Chennaveera Kanavi Death: ‘ಶಾಂತಿಪ್ರಿಯರೆ, ಸಂಭಾವಿತರೆ, ಸಹಿಷ್ಣುತಾವಾದಿಗಳೆ; ಹಾದಿಬೀದಿಗಳೆ ಹೇಳುತ್ತಿವೆ ಕಥೆಯ’

Tribute To Chennaveera Kanavi : ‘ಕೆಡಕನ್ನು ಎದುರಿಸುವ ಆತ್ಮಸ್ಥೈರ್ಯವೇ ಈಗ ಮನುಷ್ಯನಿಗೆ ಉಳಿದಿರುವ ದಾರಿ. ಇಂಥ ಆತ್ಮಸ್ಥೈರ್ಯದಿಂದಲೇ ಜೀವನದ ಜಂಜಾಟಗಳನ್ನು ಗೆಲ್ಲಬೇಕೆಂದು ಕಾವ್ಯ ನಂಬಿದೆ. ಇಂಥ ನಂಬಿಕೆಯ ಹಾದಿಯೇ ಬಹುತೇಕ ಕವಿತೆಗಳ ತಳಹದಿಯಾಗಿದೆ. ಕಣವಿಯವರ ಕಾವ್ಯ ಹೊರಗಿನ ವಿಕೃತಿಗಳಿಗೆ ಮನಸ್ಸಿನೊಳಗೆ ಔಷಧಿ ಹುಡುಕಿದ್ದೆ ಹೆಚ್ಚು. ಸಾಮಾಜಿಕ ಅಸಮಾನತೆಗೂ ಮನಸ್ಸಿನ ಅಪಕ್ವತೆಯೆ ಕಾರಣವೆಂದು ನಂಬಿದೆ.’ ಡಾ. ವಿಕ್ರಮ ವಿಸಾಜಿ

Chennaveera Kanavi Death: ‘ಶಾಂತಿಪ್ರಿಯರೆ, ಸಂಭಾವಿತರೆ, ಸಹಿಷ್ಣುತಾವಾದಿಗಳೆ; ಹಾದಿಬೀದಿಗಳೆ ಹೇಳುತ್ತಿವೆ ಕಥೆಯ’
ಡಾ. ಚೆನ್ನವೀರ ಕಣವಿ ಮತ್ತು ಡಾ. ವಿಕ್ರಮ ವಿಸಾಜಿ
Follow us
|

Updated on:Feb 16, 2022 | 11:14 AM

ಚೆನ್ನವೀರ ಕಣವಿ | Chennaveera Kanavi: ಕಣವಿಯವರು ಬರೆಯಲಾರಂಭಿಸಿದಾಗ ಕುವೆಂಪು, ದ. ರಾ. ಬೇಂದ್ರೆ ಮತ್ತು ಮಧುರಚೆನ್ನರು ತಮ್ಮ ಕಾವ್ಯೋದ್ಯೋಗದಿಂದ ಹೆಸರುವಾಸಿಯಾಗಿದ್ದರು. ಇಂಥ ದಿಗ್ಗಜರ ಮಾದರಿಗಳೆದುರು ಹೊಸ ಕವಿಗೆ ಹೊಸ ಸವಾಲುಗಳಿರುತ್ತವೆ. ಕಣವಿಯವರು ಇದನ್ನು ತಮ್ಮದೇ ರೀತಿಯಲ್ಲಿ ಎದುರಿಸಿದರು. ಷಟ್ಪದಿ, ಸಾಂಗತ್ಯ, ತ್ರಿಪದಿ, ರಗಳೆ, ವಚನಗಳ ಲಯಗಳಿಂದ ಭಾವಜಗತ್ತನ್ನು ಸೃಷ್ಟಿಸಿದರು. ಕನ್ನಡ ಭಾವಗೀತೆಯ ಹೊಸ ದಾರಿಗಳನ್ನು ತೆರೆದಿಟ್ಟರು. ಮುಗ್ಧತೆ, ಅಂತಃಕರಣ, ಆರ್ದ್ರತೆ, ಮಾನವೀಯ ತುಡಿತ ಇವರ ಭಾವಗೀತೆಗಳ ಮುಖ್ಯ ಗುಣಗಳು. ಶಾಂತರಸವನ್ನು ಹಲವಂದದಲ್ಲಿ ತಮ್ಮ ಭಾವಗೀತೆಗಳೊಳಗೆ ತಂದರು. ಬಹುಶಃ ಕಣವಿಯವರ ಹಾಗೆ ಶಾಂತರದ ಹಲವು ಮುಖಗಳನ್ನು ಕನ್ನಡ ಭಾವಗೀತೆಯಲ್ಲಿ ತಂದವರು ಕಡಿಮೆ. ಮಾಯಾಕೋಲಾಹಲದ ನಡುವೆ ಬಯಲಲ್ಲಿ ಬಯಲಾಗಿ ನಿಂತ ಅಲ್ಲಮನ ಕುರಿತು ಬರೆದ ಅವರ ಕವಿತೆಯನ್ನು ಗಮನಿಸಬೇಕು. ನೀಲಾಂಬಿಕೆಯ ಮನಸ್ಸಿನ ಒಳ ಪದರುಗಳನ್ನು ಹಿಡಿದಿಟ್ಟ ಕವಿತೆ ಕೂಡ. ಇವೆಲ್ಲವೂ ಶಾಂತರಸದ ಇನ್ನೊಂದು ರೂಪವೆ. ತಂಗಿಯ ಮನಸ್ಥಿತಿ ಕುರಿತ ಕವಿತೆ ಕೂಡ ಇದೇ ದಾರಿಯದ್ದು. ಡಾ. ವಿಕ್ರಮ ವಿಸಾಜಿ, ಲೇಖಕ, ಅನುವಾದಕ

