ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರಿಗೂ ಐವೆರ್ಮೆಕ್ಟಿನ್​; ಕೊರೊನಾ ಬಂದರೂ ಸಾವು ತಡೆಯಲು ಈ ಯೋಜನೆ ಎಂದ ಗೋವಾ ಸರ್ಕಾರ

Ivermectin: ಇದು ಕೊರೊನಾ ಲಸಿಕೆಗೆ ಪರ್ಯಾಯವಾಗಲೀ ಅಥವಾ ಕೊರೊನಾ ಬಾರದಂತೆ ತಡಗಟ್ಟಲಿ ಎಂಬುದಕ್ಕಾಗಲೀ ಅಲ್ಲ. ಬದಲಾಗಿ ಕೊರೊನಾ ಸೋಂಕು ವ್ಯಾಪಿಸಿದರೂ ಸಾವು ತಡೆಗಟ್ಟಬಹುದು ಎಂಬ ಕಾರಣಕ್ಕೆ: ಆರೋಗ್ಯ ಸಚಿವ ವಿಶ್ವಜಿತ್ ರಾಣೆ

ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರಿಗೂ ಐವೆರ್ಮೆಕ್ಟಿನ್​; ಕೊರೊನಾ ಬಂದರೂ ಸಾವು ತಡೆಯಲು ಈ ಯೋಜನೆ ಎಂದ ಗೋವಾ ಸರ್ಕಾರ
ಪ್ರಾತಿನಿಧಿಕ ಚಿತ್ರ
Follow us
Skanda
|

Updated on: May 11, 2021 | 3:39 PM

ಪಣಜಿ: ಭಾರತದ ಹಲವು ರಾಜ್ಯಗಳು ಈಗಾಗಲೇ ಕೊರೊನಾ ಎರಡನೇ ಅಲೆ ಹೊಡೆತವನ್ನು ತೀವ್ರವಾಗಿ ಅನುಭವಿಸುತ್ತಿವೆ. ಸೋಂಕಿತರ ಪ್ರಮಾಣ ಏಕಾಏಕಿ ಏರಿದ ಕಾರಣ ನಿಯಂತ್ರಣವೂ ಕಷ್ಟವಾಗಿ ವೈದ್ಯಕೀಯ ವ್ಯವಸ್ಥೆ ಬುಡಮೇಲಾಗಿದೆ. ಇದರ ನೇರ ಪರಿಣಾಮವೆಂಬಂತೆ ಸೋಂಕಿತರ ಮರಣ ಪ್ರಮಾಣವೂ ಏರುಗತಿಯಲ್ಲಿ ಸಾಗಿದ್ದು, ಪರಿಸ್ಥಿತಿ ನಿಭಾಯಿಸಲು ಹೆಣಗಾಡುವಂತಾಗಿದೆ. ಇಂತಹ ವಿಷಮ ಪರಿಸ್ಥಿತಿಯನ್ನು ನೋಡಿ ಎಚ್ಚೆತ್ತುಕೊಂಡಿರುವ ಗೋವಾ ರಾಜ್ಯ ಸರ್ಕಾರವೀಗ ದೃಢ ನಿರ್ಧಾರವೊಂದನ್ನು ತಳೆದಿದೆ. ಕೊರೊನಾ ಚಿಕಿತ್ಸೆಗೆ ಬಳಸಬಹುದು ಎನ್ನಲಾಗುತ್ತಿರುವ ಐವೆರ್ಮೆಕ್ಟಿನ್ ಔಷಧವನ್ನು 18 ವರ್ಷ ಮೇಲ್ಪಟ್ಟ ಎಲ್ಲರಿಗೂ ನೀಡಲು ನಿರ್ಧರಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ಕೊರೊನಾದಿಂದ ಉಂಟಾಗಬಹುದಾದ ಮರಣ ಪ್ರಮಾಣವನ್ನು ತಗ್ಗಿಸಲು 18ವರ್ಷ ಮೇಲ್ಪಟ್ಟ ಎಲ್ಲರಿಗೂ ಐವೆರ್ಮೆಕ್ಟಿನ್ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕೊರೊನಾ ಇದ್ದರೂ, ಇರದಿದ್ದರೂ 18 ವರ್ಷ ವಯಸ್ಸು ದಾಟಿದವರಿಗೆ ಐದು ದಿನಗಳ ಕಾಲ 12ಎಂಜಿ ಐವೆರ್ಮೆಕಟ್ಟಿನ್ ನೀಡಲು ನಿರ್ಧರಿಸಿದ್ದೇವೆ. ಇದು ಕೊರೊನಾ ಲಸಿಕೆಗೆ ಪರ್ಯಾಯವಾಗಲೀ ಅಥವಾ ಕೊರೊನಾ ಬಾರದಂತೆ ತಡಗಟ್ಟಲಿ ಎಂಬುದಕ್ಕಾಗಲೀ ಅಲ್ಲ. ಬದಲಾಗಿ ಕೊರೊನಾ ಸೋಂಕು ವ್ಯಾಪಿಸಿದರೂ ಸಾವು ತಡೆಗಟ್ಟಬಹುದು ಎಂಬ ಕಾರಣಕ್ಕೆ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಮಾಡುವಂತೆ ಹಾಗೂ ಎಲ್ಲೆಡೆ ಔಷಧ ಲಭ್ಯವಾಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಹೇಳಿದ್ದಾರೆ.

ಹೀಗಾಗಿ ಸದರಿ ಔಷಧಿ ಗ್ರಾಮೀಣ ಪ್ರದೇಶದಿಂದ ಹಿಡಿದು ರಾಜ್ಯದ ಎಲ್ಲೆಡೆ ಸಿಗುವಂತೆ ನೋಡಿಕೊಳ್ಳಲಾಗುತ್ತಿದ್ದು, ಯಾವುದೇ ಸೋಂಕಿನ ಲಕ್ಷಣ ಇದ್ದರೂ, ಇಲ್ಲದಿದ್ದರೂ ಚಿಕಿತ್ಸೆಯನ್ನು ತಕ್ಷಣ ಆರಂಭಿಸಲು ಗೋವಾ ಸರ್ಕಾರ ನಿರ್ಧರಿಸಿದೆ. ಐವೆರ್ಮೆಕ್ಟಿನ್​ ಬಳಕೆಯಿಂದ ಬ್ರಿಟನ್, ಇಟಲಿ, ಸ್ಪೇನ್ ಹಾಗೂ ಜಪಾನ್ ದೇಶಗಳು ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿವೆ.

ಸೋಮವಾರದ (ಮೇ 10) ಅಂತ್ಯಕ್ಕೆ ಗೋವಾದಲ್ಲಿ 24 ತಾಸಿನಲ್ಲಿ 2,804 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,21,650ಕ್ಕೆ ತಲುಪಿದೆ. ಅಂತೆಯೇ 50 ಜನ ಸಾವಿಗೀಡಾಗುವ ಮೂಲಕ ಮರಣ ಪ್ರಮಾಣ 1,729ರಷ್ಟಾಗಿದೆ ಎಂದು ಗೋವಾ ಸರ್ಕಾರದ ಆರೋಗ್ಯ ಇಲಾಖೆ ತಿಳಿಸಿದೆ.

(Ivermectin will be given to all above 18 irrespective of covid 19 to avoid mortality says Goa State Government)

ಇದನ್ನೂ ಓದಿ: ಕೊವಿಡ್​ 19 ಚಿಕಿತ್ಸೆಗೆ ವರವಾಗಲಿದೆಯೇ ಪಶು ಔಷಧಿ ಐವೆರ್ಮೆಕ್ಟಿನ್?

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