ಅದು 2010ರ ಜೂನ್ ತಿಂಗಳು ಬೇಸಿಗೆ ಮುಗಿದು ಮಳೆಗಾಲ ಶುರುವಾಗುವ ಕಾಲ. ಪೋಷಕರು ಹೊಡೆದರೆಂದು ಕೋಪಗೊಂಡು ಮನೆಬಿಟ್ಟು ಹೋಗಿದ್ದ ಇಬ್ಬರು ಮಕ್ಕಳು ಅಂತೂ ತಾಯಿಯ ಮಡಿಲು ಸೇರಿದ್ದಾರೆ. 11 ವರ್ಷದ ರಾಖಿ ಹಾಗೂ 7 ವರ್ಷದ ಬಬ್ಲು ಕೋಪ ಮಾಡಿಕೊಂಡು ಕೇವಲ 1 ಕಿ.ಮೀ ದೂರದಲ್ಲಿದ್ದ ಅಜ್ಜಿ ಮನೆಗೆ ಹೋಗಬೇಕು ಎಂದುಕೊಂಡಿದ್ದರು. ಇದು ಆಗ್ರಾದಲ್ಲಿ ನಡೆದ ಘಟನೆಯಾಗಿದೆ.
ಆದರೆ ಕೋಪದಲ್ಲಿ ಹೊರಟಿದ್ದ ಅವರಿಗೆ ಅಜ್ಜಿ ಮನೆಗೆ ಹೋಗುವ ದಾರಿಯೂ ತಿಳಿಯಲಿಲ್ಲ, ವಾಪಸ್ ಬರುವ ದಾಳಿಯೂ ತಿಳಿಯಲಿಲ್ಲ. ಆದರೆ ಅವರ ತಾಯಿ ಮಕ್ಕಳನ್ನು ಹುಡುಕಲು ನಿತ್ಯ ಪ್ರಯತ್ನ ಮಾಡುತ್ತಲೇ ಇದ್ದರು. ಮಕ್ಕಳ ಹಕ್ಕುಗಳ ಹೋರಾಟಗಾರರ ಬಳಿ ಮನವಿ ಮಾಡಿದ್ದರು. ಆದರೆ ಮಕ್ಕಳನ್ನು ಹುಡುಕಿಸಲು 13 ವರ್ಷಗಳೇ ಹಿಡಿಯಿತು.
ಅನಾಥಾಶ್ರಮದಲ್ಲಿ ಬೆಳೆದ ಬಬ್ಲು ಮಾತನಾಡಿ, ನಾನು ನನ್ನ ತಾಯಿಯನ್ನು ಮಿಸ್ ಮಾಡಿಕೊಳ್ಳದ್ ದಿನವೇ ಇಲ್ಲ, ಈಗ ನಾನು ನನ್ನ ಕುಟುಂಬಕ್ಕೆ ಮರಳಿದ್ದೇನೆ ತುಂಬಾ ಸಂತೋಷವಾಗಿದೆ ಎಂದಿದ್ದಾನೆ. ರಾಖಿ ಕೂಡ ಮನೆಗೆ ಮರಳಿದ್ದಾಳೆ, ಕೆಲವು ವರ್ಷಗಳಿಂದ ಇಬ್ಬರೂ ಸಂಪರ್ಕದಲ್ಲಿದ್ದರೂ, ಹತ್ತು ವರ್ಷದ ಬಳಿಕ ಒಬ್ಬರನ್ನೊಬ್ಬರು ಭೇಟಿ ಮಾಡಿದ್ದರು.
ಬಬ್ಲು ಮತ್ತು ರಾಖಿ ಅವರ ಹೆತ್ತವರಾದ ನೀತು ಕುಮಾರಿ ಮತ್ತು ಸಂತೋಷ್ ಅವರೊಂದಿಗೆ ಉತ್ತರದ ಆಗ್ರಾ ನಗರದಲ್ಲಿ ವಾಸಿಸುತ್ತಿದ್ದರು, ಅವರು ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. 16 ಜೂನ್ 2010 ರಂದು, ಆ ದಿನ ಕೆಲಸ ಸಿಗದಿದ್ದಕ್ಕೆ ನೀತು, ರಾಖಿಯ ಮೇಲಿನ ಹತಾಶೆಯನ್ನು ಹೊರಹಾಕಿದಳು.
