Achievement: ದಿನಗಳಲ್ಲ ಗಂಟೆ…! 100 ಗಂಟೆಯಲ್ಲಿ 100 ಕಿಮೀ ರಸ್ತೆ; ಘಾಜಿಯಾಬಾದ್-ಅಲಿಗಡ್ ಎಕ್ಸ್ಪ್ರೆಸ್ವೇ ಹೊಸ ಇತಿಹಾಸ
Ghaziabad-Aligarh Expressway Milestone: ಉತ್ತರಪ್ರದೇಶದ ಘಾಜಿಯಾಬಾದ್ ಆಲಿಗಡ್ ಎಕ್ಸ್ಪ್ರೆಸ್ವೇನ 100 ಕಿಮೀ ರಸ್ತೆಯನ್ನು ಕೇವಲ 100 ಗಂಟೆಯಲ್ಲಿ ನಿರ್ಮಿಸಿ ದಾಖಲೆ ಬರೆಯಲಾಗಿದೆ. ಎಲ್ ಅಂಟ್ ಟಿ, ಕ್ಯೂಬ್ ಹೈವೇಸ್ ಮತ್ತು ಘಾಜಿಯಾಬಾದ್ ಆಲಿಗಡ್ ಎಕ್ಸ್ಪ್ರೆಸ್ವೇ ಸಂಸ್ಥೆಗಳು ಈ ಕಾರ್ಯ ಮಾಡಿ ಸೈ ಎನಿಸಿವೆ.
ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಭಾರತದ ರಸ್ತೆ ಮತ್ತು ರೈಲ್ವೆ ನಿರ್ಮಾಣ ಕಾರ್ಯಗಳಿಗೆ (Road and Rail Infrastructure) ಹೊಸ ಶಕ್ತಿಸಂಚಯ ಆದಂತಿದೆ. ಹಲವು ಸಾಧನೆ, ಮೈಲಿಗಲ್ಲುಗಳು ನಿರ್ಮಾಣವಾಗುತ್ತಿವೆ. ಇದೀಗ ಉತ್ತರಪ್ರದೇಶದಲ್ಲಿ ಘಾಜಿಯಾಬಾದ್ ಆಲಿಗಡ್ ಎಕ್ಸ್ಪ್ರೆಸ್ವೇ (Ghaziabad-Aligarh Expressway) ಹೊಸ ಇತಿಹಾಸ ಬರೆದಿದೆ. ರಾಷ್ಟ್ರೀಯ ಹೆದ್ದಾರಿ 34ರ ಭಾಗವಾಗಿರುವ 118 ಕಿಮೀ ಉದ್ದದ ಈ ಎಕ್ಸ್ಪ್ರೆಸ್ವೇನಲ್ಲಿ 100 ಕಿಮೀ ಉದ್ದದ ರಸ್ತೆಯನ್ನು ಕೇವಲ 100 ಗಂಟೆಯಲ್ಲಿ ನಿರ್ಮಿಸಲಾಗಿದೆ. 100 ಗಂಟೆ ಎಂದರೆ ಸುಮಾರು 4 ದಿನ ಮಾತ್ರ.
ಈ ಸಾಧನೆ ಸಾಧ್ಯವಾಗಿದ್ದು ಒಂದು ಸ್ಪೆಷಲ್ ಪರ್ಪೋಸ್ ವೆಹಿಕಲ್ನಿಂದ (ಎಸ್ಪಿವಿ). ಈ ಎಕ್ಸ್ಪ್ರೆಸ್ವೇಗೆ ಬಿಟುಮಿನಸ್ ಕಾಂಕ್ರೀಟ್ ಹಾಕಲು ಈ ವಿಶೇಷ ವಾಹನ ಬಳಸಲಾಗಿದೆ. ಕ್ಯೂಬ್ ಹೈವೇಸ್, ಎಲ್ ಅಂಡ್ ಟಿ, ಘಾಜಿಯಾಬಾದ್ ಆಲಿಗಡ್ ಎಕ್ಸ್ಪ್ರೆಸ್ವೇ ಸಂಸ್ಥೆಗಳು ಈ ರಸ್ತೆ ನಿರ್ಮಾಣದಲ್ಲಿ ಭಾಗಿಯಾಗಿದ್ದವು.
