ಮಕರ ಸಂಕ್ರಾಂತಿ 2022: ಪ್ಲಾಟ್‌ಫಾರ್ಮ್ ಟಿಕೆಟ್ ದರ ಏರಿಕೆ ಮಾಡಿದ ಭಾರತೀಯ ರೈಲ್ವೆ, ಎಲ್ಲೆಲ್ಲಿ ದರ ಏರಿಕೆ?
Makar Sankranti 2022 ಕೊವಿಡ್-19 ಪ್ರಕರಣಗಳ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ಜನಸಂದಣಿಯ ಹರಿವನ್ನು ನಿಯಂತ್ರಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.
ಭಾರತೀಯ ರೈಲ್ವೆಯ ದಕ್ಷಿಣ ಮಧ್ಯ ವಲಯ (SCR) ಮಕರ ಸಂಕ್ರಾಂತಿ (Makar Sankranti) ಹಬ್ಬದ ಸಮಯದಲ್ಲಿ ಜನವರಿ 20 ರವರೆಗೆ ರೈಲ್ವೆ ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು(Platform Ticket) ಹೆಚ್ಚಿಸಿದೆ. “ಮುಂದಿನ ಸಂಕ್ರಾಂತಿ ಹಬ್ಬದ ಋತುವಿನ ದೃಷ್ಟಿಯಿಂದ ಸಿಕಂದರಾಬಾದ್, ಹೈದರಾಬಾದ್, ಲಿಂಗಂಪಲ್ಲಿ ಮತ್ತು ಬೇಗಂಪೇಟ್ ರೈಲು ನಿಲ್ದಾಣ ಮತ್ತು ಸಿಕದರಾಬಾದ್ ವಿಭಾಗದ ಇತರ ಪ್ರಮುಖ ರೈಲು ನಿಲ್ದಾಣಗಳಲ್ಲಿ ರೈಲು ಪ್ರಯಾಣಿಕರು ಮತ್ತು ಪ್ರಯಾಣಿಕರ ಜತೆಯಾಗಿ ಬರುವವರು ಹೆಚ್ಚಿನ ಸಂಖ್ಯೆಯಲ್ಲಿರಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಎಸ್ಸಿಆರ್ ಪತ್ರಿಕಾ ಪ್ರಕಟಣೆ ತಿಳಿಸಿದೆ. ಕೊವಿಡ್-19 (Covid 19) ಪ್ರಕರಣಗಳ ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ಜನಸಂದಣಿಯ ಹರಿವನ್ನು ನಿಯಂತ್ರಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಸಂಕ್ರಾಂತಿ ಹಬ್ಬದ ಋತುವಿನಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರದಲ್ಲಿ ಜನವರಿ8- 20ನೇ ತಾರೀಖಿನವರೆಗೆ ತಾತ್ಕಾಲಿಕ ಹೆಚ್ಚಳ ಮಾಡಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ಟ್ವೀಟ್ ಮಾಡಿದೆ.
ಮಕರ ಸಂಕ್ರಾಂತಿಯ ಹಬ್ಬವನ್ನು ಭಾರತದಲ್ಲಿ ಜನವರಿ 15 ರಂದು ಆಚರಿಸಲಾಗುತ್ತದೆ. ಇದರ ಮಹತ್ವವು ಸೂರ್ಯನ ಮಕರ ಸಂಕ್ರಾಂತಿಯ ಪ್ರವೇಶದೊಂದಿಗೆ ಸಂಬಂಧಿಸಿದೆ. ಸೂರ್ಯದೇವನು ಧನು ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸಿದಾಗ, ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಹಬ್ಬವನ್ನು ಯಾವಾಗಲೂ ಜನವರಿ 14 ಅಥವಾ 15 ರಂದು ಆಚರಿಸಲಾಗುತ್ತದೆ. ಒಂದು ವರ್ಷದಲ್ಲಿ ಸೂರ್ಯನು 12 ರಾಶಿಚಕ್ರ ಚಿಹ್ನೆಗಳ ಮೂಲಕ ಸಾಗುತ್ತಾನೆ ಮತ್ತು ಅದು ಪ್ರವೇಶಿಸುವ ರಾಶಿಯನ್ನು ಅದರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ವರ್ಷ ಸೂರ್ಯನು ಜನವರಿ 14 ರಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.
Temporary Increase in Platform Ticket Rate during #Sankranti Festival Season w.ef 8th January to 20th January, 2022 as detailed:@drmsecunderabad @drmhyb pic.twitter.com/9RWEUpXWFS
— South Central Railway (@SCRailwayIndia) January 9, 2022
ಈಗ ಚಾಲ್ತಿಯಲ್ಲಿರುವ ಮತ್ತು ಪ್ರಸ್ತಾವಿತ ದರಗಳು ಇಲ್ಲಿವೆ:
ಸಿಕಂದರಾಬಾದ್: 10 ರಿಂದ 50 ರೂ ಹೈದರಾಬಾದ್: 10 ರಿಂದ 20 ರೂ ವಾರಂಗಲ್: 10 ರಿಂದ 20 ರೂ ಖಮ್ಮಂ: 10 ರಿಂದ 20 ರೂ ಲಿಂಗಂಪಲ್ಲಿ: 10 ರಿಂದ 20 ರೂ ಕಾಜಿಪೇಟೆ: 10 ರಿಂದ 20 ರೂ ಮಹಬೂಬಾಬಾದ್: 10 ರಿಂದ 20 ರೂ ರಾಮಗುಂಡಂ: 10 ರಿಂದ 20 ರೂ ಮಂಚಿರ್ಯಾಲ್: 10 ರಿಂದ 20 ರೂ ಭದ್ರಾಚಲಂ ರಸ್ತೆ: 10 ರಿಂದ 20 ರೂ ವಿಕಾರಾಬಾದ್: 10 ರಿಂದ 20 ರೂ ತಾಂಡೂರು: 10 ರಿಂದ 20 ರೂ ಬೀದರ್: 10 ರಿಂದ 20 ರೂ ಪಾರ್ಲಿ ವೈಜನಾಥ್: 10 ರಿಂದ 20 ರೂ ಬೇಗಂಪೇಟೆ: 10 ರಿಂದ 20 ರೂ.
ಇದನ್ನೂ ಓದಿ: Makar Sankranti 2022: ಮಕರ ಸಂಕ್ರಾಂತಿಯಂದು 75 ಲಕ್ಷ ಜನರಿಂದ ಸೂರ್ಯ ನಮಸ್ಕಾರ
Published On - 11:27 am, Tue, 11 January 22