ಅಸ್ಸಾಂನಲ್ಲಿ ಶಾಲಾ ಶಿಕ್ಷಕರಿಗೆ ನೂತನ ವಸ್ತ್ರ ಸಂಹಿತೆ ಜಾರಿ; ಟೀ ಶರ್ಟ್​, ಲೆಗ್ಗಿಂಗ್ಸ್​, ಜೀನ್ಸ್ ಧರಿಸುವಂತಿಲ್ಲ

ಶಾಲಾ ಶಿಕ್ಷಕರು ಟೀ ಶರ್ಟ್​, ಲೆಗ್ಗಿಂಗ್ಸ್​, ಜೀನ್ಸ್ ಧರಿಸುವಂತಿಲ್ಲ. ಶಾಲೆಗೆ ಬರುವಾಗ ಸ್ವಚ್ಛ, ಸಾಧಾರಣ, ಸಭ್ಯವಾದ ಬಟ್ಟೆ ಧರಿಸಬೇಕು ಎಂದು ನಿಯಮ ಜಾರಿಗೊಳಿಸಿದೆ.

ಅಸ್ಸಾಂನಲ್ಲಿ ಶಾಲಾ ಶಿಕ್ಷಕರಿಗೆ ನೂತನ ವಸ್ತ್ರ ಸಂಹಿತೆ ಜಾರಿ; ಟೀ ಶರ್ಟ್​, ಲೆಗ್ಗಿಂಗ್ಸ್​, ಜೀನ್ಸ್ ಧರಿಸುವಂತಿಲ್ಲ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on: May 21, 2023 | 8:16 AM

ಗುವಾಹಟಿ: ಶಾಲಾ ಶಿಕ್ಷಕರಿಗೆ ನೂತನ ವಸ್ತ್ರ ಸಂಹಿತೆ ಜಾರಿಗೊಳಿಸಿ ಅಸ್ಸಾಂ ಸರ್ಕಾರ ಶನಿವಾರ(ಮೇ 20) ಆದೇಶ ಹೊರಡಿಸಿದೆ. ಶಾಲಾ ಶಿಕ್ಷಕರು ಟೀ ಶರ್ಟ್​, ಲೆಗ್ಗಿಂಗ್ಸ್​, ಜೀನ್ಸ್ ಧರಿಸುವಂತಿಲ್ಲ. ಶಾಲೆಗೆ ಬರುವಾಗ ಸ್ವಚ್ಛ, ಸಾಧಾರಣ, ಸಭ್ಯವಾದ ಬಟ್ಟೆ ಧರಿಸಬೇಕು ಎಂದು ನಿಯಮ ಜಾರಿಗೊಳಿಸಿದೆ. ಶಾಲೆಗಳಿಗೆ ಬರುವ ಶಿಕ್ಷಕ, ಶಿಕ್ಷಕಿಯರಿಗೆ ಹೊಸ ನಿಯಮ ಅನ್ವಯವಾಗಲಿದೆ.

ಅಸ್ಸಾಂನ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿ, “ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರು ತಮ್ಮಿಷ್ಟದ, ಕಣ್ಣು ಕುಕ್ಕುವಂತಹ ಉಡುಪುಗಳನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಒಪ್ಪತಕ್ಕದ್ದಲ್ಲ. ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ’ ವಿಶೇಷವಾಗಿ ಶಿಕ್ಷಕರು ಕರ್ತವ್ಯಗಳನ್ನು ನಿರ್ವಹಿಸುವಾಗ, ಕೆಲಸದ ಸ್ಥಳದಲ್ಲಿ ಸಭ್ಯತೆ, ವೃತ್ತಿಪರತೆ ಮತ್ತು ಗಂಭೀರತೆಯನ್ನು ಪ್ರತಿಬಿಂಬಿಸುವ ಡ್ರೆಸ್ ಕೋಡ್ ಅನ್ನು ಅನುಸರಿಸುವುದು ಅಗತ್ಯವಾಗಿದೆ ಎಂದು ಅಸ್ಸಾಂ ಶಿಕ್ಷಣ ಇಲಾಖೆ ತಿಳಿಸಿದೆ.

ಇದನ್ನೂ ಓದಿ: CET Exam: ಇಂದು ಭೌತಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ, ಮೇ.22 ಕನ್ನಡ ಭಾಷಾ ಪರೀಕ್ಷೆ

ಶಿಕ್ಷಕರು ಇನ್ನು ಮುಂದೆ ‘ಫಾರ್ಮಲ್‌’ (ಪ್ಯಾಂಟ್‌ ಮತ್ತು ಅಂಗಿ) ತೊಟ್ಟು ಶಾಲೆಗಳಿಗೆ ಹಾಜರಾಗಬೇಕು. ಶಿಕ್ಷಕಿಯರು ಸೀರೆ, ಸಭ್ಯ ರೀತಿಯ ಸಲ್ವಾರ್‌ ಸೂಟ್‌ಗಳನ್ನಷ್ಟೇ ಉಡಬೇಕು. ಇವು ತಿಳಿ ವರ್ಣದಿಂದ ಕೂಡಿರಬೇಕು. ಶಿಕ್ಷಕಿಯರು ಟಿ ಶರ್ಟ್‌, ಜೀನ್ಸ್‌ ಮತ್ತು ಲೆಗ್ಗಿನ್ಸ್‌ಗಳನ್ನು ಧರಿಸುವಂತಿಲ್ಲ’ ಎಂದು ಆದೇಶಿಸಿದೆ. ಇನ್ನು ಈ ಸೂಚನೆಗಳನ್ನು ಉಲ್ಲಂಘಿಸುವ ಶಿಕ್ಷಕರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ.

ದೇಶದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