AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Modi 73th Birthday: 800 ಕೆಜಿ ಧಾನ್ಯ ಬಳಸಿ ಮೋದಿಯವರ ಚಿತ್ರ ಬಿಡಿಸಿದ 13 ವರ್ಷದ ವಿದ್ಯಾರ್ಥಿನಿ

ಪ್ರೀಸ್ಲಿಯ ಪರಿಶ್ರಮವನ್ನು UNICO ವರ್ಲ್ಡ್ ರೆಕಾರ್ಡ್‌ನಿಂದ ಗುರುತಿಸಲ್ಪಟ್ಟಿದ್ದು, ವಿದ್ಯಾರ್ಥಿ ಸಾಧನೆಯ ವಿಭಾಗದಲ್ಲಿ ನೋಂದಾಯಿಸಲಾಗಿದೆ. ಈಕೆಗೆ UNICO ವಿಶ್ವ ದಾಖಲೆಗಳ ನಿರ್ದೇಶಕ ಆರ್ ಶಿವರಾಮನ್ ಅವರು ಪ್ರಮಾಣಪತ್ರ ಮತ್ತು ಪದಕವನ್ನು ನೀಡಿ ಗೌರವಿಸಿದರು. ಬಾಲಕಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಪೋಷಕರು ಹಾಗೂ ಸಂಬಂಧಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PM Modi 73th Birthday: 800 ಕೆಜಿ ಧಾನ್ಯ ಬಳಸಿ ಮೋದಿಯವರ ಚಿತ್ರ ಬಿಡಿಸಿದ 13 ವರ್ಷದ ವಿದ್ಯಾರ್ಥಿನಿ
ಮೋದಿಯ ಚಿತ್ರ ಬಿಡಿಸಿ ದಾಖಲೆ ಬರೆದ ವಿದ್ಯಾರ್ಥಿನಿ
ರಶ್ಮಿ ಕಲ್ಲಕಟ್ಟ
|

Updated on:Sep 16, 2024 | 2:32 PM

Share

ಚೆನ್ನೈ ಸೆಪ್ಟೆಂಬರ್ 16: 13ರ ಹರೆಯದ ಶಾಲಾ ವಿದ್ಯಾರ್ಥಿ ಪ್ರೀಸ್ಲಿ ಶೆಕಿನಾ (Presley Shekinah )ಅವರು 800 ಕೆಜಿ ಧಾನ್ಯ ಬಳಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಭಾವಚಿತ್ರವನ್ನು ನಿರಂತರವಾಗಿ 12 ಗಂಟೆಗಳ ಕಾಲ ಚಿತ್ರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿಯವರ ಜನ್ಮದಿನದ ಸಂದರ್ಭದಲ್ಲಿ ಅವರು ವಿಶ್ವದ ಅತಿದೊಡ್ಡ ಚಿತ್ರವನ್ನು ಅನಾವರಣಗೊಳಿಸಿದರು. ಪ್ರೀಸ್ಲಿ ಶೆಕಿನಾ ತನ್ನ ಹೆತ್ತವರಾದ ಪ್ರತಾಪ್ ಸೆಲ್ವಂ (ತಂದೆ) ಮತ್ತು ಸಂಕೀರಾಣಿ (ತಾಯಿ) ಅವರೊಂದಿಗೆ ಚೆನ್ನೈನ ಕೊಲಪಾಕ್ಕಂ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರು ಚೆನ್ನೈನಲ್ಲಿರುವ ವೆಲಮ್ಮಾಳ್ ಶಾಲೆಯ ಖಾಸಗಿ ಶಾಲೆಯಲ್ಲಿ 8 ನೇ ತರಗತಿಯ ವಿದ್ಯಾರ್ಥಿನಿ.

ಈಕೆ 800 ಕೆಜಿ ತೂಕದ ಧಾನ್ಯ ಬಳಸಿ 600 ಚದರ ಅಡಿ ವಿಸ್ತೀರ್ಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬೃಹತ್ ಭಾವಚಿತ್ರವನ್ನು ಚಿತ್ರಿಸಿದ್ದಾರೆ. 12 ಗಂಟೆಗಳ ಕಠಿಣ ಪರಿಶ್ರಮದ ನಂತರ ಈಕೆ ತನ್ನ ಚಿತ್ರವನ್ನು ಪೂರ್ಣಗೊಳಿಸಿದ್ದಾಳೆ. ಪ್ಲೀಸ್ಲಿ ಬೆಳಿಗ್ಗೆ 8.30 ಕ್ಕೆ ಪ್ರಾರಂಭಿಸಿ ಸಂಜೆ 8.30 ರವರೆಗೆ ಈ ಚಿತ್ರ ಬಿಡಿಸುವಲ್ಲಿ ನಿರತಳಾಗಿದ್ದಳು.

