Big News: ಕೇವಲ 9 ತಿಂಗಳಲ್ಲಿ ಪಾಕಿಸ್ತಾನದ ಜೈಲಿನಲ್ಲಿದ್ದ 6 ಭಾರತೀಯ ಕೈದಿಗಳು ಸಾವು!

6 ಭಾರತೀಯ ಕೈದಿಗಳ ಪೈಕಿ ಐವರು ಮೀನುಗಾರರು ಪಾಕಿಸ್ತಾನದ ವಶದಲ್ಲಿದ್ದಾಗ ಸಾವನ್ನಪ್ಪಿದ್ದಾರೆ. ಅವರು ಪಾಕಿಸ್ತಾನದ ಜೈಲಿನಲ್ಲಿ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ್ದರೂ ಪಾಕಿಸ್ತಾನ ಅವರನ್ನು ಅಕ್ರಮವಾಗಿ ಬಂಧಿಸಿಟ್ಟಿತ್ತು.

Big News: ಕೇವಲ 9 ತಿಂಗಳಲ್ಲಿ ಪಾಕಿಸ್ತಾನದ ಜೈಲಿನಲ್ಲಿದ್ದ 6 ಭಾರತೀಯ ಕೈದಿಗಳು ಸಾವು!
ಪ್ರಾತಿನಿಧಿಕ ಚಿತ್ರImage Credit source: ಪಿಟಿಐ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 07, 2022 | 6:43 PM

ನವದೆಹಲಿ: ಕಳೆದ 9 ತಿಂಗಳ ಅವಧಿಯಲ್ಲಿ ಪಾಕಿಸ್ತಾನದ (Pakistan) ವಿವಿಧ ಜೈಲುಗಳಲ್ಲಿದ್ದ 6 ಭಾರತೀಯ ಕೈದಿಗಳು ಸಾವನ್ನಪ್ಪಿರುವ ಆಘಾತಕಾರಿ ವಿಷಯ (Shocking News) ಬೆಳಕಿಗೆ ಬಂದಿದೆ. 9 ತಿಂಗಳಲ್ಲಿ ಪಾಕಿಸ್ತಾನದ ವಶದಲ್ಲಿದ್ದ ಐವರು ಮೀನುಗಾರರು ಸೇರಿದಂತೆ 6 ಭಾರತೀಯ ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಇಂದು ಮಾಹಿತಿ ನೀಡಿದೆ. ಅಲ್ಲದೆ, ಈ ಘಟನೆ ಬಹಳ ಆತಂಕಕಾರಿ ಬೆಳವಣಿಗೆ ಎಂದು ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಭಾರತೀಯ ಮೀನುಗಾರರ ಸಾವಿನ ಸಂಖ್ಯೆ ಹೆಚ್ಚುತ್ತಿದೆ. 6 ಭಾರತೀಯ ಕೈದಿಗಳ ಪೈಕಿ ಐವರು ಮೀನುಗಾರರು ಪಾಕಿಸ್ತಾನದ ವಶದಲ್ಲಿದ್ದಾಗ ಸಾವನ್ನಪ್ಪಿದ್ದಾರೆ. ಅವರು ಪಾಕಿಸ್ತಾನದ ಜೈಲಿನಲ್ಲಿ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ್ದರೂ ಪಾಕಿಸ್ತಾನ ಅವರನ್ನು ಅಕ್ರಮವಾಗಿ ಬಂಧಿಸಿಟ್ಟಿತ್ತು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಈ ಘಟನೆಗಳು ಬಹಳ ಆತಂಕಕಾರಿಯಾಗಿವೆ. ಇಸ್ಲಾಮಾಬಾದ್‌ನಲ್ಲಿರುವ ನಮ್ಮ ಹೈಕಮಿಷನ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಭಾರತೀಯ ಕೈದಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡುವುದು ಪಾಕಿಸ್ತಾನದ ಕರ್ತವ್ಯವಾಗಿದೆ ಎಂದು ಬಾಗ್ಚಿ ಹೇಳಿದ್ದಾರೆ.

ಇದನ್ನೂ ಓದಿ: Big News: ಜೈಲಿನಲ್ಲಿರುವ ಮಹಿಳಾ ಕೈದಿಗಳಿನ್ನು ಮಾಂಗಲ್ಯ ಧರಿಸಬಹುದು, ಹಬ್ಬ ಆಚರಿಸಬಹುದು; ಉತ್ತರ ಪ್ರದೇಶದ ಹೊಸ ನಿಯಮ ಹೀಗಿದೆ

ಅಕ್ಕಪಕ್ಕದ ರಾಷ್ಟ್ರಗಳಾದ ಭಾರತ- ಪಾಕಿಸ್ತಾನದ ನಡುವಿನ ಅಂತಾರಾಷ್ಟ್ರೀಯ ಕಡಲ ಗಡಿರೇಖೆಯ ಸಮೀಪದಲ್ಲಿ ಮುಳುಗುತ್ತಿದ್ದ 6 ಭಾರತೀಯ ಮೀನುಗಾರರ ಪ್ರಾಣವನ್ನು ಪಾಕ್ ಅಧಿಕಾರಿಗಳು ರಕ್ಷಿಸಿದ್ದಾರೆಂದು ಹೇಳಿಕೊಂಡ ಬೆನ್ನಲ್ಲೇ ಭಾರತದ ವಿದೇಶಾಂಗ ಸಚಿವಾಲಯ ಈ ಆಘಾತಕಾರಿ ಸಂಗತಿಯನ್ನು ಬೆಳಕಿಗೆ ತಂದಿದೆ.

