Literature: ನೆರೆನಾಡ ನುಡಿಯೊಳಗಾಡಿ; ಬೆಳೆದ ಮೇಲೂ ಆ ಭಯದ ಉಂಡೆ ತಿರುಗುವುದು ನಿಲ್ಲಲಿಲ್ಲ

Indraneela Story by A. Vennila : ಕ್ಷಣದಲ್ಲಿ ಕಣ್ಣ ಬದಲಾಗಿ ಬಿಡುತ್ತಿದ್ದ. ಒಬ್ಬರನ್ನೊಬ್ಬರು ಆಕರ್ಷಿಸಲು ಯುದ್ಧ. ಮೊದಮೊದಲು ಕೂಡುವ ರಸವಾದವನ್ನು ರುಚಿಸಲು ಯುದ್ಧ. ಇಬ್ಬರೂ ಸಿದ್ದವಾಗಿಯೇ ಇರುತ್ತಿದ್ದೆವು. ಆಕರ್ಷಿಸುವುದಕ್ಕೆ ದಾರಿಯಾಗಿ ದೇಹವಿತ್ತು.

Literature: ನೆರೆನಾಡ ನುಡಿಯೊಳಗಾಡಿ; ಬೆಳೆದ ಮೇಲೂ ಆ ಭಯದ ಉಂಡೆ ತಿರುಗುವುದು ನಿಲ್ಲಲಿಲ್ಲ
ಲೇಖಕಿ ಅ. ವೆನ್ನಿಲಾ, ಅನುವಾದಕ ಕೆ. ನಲ್ಲತಂಬಿ
Follow us
ಶ್ರೀದೇವಿ ಕಳಸದ
|

Updated on: Mar 18, 2022 | 12:01 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ಹಟದಿಂದ ಗಮನಿಸುವುದರಲ್ಲಿ ತೊಡಗಿಕೊಂಡೆ. ನರದ ತುಡಿತದಿಂದ ಎದೆಯ ಬಡಿತದವರೆಗೆ ನಿಧಾನವಾಗಿ ಗಮನಿಸಿದೆ. ಯಾವ ಅಂಗಾಂಗದಲ್ಲೂ ನಿರ್ಧಿಷ್ಟವಾದ ನೋವಿಲ್ಲ. ಭಾವನೆಯ ಚೆಂಡು ಮಾತ್ರ ಹೊಟ್ಟೆಯ ಕೆಳಗೆ ಉರುಳುವಂತೆ ಕಂಡಿತು. ಹೊಟ್ಟೆಯೊಳಗೆ ಭಯದ ಚೆಂಡು ತಿರುಗುತ್ತಿತ್ತು. ಚಿಕ್ಕವಯಸ್ಸಿನಲ್ಲಿ ಸೈಕಲ್ ಕಲಿಯುವಾಗ, ಹಿಂದೆ ಓಡಿ ಬಂದ ಸುಂದರಿ ಎಡವಿ ಕೆಳಗೆ ಬಿದ್ದುಬಿಟ್ಟಳು. ಅವಳಿಗೆ ತೋಳಿನ ಪಟ್ಟಿಯ ಎಲುಬು ಮುರಿದುಹೋಯಿತು. ನೋವಿನಿಂದ ಅವಳು ಕಿರುಚಿದಾಗ ಬೀದಿಯೇ ಸೇರಿ ಹೋಯಿತು. ಸೈಕಲ್ಲನ್ನು ಹಾಗೆಯೇ ಬಿಟ್ಟು ಭಯದಿಂದ ಷಣ್ಮುಖ ದೊಡ್ಡಪ್ಪನ ಮನೆಯ ಒಣಹುಲ್ಲಿನ ರಾಶಿಯ ಹಿಂದೆ ಅವಿತಿಟ್ಟುಕೊಂಡೆ. ಅಮ್ಮ ಹೊಡೆಯುತ್ತಾಳೆಂಬ ಭಯವಿತ್ತು. ಸುಂದರಿಯ ಅಪ್ಪ, ಅಮ್ಮ ಹೊಡೆಯಬಹುದೆಂಬ ಭಯಕ್ಕೆ, ಎದೆಯ ಗುಳಿಗೂ ಹೊಟ್ಟೆಗೂ ನಡುವೆ ಏನೋ ಉರುಳುತ್ತಿರುವಂತನ್ನಿಸುತ್ತಿತ್ತು. ಉಸಿರಾಡಲು ಕಷ್ಟವಾಯಿತು. ಆ ಚೆಂಡು ಒಂದು ಗಳಿಗೆಯಲ್ಲಿ ಹೇಗೆ ಹೊಟ್ಟೆಯೊಳಗೆ ಬಂದು ಬಿಡುತ್ತದೆ? ಬೆಳೆದ ಮೇಲೂ ಆ ಭಯದ ಉಂಡೆ ತಿರುಗುವುದು ನಿಲ್ಲಲಿಲ್ಲ.

