38 ಪತ್ನಿಯರು, 89 ಮಕ್ಕಳು, 33 ಮೊಮ್ಮಕ್ಕಳು; ಜಗತ್ತಿನ ಅತೀ ದೊಡ್ಡ ಕುಟುಂಬ ಹೊಂದಿದ್ದ ಮಿಜೊರಾಂನ ವ್ಯಕ್ತಿ ನಿಧನ
Ziona Chana: ಜಿಯೋನಾ ಚಾನಾ ಅವರು ಜುಲೈ 21, 1945 ರಂದು ಜನಿಸಿದರು. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, 17ನೇ ವಯಸ್ಸಿನಲ್ಲಿ ಅವರು ಅವರು ಮೊದಲ ಹೆಂಡತಿಯನ್ನು ಭೇಟಿಯಾದರು. ಮೊದಲ ಹೆಂಡತಿ ಅವರಿಗಿಂತ ಮೂರು ವರ್ಷ ಹಿರಿಯರು.
ಐಜಾಲ್: 38 ಪತ್ನಿಯರು, 89 ಮಕ್ಕಳು ಮತ್ತು 33 ಮೊಮ್ಮಕ್ಕಳೊಂದಿಗೆ ವಿಶ್ವದ ಅತಿದೊಡ್ಡ ಕುಟುಂಬ ಹೊಂದಿದ್ದ ಜಿಯೋನಾ ಚಾನಾ ಇಂದು ತಮ್ಮ 76 ನೇ ವಯಸ್ಸಿನಲ್ಲಿ ಮಿಜೋರಾಂನಲ್ಲಿ ನಿಧನರಾದರು. ಜಿಯೋನಾ ಚಾನಾ ಅವರ ಸಾವಿನ ಬಗ್ಗೆ ಮಿಜೋರಾಂ ಮುಖ್ಯಮಂತ್ರಿ ಜೊರಾಮ್ತಂಗ ಟ್ವೀಟ್ ಮಾಡಿದ್ದಾರೆ. ರಾಜ್ಯ ಮತ್ತು ಚಾನಾ ಅವರ ಬಕ್ತಾಂಗ್ ತ್ಲಾಂಗ್ನುವಾಮ್ ಅವರ ಗ್ರಾಮವು ಈ ಕುಟುಂಬದಿಂದಾಗಿ ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ” ಎಂದು ಹೇಳಿದ್ದಾರೆ.
38 ಹೆಂಡತಿಯರು ಮತ್ತು 89 ಮಕ್ಕಳೊಂದಿಗೆ ವಿಶ್ವದ ಅತಿದೊಡ್ಡ ಕುಟುಂಬದ ಮುಖ್ಯಸ್ಥರೆಂದು ನಂಬಲಾದ ಶ್ರೀ ಜಿಯಾನ್-ಎ (76) ಗೆ ಮಿಜೋರಾಂ ಭಾರವಾದ ಹೃದಯದಿಂದ ವಿದಾಯ ಹೇಳಿದೆ. ಮಿಜೋರಾಂ ಮತ್ತು ಬಕ್ತಾಂಗ್ ತ್ಲಾಂಗ್ನುವಾಮ್ನಲ್ಲಿರುವ ಅವರ ಗ್ರಾಮವು ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ರೆಸ್ಟ್ ಇನ್ ಪೀಸ್ ಸರ್! ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.
With heavy heart, #Mizoram bid farewell to Mr. Zion-a (76), believed to head the world’s largest family, with 38 wives and 89 children. Mizoram and his village at Baktawng Tlangnuam has become a major tourist attraction in the state because of the family. Rest in Peace Sir! pic.twitter.com/V1cHmRAOkr
— Zoramthanga (@ZoramthangaCM) June 13, 2021
ಜಿಯೋನಾ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜಿಯಾಂಘಾಕಾ ಮಧ್ಯಾಹ್ನ 3 ಗಂಟೆಗೆ ಐಜಾಲ್‌ನ ಟ್ರಿನಿಟಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡ ಇತ್ತು.
ಜಿಯೋನಾ ಚನಾ ಅವರ ಗ್ರಾಮದಲ್ಲಿ ‘ಚಾನಾ ಪಂಥ’ ಎಂಬ ಧಾರ್ಮಿಕ ಸಮುದಾಯದ ಮುಖ್ಯಸ್ಥರಾಗಿದ್ದರು.
ಅವರು ಜುಲೈ 21, 1945 ರಂದು ಜನಿಸಿದರು. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, 17ನೇ ವಯಸ್ಸಿನಲ್ಲಿ ಅವರು ಅವರು ಮೊದಲ ಹೆಂಡತಿಯನ್ನು ಭೇಟಿಯಾದರು. ಮೊದಲ ಹೆಂಡತಿ ಅವರಿಗಿಂತ ಮೂರು ವರ್ಷ ಹಿರಿಯರು.
ಅವರ ಕುಟುಂಬ ಸದಸ್ಯರು ಪರ್ವತದಿಂದ ಕೂಡಿದ ಹಳ್ಳಿಯಲ್ಲಿ 100 ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರುವ ‘ಚುವಾನ್ ಥಾರ್ ರನ್’ ಅಥವಾ ನ್ಯೂ ಜನರೇಷನ್ ಹೋಮ್ ಎಂಬ ನಾಲ್ಕು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದಾರೆ.
ರಾಯಿಟರ್ಸ್ ವರದಿಯ ಪ್ರಕಾರ, ಜಿಯೋನಾ ಚಾನಾ ಅವರ ಪುತ್ರರು ಮತ್ತು ಅವರ ಹೆಂಡತಿಯರು ಮತ್ತು ಅವರ ಎಲ್ಲಾ ಮಕ್ಕಳು ಒಂದೇ ಕಟ್ಟಡದಲ್ಲಿ ಬೇರೆ ಬೇರೆ ಕೋಣೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಒಂದೇ ಅಡುಗೆಮನೆಯಲ್ಲಿ ಅಡುಗೆ ಮಾಡುತ್ತಾರೆ.
Mizoram: Ziona Chana (76), believed to be the head of world’s largest family with 38 wives and 89 children, passes away, as per CM Zoramthanga
“Mizoram and his village at Baktawng Tlangnuam has become a major tourist attraction in the state because of the family,” the CM tweets pic.twitter.com/w94G16AKug
— ANI (@ANI) June 13, 2021
ಅವರ ಸ್ವಂತ ಸಂಪನ್ಮೂಲಗಳು ಮತ್ತು ಫಾಲೋಯರ್ ಗಳಿಂದ ಸಿಗುವ ದೇಣಿಗೆಗಳಿಂದ ಅವರ ಜೀವನ ಸಾಗುತ್ತಿತ್ತು. ಚಾನರ ಮನೆಯೇ ರಾಜ್ಯದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದೆ.
ಇದನ್ನೂ ಓದಿ: ಸಂಚಾರಿ ವಿಜಯ್ ಮಾಡಿದ ಆ ಒಂದು ತಪ್ಪು ನಿರ್ಧಾರ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಯ್ತು
(38 wives 89 children and 33 grandchildren world’s largest family head Ziona Chana dies at Mizoram)