Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಟಲಿಯಿಂದ ಅಮೃತ​ಸರ​ಕ್ಕೆ ಬಂದ ವಿಮಾನದಲ್ಲಿದ್ದ 125 ಪ್ರಯಾಣಿಕರಿಗೆ ಕೊರೊನಾ ಸೋಂಕು ಎಂಬುದು ಸುಳ್ಳು ಸುದ್ದಿ: ಏರ್​ ಇಂಡಿಯಾ ಸ್ಪಷ್ಟನೆ

ಭಾರತದಲ್ಲಿ ಕೊವಿಡ್ 19 ಸೋಂಕಿನ ಪ್ರಕರಣಗಳು ಮತ್ತಷ್ಟು ಏರಿಕೆಯಾಗುತ್ತಿವೆ. ಇಂದು ಒಂದೇ ದಿನ 90 ಸಾವಿರಕ್ಕೂ ಹೆಚ್ಚು ಕೇಸ್​ಗಳು ದಾಖಲಾಗಿದೆ. ಇದು ನಿನ್ನೆಗಿಂತ ಶೇ.56ರಷ್ಟು ಹೆಚ್ಚು. ಕಳೆದ ಒಂದು ವಾರದಿಂದಲೂ ಗಣನೀಯವಾಗಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ.

ಇಟಲಿಯಿಂದ ಅಮೃತ​ಸರ​ಕ್ಕೆ ಬಂದ ವಿಮಾನದಲ್ಲಿದ್ದ 125 ಪ್ರಯಾಣಿಕರಿಗೆ ಕೊರೊನಾ ಸೋಂಕು ಎಂಬುದು ಸುಳ್ಳು ಸುದ್ದಿ: ಏರ್​ ಇಂಡಿಯಾ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Jan 06, 2022 | 5:02 PM

ಏರ್​ ಇಂಡಿಯಾ ವಿಮಾನ ಸಂಸ್ಥೆಯ ಇಟಲಿ-ಅಮೃತ್​ಸರ್​ ವಿಮಾನ(Italy-Amritsar Air India flight)ದಲ್ಲಿ ಪ್ರಯಾಣ ಮಾಡಿದ 125 ಪ್ರಯಾಣಿಕರಿಗೂ ಕೊರೊನಾ ಸೋಂಕು ತಗುಲಿದ್ದಾಗಿ ಅಮೃತ್​ಸರ್​ ವಿಮಾನ ನಿಲ್ದಾಣ ನಿರ್ದೇಶಕ ವಿ.ಕೆ.ಸೇಠ್​ ತಿಳಿಸಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಟ್ವೀಟ್ ಮಾಡಿರುವ ಏರ್ ಇಂಡಿಯಾ, ಇಟಲಿಯಿಂದ, ಅಮೃತ್​ಸರ್​ಗೆ ಬಂದ ವಿಮಾನದಲ್ಲಿದ್ದ 125 ಪ್ರಯಾಣಿಕರಿಗೆ ಕೊರೊನಾ ಸೋಂಕು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಅದು ಆಧಾರವಿಲ್ಲದ ಸುಳ್ಳು ಸುದ್ದಿ. ಯಾಕೆಂದರೆ ಏರ್ ಇಂಡಿಯಾದ ಯಾವುದೇ ವಿಮಾನಗಳೂ ಸದ್ಯ ರೋಮ್​ನಿಂದ ಭಾರತಕ್ಕೆ ಕಾರ್ಯಾಚರಣೆ ನಡೆಸುತ್ತಿಲ್ಲ ಎಂದು ಹೇಳಿದೆ. 

