ಉತ್ತರಾಖಂಡದಲ್ಲಿ ಟ್ರೆಕ್ಕಿಂಗ್​ ಹೋಗಿದ್ದ ಕರ್ನಾಟಕದ 18 ಮಂದಿ ಸೇರಿ ಒಟ್ಟು 22 ಜನ ನಾಪತ್ತೆ, ನಾಲ್ವರ ಶವ ಪತ್ತೆ

ಉತ್ತರಾಖಂಡದ ಸಹಸ್ತ್ರತಾಲ್​ಗೆ ಟ್ರೆಕ್ಕಿಂಗ್​ಗೆ ತೆರಳಿದ್ದ ಕರ್ನಾಟಕದ 18 ಮಂದಿ ನಾಮಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕರ್ನಾಟಕದ 18 ಮಂದಿ, ಮಹಾರಾಷ್ಟ್ರದ ಒಬ್ಬರು ಮತ್ತು ಮೂವರು ಸ್ಥಳೀಯ ಮಾರ್ಗದರ್ಶಕರನ್ನು ಒಳಗೊಂಡ ಚಾರಣ ತಂಡವು ಮೇ 29 ರಂದು ಸಹಸ್ತ್ರ ತಾಲ್‌ಗೆ ಟ್ರೆಕ್ಕಿಂಗ್ ಯಾತ್ರೆಗೆ ತೆರಳಿದ್ದು, ಜೂನ್ 7 ರಂದು ಹಿಂತಿರುಗಬೇಕು ಎಂದು ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೆಹರ್ಬನ್ ಸಿಂಗ್ ಬಿಶ್ತ್ ತಿಳಿಸಿದ್ದಾರೆ.

ಉತ್ತರಾಖಂಡದಲ್ಲಿ ಟ್ರೆಕ್ಕಿಂಗ್​ ಹೋಗಿದ್ದ ಕರ್ನಾಟಕದ 18 ಮಂದಿ ಸೇರಿ ಒಟ್ಟು 22 ಜನ ನಾಪತ್ತೆ, ನಾಲ್ವರ ಶವ ಪತ್ತೆ
ಸಹಸ್ತ್ರ ತಾಲ್Image Credit source: Himalaya Tekker.com
Follow us
ನಯನಾ ರಾಜೀವ್
|

Updated on:Jun 05, 2024 | 12:01 PM

ಉತ್ತರಾಖಂಡದ ಉತ್ತರಕಾಶಿಯ ಸಹಸ್ತ್ರ ತಾಲ್‌ಗೆ ಟ್ರೆಕ್ಕಿಂಗ್‌(Trekking)ಗೆ ತೆರಳಿದ್ದ ಕರ್ನಾಟಕದ 18 ಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟು ಆ ತಂಡದಲ್ಲಿ 22 ಇದ್ದರು, ಪ್ರತಿಕೂಲ ಹವಾಮಾನದಿಂದಾಗಿ ದಾರಿ ತಪ್ಪಿ ಸಿಕ್ಕಿಬಿದ್ದಿದ್ದು ನಾಲ್ವರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

ಕರ್ನಾಟಕದ 18 ಮಂದಿ, ಮಹಾರಾಷ್ಟ್ರದ ಒಬ್ಬರು ಮತ್ತು ಮೂವರು ಸ್ಥಳೀಯ ಮಾರ್ಗದರ್ಶಕರನ್ನು ಒಳಗೊಂಡ ಚಾರಣ ತಂಡವು ಮೇ 29 ರಂದು ಸಹಸ್ತ್ರ ತಾಲ್‌ಗೆ ಟ್ರೆಕ್ಕಿಂಗ್ ಯಾತ್ರೆಗೆ ತೆರಳಿದ್ದು, ಜೂನ್ 7 ರಂದು ಹಿಂತಿರುಗಬೇಕು ಎಂದು ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೆಹರ್ಬನ್ ಸಿಂಗ್ ಬಿಶ್ತ್ ತಿಳಿಸಿದ್ದಾರೆ.

