AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಬೆಂಗಾವಲು ಪಡೆಯ 19 ವಾಹನಗಳಿಗೆ ನೀರು ಮಿಶ್ರಿತ ಡೀಸೆಲ್; ಪೆಟ್ರೋಲ್ ಬಂಕ್​ನಲ್ಲೇ ನಿಂತ ಕಾರುಗಳು

ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಬೆಂಗಾವಲು ಪಡೆಯ 19 ವಾಹನಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿ ನೀರು ಮಿಶ್ರಿತ ಡೀಸೆಲ್ ತುಂಬಿದ್ದಾರೆ. ಇದರಿಂದ ಆ ವಾಹನಗಳು ಮುಂದೆ ಹೋಗದೆ ನಿಂತಲ್ಲೇ ನಿಂತಿವೆ. ಹೀಗಾಗಿ, ಮುಖ್ಯಮಂತ್ರಿಗಳಿಗೆ ಭದ್ರತಾ ಲೋಪ ಉಂಟಾಗಿದೆ. ನೀರು ತುಂಬಿದ ಡೀಸೆಲ್ ಹಾಕಿದ್ದರಿಂದ ಕೆಲವು ಕಾರುಗಳು ಹೆದ್ದಾರಿಯಲ್ಲಿ ನಿಂತರೆ ಇನ್ನು ಕೆಲವು ಪೆಟ್ರೋಲ್ ಬಂಕ್​ನಿಂದ ಹೊರಗೇ ಹೋಗಿಲ್ಲ. ಕೊನೆಗೆ ವಾಹನಗಳನ್ನು ತಳ್ಳಬೇಕಾಯಿತು.

ಸಿಎಂ ಬೆಂಗಾವಲು ಪಡೆಯ 19 ವಾಹನಗಳಿಗೆ ನೀರು ಮಿಶ್ರಿತ ಡೀಸೆಲ್; ಪೆಟ್ರೋಲ್ ಬಂಕ್​ನಲ್ಲೇ ನಿಂತ ಕಾರುಗಳು
Madhya Pradesh Cm Cars
ಸುಷ್ಮಾ ಚಕ್ರೆ
|

Updated on: Jun 27, 2025 | 6:06 PM

Share

ಇಂದೋರ್, ಜೂನ್ 27: ಡೀಸೆಲ್ ಬದಲಿಗೆ ನೀರು ತುಂಬಿದ ನಂತರ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ (CM Mohan Yadav) ಅವರ ಬೆಂಗಾವಲು ಪಡೆಯ 19 ವಾಹನಗಳು ಮುಂದೆ ಹೋಗದೆ ನಿಂತಲ್ಲೇ ನಿಂತಿವೆ. ಕೆಲವು ಹೆದ್ದಾರಿಯಲ್ಲಿ ನಿಂತಿದ್ದರೆ ಇನ್ನು ಕೆಲವರು ಪೆಟ್ರೋಲ್ ಬಂಕ್​ನಲ್ಲಿಯೇ ಹಾಳಾಗಿ ನಿಂತಿವೆ. ಆ ಕಾರುಗಳನ್ನು ತಳ್ಳಿಕೊಂಡು ಹೋಗಲಾಗಿದೆ. ಇದರಿಂದ ಪೆಟ್ರೋಲ್ ಬಂಕ್ ಸೀಲ್ ಮಾಡಲಾಗಿದೆ. ಇಂದೋರ್​​ನಲ್ಲಿ ಸಿಎಂ ಮೋಹನ್ ಯಾದವ್ ಅವರ ಬೆಂಗಾವಲು ಪಡೆಯ ವಾಹನಗಳಾಗಿ ಬಂದಿದ್ದ ಕಾರುಗಳನ್ನು ಎಳೆದುಕೊಂಡು ಹೋಗಲಾಗಿದೆ.

ಮಧ್ಯಪ್ರದೇಶದ ಇಂದೋರ್ ನಲ್ಲಿ ಈ ಘಟನೆ ನಡೆದಿದೆ. ಎಲ್ಲ ವಾಹನಗಳೂ ಹಾಳಾಗಿ ನಿಂತಿದ್ದರಿಂದ ವಾಹನಗಳ ಇಂಧನ ಪರಿಶೀಲನೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪೆಟ್ರೋಲ್ ಬಂಕ್ ನಿಂದ ಸಿಎಂ ಬೆಂಗಾವಲು ಸಿಬ್ಬಂದಿ ಕಾರುಗಳನ್ನು ತಳ್ಳಿಕೊಂಡು ಹೋಗಿದ್ದಾರೆ. ಕೊನೆಗೆ ಸರ್ಕಾರ ಆ ಪೆಟ್ರೋಲ್ ಬಂಕ್ ಅನ್ನು ಸೀಜ್ ಮಾಡಿದೆ. ಕೆಲವು ವಾಹನಗಳು ಪೆಟ್ರೋಲ್ ಬಂಕ್​ನಿಂದ ಹೊರಬರುವಲ್ಲಿ ಯಶಸ್ವಿಯಾದವು. ಆದರೆ ಸ್ವಲ್ಪ ಸಮಯದ ನಂತರ ಹೆದ್ದಾರಿಯಲ್ಲಿ ನಿಂತವು. ಆದರೆ ಉಳಿದ ವಾಹನಗಳು ಪೆಟ್ರೋಲ್ ಬಂಕ್​‌ನಿಂದ ಚಲಿಸಲು ಸಹ ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಬೆಂಗಾವಲು ಪಡೆಯಲ್ಲಿನ ವಾಹನಗಳು ಕೆಟ್ಟುಹೋಗಿ ಅವುಗಳನ್ನು ಎಳೆದುಕೊಂಡು ಹೋಗಬೇಕಾಯಿತು. ಚಾಲಕರು ಮತ್ತು ಪೆಟ್ರೋಲ್ ಪಂಪ್ ಸಿಬ್ಬಂದಿ ಎಸ್‌ಯುವಿಗಳನ್ನು ತಳ್ಳುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು.