ಮತ್ತಷ್ಟು ಓದಿ: 3 ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ತಾಯಿ ಪತ್ತೆ: ಗೃಹಿಣಿ ಮನೆ ತೊರೆಯಲು ಕಾರಣವೇನು, ಇಲ್ಲಿದೆ ಓದಿ
ಅಡುಗೆಗೆ ಬಳಸುತ್ತಿದ್ದ ಸಾಮಗ್ರಗಿಗಳಿಂದ ರಾಖಿಗೆ ಹೊಡೆದಿದ್ದರು. ರಾಖಿ ಮತ್ತು ಬಬ್ಲು ಅವರ ತಾಯಿ ಕೆಲಸಕ್ಕಾಗಿ ಹೊರಗೆ ಹೋದ ನಂತರ ಮನೆ ಬಿಟ್ಟು ಹೋಗಿದ್ದರು. ನಾನು ಸರಿಯಾಗಿ ಓದದಿದ್ದರೆ ನನ್ನ ತಂದೆಯೂ ಕೆಲವೊಮ್ಮೆ ಹೊಡೆಯುತ್ತಿದ್ದರು, ಹಾಗಾಗಿ ರಾಖಿ ನನ್ನ ಬಳಿಗೆ ಬಂದು ಅಜ್ಜಿ ಮನೆಗೆ ಹೋಗೋಣ ಎಂದು ಹೇಳಿದಾಗ ನಾನು ಒಪ್ಪಿದೆ ಎಂದು ಬಬ್ಲು ಹೇಳಿದ್ದಾನೆ.
ಅವರು ದಾರಿ ತಪ್ಪಿದ ನಂತರ, ರಿಕ್ಷಾ ಚಾಲಕರೊಬ್ಬರು ರೈಲ್ವೆ ನಿಲ್ದಾಣಕ್ಕೆ ಕರೆದೊಯ್ದರು. ರೈಲು ಅವರ ಮನೆಯಿಂದ 250 ಕಿ.ಮೀ ದೂರದಲ್ಲಿದ್ದ ಮೀರತ್ಗೆ ತಲುಪಿತ್ತು, ರೈಲಿನಲ್ಲಿದ್ದ ಮಹಿಳೆಯೊಬ್ಬರು ಅವರನ್ನು ಕರೆದುಕೊಂಡು ಹೋಗಿ ಸರ್ಕಾರಿ ಅನಾಥಾಶ್ರಮಕ್ಕೆ ಸೇರಿಸಿದ್ದರು.
ನಾವು ಮನೆಗೆ ಹೋಗಬೇಕೆಂದು ಎಷ್ಟೋ ಬಾರಿ ಕೇಳಿಕೊಂಡಿದ್ದೆವು, ಆದರೆ ಅನಾಥಾಶ್ರಮದವರಾಗಲಿ, ಪೊಲೀಸರಾಗಲಿ ಹುಡುಕುವ ಪ್ರಯತ್ನವನ್ನೇ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ವರ್ಷದ ಬಳಿಕ ಒಡಹುಟ್ಟಿದವರೂ ಕೂಡ ಪೇರ್ಪಟ್ಟರು. ರಾಖಿಯಲ್ಲಿ ದೆಹಲಿಯಲ್ಲಿ ಎನ್ಜಿಒ ನಡೆಸುತ್ತಿದ್ದ ಅನಾಥಾಶ್ರಮಕ್ಕೆ ಸೇರಿಸಲಾಯಿತು. ಒಂದೆರಡು ವರ್ಷಗಳ ಬಳಿಕ ಉತ್ತರ ಪ್ರದೇಶಕ್ಕೆ ಬಬ್ಲುವನ್ನು ಕರೆದೊಯ್ಯಲಾಯಿತು. ಇದೀಗ ಅಂತೂ ಇಬ್ಬರು ಮನೆಗೆ ಮರಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