ಕಥೆ : ಇಂದ್ರನೀಲ | ತಮಿಳು : ಅ. ವೆನ್ನಿಲಾ | ಕನ್ನಡಕ್ಕೆ : ಕೆ. ನಲ್ಲತಂಬಿ

(ಭಾಗ 6)

ಈಗ ಉರುಳುವುದು ಭಯದ ಉಂಡೆಯಲ್ಲ. ಭಯದ ಉಂಡೆ ಹೊಟ್ಟೆಗೂ ಎದೆಗೂ ಮಧ್ಯೆ ತಿರುಗುತ್ತದೆ. ಇದು ಹೊಟ್ಟೆಯ ಕೆಳಗೂ ಸುತ್ತುತ್ತಿದೆ. ಹೊಟ್ಟೆಯಲ್ಲಿ ಸಮಸ್ಯೆ ಏನಾದರೂ ಇರಬಹುದೇ? ಇರಲಾರದು. ಎರಡು ನಿಮಿಷಗಳಿಗಿಂತ ಹೆಚ್ಚಾಗಿ, ಶೌಚಾಲಯದಲ್ಲಿ ಯಾವಾಗಲೂ ಇರಲಾಗುವುದಿಲ್ಲ. ದೇಹವನ್ನು ಪರಾಂಬರಿಸುವುದಿಲ್ಲ ಎಂದರೂ ಅದು ಎಂದೂ ತೊಂದರೆ ಕೊಟ್ಟಿರಲಿಲ್ಲ. ಮುಟ್ಟಿನ ದಿನಗಳಲ್ಲೂ ಸಹ ಹೊಟ್ಟೆನೋವು ಬರುತ್ತಿರಲಿಲ್ಲ. ಕಿಬ್ಬೊಟ್ಟೆ ಮಾತ್ರ ಸಣ್ಣದಾಗಿ ಕಿವುಚುವಂತೆ ಇರುವುದು, ಅಷ್ಟೇ. ಹೊಟ್ಟೆಗೂ ಕೆಳಗೆ ಅವಸ್ಥೆಯ ಕಿರಣಗಳು ಬೆಳೆದವು. ಗಮನಿಸುವುದನ್ನು ತೀವ್ರಗೊಳಿಸಿ, ಇನ್ನೂ ಹಿಂಬಾಲಿಸಿದಾಗ ಅವಸ್ಥೆಯ ಗಂಟು ಕೆಳಗೆ ಇಳಿಯಿತು. ಹುಡುಕಿ ಹೊರಟ ಜಾಗವನ್ನು ತಕ್ಷಣ ಕಂಡುಕೊಂಡೆ. ಹೃದಯದಿಂದ ದೇಹ ಪೂರ್ತಿ ರಕ್ತ ಹರಡುವಂತೆ, ಈ ಗಂಟಿನಿಂದಲೇ ಭಾವನೆಯ ಚೆಂಡು ಹರಡುತ್ತಿತ್ತು.

ಊಬು ದೇಹವನ್ನು ಚುಚ್ಚುತ್ತಿರುವ ಸ್ಥಳವನ್ನು ತಿಳಿದುಕೊಂಡ ಕೂಡಲೇ ಗಾಬರಿಯಾಗಿಯೇ ಇದೆ. ಮೂತ್ರವನ್ನೂ, ಮಲವನ್ನೂ ಹೊರಗೆ ಹಾಕಲೂ ಆಗದೆ ಅಡಗಿಸಿಡುವ ಅವಸ್ಥೆಯಂತೆ ಇಲ್ಲ. ತೆರದುಕೊಳ್ಳುವುದಕ್ಕಾಗಿ ಕಾಯುತ್ತಿರುವ ಚಿಲುಮೆಯ ಹಪಾಹಪಿಯಾಗಿತ್ತು. ಹೊಟ್ಟೆಯ ಹಸಿವಿನಂತೆ ದೇಹದ ಹಸಿವೂ ಒಳಗಿನಿಂದ ಎಚ್ಚರಿಸುತ್ತಿದೆಯೇ? ಒಂದಾಗಿ ಯಾವಾಗ ಇದ್ದೆವು? ನಾನು ಲೆಕ್ಕವನ್ನೂ ಹಿಂದಕ್ಕೆ ನೂಕುತ್ತಾ ಹೋದರೇ, ಹತ್ತು ದಿನಗಳ ಹಿಂದೆ ನಿಂತಿತು.

