Pt. Shivkumar Sharma Death : ಸಂತೂರ್ ಮಾಂತ್ರಿಕ ಶಿವಕುಮಾರ ಶರ್ಮಾ ನಿಧನ

| Updated By: ಶ್ರೀದೇವಿ ಕಳಸದ

Updated on: May 10, 2022 | 1:28 PM

Santoor Maestro : ಖ್ಯಾತ ಸಂತೂರ್ ವಾದಕ ಶಿವಕುಮಾರ ಶರ್ಮಾ (84) ಮುಂಬೈನಲ್ಲಿ ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.  ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಆರು ತಿಂಗಳಿಂದ  ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು.

Pt. Shivkumar Sharma Death : ಸಂತೂರ್ ಮಾಂತ್ರಿಕ ಶಿವಕುಮಾರ ಶರ್ಮಾ ನಿಧನ
ಪಂ. ಶಿವಕುಮಾರ್ ಶರ್ಮಾ
Follow us on

Pt. Shivkumar Sharma : ಖ್ಯಾತ ಸಂತೂರ್ ವಾದಕ ಶಿವಕುಮಾರ ಶರ್ಮಾ (84) ಮುಂಬೈನಲ್ಲಿ ಇಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.  ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಆರು ತಿಂಗಳಿಂದ  ಡಯಾಲಿಸಿಸ್ ಚಿಕಿತ್ಸೆಗೆ ಒಳಗಾಗಿದ್ದರು. ಜಮ್ಮು ಕಾಶ್ಮೀರ ಸಂತೂರ್ ವಾದನದ ಮೂಲಕ ಇಡೀ ಪ್ರಪಂಚದ ಸಂಗೀತರಸಿಕರ ಮನಗೆದ್ದಿದ್ದ ಶಿವಕುಮಾರ್ (Santoor Maestro) 1986ರ ಜನವರಿ 13ರಂದು ಜಮ್ಮುವಿನಲ್ಲಿ ಜನಿಸಿದ್ದರು. 1943ರಲ್ಲಿ ಇವರ ತಂದೆ ಪಂ. ಉಮಾ ದತ್ ಶರ್ಮಾ ಅವರ ಬಳಿ ಗಾಯನ ಮತ್ತು ತಬಲಾ ಕಲಿಯುವಿಕೆಯ ಮೂಲಕ ಸಂಗೀತ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ನಂತರ 1950ರಲ್ಲಿ ತಂದೆಯ ಬಳಿಯೇ ಸಂತೂರ್​ ಕಲಿಕೆಯಲ್ಲೇ ಮುಂದುವರೆಯದಾಗಿ ನಿರ್ಧರಿಸಿದರು. 1955ರಲ್ಲಿ ಸ್ವಾಮಿ ಹರಿದಾಸ ಸಮ್ಮೇಳನದಲ್ಲಿ ಭಾಗವಹಿಸಿ, ಮೊದಲ ಸಲ ಸಂತೂರ್ ವಾದನ ಕಛೇರಿ ನೀಡಿದರು. ಆ ತನಕ ಜಾನಪದ ವಾದ್ಯವಾಗಿದ್ದ ಸಂತೂರ್ ಅನ್ನು ಶಾಸ್ತ್ರೀಯ ಸಂಗೀತದ ಮುಖ್ಯವಾಹಿನಿಗೆ ತರುವುದು ಹೇಗೆ ಎಂದೆಲ್ಲ ಆಲೋಚಿಸಿ, ಪ್ರಯೋಗಿಸುವಲ್ಲಿ ದಶಕಗಳ ಕಾಲ ತೊಡಗಿಕೊಂಡು ಅದರಲ್ಲಿ ಯಶ ಸಾಧಿಸಿದರು.

ಸಂಗೀತ ನಿರ್ದೇಶಕ ವಸಂತ್ ದೇಶಯಿ, ವಣಕುದುರೆ ಶಾಂತಾರಾಮ ಅವರ ‘ಝನಕ್ ಝನಕ್ ಪಾಯಲ್ ಬಾಜೇ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದರು. ಇವರ ಪ್ರಥಮ ಧ್ವನಿ ಮುದ್ರಿಕೆ ಹೊಮ್ಮಿದ್ದು ಎಚ್.ಎಮ್.ವಿ ಮೂಲಕ. ಹಿರಿಯ ಬಾನ್ಸುರಿವಾದಕ ಪಂ. ಹರಿಪ್ರಸಾದ್ ಚೌರಾಸಿಯಾ, ಪಂ. ಬ್ರಿಜ್ ಭೂಷಣ್ ಕಾಬ್ರಾ ಜೊತೆಗೂಡಿ ‘ಕಾಲ್ ಅಫ್ ದಿ ವ್ಯಾಲಿ’ ಧ್ವನಿಮುದ್ರಿಕೆ ಸಂಗೀತಾಸಕ್ತರನ್ನು ಸೂರೆಗೊಂಡು ಮಾರಾಟದ ದಾಖಲೆಯನ್ನೂ ನಿರ್ಮಿಸಿತು. 1980ರಲ್ಲಿ ಪಂ. ಹರಿಪ್ರಸಾದ್ ಚೌರಾಸಿಯ ಮತ್ತು ಶಿವ-ಹರಿ ಅವರೊಂದಿಗೆ ಯಶ್ ಛೋಪ್ರಾ ಅವರ ‘ಸಿಲ್ಸಿಲೇ’ ಚಿತ್ರಕ್ಕೆ ಸಂಗೀತ ನಿರ್ದೇಶನದಲ್ಲಿ ತೊಡಗಿಕೊಂಡರು. ಇವರಿಎ ಕೇಂದ್ರ ಸಂಗೀತ ಕಲಾ ಅಕಾಡೆಮಿ ಪ್ರಶಸ್ತಿ, ಅಮೆರಿಕೆಯ ಅಮೀರ್ ಖುಸ್ರೋ ಸೊಸೈಟಿಯ ‘ನಝ್ರ್ ಎ ಖುಸ್ರೋ’ ಪ್ರಶಸ್ತಿ, ಮಹಾರಾಷ್ಟ್ರ ಗೌರವ್ ಪುರಸ್ಕಾರ, ಶತತಂತ್ರಿ ಶಿರೋಮಣಿ ಬಿರುದು(ಜೋಧಪುರ), ಪದ್ಮಶ್ರೀ ಪ್ರಶಸ್ತಿ, ಜಮ್ಮು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ, ಉಸ್ತಾದ ಹಾಫೀಜ್ ಅಲಿ ಖಾನ್ ಪ್ರಶಸ್ತಿ, ಪದ್ಮವಿಭೂಷಣ ಪ್ರಶಸ್ತಿಗಳು ಲಭಿಸಿದ್ದವು.

ಇವರು ಪತ್ನಿ ಮನೋರಮಾ ಶರ್ಮಾ ಮತ್ತು ಪುತ್ರ ರಾಹುಲ್ ಶರ್ಮಾ ಅವರನ್ನು ಅಗಲಿದ್ಧಾರೆ. ಸಂಗೀತ ಕ್ಷೇತ್ರದ ಅನೇಕ ಹಿರಿಯರು ಮತ್ತು ಶ್ರೋತೃಗಳು ಇವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ : Lakshmibai Enagi Death : ಲಕ್ಷ್ಮೀಬಾಯಿ ಏಣಗಿಯವರ ‘ಕುಂಕುಮ’ ಕೀರ್ತಿಯ ಸಾಹಸಗಾಥೆ

ಇದನ್ನೂ ಓದಿ : Sharanappa Kanchyani: ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ ವಿಧಿವಶ