*

ಚಂದ್ರೋದಯ, ಸೂರ್ಯೋದಯಗಳೂ ಶಾಂತಿಗಾಗಿ ಹಂಬಲಿಸಿದ ನಿಸರ್ಗದ ಬಯಕೆಗಳು. ಕನ್ನಡ ಕಾವ್ಯ ಹಲವು ರಸಗಳ ತೊಟ್ಟಿಲು. ಅದರಲ್ಲಿ ಶಾಂತರಸದ ತೊಟ್ಟಿಲನ್ನು ಸಮರ್ಥವಾಗಿ ತೂಗಿದ ಕೈ ಕಣವಿಯವರದು.

ಬೈಗುಗೆಂಪಿನ ಬಣ್ಣ ಕಡಲಾಳ ತಳದಿಂದ ಬುರುಬುರನೆ ಮೇಲೆದ್ದ ಗುಳ್ಳೆಯಂತೆ ತಂಗದಿರನುದಯಿಸಿದ, ಶಾಂತಿಮತಿ ಬಿಂಬಿಸಿದ ತಪಗೊಂಡ ಮೌನವ್ರತಧಾರಿಯಂತೆ. (ಚಂದ್ರೋದಯ: ಕಾವ್ಯಾಕ್ಷಿ)

ಚಂದ್ರನ ಚಲನೆ, ಬೆಳಕು, ಹುಟ್ಟು ಶಾಂತಿಯನರಸುವ ತೆರದಿ ಕಾಣುತ್ತಿದೆ. ಚಂದ್ರನೇ ಒಬ್ಬ ಸಂತನಂತೆ ಅಲೆಯುತ್ತಿದ್ದಾನೆ. ಅವಸರ, ಅಪಸ್ವರಗಳನ್ನು ದಾಟಿ ಮನಸ್ಸು ತನ್ನ ಉದ್ವೇಗವನ್ನು ಕಳೆದುಕೊಂಡು ಸುಂದರ, ಅನುದ್ದೇಶಿತ ಭಾವದ ಬೆಳಕನ್ನಷ್ಟೆ ಹಂಬಲಿಸಿದೆ. ಕಣವಿಯವರ ಕಾವ್ಯವನ್ನು ಅವರದೇ ಸಾಲಿನಲ್ಲಿ ಹೇಳುವುದಾದರೆ ಅದು ‘ಹೊಂಗನಸು ಹೂತಿರುವ ಭರಣಿಯಂತೆ’. ಆ ಹೊಂಗನಸು ಶಾಂತಿ, ದಯೆ, ಕರುಣೆಗಳಿಂದ ಕೂಡಿದೆ. ಅವರ ‘ತಾಳ್ಮೆ’ ಕವಿತೆಯನ್ನು ಗಮನಿಸಿ. ಇದು ಅವರ ಒಟ್ಟು ಕಾವ್ಯ ಮನೋಧರ್ಮವನ್ನೆ ಹೇಳುವಂತಿದೆ;

ಗಂಭೀರಗಿರಿಯೆದುರು ಬಿರುಗಾಳಿ ಗುಲ್ಲು ತುಂಬಿದಂಬರದಲ್ಲು ಶಾಂತಮಯ ಸೊಲ್ಲು ಮೌನ-ಗಾನ-ಧ್ಯಾನ-ತವಸಿಯತಾಗು ಬಾಳಿನುಯ್ಯಾಲೆಯನು ತಾಳ್ಮೆಯಲಿ ತೂಗು (ತಾಳ್ಮೆ :ಕಾವ್ಯಾಕ್ಷಿ)

