ರೇವಾ: ಇಂದು ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಕಟ್ಟಡವೊಂದರ ಗೋಡೆ ಕುಸಿದು ನಾಲ್ವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮಕ್ಕಳು ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಶಿಥಿಲಗೊಂಡ ಕಟ್ಟಡದ ಗೋಡೆ ಮಕ್ಕಳ ಮೇಲೆ ಬಿದ್ದಿದೆ. ರೇವಾ ಜಿಲ್ಲೆಯ ಗಢ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಘಟನೆ ನಡೆದಿದೆ.
ಶನಿವಾರ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ ಕಟ್ಟಡದ ಗೋಡೆಯೊಂದು ಕುಸಿದು 4 ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಖಾಸಗಿ ಶಾಲೆಯೊಂದರ ಬಳಿ ಈ ದುರಂತ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸನ್‌ರೈಸ್ ಪಬ್ಲಿಕ್ ಶಾಲೆಯ ಮಕ್ಕಳು ಮನೆಗೆ ಹಿಂದಿರುಗುತ್ತಿದ್ದಾಗ ಗೋಡೆ ಕುಸಿದಿದೆ ಎಂದು ರೇವಾ ವಲಯದ ಪೊಲೀಸ್ ಮಹಾನಿರೀಕ್ಷಕ ಮಹೇಂದ್ರ ಸಿಂಗ್ ಸಿಕರ್ವಾರ್ ಹೇಳಿದ್ದಾರೆ. ಗೋಡೆ ಕುಸಿತದ ಸಮಯದಲ್ಲಿ ಆ ಮಕ್ಕಳು ತಮ್ಮ ಕೇರ್‌ಟೇಕರ್ ಜೊತೆಗೆ ನಡೆದುಕೊಂಡು ಹೋಗುತ್ತಿದ್ದರು.
Rewa, Madhya Pradesh: In the Garh police station area, a wall collapsed on school children returning home, killing four out of five affected. The injured child was taken to the community health center, and local residents helped rescue the children from the debris amid the chaos. pic.twitter.com/lrMGek1dde
— IANS (@ians_india) August 3, 2024
ಇದನ್ನೂ ಓದಿ: ವಯನಾಡ್ ದುರಂತದ ಬಗ್ಗೆ ರಾಹುಲ್ ಗಾಂಧಿ ಇದುವರೆಗೂ ಏಕೆ ಪ್ರಸ್ತಾಪಿಸಿಲ್ಲ?; ತೇಜಸ್ವಿ ಸೂರ್ಯ ವಾಗ್ದಾಳಿ
ಅವಶೇಷಗಳಿಂದ ನಾಲ್ವರು ಮಕ್ಕಳನ್ನು ಹೊರತೆಗೆದಾಗ ಮೃತಪಟ್ಟಿರುವುದು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಪ್ರತಿಭಾ ಪಾಲ್ ಖಚಿತಪಡಿಸಿದ್ದಾರೆ. ಇದರ ಜೊತೆಗೆ ಮಹಿಳೆ ಮತ್ತು ಇನ್ನೊಂದು ಮಗುವಿಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ರೇವಾಗೆ ಕಳುಹಿಸಲಾಗಿದೆ.
ಮೃತರನ್ನು ಅಂಕಿತಾ ಗುಪ್ತಾ (5), ಮಾನ್ಯ ಗುಪ್ತಾ (7), ಸಿದ್ಧಾರ್ಥ್ ಗುಪ್ತಾ (5), ಮತ್ತು ಅನುಜ್ ಪ್ರಜಾಪತಿ (5) ಎಂದು ಅಧಿಕಾರಿಗಳು ಗುರುತಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