ಭಾಗ 4 : Literature: ನೆರೆನಾಡ ನುಡಿಯೊಳಗಾಡಿ; ನನ್ನ ದೇಹವಲ್ಲವೇ, ನಾನು ನೋಡಿದರೆ ಏನು ತಪ್ಪು?

ಮಕ್ಕಳು ಬೆಳೆದ ಮೇಲೆ, ತಿಂಗಳಿಗೆ ಒಮ್ಮೆಯೋ, ಎರಡು ತಿಂಗಳಿಗೆ ಒಮ್ಮೆಯೋ ಅವಕಾಶ ದೊರಕುತ್ತದೆ. ಐದು ನಿಮಿಷದಲ್ಲಿ ಎಲ್ಲವೂ ಮುಗಿದು ಹೋಗುತ್ತದೆ. ಕಣ್ಣ ಎದ್ದು ಹೋಗುತ್ತಾನೆ. ದೇಹ ಸಿದ್ದವಾಗುವುದರೊಳಗೆ ಮುಗಿದು ಹೋಗಿರುತ್ತಿತ್ತು. ಕಣ್ಣನಿಗೆ ಚೆನ್ನಾಗಿ ನಿದ್ದೆ ಬರುತ್ತದೆ. ನನಗೆ ನಿದ್ದೆ ಹಾಳಾಗುತ್ತದೆ. ದೇಹದ ತವಕವನ್ನು ಮರೆಮಾಚಲು, ಬೇರೆ ಕೆಲಸಗಳನ್ನು ಮಾಡುತ್ತೇನೆ. ಸಮಸ್ಥಿತಿಗೆ ಬರಲು ಅರ್ಧ ಗಂಟೆಯಾಗುತ್ತದೆ. ಇಲ್ಲದೆ ಇದ್ದರೂ ಪರವಾಗಿರಲಿಲ್ಲ. ಆತುರದಿಂದ ಅನ್ನವನ್ನು ಬಾಚಿ ನುಂಗಿ ಹೋಗುವುದು ಯಾಕೆ? ನಿರಾಕರಿಸಲೂ ಆಗುವುದಿಲ್ಲ. ಮುಖ ಸಣ್ಣದಾಗುತ್ತದೆ. ದಿನವೆಲ್ಲಾ ದಪ್ಪ ಚುಚ್ಚು ಮಾತುಗಳು ಬಂದು ಬೀಳುತ್ತವೆ. ಐದು ನಿಮಿಷ ಸಹಿಸಿಕೊಳ್ಳುವುದು ಹೆಂಡತಿಯಾಗಿರುವುದರ ಕರ್ತವ್ಯವಾಗುತ್ತದೆ.

ಮದುವೆಯಾದ ಹೊಸದರಲ್ಲಿ ಬೇರೆ ರೀತಿಯಾಗಿತ್ತು. ನಾಲ್ಕು ಗೋಡೆಗಳ ಮಧ್ಯೆ ದೊರಕಿದ ಸ್ವಾತಂತ್ರ್ಯ, ಒಬ್ಬರ ದೇಹವನ್ನು, ಒಬ್ಬರು ಅರಿತುಕೊಳ್ಳುವ ಹುರುಪನ್ನು ನೀಡಿತು. ಹೊತ್ತು, ಗೊತ್ತು ಏನೂ ಇರಲಿಲ್ಲ. ಲೆಕ್ಕವಂತೂ ಇರಲೇ ಇಲ್ಲ. ಮಾತನಾಡುತ್ತಿರುವಾಗಲೇ ಕ್ಷಣದಲ್ಲಿ ಕಣ್ಣ ಬದಲಾಗಿ ಬಿಡುತ್ತಿದ್ದ. ಒಬ್ಬರನ್ನು ಒಬ್ಬರು ಆಕರ್ಷಿಸಲು ಯುದ್ಧ. ಮೊದಮೊದಲು ಕೂಡುವ ರಸವಾದವನ್ನು ರುಚಿಸಲು ಯುದ್ಧ. ಇಬ್ಬರೂ ಸಿದ್ದವಾಗಿಯೇ ಇರುತ್ತಿದ್ದೆವು. ಆಕರ್ಷಿಸುವುದಕ್ಕೆ ದಾರಿಯಾಗಿ ದೇಹವಿತ್ತು. ದೇಹದ ಆಕರ್ಷಣೆಯನ್ನು ನಾವು ದಾಟುವುದರೊಳಗೆ ಯಾಳಿನಿ ಹುಟ್ಟಿಬಿಟ್ಟಳು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 5 : Literature: ನೆರೆನಾಡ ನುಡಿಯೊಳಗಾಡಿ; ಯಾರ ಬಳಿಯೂ ಇಲ್ಲದ್ದೇ? ನೋಡಿದರೆ ನೋಡಿಕೊಂಡು ಹೋಗಲಿ

ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi