ಉತ್ತರ ಪ್ರದೇಶದ ಝಾನ್ಸಿ ಬಳಿ ಟ್ಯಾಂಕರ್ನ ಬ್ಯಾರೆಲ್ ಸ್ಫೋಟ; ಇಬ್ಬರು ಯೋಧರು ಸಾವು, ಒಬ್ಬರಿಗೆ ಗಾಯ
ಬ್ಯಾರೆಲ್ ಸ್ಫೋಟದಿಂದಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಕಮಾಂಡರ್ ಮತ್ತು ಗನ್ನರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ನವದೆಹಲಿ: ಉತ್ತರ ಪ್ರದೇಶದ (Uttar Pradesh) ಝಾನ್ಸಿ ಬಳಿ ಫೀಲ್ಡ್ ಫೈರಿಂಗ್ ತರಬೇತಿ ವೇಳೆ ಟಿ-90 ಟ್ಯಾಂಕರ್ನ ಬ್ಯಾರೆಲ್ ಸ್ಫೋಟಗೊಂಡ ಪರಿಣಾಮ ಭಾರತೀಯ ಸೇನೆಯ (Indian Army) ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅ. 6ರಂದು ಬಾಬಿನಾ ಫೀಲ್ಡ್ ಫೈರಿಂಗ್ ರೇಂಜ್‌ಗಳಲ್ಲಿ ವಾರ್ಷಿಕ ಗುಂಡಿನ ದಾಳಿಯ ಪರೀಕ್ಷಾ ಸಮಯದಲ್ಲಿ ಟ್ಯಾಂಕ್ ಬ್ಯಾರೆಲ್ ಸ್ಫೋಟಗೊಂಡಿದೆ.
ಈ ಟ್ಯಾಂಕರ್ ಅನ್ನು ಮೂವರು ಸಿಬ್ಬಂದಿ ನಿರ್ವಹಿಸುತ್ತಿದ್ದರು. ಎಲ್ಲಾ ಸಿಬ್ಬಂದಿಗೆ ತಕ್ಷಣವೇ ವೈದ್ಯಕೀಯ ತುರ್ತು ಚಿಕಿತ್ಸೆ ನೀಡಿ ಬಬಿನಾದಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಬ್ಯಾರೆಲ್ ಸ್ಫೋಟದಿಂದಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಕಮಾಂಡರ್ ಮತ್ತು ಗನ್ನರ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯ ಕುರಿತು ಸೇನೆ ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ: ಅಫ್ಘಾನಿಸ್ತಾನದ ಆಂತರಿಕ ಸಚಿವಾಲಯದ ಬಳಿ ಇರುವ ಮಸೀದಿಯಲ್ಲಿ ಬಾಂಬ್ ಸ್ಫೋಟ; 4 ಸಾವು
ಟ್ಯಾಂಕರ್ನ ಬ್ಯಾರೆಲ್ ಸ್ಫೋಟಗೊಳ್ಳುತ್ತಿದ್ದಂತೆ ಮೂವರನ್ನೂ ತಕ್ಷಣ ಬಬಿನಾದ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಟ್ಯಾಂಕ್‌ನ ಕಮಾಂಡರ್ ಮತ್ತು ಗನ್ನರ್ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದ್ದು, ಚಾಲಕನಾಗಿದ್ದ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
Naib Risaldar Sumer Singh Bagaria & Sowar Sukanta Mondal lost their lives in the line of duty at Babina (UP) field firing ranges when the barrel of a T-90 tank burst on October 6. pic.twitter.com/I5l58hhGjq
— ANI (@ANI) October 7, 2022
ಮೃತ ಸೈನಿಕರನ್ನು ರಾಜಸ್ಥಾನದ ಸುಮೇರ್ ಸಿಂಗ್ ಮತ್ತು ಪಶ್ಚಿಮ ಬಂಗಾಳದ ಸುಕಾಂತ ಮಂಡಲ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಉತ್ತರ ಪ್ರದೇಶದ ಖಲೀಲಾಬಾದ್‌ನ ಪ್ರದೀಪ್ ಸಿಂಗ್ ಯಾದವ್ ಅವರನ್ನು ಚಿಕಿತ್ಸೆಗಾಗಿ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕರ್ ಸ್ಫೋಟದಲ್ಲಿ ಸಾವನ್ನಪ್ಪಿದ ಇಬ್ಬರು ಸಿಬ್ಬಂದಿಗಳ ಕುಟುಂಬಗಳಿಗೆ ಸೇನೆಯು ತನ್ನ ಸಂತಾಪವನ್ನು ವ್ಯಕ್ತಪಡಿಸಿದೆ.