ಇದನ್ನೂ ಓದಿ: ಅಸ್ಸಾಂನಲ್ಲಿ ಶಾಲಾ ಶಿಕ್ಷಕರಿಗೆ ನೂತನ ವಸ್ತ್ರ ಸಂಹಿತೆ ಜಾರಿ; ಟೀ ಶರ್ಟ್, ಲೆಗ್ಗಿಂಗ್ಸ್, ಜೀನ್ಸ್ ಧರಿಸುವಂತಿಲ್ಲ
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಕಾರ್ಯವನ್ನು ಶ್ಲಾಘಿಸಿ ಇದು ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಕೊಂಡಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಶಹಬ್ಬಾಸ್ಗಿರಿ ನೀಡಿದ್ದಾರೆ.
‘ಭಾರತದ ರಸ್ತೆ ಸೌಕರ್ಯ ಉದ್ಯಮದ ಬದ್ಧತೆಗೆ ಸಾಕ್ಷಿಯಾಗಿದೆ ಈ ಸಾಧನೆ. ಕ್ಯೂಬ್ ಹೈವೇಶ್, ಎಲ್ ಅಂಡ್ ಮತ್ತು ಘಾಜಿಯಾಬಾದ್ ಆಲಿಗಡ್ ಎಕ್ಸ್ಪ್ರೆಸ್ವೇ ಸಂಸ್ಥೆಗಳಿಗೆ ಧನ್ಯವಾದ ಹೇಳುತ್ತೇನೆ’ ಎಂದು ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.
Proud moment for the entire nation!
The Ghaziabad-Aligarh Expressway has made history by achieving a remarkable feat: the laying of Bituminous Concrete over a distance of 100 lane kilometers in an unprecedented time of 100 hours. This accomplishment highlights the dedication and… pic.twitter.com/YMZrttGELE
— Nitin Gadkari (@nitin_gadkari) May 19, 2023
ಘಾಜಿಯಾಬಾದ್ ಆಲಿಗಡ್ ಎಕ್ಸ್ಪ್ರೆಸ್ವೇ ರಸ್ತೆ ಪ್ರಾಮುಖ್ಯತೆ
ದೆಹಲಿಗೆ ಸಮೀಪ ಇರುವ ಘಾಜಿಯಾಬಾದ್ ಮತ್ತು ಆಲಿಗಡ್ ಎರಡೂ ಕೂಡ ಜನಸಂಖ್ಯೆ ಹೆಚ್ಚು ಇರುವ ನಗರಗಳು. ಈ ಎರಡು ನಗರಗಳನ್ನು ಜೋಡಿಸುವ ಎಕ್ಸ್ಪ್ರೆಸ್ ವೇ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎನಿಸಿದೆ. ಈ ಎರಡು ನಗರಗಳ ಮಧ್ಯೆ ದಾದ್ರಿ, ಗೌತಮ್ ಬುದ್ಧ ನಗರ್, ಸಿಕಂದರಾಬಾದ್, ಬುಲಂದ್ಶಹರ್ ಮತ್ತು ಖುದ್ರಾ ನಗರ ಮತ್ತು ಪಟ್ಟಣಗಳ ಮೂಲಕ ಈ ಎಕ್ಸ್ಪ್ರೆಸ್ ಸಾಗಿ ಹೋಗುತ್ತದೆ.
ಇದನ್ನೂ ಓದಿ: G7 Summit: ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದ ಪ್ರಧಾನಿ ಮೋದಿ
ಬಹಳ ಕಡಿಮೆ ಅವಧಿಯಲ್ಲಿ ಸಾಗಾಟ ಸಾಧ್ಯವಾಗುವುದರಿಂದ ಯಾವುದೇ ಎಕ್ಸ್ಪ್ರೆಸ್ವೇಗಳು ಒಂದು ದೇಶದ ಅರ್ಥವ್ಯವಸ್ಥೆಗೆ ಅನುಕೂಲ ಎನಿಸುತ್ತವೆ. ಒಂದು ಉತ್ತಮ ಆರ್ಥಿಕತೆಯ ದೇಶದಲ್ಲಿ ಸೌಕರ್ಯ ವ್ಯವಸ್ಥೆ ಅತ್ಯುತ್ತಮವಾಗಿರುತ್ತದೆ. ಭಾರತದಲ್ಲೂ ಈ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ.