ಪಣಜಿ: ಕಳೆದ ಕೆಲವು ದಿನಗಳಿಂದ ಗೋವಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿ ಸಾವಿಗೀಡಾದವರ ಸಂಖ್ಯೆ 75ಕ್ಕೇರಿದೆ. ಸತತ 6 ರಾತ್ರಿ ಇಲ್ಲಿ ಆಕ್ಸಿಜನ್ ಪೂರೈಕೆಯಲ್ಲಿ ಏರಿಳಿತ ಕಂಡು ಬಂದಿದ್ದು, ಕಳೆದ ರಾತ್ರಿ 13 ರೋಗಿಗಳು ಮೃತಪಟ್ಟಿದ್ದಾರೆ. ರೋಗಿಗಳ ಸಂಬಂಧಿಕರು ಸೋಷಿಯಲ್ ಮೀಡಿಯಾದಲ್ಲಿ ಸಹಾಯ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದ್ದು, ಆರೋಗ್ಯ ಕಾರ್ಯದರ್ಶಿ ರವಿ ಧವನ್ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸರಬರಾಜನ್ನು ಪುನಃಸ್ಥಾಪಿಸಲು ಆಸ್ಪತ್ರೆಗೆ ಧಾವಿಸಿದ್ದಾರೆ. ಮುಂಜಾನೆ 2.30 ರ ಹೊತ್ತಿಗೆ ಈ ಘಟನೆ ಸಂಭವಿಸಿದೆ.
ಆರೋಗ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ .ಅವರು ಡುರಾ ಸಿಲಿಂಡರ್‌ಗಳಿಗಾಗಿ (ಜಿಎಂಸಿಯಲ್ಲಿ ಅಳವಡಿಸಲಾಗುತ್ತಿರುವ ಹೊಸ ದೊಡ್ಡ ಸಿಲಿಂಡರ್‌ಗಳನ್ನು) ಪ್ರಯತ್ನಿಸುತ್ತಿದ್ದಾರೆಂದು ಹೇಳಿದ್ದಾರೆ. ಆದ್ದರಿಂದಲೇ ಈ ವ್ಯತ್ಯಯ ಸಂಭವಿಸಿತ್ತು ಎಂದು ಶ್ರುತಿ ಚತುರ್ವೇದಿ ಹೇಳಿದ್ದಾರೆ. ಗೋವಾ ರಾಜ್ಯದಲ್ಲಿನ ಕೊವಿಡ್ ನಿರ್ವಹಣೆ ಕುರಿತು ಶ್ರುತಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಗುರುವಾರ ಆಮ್ಲಜನಕದ ಮಟ್ಟ ಕುಸಿದಿದ್ದು ಕಳೆದ ನಾಲ್ಕು ರಾತ್ರಿಗಳಲ್ಲಿ 75 ಮಂದಿ ಸಾವಿಗೀಡಾಗಿದ್ದಾರೆ ಎಂದು ಗೋವಾ ಫಾರ್ವರ್ಡ್ ಪಾರ್ಟಿ ಮುಖ್ಯಸ್ಥ ವಿಜಯ್ ಸರ್ದೇಸಾಯಿ ಹೇಳಿದ್ದಾರೆ .ಇದನ್ನು ಆರೋಗ್ಯ ಅಧಿಕಾರಿಗಳು ದೃಢೀಕರಿಸಿಲ್ಲ . ಜಿಎಂಸಿಎಚ್‌ನ ವಿವಿಧ ಕೊವಿಡ್ -19 ವಾರ್ಡ್‌ಗಳಲ್ಲಿ ದಾಖಲಾದ 13 ರೋಗಿಗಳು ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಆರೋಗ್ಯ ಅಧಿಕಾರಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಒಟ್ಟಾರೆಯಾಗಿ, ಸತತ ನಾಲ್ಕು ರಾತ್ರಿಗಳಲ್ಲಿ 75 ಜನರು ಸಾವಿಗೀಡಾಗಿದ್ದಾರೆ. ಅಂದರೆ ಬೆಳಿಗ್ಗೆ 1 ರಿಂದ ಬೆಳಿಗ್ಗೆ 6 ರವರೆಗೆ ಸಾವನ್ನಪ್ಪಿದ್ದಾರೆ. ಮೇ 10 ರಂದು ರಾತ್ರಿ- 26 ಜನರು, 11ರಂದು ರಾತ್ರಿ- 21 ಜನರು, 12 ರಂದು ರಾತ್ರಿ 15 ಜನರು ಮತ್ತು ಈ, ಕಳೆದ ರಾತ್ರಿ, ಇದು 13 ಜನರು ಸಾವಿಗೀಡಾಗಿದ್ದಾರೆ. ಆದ್ದರಿಂದ, ಸತತ ನಾಲ್ಕು ರಾತ್ರಿಗಳಲ್ಲಿ 75 ಜನರು ಸಾವನ್ನಪ್ಪಿದ್ದಾರೆ. ಆಮ್ಲಜನಕದ ಕೊರತೆಯಿಂದಾಗಿ ಜಿಎಂಸಿಎಚ್‌ನಲ್ಲಿ ಆಮ್ಲಜನಕದ ಪೂರೈಕೆಯ ಅಸಮರ್ಪಕ ನಿರ್ವಹಣೆಯಿಂದಾಗಿ ಇದು ಸಂಭವಿಸಿದೆ ಎಂದು ಅವರು ಹೇಳಿದರು.
