Sharanappa Kanchyani: ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ ವಿಧಿವಶ
ಮಕ್ಕಳ ಸಾಹಿತಿ ಎಂದೇ ಪರಿಚಿತರಾದ ಶರಣಪ್ಪ ವಿಧಿವಶರಾಗಿದ್ದಾರೆ. ನಗರದ ಬಿಎಲ್ಡಿಇ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಇಂದು ಮಧ್ಯಾಹ್ನ ಮೂರು ಗಂಟೆಗೆ ದೇಹದಾನ ಮಾಡಲಿದ್ದಾರೆ.

ವಿಜಯಪುರ: ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿ(92) ವಿಧಿವಶರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಮಕ್ಕಳ ಸಾಹಿತ್ಯ, ಕವನ, ಮಕ್ಕಳ ಕಥೆ, ಶಿಶು ಪ್ರಾಸ, ಖಂಡ ಕಾವ್ಯ, ಚರಿತ್ರೆ ಸೇರಿದಂತೆ ಇತರೆ ವಿಷಯಗಳ ಸಾಹಿತ್ಯ ಕೃಷಿ ಮಾಡಿದ್ದ ಮಕ್ಕಳ ಸಾಹಿತಿ ಶರಣಪ್ಪ, ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದರು. ಶರಣಪ್ಪ ಕಾಂಚ್ಯಾಣಿ ಆಶಯದಂತೆ ಬಿಎಲ್ಡಿಇ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲಿದ್ದಾರೆ.
ವಿಜಯಪುರ ಜಿಲ್ಲೆ ಮುದ್ದೆಬಿಹಾಳದ ಸರೂರಿನವರಾದ ಹಿರಿಯ ಸಾಹಿತಿ ಶರಣಪ್ಪ ಕಳೆದ ಐವತ್ತು ವರ್ಷಗಳಿಂದ ಸಾಹಿತ್ಯ ಸೇವೆ ಮಾಡಿಕೊಂಡು ಬಂದಿದ್ದಾರೆ. ಶಿಕ್ಷಣ ಮುಗಿಸಿ ಶಿಕ್ಷಕ ವೃತ್ತಿ ಆರಂಭಿಸಿ ವಿಜಯಪುರಕ್ಕೆ ಬಂದು ತೋಚಿದ್ದನ್ನು ಬರೆಯುತ್ತ ಮೊದಲು ಕನ್ನಡ ಕವಿಕೀರ್ತಿ, ಬಸವಪ್ರದೀಪ ಎನ್ನುವ ಖಂಡಕಾವ್ಯ ಬರೆದಿದ್ದರು ಆನಂತರ ಮಕ್ಕಳ ಸಾಹಿತ್ಯದ ಕಡೆಗೆ ಹೊರಳಿದ್ದರು ಈ ಬಗ್ಗೆ ಸ್ವತಃ ಸಾಹಿತಿ ಶರಣಪ್ಪ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇವರು ಮಕ್ಕಳ ಸಾಹಿತಿ ಎಂದೇ ಪರಿಚಿತರು. ನಗರದ ಬಿಎಲ್ಡಿಇ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಇಂದು ಮಧ್ಯಾಹ್ನ ಮೂರು ಗಂಟೆಗೆ ದೇಹದಾನ ಮಾಡಲಿದ್ದಾರೆ.
ಇದನ್ನೂ ಓದಿ: ನನಗೆ ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ ಆಸಕ್ತಿ ಮೂಡಿಸಿದ್ದು ಸಂಗೀತ; ಇಂಟರೆಸ್ಟಿಂಗ್ ವಿಚಾರ ತಿಳಿಸಿದ ಸಚಿವ ಎಸ್.ಜೈಶಂಕರ್
ಬೇಲೂರು ಚನ್ನಕೇಶವ ಸ್ವಾಮಿ ತೇರು: ಸಂಪ್ರದಾಯದಂತೆ ಕುರಾನ್ ಪಠಣಕ್ಕೆ ಅವಕಾಶ ಕೊಟ್ಟ ಸರ್ಕಾರ