ಮುಂಬೈ ಲೋಕಲ್ ಟ್ರೈನ್: ಮಹಿಳೆಯರ ಕಂಪಾರ್ಟ್‌ಮೆಂಟ್‌ನಲ್ಲಿ ಏಕಾಂಗಿಯಾಗಿದ್ದ ಯುವತಿಗೆ ಲೈಂಗಿಕ ಕಿರುಕುಳ
Mumbai Local Train: ಘಟನೆಯ ಕುರಿತು ಬಾಧಿತ ಯುವತಿ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾಳೆ. ಕೊನೆಗೆ ಆರೋಪಿಯನ್ನು ಗುರುತಿಸಿ ಸಂಜೆ 4.00 ಗಂಟೆಗೆ ಬಂಧಿಸಲಾಗಿದೆ.
ಮಹಾರಾಷ್ಟ್ರದ ಮುಂಬೈನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಚಲಿಸುತ್ತಿದ್ದ ಲೋಕಲ್ ರೈಲಿನಲ್ಲಿ (Mumbai local train) 20 ವರ್ಷದ ಯುವತಿಯ (woman) ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿವರಗಳು ನೋಡುವುದಾದರೆ ಗಿರ್ಗೌನ್ ಪ್ರದೇಶದ ಮಹಿಳೆಯೊಬ್ಬರು ನವಿ ಮುಂಬೈನಲ್ಲಿ ಪರೀಕ್ಷೆ ಬರೆಯಲು ತೆರಳಿದ್ದರು. ಇದಕ್ಕಾಗಿ CSMG ಯಲ್ಲಿ ಹಾರ್ಬರ್ ಲೈನ್ ಲೋಕಲ್ ಟ್ರೈನ್ ಹತ್ತಿದೆ. ಬೆಳಗ್ಗೆ 7.27ರ ವೇಳೆಯಲ್ಲಿ ರೈಲು ಚಲಿಸಲು ಪ್ರಾರಂಭಿಸಿದ ಕ್ಷಣ, 40 ವರ್ಷದ ನವಾಜ್ ಕರೀಂ ಎಂಬ ವ್ಯಕ್ತಿ ಆಕೆ ಇದ್ದ ಮಹಿಳೆಯರ ಕಂಪಾರ್ಟ್‌ಮೆಂಟ್‌ಗೆ (women compartment) ಹತ್ತಿದ. ಅದರಲ್ಲಿ ಯಾರೂ ಇರಲಿಲ್ಲ ಮತ್ತು ಇಡೀ ಕಂಪಾರ್ಟ್ಮೆಂಟ್ ಖಾಲಿಯಾಗಿತ್ತು. ರೈಲು ಚಲಿಸುತ್ತಿದ್ದಾಗ ಆ ವ್ಯಕ್ತಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅವಳು ಕೂಗಲು ಪ್ರಾರಂಭಿಸಿ ಓಡಿಹೋದಾಗ, ಆ ವ್ಯಕ್ತಿ ಮಸೀದಿ ನಿಲ್ದಾಣದಲ್ಲಿ ಇಳಿದಿದ್ದಾನೆ.
ಬಳಿಕ ಘಟನೆಯ ಕುರಿತು ಬಾಧಿತ ಯುವತಿ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾಳೆ. ಜಿಆರ್‌ಎಫ್‌ಐ, ಆರ್‌ಪಿಎಫ್ ಮತ್ತು ಮುಂಬೈ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಮಸೀದಿ ನಿಲ್ದಾಣದಲ್ಲಿರುವ ಸಿಸಿಟಿವಿಗಳನ್ನು ಪರಿಶೀಲಿಸಲಾಗಿದೆ. ಕೊನೆಗೆ ಆರೋಪಿಯನ್ನು ಗುರುತಿಸಿ ಸಂಜೆ 4.00 ಗಂಟೆಗೆ ಬಂಧಿಸಲಾಯಿತು.
Also Read: Mumbai: ರೀಲ್ಸ್ ಮಾಡಲು ಹೋಗಿ ಬಾವಿಗೆ ಬಿದ್ದು ಯುವಕ ಸಾವು, 32 ಗಂಟೆಗಳ ಬಳಿಕ ಸಿಕ್ತು ಶವ
ಆರೋಪಿ ದಿನಗೂಲಿ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಆತನ ವಿರುದ್ಧ ಅತ್ಯಾಚಾರ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.. ಸದ್ಯ ತನಿಖೆ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