AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Atmanirbhar Bharat Rojgar Yojana: ಆತ್ಮನಿರ್ಭರ್  ಭಾರತ್​ ರೋಜ್​ಗಾರ್ ಯೋಜನೆ ಮಾರ್ಚ್ 31ರ ತನಕ ವಿಸ್ತರಣೆ

ಆತ್ಮನಿರ್ಭರ್ ಭಾರತ್ ರೋಜ್​ಗಾರ್ ಯೋಜನೆ ಅಡಿಯಲ್ಲಿ ನೋಂದಣಿಯನ್ನು 2022ನೇ ಇಸವಿಯ ಮಾರ್ಚ್ 31ರ ತನಕ ವಿಸ್ತರಣೆ ಮಾಡಲಾಗಿದೆ ಎಂದು ಇಪಿಎಫ್​ಒ ಟ್ವೀಟ್ ಮಾಡಿದೆ.

Atmanirbhar Bharat Rojgar Yojana: ಆತ್ಮನಿರ್ಭರ್  ಭಾರತ್​ ರೋಜ್​ಗಾರ್ ಯೋಜನೆ ಮಾರ್ಚ್ 31ರ ತನಕ ವಿಸ್ತರಣೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 10, 2022 | 6:43 PM

Share

ಆತ್ಮನಿರ್ಭರ್ ಭಾರತ್ ರೋಜ್​ಗಾರ್ ಯೋಜನೆ (ABRY) ಅಡಿಯಲ್ಲಿ ನೋಂದಣಿ ಸೌಲಭ್ಯವನ್ನು ಮಾರ್ಚ್ 31, 2022ರ ವರೆಗೆ ವಿಸ್ತರಿಸಲಾಗಿದೆ. ABRY ಅಡಿಯಲ್ಲಿ ನೋಂದಣಿ ಸೌಲಭ್ಯದ ದಿನಾಂಕವನ್ನು ವಿಸ್ತರಿಸುವ ಕುರಿತು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದೆ. ಟ್ವೀಟ್‌ನಲ್ಲಿ, “#ABRY ಅಡಿಯಲ್ಲಿ ನೋಂದಣಿ ಸೌಲಭ್ಯವನ್ನು 31.03.2022 ರವರೆಗೆ ವಿಸ್ತರಿಸಲಾಗಿದೆ,” ಎಂದು ತಿಳಿಸಿದೆ.

ABRY ಯೋಜನೆಯ ಪ್ರಮುಖ ಮುಖ್ಯಾಂಶಗಳು 1) EPFO ​​ನೊಂದಿಗೆ ನೋಂದಾಯಿಸಲಾದ ಅರ್ಹ ಸಂಸ್ಥೆಗಳ ಉದ್ಯೋಗದಾತರು ಮತ್ತು ಹೊಸ ಉದ್ಯೋಗಿಗಳಿಗೆ ಪ್ರೋತ್ಸಾಹ. 2) ಹೊಸ ಉದ್ಯೋಗಿಗಳು ನೋಂದಣಿ ದಿನಾಂಕದಿಂದ ಎರಡು ವರ್ಷಗಳವರೆಗೆ ಪ್ರೋತ್ಸಾಹವನ್ನು ಪಡೆಯುತ್ತಾರೆ. 3) ಪಾವತಿಯ ರೂಪದಲ್ಲಿ ಪ್ರೋತ್ಸಾಹ – ಎ) ಉದ್ಯೋಗಿಗಳು ಮತ್ತು ಉದ್ಯೋಗದಾತರ ಕೊಡುಗೆ, ಅಂದರೆ 1000 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಹೊಸ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ವೇತನದ ಶೇಕಡಾ 24ರಷ್ಟು ಮತ್ತು ಬಿ) ಕೇವಲ ನೌಕರರ EPF, ಅಂದರೆ 1000ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ಹೊಸ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ವೇತನದ ಶೇ 12ರಷ್ಟು 4) ಮೇಲಿನ ಉಲ್ಲೇಖದ ಮೇಲೆ ನಿಗದಿತ ಕನಿಷ್ಠ ಸಂಖ್ಯೆಯ ಹೊಸ ಉದ್ಯೋಗಿಗಳನ್ನು ಸೇರಿಸಿದರೆ ಸಂಸ್ಥೆಯು ಪ್ರೋತ್ಸಾಹಕ್ಕೆ ಅರ್ಹವಾಗಿರುತ್ತದೆ 5) ಉದ್ಯೋಗಿಗಳ ಉಲ್ಲೇಖದ ಆಧಾರವನ್ನು 2020ರ ಸೆಪ್ಟೆಂಬರ್​ಗೆ ECRನಲ್ಲಿ ಕೊಡುಗೆ ಎಂದು ಇಪಿಎಫ್ ಸದಸ್ಯರ ಸಂಖ್ಯೆಯಾಗಿ ತೆಗೆದುಕೊಳ್ಳಲಾಗಿದೆ 6) ರೂ. 15000 ಕ್ಕಿಂತ ಕಡಿಮೆ ಮಾಸಿಕ ವೇತನದೊಂದಿಗೆ ಸೇರುವ ಹೊಸ ಉದ್ಯೋಗಿಗಳು ನೋಂದಣಿ ದಿನಾಂಕದಿಂದ 24 ತಿಂಗಳ ವೇತನವರೆಗೆ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. 7) 1ನೇ ಅಕ್ಟೋಬರ್ 2020ರ ನಂತರ EPFO​​ನಲ್ಲಿ ನೋಂದಾಯಿಸಲಾದ ಸಂಸ್ಥೆಗಳು ಎಲ್ಲ ಹೊಸ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಪ್ರಯೋಜನಗಳನ್ನು ಪಡೆಯುತ್ತವೆ.

ABRY ಯೋಜನೆ ABRY ಅಡಿಯಲ್ಲಿ, 1,000 ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಉದ್ಯೋಗಿಗಳು ಮತ್ತು ಉದ್ಯೋಗದಾತರ ಪಾಲು, ಅಂದರೆ ವೇತನದ ಶೇ 24ರಷ್ಟು (ತಲಾ ಶೇ 12ರಷ್ಟು ವೇತನ) ಸರ್ಕಾರ ಪಾವತಿಸುತ್ತದೆ. ಒಂದು ವೇಳೆ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳಿದ್ದಲ್ಲಿ ಶೇ 12ರಷ್ಟು ನೌಕರರ ಕೊಡುಗೆಯನ್ನು ಸರ್ಕಾರವು ಪಾವತಿಸುತ್ತಿದೆ ಎಂದು ಸದನಕ್ಕೆ ತಿಳಿಸಲಾಗಿತ್ತು.

4, ಡಿಸೆಂಬರ್ 2021ರಂತೆ 39.73 ಲಕ್ಷ ಹೊಸ ಉದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ ಮತ್ತು ರೂ. 2612.10 ಕೋಟಿಯ ಪ್ರಯೋಜನಗಳನ್ನು ಅವರ ಖಾತೆಗಳಲ್ಲಿ ಮುಂಗಡವಾಗಿ ಜಮಾ ಮಾಡಲಾಗಿದೆ.

ಇದನ್ನೂ ಓದಿ: ಭಾರತ್ ಎಲೆಕ್ಟ್ರಾನಿಕ್ಸ್​ಗೆ ಆತ್ಮನಿರ್ಭರ್ ಪ್ಯಾಕೇಜ್ ಅಡಿ ರೂ. 2400 ಕೋಟಿಯ ಆರ್ಡರ್​ ನೀಡಿದ ಎಚ್​ಎಎಲ್

ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್