ಭಾರತದಲ್ಲಿ ಕೊವಿಡ್ 19 ಸೋಂಕಿನ ಪ್ರಕರಣಗಳು ಮತ್ತಷ್ಟು ಏರಿಕೆಯಾಗುತ್ತಿವೆ. ಇಂದು ಒಂದೇ ದಿನ 90 ಸಾವಿರಕ್ಕೂ ಹೆಚ್ಚು ಕೇಸ್​ಗಳು ದಾಖಲಾಗಿದೆ. ಇದು ನಿನ್ನೆಗಿಂತ ಶೇ.56ರಷ್ಟು ಹೆಚ್ಚು. ಕಳೆದ ಒಂದು ವಾರದಿಂದಲೂ ಗಣನೀಯವಾಗಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದು, ಒಮಿಕ್ರಾನ್​ ಕೂಡ ಹರಡುತ್ತಿದೆ. ಹೀಗಾಗಿ ಎಲ್ಲ ಏರ್​ಪೋರ್ಟ್​​ನಲ್ಲಿ ಬೇರೆ ದೇಶಗಳಿಂದ ಬಂದ ಪ್ರಯಾಣಿಕರ ಕೊವಿಡ್​ 19 ಟೆಸ್ಟ್ ಮಾಡಲಾಗುತ್ತಿದೆ. ಈ ಮಧ್ಯೆ ಇಟಲಿಯಿಂದ ಪಂಜಾಬ್​ನ ಅಮೃತ್​ಸರ್​ಗೆ ಬಂದಿದ್ದ ಫ್ಲೈಟ್​​ನಲ್ಲಿದ್ದವರಿಗೆ ಕೊರೊನಾ ಸೋಂಕು ಎಂಬ ಸುದ್ದಿ ಹರಡಿತ್ತು. ಹಲವು ರಾಷ್ಟ್ರೀಯ ಮಾಧ್ಯಮಗಳೂ ಸುದ್ದಿ ಮಾಡಿದ್ದವು. ಆದರೆ ಅದೀಗ ಸುಳ್ಳು ಎಂದು ಹೇಳಲಾಗಿದ್ದು, ಸ್ವಲ್ಪ ಮಟ್ಟಿಗೆ ನಿರಾತಂಕವಾಗಿದೆ. ಅಂದಹಾಗೆ, ಇಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಪತ್ರ ಬರೆದಿದ್ದು, ತಪಾಸಣೆಯ ವೇಗ ಇನ್ನಷ್ಟು ಹೆಚ್ಚುಗೊಳಿಸುವಂತೆ ಸೂಚಿಸಿದೆ. ಕೊರೊನಾ ಟೆಸ್ಟ್​ನಲ್ಲಿ ಹಿಂದುಳಿದ ರಾಜ್ಯಗಳಲ್ಲಿ ಪಂಜಾಬ್​ ಕೂಡ ಒಂದು.

ಒಮಿಕ್ರಾನ್ ಕೂಡ ಏರಿಕೆ ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 495 ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2630ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಸದ್ಯ ಒಮಿಕ್ರಾನ್​ ಮೆಟ್ರೋನಗರಗಳಲ್ಲೇ ಹೆಚ್ಚಾಗಿ ಹಬ್ಬುತ್ತಿದೆ ಎಂದು ಹೇಳಲಾಗಿದೆ.  ಕೊವಿಡ್​ 19ನ ಒಮಿಕ್ರಾನ್​ ತಳಿ ವೇಗವಾಗಿ ಹರಡುತ್ತಿರುವ ಬೆನ್ನಲ್ಲೇ ಕೊವಿಡ್ 19 ತಪಾಸಣೆಯ ವೇಗವನ್ನು, ಅದರಲ್ಲೂ ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆಯ ಮಟ್ಟವನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಎಲ್ಲರ ಎದುರು ಸ್ವಾರ್ಥ ಮೆರೆದ ಅಕ್ಕಿನೇನಿ ನಾಗಾರ್ಜುನ; ಅಭಿಮಾನಿಗಳಿಂದ ಛೀಮಾರಿ

Published On - 3:14 pm, Thu, 6 January 22

ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
‘ಅಪ್ಪು’ ಮರು ಬಿಡುಗಡೆ: ಅಣ್ಣಾವ್ರ ಅಭಿಮಾನಿಗಳಿಂದ ಮತ್ತೊಂದು ಬೇಡಿಕೆ
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