ಪಾಕಿಸ್ತಾನದ ಕಡಲ ಭದ್ರತಾ ಏಜೆನ್ಸಿಯ (ಪಿಎಂಎಸ್‌ಎ) ಹಡಗು ಪೂರ್ವ ಸಮುದ್ರ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಸಮುದ್ರದ ನೀರಿನಲ್ಲಿ 6 ಭಾರತೀಯ ಮೀನುಗಾರರನ್ನು ಪತ್ತೆ ಹಚ್ಚಿದ ಘಟನೆ ಗುರುವಾರ ನಡೆದಿತ್ತು. ಆಗ ಪಾಕಿಸ್ತಾನ ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಿತು. ಭಾರತೀಯ ಮೀನುಗಾರಿಕಾ ದೋಣಿಯ ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು PMSA ಹೇಳಿಕೆ ನೀಡಿತ್ತು. ಭಾರತೀಯ ಮೀನುಗಾರರನ್ನು ರಕ್ಷಿಸಿದ ನಂತರ ಆ ಮೀನುಗಾರರನ್ನು ಆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಕೋಸ್ಟ್ ಗಾರ್ಡ್ ಹಡಗಿಗೆ ಹಸ್ತಾಂತರಿಸಲಾಗಿತ್ತು.

ಇದನ್ನೂ ಓದಿ: Pakistan: 3 ವರ್ಷಗಳ ನಂತರ ತಮ್ಮ ಪುತ್ರಿಯನ್ನು ಲಂಡನ್‌ನಲ್ಲಿ ಭೇಟಿಯಾದ ಪಾಕಿಸ್ತಾನದ ಮಾಜಿ ಪ್ರಧಾನಿ

1 ವರ್ಷದ ಹಿಂದೆ ಸಮುದ್ರದಲ್ಲಿ ಪಾಕಿಸ್ತಾನಿ ಅಧಿಕಾರಿಗಳಿಂದ ಸೆರೆಹಿಡಿಯಲ್ಪಟ್ಟ ಗುಜರಾತ್‌ನ 50 ವರ್ಷದ ಮೀನುಗಾರ ಜನವರಿಯಲ್ಲಿ ನಿಗೂಢ ಕಾರಣಗಳಿಂದ ಪಾಕಿಸ್ತಾನ ದೇಶದ ಜೈಲಿನಲ್ಲಿ ಸಾವನ್ನಪ್ಪಿದ್ದರು. ಮೃತರನ್ನು ಜಯಂತಿ ಸೋಲಂಕಿ ಎಂದು ಗುರುತಿಸಲಾಗಿದ್ದು, ಅವರು ಗಿರ್-ಸೋಮನಾಥ್ ಜಿಲ್ಲೆಯ ಸೂತ್ರಪದ ಗ್ರಾಮದ ನಿವಾಸಿಯಾಗಿದ್ದರು.

ಕಳೆದ ಜುಲೈನಲ್ಲಿ ಗಿರ್ ಸೋಮನಾಥ್ ಜಿಲ್ಲೆಯ ಉನಾ ತಾಲೂಕಿನ ಗರಲ್‌ನ ಮೀನುಗಾರ ಕಾಲು ಶಿಯಾಲ್ ಪಾಕಿಸ್ತಾನದ ಜೈಲಿನಲ್ಲಿ ಸಾವನ್ನಪ್ಪಿದ್ದರು. 38 ವರ್ಷದ ಶಿಯಾಲ್ ಅವರ ಪಾರ್ಥಿವ ಶರೀರವನ್ನು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಪೋರಬಂದರ್‌ನ ನೀಲೇಶ್ ಪಂಜರಿ ಎಂಬುವವರಿಗೆ ಸೇರಿದ ಮೀನುಗಾರಿಕಾ ಟ್ರಾಲರ್ ಗಂಗಾ ಸಾಗರ್ ಹಡಗಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಕಚ್ ಕರಾವಳಿಯ ಕಾಲ್ಪನಿಕ ಅಂತಾರಾಷ್ಟ್ರೀಯ ಸಮುದ್ರ ಗಡಿರೇಖೆಯ ಪಾಕಿಸ್ತಾನದ ಕಡೆಗೆ ದಾಟಿದ ಆರೋಪದ ಮೇಲೆ ಜೂನ್ 2018ರಲ್ಲಿ ಪಾಕಿಸ್ತಾನ್ ಮೆರೈನ್ ಸೆಕ್ಯುರಿಟಿ ಏಜೆನ್ಸಿಯಿಂದ ಶಿಯಾಲ್ ಸಿಕ್ಕಿಬಿದ್ದಿದ್ದರು. ಅಂದಿನಿಂದ ಕರಾಚಿ ಜೈಲಿನಲ್ಲಿದ್ದ ಅವರು ಅನಾರೋಗ್ಯದ ಕಾರಣ ಜುಲೈ 6ರಂದು ಮೃತಪಟ್ಟಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