ಆದರೆ, ಪ್ರತಿಕೂಲ ಹವಾಮಾನದಿಂದಾಗಿ ತಂಡವು ದಾರಿ ತಪ್ಪಿದೆ ಮತ್ತು ಟ್ರೆಕ್ಕಿಂಗ್ ಏಜೆನ್ಸಿ, ಹಿಮಾಲಯನ್ ವ್ಯೂ ಟ್ರ್ಯಾಕಿಂಗ್ ಏಜೆನ್ಸಿ, ನಾಲ್ವರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದರು ಮತ್ತು 13 ಮಂದಿಯನ್ನು ಸ್ಥಳಾಂತರಿಸುವಂತೆ ಮನವಿ ಮಾಡಿದರು.

ಮತ್ತಷ್ಟು ಓದಿ: ಕಾಡ್ಗಿಚ್ಚು: ‘ಮಳೆ ದೇವರನ್ನು ಅವಲಂಬಿಸಿದ್ದೇವೆ’ ಎಂಬುದು ಉತ್ತರವಲ್ಲ: ಉತ್ತರಾಖಂಡ ಸರ್ಕಾರದ ವಿರುದ್ಧ ಸುಪ್ರೀಂ ಗರಂ

ಸ್ಥಳಕ್ಕೆ ರಕ್ಷಣಾ ತಂಡಗಳನ್ನು ಕಳುಹಿಸಲು ಮತ್ತು ಚಾರಣಿಗರನ್ನು ರಕ್ಷಿಸಲು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಗೆ ಬಿಶ್ತ್ ವಿನಂತಿಸಿದರು. ಸ್ಥಳೀಯ ಮಟ್ಟದ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸುವಂತೆಯೂ ಅವರು ಆದೇಶಿಸಿದರು. ಸಹಸ್ತ್ರ ತಾಲ್ ಸುಮಾರು 4,100-4,400 ಮೀಟರ್ ಎತ್ತರದಲ್ಲಿದೆ ಮತ್ತು ಘಟನೆಯ ಸ್ಥಳವು ಉತ್ತರಕಾಶಿ ಮತ್ತು ತೆಹ್ರಿ ಜಿಲ್ಲೆಗಳ ಗಡಿ ಪ್ರದೇಶದಲ್ಲಿದೆ ಎಂದು ಅವರು ಹೇಳಿದರು.

ಸಹಸ್ತ್ರ ತಾಲ್ ಒಂದು ಶಿಖರದ ಮೇಲೆ ಏಳು ಸರೋವರಗಳ ಸಮೂಹವಾಗಿದೆ ಮತ್ತು ಪಾಂಡವರು ಈ ಸ್ಥಳದಿಂದ ಸ್ವರ್ಗಕ್ಕೆ ತೆರಳಿದ್ದರು ಎಂದು ನಂಬಲಾಗಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ವಾಯು ರಕ್ಷಣೆಗಾಗಿ ಕೇಂದ್ರ ರಕ್ಷಣಾ ಇಲಾಖೆಯ ಜಂಟಿ ಕಾರ್ಯದರ್ಶಿಗೆ ಮತ್ತು ನೆಲದ ರಕ್ಷಣಾ ಸಹಾಯಕ್ಕಾಗಿ ಎಸ್‌ಡಿಆರ್‌ಎಫ್ ಕಮಾಂಡೆಂಟ್‌ಗೆ ಪತ್ರ ಬರೆದಿದ್ದಾರೆ. ತೆಹ್ರಿ ಜಿಲ್ಲಾಡಳಿತವು ಸಹಸ್ತ್ರ ತಾಲ್‌ನಲ್ಲಿ ಸಿಲುಕಿರುವ ಚಾರಣಿಗರನ್ನು ರಕ್ಷಿಸಲು ತಂಡಗಳನ್ನು ಕಳುಹಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:00 pm, Wed, 5 June 24