2020 year in review | ಎರಡನೇ ತ್ರೈಮಾಸಿಕದಲ್ಲಿ ನೋವಿನ ಸರಮಾಲೆ, ಕಳೆದು ಬಂದೆವು ನಾವು ಇನ್ನಷ್ಟು ದಿವಸ

Edited By:

Updated on: Apr 06, 2022 | 11:09 PM

ಅಂದು, ಮೇ 8ರಂದು ಔರಂಗಾಬಾದ್​ ಸಮೀಪ ಗೂಡ್ಸ್​ ರೈಲಿನ ಗಾಲಿಗಳಿಗೆ ಸಿಲುಕಿ ಜೀವಬಿಟ್ಟವರು 16 ಮಂದಿ. ರೈಲು ಹಳಿಗಳ ನಡುವೆ ಚೆಲ್ಲಾಡಿದ್ದ ಈ ಕಾರ್ಮಿಕರ ಬುತ್ತಿಯಲ್ಲಿದ್ದ ರೊಟ್ಟಿ ದೇಶದ ಜನರ ಮನಸ್ಸನ್ನು ಅಕ್ಷರಶಃ ಕಲಕಿತ್ತು. ಈ ಚಿತ್ರದ ವಿಶೇಷ ಉಲ್ಲೇಖದೊಂದಿಗೇ ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳ ಬದುಕು ಕಟ್ಟಿಕೊಡುವ ಪ್ರಾತಿನಿಧಿಕ ಚಿತ್ರಗಳನ್ನು ಇಲ್ಲಿ ನೀಡುತ್ತಿದ್ದೇವೆ.

1 / 14
ಮೇ 7ರಂದು ವಿಶಾಖಪಟ್ಟಣಂನ ಎಲ್​ಜಿ ಪಾಲಿಮರ್ಸ್ ಕೆಮಿಕಲ್ ಪ್ಲಾಂಟ್​ನಲ್ಲಿ ಅನಿಲ ದುರಂತ ಸಂಭವಿಸಿತು.

ಮೇ 7ರಂದು ವಿಶಾಖಪಟ್ಟಣಂನ ಎಲ್​ಜಿ ಪಾಲಿಮರ್ಸ್ ಕೆಮಿಕಲ್ ಪ್ಲಾಂಟ್​ನಲ್ಲಿ ಅನಿಲ ದುರಂತ ಸಂಭವಿಸಿತು.

2 / 14

ವಿಶಾಖಪಟ್ಟಣಂ ಅನಿಲ ದುರಂತದಿಂದ 11 ಮಂದಿ ಮೃತಪಟ್ಟರು. ಸಾವಿರಕ್ಕೂ ಹೆಚ್ಚು ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಂಡುಬಂದವು.

3 / 14

ಅನಿಲ ದುರಂತದಲ್ಲಿ ಸಾಕಷ್ಟು ಮಂದಿ ಅಸ್ವಸ್ಥರಾದದ್ದು, ರಸ್ತೆ ಬದಿಯಲ್ಲಿ ಅಲ್ಲಲ್ಲೇ ಕುಸಿದು ಹೋದದ್ದು ನಡೆಯಿತು. ಜನರ ಪರಿಸ್ಥಿತಿ ಕರುಣಾಜನಕವಾಗಿತ್ತು.

4 / 14

ಅಂಫಾನ್ ಚಂಡಮಾರುತ ಮೇ 16ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕಡಲ ತೀರಕ್ಕೆ ಅಪ್ಪಳಿಸಿತು. ಸುಮಾರು 85 ಮಂದಿ ಮೃತಪಟ್ಟರು. ಅಭೂತಪೂರ್ವ ರೀತಿಯಲ್ಲಿ ಜನರನ್ನು ಸುರಕ್ಷಿತ ಸ್ಥಳಾಂತರಿಸಿ, ಮುನ್ನೆಚ್ಚರಿಕೆ ವಹಿಸಲಾಗಿತ್ತು.

5 / 14

ಕೊವಿಡ್-19 ನಿಯಂತ್ರಣಕ್ಕೆಂದು ಲಾಕ್​ಡೌನ್ ಹೇರಿದ್ದರಿಂದ ಕಾರ್ಮಿಕರು ಕೆಲಸ ಕಳೆದುಕೊಂಡರು. ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಿದ್ದರಿಂದ ಊರು ಸೇರಲು ಪರದಾಡಿದರು. ಕಾರ್ಮಿಕರ ದೊಡ್ಡ ಮಟ್ಟದ ವಲಸೆಗೆ ದೇಶ ಸಾಕ್ಷಿಯಾಯಿತು.

