ಐವರು ಹುಡುಗಿಯರ ಮೇಲೆ ಕುಸಿದು ಬಿದ್ದ ಮಣ್ಣಿನ ಗುಡ್ಡ; ನಾಲ್ವರು ಸ್ಥಳದಲ್ಲೇ ಸಾವು, ಒಬ್ಬಳಿಗೆ ಗಾಯ
ಮನೆಯಲ್ಲಿ ಏನೋ ಕೆಲಸಕ್ಕೆಂದು ಮಣ್ಣು ಬೇಕಿತ್ತು. ಹಾಗಾಗಿ ಹುಡುಗಿಯರೆಲ್ಲ ಒಟ್ಟಾಗಿ ಅದನ್ನು ತರಲೆಂದು ಹೋಗಿದ್ದರು. ಅವರು ಅಗೆಯುತ್ತಿದ್ದಂತೆ ಮಣ್ಣಿನ ಗುಡ್ಡದ ಒಂದು ಬದಿ ಕುಸಿದು ಅವರ ಮೈಮೇಲೆ ಬಿತ್ತು.
ಹರ್ಯಾಣ: ಬೃಹತ್ ಮಣ್ಣಿನ ಗುಡ್ಡ ಕುಸಿದು ನಾಲ್ವರು ಹುಡುಗಿಯರು ಜೀವಂತ ಸಮಾಧಿಯಾದ ದುರ್ಘಟನೆ ಹರ್ಯಾಣ(Haryana)ದ ನುಹ್ ಜಿಲ್ಲೆಯ (Nuh District) ಹಳ್ಳಿಯೊಂದರಲ್ಲಿ ನಡೆದಿದೆ. ಇನ್ನೊಬ್ಬಳು ಹುಡುಗಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಈ ಎಲ್ಲ ಹುಡುಗಿಯರೂ ತಾವೂರು ಉಪವಿಭಾಗದ ಕಂಗರ್ಕ ಗ್ರಾಮದವರು. ಇವರೆಲ್ಲ ತಮ್ಮ ಮನೆಗಳ ಕೆಲಸಕ್ಕೆ ಮಣ್ಣು ತರಲೆಂದು ಹೋಗಿದ್ದರು. ಆದರೆ ಮಣ್ಣುಗುಡ್ಡದ ದೊಡ್ಡದೊಂದು ತುಂಡು ಅವರ ಮೈಮೇಲೆ ಬಿದ್ದಿದೆ. ಸ್ಥಳೀಯರೇ ಹುಡುಗಿಯರನ್ನು ಮಣ್ಣಿನಡಿಯಿಂದ ಹೊರಗೆ ತೆಗೆದಿದ್ದಾರೆ. ಆದರೆ ಒಬ್ಬಳು ಮಾತ್ರ ಬದುಕಿದ್ದು, ಇನ್ನೂ ನಾಲ್ವರು ಗಾಯಗೊಂಡಿದ್ದಾರೆ.
ವಕೀಲಾ (19), ತಸ್ಲೀಮಾ (11), ಜನಿಸ್ಟಾ (17) ಮತ್ತು ಗುಲಫ್ಶಾ (9) ಎಂಬುವರು ಮೃತರಾಗಿದ್ದು, ಸೋಫಿಯಾ (8) ಗಾಯಗೊಂಡಿದ್ದಾರೆ. ನಾಲ್ವರೂ ಬಾಲಕಿಯರು ಉಸಿರುಕಟ್ಟಿಯೇ ಸತ್ತಿದ್ದಾರೆ. ಸೋಫಿಯಾ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಜಿಲ್ಲಾಡಳಿತ ಮತ್ತು ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿದೆ. ಅಲ್ಲಿ ಮಣ್ಣಿನ ಗುಡ್ಡ ಕುಸಿದಿದ್ದು ಹೇಗೆಂಬ ತನಿಖೆ ನಡೆಸಲಾಗುತ್ತಿದೆ. ಸದ್ಯ ಮೃತ ಹುಡುಗಿಯರ ಮನೆಯವರು ಯಾವುದೇ ದೂರು ನೀಡಿಲ್ಲ. ಹೀಗಾಗಿ ಅದನ್ನೊಂದು ಆ್ಯಕ್ಸಿಡೆಂಟ್ ಎಂದೇ ಪರಿಗಣಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಏನೋ ಕೆಲಸಕ್ಕೆಂದು ಮಣ್ಣು ಬೇಕಿತ್ತು. ಹಾಗಾಗಿ ಹುಡುಗಿಯರೆಲ್ಲ ಒಟ್ಟಾಗಿ ಅದನ್ನು ತರಲೆಂದು ಹೋಗಿದ್ದರು. ಅವರು ಅಗೆಯುತ್ತಿದ್ದಂತೆ ಮಣ್ಣಿನ ಗುಡ್ಡದ ಒಂದು ಬದಿ ಕುಸಿದು ಅವರ ಮೈಮೇಲೆ ಬಿತ್ತು. ಅದರಲ್ಲಿ ಸೋಫಿಯಾ ಎಂಬಾಕೆ ಇದ್ದುದರಲ್ಲೇ ತಪ್ಪಿಸಿಕೊಂಡು ಕಷ್ಟಪಟ್ಟು ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಕೂಡಲೇ ಸಮೀಪಿದಲ್ಲಿ ಇದ್ದವರೆಲ್ಲ ಹೋಗಿ ಎಲ್ಲರನ್ನೂ ಹೊರಗೆಳೆದಿದ್ದಾರೆ. ಇದು ಒಂದು ಆ್ಯಕ್ಸಿಡೆಂಟ್ ಆಗಿದ್ದು ಯಾರನ್ನೂ ತಪ್ಪಿತಸ್ಥರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಗ್ರಾಮದ ಸರ್ಪಂಚ್ ಮುಷ್ಟ್ಕಿಮ್ ತಿಳಿಸಿದ್ದಾರೆ. ಗಾಯಗೊಂಡ ಬಾಲಕಿಯ ಆರೋಗ್ಯ ಸ್ಥಿರವಾಗಿದ್ದು, ಉಳಿದ ನಾಲ್ವರ ಶವವನ್ನು ಪೋಸ್ಟ್ಮಾರ್ಟಮ್ಗೆ ಕಳಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪೊಲೀಸರಿಗೆ ಚಾಕು ಇರಿದು ಪರಾರಿ ಆಗಲು ಯತ್ನಿಸಿದ ರೌಡಿಶೀಟರ್ ಮೇಲೆ ಫೈರಿಂಗ್