ಚಿತ್ರ ಬಿಡಿಸುತ್ತಿರುವ ವಿಡಿಯೊ

ಪ್ರೀಸ್ಲಿಯ ಪರಿಶ್ರಮವನ್ನು UNICO ವರ್ಲ್ಡ್ ರೆಕಾರ್ಡ್‌ನಿಂದ ಗುರುತಿಸಲ್ಪಟ್ಟಿದ್ದು, ವಿದ್ಯಾರ್ಥಿ ಸಾಧನೆಯ ವಿಭಾಗದಲ್ಲಿ ನೋಂದಾಯಿಸಲಾಗಿದೆ. ಈಕೆಗೆ UNICO ವಿಶ್ವ ದಾಖಲೆಗಳ ನಿರ್ದೇಶಕ ಆರ್ ಶಿವರಾಮನ್ ಅವರು ಪ್ರಮಾಣಪತ್ರ ಮತ್ತು ಪದಕವನ್ನು ನೀಡಿ ಗೌರವಿಸಿದರು. ಬಾಲಕಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಪೋಷಕರು ಹಾಗೂ ಸಂಬಂಧಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

4000 ಕೆಜಿ ಸಸ್ಯಾಹಾರಿ ಲಂಗರ್ ವಿತರಿಸಲಿದೆ ಅಜ್ಮೀರ್ ಷರೀಫ್ ದರ್ಗಾ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 74ನೇ ಜನ್ಮದಿನಕ್ಕೆ ಅಜ್ಮೀರ್ ಷರೀಫ್ ದರ್ಗಾವು ಸೆಪ್ಟೆಂಬರ್ 17 ರಂದು 4000 ಕೆಜಿ ಸಸ್ಯಾಹಾರಿ ಲಂಗರ್ ಅನ್ನು ವಿತರಿಸಲಿದೆ, ಗಡ್ಡಿ ನಾಶಿನ್-ದರ್ಗಾ ಅಜ್ಮೀರ್ ಷರೀಫ್ . ಸೈಯದ್ ಅಫ್ಶಾನ್ ಚಿಷ್ಟಿ ಪ್ರಕಾರ, ಲಂಗರ್ ಅಕ್ಕಿ, ಶುದ್ಧ ತುಪ್ಪ, ಒಣ ಹಣ್ಣುಗಳನ್ನು ಒಳಗೊಂಡಿರುತ್ತದೆ. . ಇದನ್ನು ಹಲವಾರು ಭಕ್ತರಿಗೆ ಮತ್ತು ಹಿಂದುಳಿದವರಿಗೆ ದಾನ ಮಾಡಲಾಗುವುದು.

ದರ್ಗಾ ಅಧಿಕಾರಿಗಳ ಪ್ರಕಾರ, ಇಡೀ ಕಾರ್ಯಕ್ರಮವು ಅವರ ‘ಸೇವಾ ಪಖ್ವಾಡಾ’ ಆಚರಣೆಯ ಭಾಗವಾಗಿದೆ ಮತ್ತು ಹಜರತ್ ಖ್ವಾಜಾ ಮೊಯಿನುದ್ದೀನ್ ಚಿಷ್ಟಿಯ ದರ್ಗಾದ 550 ವರ್ಷಗಳ ಹಿಂದಿನ ಸಂಪ್ರದಾಯವನ್ನು ಹೊಂದಿರುವ ಪ್ರಸಿದ್ಧ ‘ಬಿಗ್ ಶಾಹಿ ದೇಗ್’ ನಲ್ಲಿ ಲಂಗರ್ ಅನ್ನು ತಯಾರಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಶಾಂತಿ, ಏಕತೆ ಮತ್ತು ಯೋಗಕ್ಷೇಮಕ್ಕಾಗಿ ದರ್ಗಾ ವಿಶೇಷ ಪ್ರಾರ್ಥನೆಗಳನ್ನು ಸಹ ಮಾಡಲಿದೆ.

ಇದನ್ನೂ ಓದಿ: ಪ್ರಧಾನಿ ಹುದ್ದೆಯ ಆಫರ್ ನಯವಾಗಿ ತಿರಸ್ಕರಿಸಿದೆ ಎಂದ ಗಡ್ಕರಿ; ಬಿಜೆಪಿಯಲ್ಲಿ ಹುದ್ದೆಗಾಗಿ ಹೋರಾಟ ನಡೆಯುತ್ತಿದೆ ಎಂದ ಆರ್‌ಜೆಡಿ

ಎಎನ್‌ಐ ಜೊತೆ ಮಾತನಾಡಿದ ಚಿಷ್ಟಿ, “ಅವರ (ಪಿಎಂ ಮೋದಿ) ಜನ್ಮದಿನದ ಸಂದರ್ಭದಲ್ಲಿ, ದೇಶದ ಧಾರ್ಮಿಕ ಸ್ಥಳಗಳಲ್ಲಿ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅವರ ಜನ್ಮದಿನದಂದು ನಾವು 4,000 ಕೆಜಿ ಸಸ್ಯಾಹಾರಿ ಆಹಾರವನ್ನು ತಯಾರಿಸುತ್ತೇವೆ. ಅಕ್ಕಿ ಮತ್ತು ಶುದ್ಧ ತುಪ್ಪ, ಒಣ ಹಣ್ಣುಗಳನ್ನು ವಿತರಿಸಲಾಗುತ್ತದೆ. ಅದರೊಂದಿಗೆ ನಮ್ಮ ಸುತ್ತಮುತ್ತಲಿನ ಗುರುಗಳು ಮತ್ತು ಬಡವರಿಗೆ ಸೇವೆಯಾಗಿ ಲಂಗರ್ ನೀಡಲಾಗುತ್ತದೆ ಎಂದಿದ್ದಾರೆ. ಇಂಡಿಯನ್ ಮೈನಾರಿಟಿ ಫೌಂಡೇಶನ್ ಮತ್ತು ಚಿಷ್ಟಿ ಫೌಂಡೇಶನ್ ಲಂಗರ್ ಅನ್ನು ಆಯೋಜಿಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:31 pm, Mon, 16 September 24

ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ
‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