಿನಲ್ಲಾಗಲಿ ಯಾವುದೇ ಟಾಕ್ ಶೋಗಳಲ್ಲಿ‌ ಕಲಿಸಿಕೊಡಲಾಗುವುದಿಲ್ಲ. ಪ್ರತಿಯೊಂದರಲ್ಲಿಯೂ ಪಾಶ್ಚಾತ್ಯ ಸಂಸ್ಕ್ರತಿಯನ್ನು ಅಳವಡಿಸಿಕೊಂಡ ನಾವು ಮುಕ್ತ ಲೈಂಗಿಕತೆ, ಆರೋಗ್ಯಕರ ಲೈಂಗಿಕತೆಯ ಬಗ್ಗೆ ಅದೇ ಮಡಿಯನ್ನೇ ಉಳಿಸಿಕೊಂಡಿದ್ದೇವೆ. ಕನಿಷ್ಟ ಹುಡುಗ ಹುಡುಗಿಯರು ಪರಸ್ಪರ ಮಾತಾಡುವುದಕ್ಕೆ, ಮುಕ್ತವಾಗಿ ಬೆರೆಯುವುದಕ್ಕೂ ಅವಕಾಶ ಮಾಡಿಕೊಡದಿರುವುದು, ಪ್ರೈವಸಿಗೆ ಗೌರವ ಕೊಡದೇ ಇರುವುದು ಪ್ರೈವಸಿ ಹುಡುಕಿಕೊಂಡು ಅಪಾಯಕಾರಿ ಜಾಗಗಳಿಗೆ ಹೋಗುವಂತೆ ಮಾಡುತ್ತಿದ್ದೇವೆ. ನಾಲ್ಕಾರು ಮಾತು, ಒಂದೆರಡು ಗಿಫ್ಟ್, ಒಂದಿಷ್ಟು ಚಾಟಿಂಗ್, ಅಬ್ಬಬ್ಬಾ ಎಂದರೆ ಸೋಶಿಯಲ್ ಮಿಡಿಯಾ Recognition ಗೆ ಮುಗಿದು ಹೋಗಬೇಕಾದ ಸಂಬಂಧಗಳನ್ನು ಸಮಾಜ ತನ್ನ ಹಳದಿ ಭೂತಗನ್ನಡಿಯನ್ನು ಹಿಡಿದು ಮಹಾಪರಾಧವನ್ನಾಗಿ ಬಿಂಬಿಸುವುದು, ಅತ್ಯಾಚಾರದಂತಹ ನಿಜವಾದ ಮಹಾಪರಾಧಗಳಿಗೆ ಇಂತಹ ವಿಚಾರಗಳನ್ನು ಇಟ್ಟುಕೊಂಡು ಸಮರ್ಥಿಸುವುದು ನಮ್ಮ ಸಮಾಜದ ಒಡಕನ್ನು, ಹಿಪಾಕ್ರಸಿಯನ್ನು ಎತ್ತಿ ತೋರಿಸುತ್ತದೆ.

(ಈ ಸರಣಿ ಇಲ್ಲಿಗೆ ಮುಕ್ತಾಯಗೊಳ್ಳುತ್ತದೆ. ಪ್ರತಿಕ್ರಿಯಾತ್ಮಕ ಬರಹಗಳಿಗೆ ಸ್ವಾಗತ)

ಇದನ್ನೂ ಓದಿ : Meeting Point : ಒಂದೆಡೆ ಹೆಣ್ಣೂ ಕೂಡ ಗಂಡಿನಂತೆ ಯೋಚಿಸುವ ಮನಸ್ಥಿತಿಯನ್ನು ತನಗರಿವಿಲ್ಲದೆ ರೂಢಿಸಿಕೊಂಡಿದ್ದಾಳೆ

Published On - 2:20 pm, Mon, 13 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