ಇದನ್ನೂ ಓದಿ : Simone de Beauvoir : ‘ಕೊನೆಯದಾಗಿ ಅಲ್ಲೊಂದು ಶಬ್ದ ಬರೆಯುವುದು ಬಾಕಿಯಿತ್ತು ಅದನ್ನು ನಾನು ಬರೆದುಬಿಟ್ಟೆ’

ಅವರ ಈ ಕಾವ್ಯ ಮನೋಧರ್ಮವೆ ಜೀವನ ಮನೋಧರ್ಮ ಕೂಡ ಹೌದು. ಬಾಳಿನುಯ್ಯಾಲೆ ಎಂಬ ಪದವನ್ನು ಗಮನಿಸಬೇಕು. ಅದು ಸ್ಥಿರವಾದುದಲ್ಲ. ನಿರಂತರ ಏರಿಳಿತಗಳಿಂದ ಕೂಡಿರುವಂಥದ್ದು. ಇಂಥ ಉಯ್ಯಾಲೆಯನ್ನು ತಾಳ್ಮೆಯಿಂದ ತೂಗುವುದರಲ್ಲೆ ಬಾಳಿನ ಗೆಲುವಿದೆ. ಹಾಗೆಂದು ಕಣವಿಯವರ ಕಾವ್ಯಕ್ಕೆ ಇಲ್ಲಿನ ಕೊಳಚೆ-ಕಗ್ಗತ್ತಲು ಗೊತ್ತಿಲ್ಲವೆಂದಲ್ಲ. ಮನುಷ್ಯರು ಪರಸ್ಪರ ನೋವಿಗೊಳಪಡಿಸಿಕೊಳ್ಳುವ ಅಮಾನವೀಯ ಚರಿತ್ರೆಯನ್ನೂ ಹಲವಾರು ಕವಿತೆಗಳು ಕಟ್ಟಿಕೊಟ್ಟಿವೆ. ‘ಹೋರು ಬೀಳ್ವನ್ನೆಗಂ’ ಕವಿತೆ ನರರು ನರರನ್ನು ಪರಸ್ಪರ ಇರಿಯುವ ವಿಕೃತ ಹಗೆಯ ಚಿತ್ರಣವಿದೆ. ಜಾತಿ ಮತ ಪಂಥಗಳ ಕೊಳಚೆಯಲಿ ಕಚ್ಚಾಡುವ ಕುರಿತು ಬೇಸರವಿದೆ. ಸಹೋದರತ್ವ, ಮಾನವತ್ವ ಮರೆತ ಮನುಷ್ಯನ ಸಣ್ಣತನ ಕುರಿತ ವಿಷಾದವಿದೆ. ಇದೆಲ್ಲದರಿಂದ ಬಿಡುಗಡೆಗೊಳ್ಳುವ ತವಕದಲ್ಲಿ ಕವಿತೆಯಿದೆ. ನಲುಮೆ, ನೆಮ್ಮದಿ, ಸ್ನೇಹ, ಸೌಹಾರ್ದ, ವಿಶ್ವಬಂಧುತ್ವಗಳೆ ಬದುಕನ್ನು ಉಳಿಸುವ ನಂಬಿಕೆಯೊಂದಿಗೆ ಕವಿತೆ ಮುಕ್ತಾಯಗೊಂಡಿದೆ. ‘ರಕ್ತಾಕ್ಷಿ’ ಕವಿತೆಯೂ ಸಮಾಜದ ಕ್ರೌರ್ಯಪೂರ್ಣ ಚಲನೆ ಕಂಡು ಪ್ರತಿಭಟಿಸಿದೆ;

ಶಾಂತಿಪ್ರಿಯರೆ, ಸಂಭಾವಿತರೆ, ಸಹಿಷ್ಣುತಾ ವಾದಿಗಳೆ: ಹಾದಿಬೀದಿಗಳೆ ಹೇಳುತ್ತಿವೆ ಒಡೆದ ದೀಪಗಳ, ಮೈ ಸುಟ್ಟ ವಾಹನಗಳ, ಆಸ್ಪತ್ರೆಗೆ ದಾಖಲಾದ ಮುಗ್ಧರ, ವಿದಗ್ಧರ ವ್ಯಥೆಯ. (ರಕ್ತಾಕ್ಷಿ : ಕಾರ್ತಿಕದ ಮೋಡ)

*

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 1 : Chennaveer Kanavi Death: ಬಾಳುವುದೆಂದರೆ, ಕೊಡುವುದೆಂದರೆ, ಕೊಂಬುದೆಂದರೆ, ಮಾಗುವುದೆಂದರೆ..

Published On - 11:10 am, Wed, 16 February 22

ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್