ರಾಖಿ, ಇಯರ್​ಫೋನ್, ಕೀ ಸೇರಿ 100 ವಸ್ತುಗಳಿದ್ದಿದ್ದು ಅಂಗಡಿಯಲ್ಲಲ್ಲ, ವ್ಯಕ್ತಿಯ ಹೊಟ್ಟೆಯಲ್ಲಿ

ಮೂರು ಗಂಟೆಗಳ ಶಸ್ತ್ರ ಚಿಕಿತ್ಸೆ ಬಳಿಕ ವೈದ್ಯರಿಗೆ ಕಾದಿತ್ತು ಅಚ್ಚರಿ, ರಾಖಿ, ಇಯರ್​ಫೋನ್, ಬೀಗ, ಕೀ ಸೇರಿ ವ್ಯಕ್ತಿಯ ಹೊಟ್ಟೆಯಿಂದ ಬರೋಬ್ಬರಿ 100 ವಸ್ತುಗಳನ್ನು ವೈದ್ಯರು ಹೊರತೆಗೆದಿದ್ದರು. ಘಟನೆ ಏನು?: ಪಂಜಾಬ್​ನ ಮೊಗಾದ 40 ವರ್ಷದ ವ್ಯಕ್ತಿಯೊಬ್ಬರು ಕಳೆದ ಎರಡು ದಿನಗಳಿಂದ ತುಂಬಾ ಹೊಟ್ಟೆನೋವು ಬರುತ್ತಿದೆ ಎಂದು ವೈದ್ಯರ ಬಳಿಗೆ ಬಂದಿದ್ದರು, ವೈದ್ಯರು ಎಕ್ಸ್​-ರೇ ಮಾಡಿ ನೋಡಿದಾಗ ಅವರ ಹೊಟ್ಟೆಯಲ್ಲಿ ಹಲವು ವಸ್ತುಗಳಿರುವುದು ಕಂಡುಬಂದಿದೆ. ಹಾಗಾಗಿ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ರಾಖಿ, ಇಯರ್​ಫೋನ್, ಕೀ ಸೇರಿ 100 ವಸ್ತುಗಳಿದ್ದಿದ್ದು ಅಂಗಡಿಯಲ್ಲಲ್ಲ, ವ್ಯಕ್ತಿಯ ಹೊಟ್ಟೆಯಲ್ಲಿ
ಶಸ್ತ್ರಚಿಕಿತ್ಸೆ
Image Credit source: India Today

Updated on: Sep 29, 2023 | 8:08 AM

ಮೂರು ಗಂಟೆಗಳ ಶಸ್ತ್ರ ಚಿಕಿತ್ಸೆ ಬಳಿಕ ವೈದ್ಯರಿಗೆ ಕಾದಿತ್ತು ಅಚ್ಚರಿ, ರಾಖಿ, ಇಯರ್​ಫೋನ್, ಬೀಗ, ಕೀ ಸೇರಿ ವ್ಯಕ್ತಿಯ ಹೊಟ್ಟೆಯಿಂದ ಬರೋಬ್ಬರಿ 100 ವಸ್ತುಗಳನ್ನು ವೈದ್ಯರು ಹೊರತೆಗೆದಿದ್ದರು. ಘಟನೆ ಏನು?: ಪಂಜಾಬ್​ನ ಮೊಗಾದ 40 ವರ್ಷದ ವ್ಯಕ್ತಿಯೊಬ್ಬರು ಕಳೆದ ಎರಡು ದಿನಗಳಿಂದ ತುಂಬಾ ಹೊಟ್ಟೆನೋವು ಬರುತ್ತಿದೆ ಎಂದು ವೈದ್ಯರ ಬಳಿಗೆ ಬಂದಿದ್ದರು, ವೈದ್ಯರು ಎಕ್ಸ್​-ರೇ ಮಾಡಿ ನೋಡಿದಾಗ ಅವರ ಹೊಟ್ಟೆಯಲ್ಲಿ ಹಲವು ವಸ್ತುಗಳಿರುವುದು ಕಂಡುಬಂದಿದೆ. ಹಾಗಾಗಿ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಅವರ ಹೊಟ್ಟೆಯಿಂದ ಇಯರ್​ಫೋನ್​ಗಳು, ರಾಖಿ, ದಾರಗಳು, ಮೊಳೆಗಳು, ಕೀ, ಬೀಗ, ವಾಷರ್​ಗಳು ಸೇರಿದಂತೆ ಹಲವು ವಸ್ತುಗಳಿದ್ದವು.
ವ್ಯಕ್ತಿ ಕಳೆದ ಎರಡು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಅವರು ಮೊಗದ ಮೆಡಿಸಿಟಿ ಆಸ್ಪತ್ರೆಗೆ ಭೇಟಿ ನೀಡಿದರು, ತೀವ್ರ ಹೊಟ್ಟೆ ನೋವು, ಜ್ವರ ಮತ್ತು ವಾಂತಿ ಹೇಳಿಕೊಂಡಿದ್ದರು.