ಇದನ್ನೂ ಓದಿ: ಟಾಯ್ಲೆಟ್​​ನಲ್ಲಿ ಕುಳಿತು ಹೈಕೋರ್ಟ್ ವರ್ಚುವಲ್ ವಿಚಾರಣೆಗೆ ಹಾಜರಾದ ಆರೋಪಿ; ವಿಡಿಯೋಗೆ ನೆಟ್ಟಿಗರ ಆಕ್ರೋಶ

ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಬೆಂಗಾವಲು ಪಡೆಯಲ್ಲಿನ 19 ವಾಹನಗಳು ಗುರುವಾರ ತಡರಾತ್ರಿ ಕಲುಷಿತ ಡೀಸೆಲ್ ತುಂಬಿದ ನಂತರ ಕೆಟ್ಟುಹೋಗಿವೆ. ಡೀಸೆಲ್ ತುಂಬಿಸಲು ಪೆಟ್ರೋಲ್ ಬಂಕ್​ನಲ್ಲಿ ಬೆಂಗಾವಲು ಪಡೆಯ ವಾಹನಗಳು ನಿಂತಾಗ ಅದಕ್ಕೆ ಹಾಕಲಾದ ಡೀಸೆಲ್ ಜೊತೆ ನೀರು ಮಿಶ್ರಣವಾಗಿದೆ ಎಂದು ತಿಳಿದುಬಂದಿದೆ. ನಂತರ ಪೆಟ್ರೋಲ್ ಬಂಕ್ ಅನ್ನು ಸೀಲ್ ಮಾಡಲಾಯಿತು. ಪ್ರಾದೇಶಿಕ ಕೈಗಾರಿಕಾ ಕೌಶಲ್ಯ ಮತ್ತು ಅಭಿವೃದ್ಧಿ ಸಮಾವೇಶಕ್ಕಾಗಿ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ರತ್ಲಂಗೆ ಭೇಟಿ ನೀಡಿದ್ದರು. ಇಂದು ಮೋಹನ್ ಯಾದವ್ ಅವರ ಬೆಂಗಾವಲು ಪಡೆಯ ಭಾಗವಾಗಿ 19 ವಾಹನಗಳು ನಿನ್ನೆ ರಾತ್ರಿ ಅಲ್ಲಿಗೆ ಆಗಮಿಸಿದ್ದವು.

“ನಾವು ಇಂದೋರ್‌ನಿಂದ ಬಂದು ಪೆಟ್ರೋಲ್ ಪಂಪ್‌ನಲ್ಲಿ ಇಳಿದು ಇಂಧನ ತುಂಬಿಸಿಕೊಂಡೆವು. ಪೆಟ್ರೋಲ್ ಪಂಪ್‌ನಿಂದ ಹೊರಟ ಮೊದಲ ಕೆಲವು ವಾಹನಗಳು ಹೆದ್ದಾರಿಯಲ್ಲಿ ನಿಂತವು, ಆದರೆ ಉಳಿದವು ಪೆಟ್ರೋಲ್ ಪಂಪ್‌ನಲ್ಲಿಯೇ ನಿಂತವು.” ಎಂದು ಬೆಂಗಾವಲು ಪಡೆಯ ಚಾಲಕರು ತಿಳಿಸಿದ್ದಾರೆ. ಅನುಮಾನಗೊಂಡು ಡೀಸೆಲ್ ಪರಿಶೀಲಿಸಿದಾಗ ಅದಕ್ಕೆ ನೀರು ಬೆರೆತಿರುವುದು ಕಂಡುಬಂದಿದೆ ಎಂದು ಚಾಲಕ ಹೇಳಿದರು. ನಂತರ ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಯಿತು. ಅಧಿಕಾರಿಗಳು ಪೆಟ್ರೋಲ್ ಪಂಪ್ ಅನ್ನು ಸೀಲ್ ಮಾಡಿದ್ದಾರೆ ಮತ್ತು ಸಂಸ್ಥೆಯ ಮಾಲೀಕರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