ಅಫ್ಘಾನಿಸ್ತಾನದಿಂದ ನಿನ್ನೆ ಬಂದ 16 ಜನರಿಗೆ ಕೊರೊನಾ ಸೋಂಕು; ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿಗೂ ಆತಂಕ

| Updated By: Lakshmi Hegde

Updated on: Aug 25, 2021 | 10:09 AM

ಮಂಗಳವಾರ ಬಂದ 78 ಜನರಲ್ಲಿ 46ಮಂದಿ ಅಫ್ಘಾನ್​ ಸಿಖ್​ ಹಾಗೂ ಹಿಂದು ಸಮುದಾಯದವರು ಇದ್ದಾರೆ. ಇವರೆಲ್ಲ ಕಾಬೂಲ್​ನಿಂದ ದುಶಾಂಬೆ ಮಾರ್ಗವಾಗಿ, ಏರ್​ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಬಂದಿಳಿದಿದ್ದಾರೆ.

ಅಫ್ಘಾನಿಸ್ತಾನದಿಂದ ನಿನ್ನೆ ಬಂದ 16 ಜನರಿಗೆ ಕೊರೊನಾ ಸೋಂಕು; ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿಗೂ ಆತಂಕ
ಕಾಬೂಲ್​​ನಿಂದ ಬಂದ ಪ್ರಯಾಣಿಕರು
Follow us on

ಉಗ್ರರ ಕೈವಶದಲ್ಲಿರುವ ಅಫ್ಘಾನಿಸ್ತಾನ (Afghanistan) ಜನರನ್ನು ಭಾರತಕ್ಕೆ ಕರೆತರುವ ‘ಆಪರೇಶನ್​ ದೇವಿ ಶಕ್ತಿ’ ಕಾರ್ಯ ಭರದಿಂದ ಸಾಗುತ್ತಿದೆ. ಆದರೆ ಈ ಮಧ್ಯೆ ಕೊರೊನಾ ಸೋಂಕಿ (Coronavirus)ನ ಆತಂಕ ಕೂಡ ಹೆಚ್ಚಾಗುತ್ತಿದೆ. ಮಂಗಳವಾರ ಕಾಬೂಲ್​ (Kabul)ನಿಂದ ಬಂದ 78 ಜನರಲ್ಲಿ 16 ಮಂದಿಗೆ ಕೊವಿಡ್​ 19 ಸೋಂಕು ಇರುವುದು ದೃಢಪಟ್ಟಿದೆ. ಅದರಲ್ಲೀಗ ಅಫ್ಘಾನಿಸ್ತಾನದ ಗುರುದ್ವಾರಗಳಿಂದ ಗುರು ಗ್ರಂಥ ಸಾಹೀಬ್​​ ಪವಿತ್ರ ಗ್ರಂಥ ತಂದ ಮೂವರಲ್ಲೂ ಸಹ ಕೊರೊನಾ ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿಯವರಿಗೂ ಸೋಂಕಿನ ಆತಂಕ ಶುರುವಾಗಿದೆ.  ಯಾಕೆಂದರೆ ನಿನ್ನೆ ಈ ಮೂವರು ತಂದಿದ್ದ ಗುರು ಗ್ರಂಥ ಸಾಹೀಬ್​ ಸ್ವರೂಪ್​​ನ್ನು ಕೇಂದ್ರ ಸಚಿವ ಹರ್ದೀಪ್​ ಸಿಂಗ್​ ಪುರಿ, ವಿ ಮುರಳೀಧರನ್ ಮತ್ತು ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್. ಪಿ. ಸಿಂಗ್ ಸ್ವೀಕರಿಸಿದ್ದರು. 

ಮಂಗಳವಾರ ಬಂದ 78 ಜನರಲ್ಲಿ 46ಮಂದಿ ಅಫ್ಘಾನ್​ ಸಿಖ್​ ಹಾಗೂ ಹಿಂದು ಸಮುದಾಯದವರು ಇದ್ದಾರೆ. ಇವರೆಲ್ಲ ಕಾಬೂಲ್​ನಿಂದ ದುಶಾಂಬೆ ಮಾರ್ಗವಾಗಿ, ಏರ್​ ಇಂಡಿಯಾ ವಿಮಾನದಲ್ಲಿ ದೆಹಲಿಗೆ ಬಂದಿಳಿದಿದ್ದಾರೆ. ಅದರಲ್ಲಿ ಮೂವರು ಸಿಖ್​ರು ತಂದಿದ್ದ ಪವಿತ್ರ ಪುಸ್ತಕದ ಪ್ರತಿಯನ್ನು ದೆಹಲಿ ಇಂದಿರಾ ಗಾಂಧಿ ಏರ್​ಪೋರ್ಟ್​ನಲ್ಲಿ ಹರ್ದೀಪ್​ ಸಿಂಗ್​ ಪುರಿ, ವಿ.ಮುರಳೀಧರನ್​ ಮತ್ತು ಆರ್​.ಪಿ.ಸಿಂಗ್​ ಸ್ವೀಕರಿಸಿದ್ದಾರೆ. ನಂತರ ಅದನ್ನು ನ್ಯೂ ಮಹಾವೀರ್ ನಗರದಲ್ಲಿರುವ ಗುರು ಅರ್ಜನ್​ ದೇವ್​ ಜಿ ಗುರುದ್ವಾರಕ್ಕೆ ಕೊಂಡೊಯ್ಯಲಾಗಿದೆ. ಇದೀಗ ಆ ಮೂವರಲ್ಲೂ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಬಿಜೆಪಿ ನಾಯಕರಿಗೂ ಕೊರೊನಾ ಆತಂಕ ಶುರುವಾಗಿದೆ.

ತಾಲಿಬಾನ್​​ನಿಂದ ಎಚ್ಚರಿಕೆ
ಈ ಮಧ್ಯೆ ತಾಲಿಬಾನ್​ ಯುಎಸ್​ಗೆ ಒಂದು ಖಡಕ್​ ಎಚ್ಚರಿಕೆ ನೀಡಿದೆ. ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರ ಮಾಡುವ ಕಾರ್ಯವನ್ನು ಆಗಸ್ಟ್​ 31ರೊಳಗೆ ಮುಗಿಸಬೇಕು ಎಂದು ಹೇಳಿದೆ. ಅದಕ್ಕೆ ಪ್ರತಿಯಾಗಿ ಜೋ ಬೈಡನ್​ ಕೂಡ, ತಾವು ಆಗಸ್ಟ್​ 31ರೊಳಗೆ ಸ್ಥಳಾಂತರ ಕಾರ್ಯ  ಪೂರ್ಣಗೊಳಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಈಗ ಭದ್ರತಾ ಸವಾಲುಗಳೊಂದಿಗೆ ಕೊರೊನಾ ಕೂಡ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಹಣಕಾಸು ನೆರವು ನಿಲ್ಲಿಸಿದ ವಿಶ್ವಬ್ಯಾಂಕ್​; ತಾಲಿಬಾನಿಗಳಿಗೆ ಆರ್ಥಿಕ ದಿಗ್ಬಂಧನ

Viral Video: ಮದುವೆ ಮಂಟಪದಲ್ಲಿಯೇ ಟಗ್ ಆಫ್ ವಾರ್ ಸ್ಪರ್ಧೆ; ಜಾರಿ ಬಿದ್ದ ಮಹಿಳೆಯನ್ನು ವಿಡಿಯೋದಲ್ಲೇ ನೋಡಿ

Published On - 9:58 am, Wed, 25 August 21