ಮೆಡಿಸಿಟಿ ನಿರ್ದೇಶಕ ಡಾ ಅಜ್ಮೀರ್ ಕಲ್ರಾ ಅವರು ಮಾತನಾಡಿ, ತಮ್ಮ ವೃತ್ತಿಜೀವನದಲ್ಲಿ ಇದು ಮೊದಲ ಪ್ರಕರಣವಾಗಿದೆ, ಆದರೆ ವೈದ್ಯರು ಈ ಎಲ್ಲಾ ವಸ್ತುಗಳನ್ನು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ ಎಂದಿದ್ದಾರೆ.

ಮತ್ತಷ್ಟು ಓದಿ: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಕೇವಲ 67 ರೂ.ನಂತೆ ಐವರಿಗೆ ಮಂಡಿ ಶಸ್ತ್ರಚಿಕಿತ್ಸೆ

ಆದರೆ, ಈ ವಸ್ತುಗಳು ಹೊಟ್ಟೆಯಲ್ಲಿ ಬಹಳ ಸಮಯ ಇದ್ದ ಕಾರಣ ರೋಗಿಯ ಸ್ಥಿತಿ ಇನ್ನೂ ಸ್ಥಿರವಾಗಿಲ್ಲ ಎಂದು ಅವರು ಹೇಳಿದರು.
ರೋಗಲಕ್ಷಣಗಳು ಉಲ್ಬಣಗೊಂಡ ನಂತರ ಮತ್ತು ಅವರು ನಿದ್ರಿಸಲು ಸಹ ಸಾಧ್ಯವಾಗಲಿಲ್ಲ, ನಾವು ವೈದ್ಯರನ್ನು ಸಂಪರ್ಕಿಸಿದ್ದೇವೆ ಎಂದು ಕುಟುಂಬದವರು ಹೇಳಿದ್ದಾರೆ.

ಈ ಎಲ್ಲಾ ವಸ್ತುಗಳನ್ನು ಹೇಗೆ ತಿಂದಿದ್ದಾರೆ ಎಂಬುದು ಮಾತ್ರ ನಮಗೆ ತಿಳಿದಿಲ್ಲ, ಅವರಿಗೆ ಮಾನಸಿಕ ಸಮಸ್ಯೆ ಇರಬಹುದು ಎಂದು ಊಹಿಸಲಾಗಿದೆ. ಈ ವ್ಯಕ್ತಿ ಎರಡು ವರ್ಷಗಳಿಂದ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಈ ವಸ್ತುಗಳು ದೀರ್ಘಕಾಲದವರೆಗೆ ಅವರ ಹೊಟ್ಟೆಯೊಳಗೆ ಇದ್ದವು ಮತ್ತು ಇದು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಿದೆ ಎಂದು ಅವರು ಹೇಳಿದರು.

ಹಲವಾರು ವೈದ್ಯರ ಬಳಿಗೆ ಕರೆದೊಯ್ದಿದ್ದರು ಆದರೆ ಅವರ ನೋವಿನ ಹಿಂದಿನ ಕಾರಣವನ್ನು ಯಾರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us