ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 16,326 ಕೊವಿಡ್ 19 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ 666 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ದೇಶದಲ್ಲಿ ಕೊರೊನಾ ಸೋಂಕಿತ (Coronavirus)ರ ಸಂಖ್ಯೆ 3,41,59,562ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 4,53,708 ಕ್ಕೆ ತಲುಪಿದೆ. ದೇಶದಲ್ಲಿ ಸದ್ಯ ಕೊರೊನಾ ಸಕ್ರಿಯ ಪ್ರಕರಣಗಳು 1,73,728ರಷ್ಟಿವೆ. ದೇಶದ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆಯ 0.51ರಷ್ಟು ಮಾತ್ರ ಸಕ್ರಿಯ ಪ್ರಕರಣಗಳು ಇದ್ದು, ಇದು 2020ರ ಮಾರ್ಚ್ ನಂತರ ಇಲ್ಲಿಯವರೆಗಿನ ಅತ್ಯಂತ ಕಡಿಮೆ ಅನುಪಾತವಾಗಿದೆ. ಕೊರೊನಾ ಸೋಂಕಿನ ದಿನದ ಪಾಸಿಟಿವಿಟಿ ದರ 1.20ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ.1.24 ಇದೆ. ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 3,35,32,126 ರಷ್ಟಿದ್ದು, ಸಾವಿನ ದರ ಶೇ.133ಕ್ಕೆ ನಿಂತಿದೆ. ಇನ್ನು ಸತತವಾಗಿ ಕಳೆದ 29ದಿನಗಳಿಂದಲೂ ಒಂದು ದಿನದಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿತರ ಸಂಖ್ಯೆ 30 ಸಾವಿರದ ಗಡಿ ದಾಟಿಲ್ಲ. 118ದಿನಗಳಿಂದ 50 ಸಾವಿರದ ಗಡಿ ದಾಟಿಲ್ಲ. ಆದರೂ ನಿನ್ನೆಗಿಂತ ಇಂದು ಸ್ವಲ್ಪ ಜಾಸ್ತಿ ಪ್ರಕರಣಗಳು ಪತ್ತೆಯಾಗಿವೆ.
ಕೊರೊನಾ ಲಸಿಕೆ ಅಭಿಯಾನ
ದೇಶದಲ್ಲಿ ಮೊನ್ನೆಗೆ 100 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಿ ಮುಗಿದಿದೆ. ಹಾಗೇ ಕಳೆದ 24ಗಂಟೆಯಲ್ಲಿ 68,48,417 ಡೋಸ್ ಕೊವಿಡ್ 19 ಲಸಿಕೆ ನೀಡಲಾಗಿದೆ. ಇಲ್ಲಿಯವರೆಗೆ ಒಟ್ಟು 101.3 ಕೋಟಿ ಡೋಸ್ ಕೊವಿಡ್ 19 ಲಸಿಕೆ ನೀಡಿಕೆಯಾಗಿದೆ. ಇಷ್ಟು ಡೋಸ್ ನೀಡಲು 1,00,29,602 ಸೆಷನ್ಸ್ಗಳು ಬೇಕಾಗಿವೆ. ದೇಶದಲ್ಲಿ ಸದ್ಯ ಶೇ.31ರಷ್ಟು ಜನರಿಗೆ ಎರಡೂ ಡೋಸ್ ಕೊವಿಡ್ 19 ಲಸಿಕೆ ನೀಡಲಾಗಿದೆ.
ಇದನ್ನೂ ಓದಿ: Ananya Panday: ‘ಇದು ಫಿಲ್ಮ್ ಪ್ರೊಡಕ್ಷನ್ ಹೌಸ್ ಅಲ್ಲ’: ವಿಚಾರಣೆಗೆ ತಡವಾಗಿ ಬಂದ ಅನನ್ಯಾಗೆ ಸಮೀರ್ ವಾಂಖೆಡೆ ಕ್ಲಾಸ್
Babar Azam: ಹಿಂದಿನ ದಾಖಲೆ ಲೆಕ್ಕಕ್ಕೆ ಬರಲ್ಲ: ಭಾರತ ವಿರುದ್ಧ ಗೆದ್ದೇ ಗೆಲ್ಲುತ್ತೇವೆ ಎಂದ ಪಾಕಿಸ್ತಾನ ನಾಯಕ ಬಾಬರ್