6 / 14

ಕೊರೊನಾ ತಂದೊಡ್ಡಿದ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಜನರ ಮನಕಲಕುವಂತೆ ಮಾಡಿದ ಚಿತ್ರವಿದು. ಮೇ 8ರಂದು ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ಗೂಡ್ಸ್​ ರೈಲು ವಲಸೆ ಕಾರ್ಮಿಕರ ಮೇಲೆ ಹರಿದು 16 ಮಂದಿ ಮೃತಪಟ್ಟರು.

7 / 14

ಕೊರೊನಾ ನಡುವೆ ವಲಸಿಗರ ಪರಿಸ್ಥಿತಿ ಹೀಗಿತ್ತು.

8 / 14

ಹಲವು ಮಂದಿ ವಲಸಿಗರು ಕೆಲಸ ಇಲ್ಲದೆ ಪರವೂರಲ್ಲಿ ತಂಗಲು ಬಯಸಲಿಲ್ಲ. ಏನೇ ಆದರೂ ತಮ್ಮೂರಿಗೆ ಮರಳಿ ಹೋಗುವೆವು ಎಂದು ಕಾಲ್ನಡಿಗೆಯಲ್ಲೇ ಊರಿಗೆ ಹೊರಟರು.

9 / 14

ಜೂನ್ 25ರಂದು ಲಡಾಖ್​ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಕಮಾಂಡಿಂಗ್ ಆಫೀಸರ್ ಸಂತೋಷ್​ ಸೇರಿ 20 ಭಾರತೀಯ ಯೋಧರು ಹುತಾತ್ಮರಾದರು. ಪ್ರತೀಕಾರದ ಮಾತುಗಳು ಕೇಳಿಬಂದವು. ಪ್ರಧಾನಿ ಮೋದಿ ಚೀನಾ ಗಡಿಗೆ ಭೇಟಿ ನೀಡಿ, ಯೋಧರಲ್ಲಿ ಧೈರ್ಯ ತುಂಬಿದರು.

10 / 14

ಉತ್ತರ ಭಾರತದ ಹಲವೆಡೆಗಳಲ್ಲಿ ಮಿಡತೆಗಳ ದಾಳಿ ಭಾರೀ ಸುದ್ದಿ ಮಾಡಿತು. ಹಲವು ರಾಜ್ಯಗಳಲ್ಲಿ ಗಂಭೀರ ತೊಂದರೆ ಮಾಡುವುದರ ಜೊತೆಗೆ ಹಲವು ತಮಾಷೆ, ಗಾಳಿಸುದ್ದಿಗಳಿಗೂ ಕಾರಣವಾಯಿತು.

11 / 14

ಲೋಕಸ್ಟ್ ಅಥವಾ ಮಿಡತೆ ದಾಳಿಯನ್ನು ತಪ್ಪಿಸಲು ರೈತರು, ಹೊಲದ ತುಂಬೆಲ್ಲಾ ತಟ್ಟೆ ಬಾರಿಸಿಕೊಂಡು ಓಡಾಡಿದರು.

12 / 14

ವಲಸಿಗರಿಗೆ ಸಹಾಯಹಸ್ತ ಚಾಚಿ, ಅವರಿಗೆ ಬಸ್ ವ್ಯವಸ್ಥೆ ಕಲ್ಪಿಸಿ, ಮರಳಿ ತಮ್ಮೂರಿಗೆ ತೆರಳಲು ನಟ ಸೋನು ಸೂದ್ ನೆರವಾದರು.

13 / 14

ಸಿನಿಮಾ ವಿಲನ್ ಸೋನು ಸೂದ್, ನಿಜಜೀವನದ ಹೀರೋ ಅನಿಸಿಕೊಂಡರು.

14 / 14

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಸಿನಿ ಅಭಿಮಾನಿಗಳ ಮನಕಲುಕಿತು. ತಮ್ಮ ಸಿನಿಮಾದಲ್ಲಿ ಬದುಕಿನ ಸ್ಪೂರ್ತಿ ಸಾರಿದ್ದ ನಟನ ದುರಂತ ಅಂತ್ಯ ಹಲವು ವಿವಾದಗಳಿಗೂ ಕಾರಣವಾಯಿತು. ಸುಶಾಂತ್ ಸಿಂಗ್​ ರಜಪೂತ್​ ಸಾವಿನ ತನಿಖೆ ನಡೆಸಬೇಕೆಂದು ಅಭಿಮಾನಿಗಳು ಒತ್ತಾಯಿಸಿದರು. ಸುಶಾಂತ್ ಸಿಂಗ್​ಗೆ ಶ್ರದ್ಧಾಂಜಲಿ ಕೋರಿದರು.

Published On - 9:54 pm, Wed, 30 December 20

TV9 Web

TV9 Kannada

Read More
Loading...
Unable to load recommendations.
Follow Us