ಗೋವಾ ಸರ್ಕಾರವು ಸದ್ಯ ಗೋವಾದಲ್ಲಿರುವ ಬಾಂಬೆ ಹೈಕೋರ್ಟ್‌ನ ಮುಂದೆ ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದ ಹಲವಾರು ಅರ್ಜಿಗಳನ್ನು ಎದುರಿಸುತ್ತಿದೆ ಜಿಎಮ್‌ಸಿಎಚ್ ನಲ್ಲಿ ಆಕ್ಸಿಜನ್ ಪೂರೈಕೆಗಿಂತ ಸರಬರಾಜು ಕಷ್ಟವಾಗಿದೆ.
ಆಮ್ಲಜನಕದ ಟ್ರಾಲಿಗಳನ್ನು ಸಾಗಿಸುವ ಟ್ರಾಕ್ಟರ್ ಅನ್ನು ನಡೆಸಲು ಮತ್ತು ಸಿಲಿಂಡರ್ ಗಳನ್ನು ಪೂರೈಸಲಿರುವ ಸಂಪರ್ಕದಲ್ಲಿ ಸಮಸ್ಯೆ ಇದೆ ಈ ಪ್ರಕ್ರಿಯೆಯಲ್ಲಿ ಕೆಲವು ಅಡಚಣೆ ಉಂಟಾಯಿತು, ಇದರ ಪರಿಣಾಮವಾಗಿ ರೋಗಿಗಳಿಗೆ ಆಮ್ಲಜನಕದ ಪೂರೈಕೆ ಮಾರ್ಗಗಳಲ್ಲಿ ಒತ್ತಡ ಕುಸಿಯಿತು. ಇದು ಮೂಲತಃ ಈ ಅಂಶಗಳ ಕಾರಣದಿಂದಾಗಿ ಕೆಲವು ಸಾವುನೋವುಗಳು ಸಂಭವಿಸಿರಬಹುದು ಎಂದು ರಾಜ್ಯ ಸರ್ಕಾರ ಗುರುವಾರ ನ್ಯಾಯಾಲಯಕ್ಕೆ ತಿಳಿಸಿದೆ. ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದರು.
ರಾಜ್ಯದ ಪ್ರಮುಖ ಸಂಶೋಧನಾ ಸಂಸ್ಥೆಯಲ್ಲಿ ಪೂರೈಕೆ ಸಮಸ್ಯೆಗಳ ಬಗ್ಗೆ ವಿಚಾರಿಸಲು ಗೋವಾ ಸರ್ಕಾರ ಐಐಟಿ-ಗೋವಾ ನಿರ್ದೇಶಕ ಡಾ.ಕೆ.ಕೆ.ಮಿಶ್ರಾ ನೇತೃತ್ವದಲ್ಲಿ ಸ್ವತಂತ್ರ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯು ಜಿಎಂಸಿಎಚ್‌ನ ಮಾಜಿ ಡೀನ್ ಡಾ. ವಿ.ಎನ್. ಜಿಂದಾಲ್ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿ ತಾರಿಕ್ ಥಾಮಸ್ ಅವರನ್ನೂ ಒಳಗೊಂಡಿದೆ.
ಇದನ್ನೂ ಓದಿ: ಗೋವಾ ಆಸ್ಪತ್ರೆಯಲ್ಲಿ 15 ರೋಗಿಗಳು ಸಾವು, ಆಕ್ಸಿಜನ್ ಸಿಗದೆ ಸಾವು ಸಂಭವಿಸಿದೆ ಎಂದು ರೋಗಿಗಳ ಕುಟುಂಬ ಆರೋಪ
ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರಿಗೂ ಐವೆರ್ಮೆಕ್ಟಿನ್; ಕೊರೊನಾ ಬಂದರೂ ಸಾವು ತಡೆಯಲು ಈ ಯೋಜನೆ ಎಂದ ಗೋವಾ ಸರ್ಕಾರ