ರಕ್ತದ ನಕಲಿ ಪ್ಲೇಟ್ಲೆಟ್ ಮಾರಾಟ ದಂಧೆ; ಉತ್ತರ ಪ್ರದೇಶದಲ್ಲಿ 10 ಜನರ ಬಂಧನ
ಈ 10 ವ್ಯಕ್ತಿಗಳು ಬ್ಲಡ್ ಬ್ಯಾಂಕ್‌ಗಳಿಂದ ಪ್ಲಾಸ್ಮಾವನ್ನು ತೆಗೆದುಕೊಂಡು ಅವುಗಳನ್ನು ಪ್ಲೇಟ್‌ಲೆಟ್‌ಗಳಾಗಿ ಮರು ಪ್ಯಾಕೇಜ್ ಮಾಡುತ್ತಿದ್ದರು. ಅದನ್ನು ಡೆಂಗ್ಯೂ ರೋಗಿಗಳ ಕುಟುಂಬಸ್ಥರಿಗೆ ಮಾರಾಟ ಮಾಡುತ್ತಿದ್ದರು.
ಲಕ್ನೋ: ಪ್ಲಾಸ್ಮಾ ಬದಲು ಡೆಂಗ್ಯೂ (Dengue) ರೋಗಿಯೊಬ್ಬರಿಗೆ ಮೂಸಂಬಿ ರಸವನ್ನು ನೀಡಿದ ಹಿನ್ನೆಲೆಯಲ್ಲಿ ಆ ರೋಗಿ ಮೃತಪಟ್ಟಿದ್ದರು. ಈ ಘಟನೆ ನಡೆದ ಬೆನ್ನಲ್ಲೇ ಡೆಂಗ್ಯೂ ರೋಗಿಯ ಕುಟುಂಬಸ್ಥರಿಗೆ ರಕ್ತದ ಪ್ಲಾಸ್ಮಾವನ್ನು ಪ್ಲೇಟ್‌ಲೆಟ್‌ಗಳಾಗಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ 10 ಮಂದಿಯನ್ನು ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ 10 ವ್ಯಕ್ತಿಗಳು ಬ್ಲಡ್ ಬ್ಯಾಂಕ್‌ಗಳಿಂದ ಪ್ಲಾಸ್ಮಾವನ್ನು ತೆಗೆದುಕೊಂಡು ಅವುಗಳನ್ನು ಪ್ಲೇಟ್‌ಲೆಟ್‌ಗಳಾಗಿ ಮರು ಪ್ಯಾಕೇಜ್ ಮಾಡುತ್ತಿದ್ದರು. ಇವೆರಡೂ ರಕ್ತದ ಅಂಶಗಳಾಗಿವೆ, ಆದರೆ ಇವೆರಡನ್ನೂ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಡೆಂಗ್ಯೂ ಪ್ರಕರಣಗಳಲ್ಲಿ ಪ್ಲೇಟ್‌ಲೆಟ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ಡ್ರಿಪ್ನಲ್ಲಿ ಮೂಸಂಬಿ ರಸ ನೀಡಿರುವುದಾಗಿ ಆರೋಪ, ರೋಗಿ ಸಾವು
ಪ್ರಯಾಗರಾಜ್‌ನಲ್ಲಿ ಜ್ಯೂಸ್ ಅನ್ನು ಪ್ಲೇಟ್‌ಲೆಟ್‌ಗಳಾಗಿ ರವಾನಿಸುವ ಬಗ್ಗೆ ನಾವು ಈ ಆರೋಪಿಗಳನ್ನು ಪ್ರಶ್ನಿಸಿದ್ದೇವೆ. ಆದರೆ ಅವರು ಹಾಗೆ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಅದರ ಬದಲಿಗೆ ರಕ್ತದ ಪ್ಲಾಸ್ಮಾವನ್ನು ಪ್ಲೇಟ್‌ಲೆಟ್‌ಗಳಾಗಿ ರವಾನಿಸಲಾಗುತ್ತಿದೆ ಎಂದು ಒಪ್ಪಿಕೊಂಡಿರುವುದಾಗಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ಶೈಲೇಶ್ ಪಾಂಡೆ ಹೇಳಿದ್ದಾರೆ.
Uttar Pradesh | Acting on a tip-off, 10 people have been arrested for selling fake platelets. These people used to take plasma from the blood banks, fill it in different pouches, put stickers of platelets & sell it to the needy people: Shailesh Kumar Pandey,SSP, Prayagraj (21.10) pic.twitter.com/fwNtnag4J1
— ANI UP/Uttarakhand (@ANINewsUP) October 21, 2022
“ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಸಾಕಷ್ಟು ಹರಡುತ್ತಿದೆ. ಇದರಿಂದ ಪ್ಲೇಟ್‌ಲೆಟ್‌ಗಳ ಬೇಡಿಕೆ ಹೆಚ್ಚಾಗಿದೆ. ಈ ಆರೋಪಿಗಳು ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದರು. ಪ್ಲೇಟ್ಲೆಟ್ ನೀಡುವುದಾಗಿ ನಂಬಿಸಿ ಬಡವರನ್ನು ವಂಚಿಸುತ್ತಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಅಕ್ರಮವಾಗಿ ರಕ್ತ ಪೂರೈಕೆ ಮಾಡಿದ ಆರೋಪದ ಮೇಲೆ ಕೆಲವು ದಿನಗಳ ಹಿಂದೆ 12 ಜನರನ್ನು ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.