ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಮೂವರು ಸಾವು; ಅವಶೇಷಗಳಡಿ ಸಿಲುಕಿದ್ದವರ ರಕ್ಷಣೆ

ರಾತ್ರಿಯೆಲ್ಲ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಮುಂಜಾನೆ ಹೊತ್ತಿಗೆ ಗೋಡೆಗಳೆಲ್ಲ ಕುಸಿದುಬಿದ್ದಿವೆ. ಕಟ್ಟಡ ಕುಸಿದ ಬೆನ್ನಲ್ಲೇ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ. 

ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಮೂವರು ಸಾವು; ಅವಶೇಷಗಳಡಿ ಸಿಲುಕಿದ್ದವರ ರಕ್ಷಣೆ
ಸಾಂಕೇತಿಕ ಚಿತ್ರ
Follow us
| Updated By: Lakshmi Hegde

Updated on:Mar 23, 2022 | 6:30 PM

ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದು ಕುಸಿದು ಮೂವರು ಕಾರ್ಮಿಕರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್​​ನಲ್ಲಿ ಇಂದು ಮುಂಜಾನೆ ನಡೆದಿದೆ. ಇನ್ನಿಬ್ಬರು ಅವಶೇಷಗಳಡಿ ಸಿಲುಕಿದ್ದರು. ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೀವಕ್ಕೆ ಯಾವುದೇ ಅಪಾಯವೂ ಆಗಿಲ್ಲ ಎಂದು ಹೇಳಲಾಗಿದೆ. ಘಾಜಿಯಾಬಾದ್​ನ ಡಿಎವಿ ಚೌಕ್​​ನಲ್ಲಿ ದುರ್ಘಟನೆ ನಡೆದಿದೆ.  ಇಲ್ಲಿ ರಾತ್ರಿಯೆಲ್ಲ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಮುಂಜಾನೆ ಹೊತ್ತಿಗೆ ಗೋಡೆಗಳೆಲ್ಲ ಕುಸಿದುಬಿದ್ದಿವೆ. ಕಟ್ಟಡ ಕುಸಿದ ಬೆನ್ನಲ್ಲೇ ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ.  ಸದ್ಯ ಮೂರು ಮೃತದೇಹಗಳನ್ನು ಹೊರತೆಗೆದು ಪೋಸ್ಟ್​ಮಾರ್ಟಮ್​​ಗೆ ಕಳಿಸಿದ್ದಾಗಿ ಸ್ಥಳೀಯ ವಿಜಯನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ನಿನ್ನೆ (ಮಾರ್ಚ್​ 22) ಕೂಡ ಕಾನ್ಪುರದ ಹರ್ಬಂಶ್​ ಮೊಹಲ್​ ಎಂಬ ಪ್ರದೇಶದಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ಹಳೇ ಮನೆಯೊಂದರ ಕೆಡವುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಮನೆಯೊಂದರ ಮೇಲ್ಛಾವಣಿ ಕುಸಿದ ಪರಿಣಾಮ 36 ವರ್ಷದ ಕಾರ್ಮಿಕನೊಬ್ಬ ಮೃತಪಟ್ಟಿದ್ದ. ಅಂದಹಾಗೇ, ಮನೆ ಕೆಡವುವ ಕಾರ್ಯವನ್ನು ಅಕ್ರಮವಾಗಿ ಮಾಡಲಾಗುತ್ತಿದೆ. ಈ ಸ್ಥಳದ ಮಾಲೀಕ ಮತ್ತು ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೂರ್ವ ವಲಯದ ಡಿಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ:ಪುಟಿನ್​​​ ಹತ್ಯೆಗೆ ರಷ್ಯಾದಲ್ಲೇ ನಡೆದಿದೆಯಂತೆ ಸಂಚು; ವಿಷ ಪ್ರಾಶನದ ಭಯದಲ್ಲಿ 1000 ಉದ್ಯೋಗಿಗಳನ್ನು ಬದಲಿಸಿದ ಅಧ್ಯಕ್ಷ

Published On - 9:54 am, Wed, 23 March 22